ಯುದ್ಧನೀತಿ ಮತ್ತು ಅಹಿಂಸೆ
ಹಿಂದಿಮೂಲ – ಡಾ. ಸೂರ್ಯದೆವ್ ಶರ್ಮ
ಕನ್ನಡಾನುವಾದ – ಡಾ.ಹರಿಪ್ರಸಾದ್ ಕೆ.
ಚರಿತ್ರೆಯ ಬಗ್ಗೆ ನಮ್ಮ ದಡ್ಡತನ
ಅದೊಂದು ಕಾಲವಿತ್ತು. ಆಗ ಭಾರತವರ್ಷದ ಆರ್ಯಪುತ್ರರು
ಕೇವಲ ಭಾರತದಲ್ಲಷ್ಟೇ ಸ್ವತಂತ್ರರಾಗಿರಲಿಲ್ಲ. ಬದಲಾಗಿ ಜಗತ್ತಿನ ಎಲ್ಲಾ ದೇಶಗಳಲ್ಲಿ ನಮ್ಮ ವಿಜಯಧ್ವಜ ಹಾರಾಡುತ್ತಿತ್ತು. ಭೂಮಂಡಲದ ಮೂಲೆ ಮೂಲೆಗಳಲ್ಲಿಯೂ ನಮ್ಮ(ಆರ್ಯರ) ಸಾಮ್ರಾಜ್ಯ ಹರಡಿತ್ತು. ವಿದ್ಯೆ, ಬಲ, ಸಂಪತ್ತು, ... ವೈಭವಗಳಲ್ಲಿ ನಮಗೆ ಸರಿಸಮಾನರು
ಜಗತ್ತಿನಲ್ಲಿ ಯಾರೂ ಇರಲಿಲ್ಲ. ಆದರೆ ಅದೇ ಭಾರತವಾಸಿಗಳಾದ ನಾವು, ಅದೇ ಆರ್ಯವಂಶದಲ್ಲಿ ಹುಟ್ಟಿ ಬೆಳೆದ ನಾವು ಎಂತಹ ದೀನ ಹೀನ ಪರಿಸ್ಥಿತಿಯಲ್ಲಿದ್ದೇವೆಂದರೆ ಅದನ್ನು ಹೋಲಿಸಲಾಗಲಿ ವರ್ಣಿಸಲಾಗಲಿ
ಸಾಧ್ಯವಿಲ್ಲ. ಸಮಗ್ರ ಜಗತ್ತೇ
ಚಕ್ರವರ್ತಿ ಎಂಬುದಾಗಿ ಸಾಮ್ರಾಟ್ ಎಂಬುದಾಗಿ ಕರೆಯಲ್ಪಟ್ಟವರು ಸಾವಿರಾರು ವರ್ಷಗಳ ಕಾಲ ಪರತಂತ್ರದ
ಬೇಡಿಯಲ್ಲಿ ಬಂದಿಗಳಾಗಿದ್ದೇವೆ. ಸರಿಸಾಟಿಯಿಲ್ಲದ
ವೈಭವದಿಂದ ಮೆರೆದ ಜನ ತುತ್ತು ಕೂಳಿಗೂ ಭಿಕಾರಿಗಳಂತೆ ಅಲೆಯುವ ಪರಿಸ್ಥಿತಿಯುಂಟಾಗಿದೆ. ವಿಶ್ವವಿಜೇತ
ವೀರಪುತ್ರರು, ಕ್ಷಾತ್ರಶಕ್ತಿಯೇ ಮೈವೆತ್ತವರು ಕೇವಲ ಎಲುಬಿನ
ಗೂಡಿನಂತಾಗಿದ್ದಾರೆ. ಜಗತ್ತಿಗೇ ಗುರುವೆನಿಸಿಕೊಂಡವರು ವಿದೇಶಗಳಲ್ಲಿ
ವಿದ್ಯೆಯ ಭಿಕ್ಷೆಯನ್ನು ಬೆಡುವಂತಾಗಿದೆ. “ವೀರಭೋಗ್ಯಾ
ವಸುಂಧರಾ” (ಈ ಭೂಮಿ ವೀರರು ಮಾತ್ರ ಅನುಭವಿಸುವಂತಹುದು)ಎನ್ನುವ ಮಾತಿನಲ್ಲಿ ನಂಬಿಕೆ ಇಟ್ಟವರು ನಾವು.
ಆದರೆ ಈ ನಮ್ಮ ಪತನ, ದೌರ್ಭಾಗ್ಯ ಮತ್ತು ವಿನಾಶದ ಕಾರಣ ಏನಿತ್ತು ? ನಾವು ತುಂಬಾ ನಾಚಿಕೆಯಿಂದ ಒಪ್ಪಿಕೊಳ್ಳಬೇಕು
ಏನಂದ್ರೆ ಈ ರೀತಿಯ ವಿನಾಶಕ್ಕೆ ಕಾರಣ ನಮ್ಮ ಹೊರಗಿನ ಶತ್ರುಗಳಲ್ಲ. ಬದಲಾಗಿ ನಾವೇ ಸ್ವತಃ ಕಾರಣಕರ್ತರು.
ನಮ್ಮ ನಡುವೆ ಇರುವ ವೈಮನಸ್ಸು, ವಿದ್ವೇಷ, ನಮ್ಮಲ್ಲಿ ಕೆಲವರ ದೇಶದ್ರೋಹಿತನ, ರಾಷ್ಟ್ರ-ರಾಜರೊಂದಿಗಿನ ವಿಶ್ವಾಸಾಘಾತ ಜಾತೀಯ ಭೇದಭಾವ, ನಮ್ಮ ಮಿಥ್ಯಾಭಿಮಾನ ಮತ್ತು ವಿಲಾಸಪ್ರಿಯತೆ ಇತ್ಯಾದಿಗಳು ನಮ್ಮ ಹಿಂದೂರಾಷ್ಟ್ರದ ಜಾಡ್ಯವನ್ನು
ಬೆಳೆಸುವಂತಹ ಕಾರಣಗಳಾಗಿದ್ದವು. ನಾವು ಇಂತಹ
ದುರ್ಗುಣಗಳನ್ನು ನಮ್ಮದಾಗಿಸಿಕೊಂಡು, ನಿಜವಾದ
ಕ್ಷತ್ರಿಯಧರ್ಮಕ್ಕೆ ತಿಲಾಂಜಲಿಯಿಟ್ಟು, ನಮ್ಮ ದೇಶ ಹಾಗೂ
ಧರ್ಮಕ್ಕೆ ಅತ್ಯಂತ ಮಾರಕವಾದ ಕೆಲವು ಅಕ್ಷಮ್ಯ ಐತಿಹಾಸಿಕ ಮೌಢ್ಯವನ್ನು ಜಗತ್ತಿಗೆ ತೋರಿಸಿದೆವು. ಆ ಐತಿಹಾಸಿಕ ಮೂರ್ಖತನದ ಕೆಲವು ಉದಾಹರಣೆಗಳನ್ನು ಈಗ
ನಿಮ್ಮ ಮುಂದಿಡುತ್ತಿದ್ದೇವೆ. ಇದರಿಂದ ನಮ್ಮ ಸಧರ್ಮೀಯರ ಕುರುಡುತನ
ನಿವಾರಣೆಯಾಗಿ ಮುಂದೆ ಭವಿಷ್ಯದಲ್ಲಿ ಯಾವತ್ತೂ
ಇಂತಹ ದಡ್ಡತನವನ್ನು ತೋರಿಸದೆಯೇ ಇರುವ ಹಾಗಾಗಲಿ. ಯಾವ ಧರ್ಮ ತನ್ನ
ಹಿಂದಿನ ತಪ್ಪುಗಳಿಂದ ಪಾಠವನ್ನು ಕಲಿಯುವುದಿಲ್ಲವೋ, ಭವಿಷ್ಯದಲ್ಲಿ
ಪುನಃ ಎಚ್ಚರದಿಂದಿರುವುದಿಲ್ಲವೋ ಆ ಧರ್ಮದ ಉತ್ಥಾನ ಜಗತ್ತಿನಲ್ಲಿ ಪುನಃ ಅಸಂಭವ. ಅದರ ನಾಶ ನಿಶ್ಚಿತ. ಆದ್ದರಿಂದ ನಾವು ನಮ್ಮ ಈ ಹಿಂದಿನ ತಪ್ಪುಗಳಿಂದ
ಪಾಠವನ್ನು ಕಲಿತು ಜಾಗೃತರಾಗಿ ನಮ್ಮ ಧರ್ಮರಕ್ಷಣೆಗಾಗಿ ಸಧರ್ಮೀಯರ ಸಂಘಟನೆಯಲ್ಲಿ
ಪ್ರವೃತ್ತರಾಗಬೇಕಾಗಿದೆ.
इतिहासविषये अस्माकं मौढ्यम्
सः कश्चन कालः आसीत्
यस्मिन् भारतवर्षस्य आर्यपुत्राः न केवलं भारतवर्षे स्वतन्त्राः आसन् अपि तु जगतः
सर्वेषु देशेषु स्वीयं विजयध्वजं उत्तोलितवन्तः आसन् । भूमण्डलस्य सर्वेषु कोणेषु
अस्माकं साम्राज्यं व्याप्तमासीत् । विद्यया, शक्त्या, सम्पदा .... वैभवेन च अस्मत्तुल्याः जगति केऽपि
नासन् । किन्तु सम्प्रति तद्देशवासिनः व
वयं आर्यवंशे जन्म प्राप्य अपि कीदृश्यां
दैन्यपरिस्थितौ वर्तामहे इत्येतत्
तोलयितुं वा वर्णयितुं वा न शक्नुमः । समग्रेण जगता एव चक्रवर्ती इति वा सम्राड्
इति वा सगौरं सम्बोधिताः वयं सहस्रस्य वर्षाणां पारतन्त्र्येण आबद्धा अभवाम । असदृशवैभवेन संशोभिताः जनाः वयं सम्प्रति अन्नस्य कवलार्थमपि भिक्षुकाः इव अटेम इति स्थितिः उत्पन्ना । विश्वविजेतारः वीरपुत्राः
मूर्तिमत्क्षात्रशक्तयः कङ्कालायमाना अभवाम । जगद्गुरुरिति प्राप्ताभिधानां
विदेशेषु विद्याभिक्षां याचेमहि इव संवृत्तम् । “वीरभोग्या वसुन्धरा” इति वचने
अस्माकं विश्वासः आसीत् ।
किन्तु साम्प्रतिक्याः
अस्माकं अवनतेः दौर्भाग्यस्य विनाशस्य च कारणं किं वा स्यात् ? वयम् अत्यन्तं लज्जया परिगृह्णीयाम यत् एतादृश्याः अवनतेः कारणम् अस्माकं बाह्यशत्रवः
न, अपि तु स्वतः वयमेव स्मः इति ।
अस्माकं मध्ये
विद्यमानं पारस्परिकं वैमनस्यं, मात्सर्यं, विद्वेषः, केषाञ्चित्
देशद्रोहिप्रवृत्तिः, विश्वासाघातः, जातिगततारतम्यम्, मिथ्याभिमानः, विलासप्रियता
इत्यादीनि कारणानि अस्माकं देशस्य अवनतेः कारणानि
। वयम् ईदॄशान् दुर्गुणान् आत्मसात्कृत्य क्षात्रयधर्माय पिण्डप्रदानं
दत्वा अस्माकं देशस्य धर्मस्य च हानिम् उत्पादयत् ऐतिहासिकं मौढ्यं प्रादर्शयाम ।
एतादृशस्य मौढ्यस्य कानिचन उदाहरणानि अस्मिन् पुस्तके भवताम् पुरस्तात्
प्रस्तूयन्ते । एतैः उदाहरणैः
अस्मद्धर्मीयाणां अन्धत्वनिवारणेण सह तेषु भविष्यदि कदापि एतादृशं मौढ्यं न
पुनरावर्तेत । यः धर्मः स्वस्य
पूर्वतनेभ्यः दोषेभ्यः शिक्षां न
प्राप्नोति, उत्तरवर्तिकाले जागरितः च न भवति, तस्य धर्मस्य उत्थानं जगति दुःशकमेव
। तस्य धर्मस्य नाशः निश्चप्रचम् । अतः
वयं अस्माकं पूर्वतनाः त्रुटीः विज्ञाय जागरिताः सन्तः धर्मरक्षार्थं
स्वधर्मीयानां सङ्घटनाय प्रवर्तेमहि ।
೧. ದಾಹರನ ಅಂತ್ಯ
ಇವತ್ತು ನಾವು ಅಳುತ್ತೇವೆ, ದೂರು ಕೊಡುತ್ತೇವೆ, ನೌಖಾಲಿಯಲ್ಲಿ ಭೀಕರ ಹತ್ಯಾಕಾಂಡವಾಯಿತೆಂದು, ಪಂಜಾಬ್ ಮತ್ತು ಸೀಮಾಪ್ರಾಂತ್ಯದಲ್ಲಿ ಹಿಂದುಗಳ
ನರಸಂಹಾರವಾಯಿತೆಂದು, ಸಾವಿರಾರು ಹಿಂದುಗಳು ಕತ್ತಿಯ ಅಲುಗಿಗೆ ಆಹುತಿಯಾದರೆಂದು, ಹಿಂದುಗಳ ಮಕ್ಕಳನ್ನು ಉರಿಯುವ ಬೆಂಕಿಗೆ ಎಸೆದರೆಂದು, ಮಾನಿನಿಯರ ಸ್ತನಗಳನ್ನು ಕತ್ತರಿಸಿದರೆಂದು. ಮುಸ್ಲಿಂ ಗೂಂಡಾಗಳು ಹಿಂದುಗಳ ಮೇಲೆ ಎಂತಹ ಜಘನ್ಯ
ಕೃತ್ಯವೆಸಗಿದರೆಂದು ಗೊತ್ತಿಲ್ಲ. ಆದರೆ ಇವತ್ತು
ನಮಗೆ ಆ ದಿನ ನೆನಪಾಗುತ್ತಿದೆ. ಆಗ ಭಾರತದಲ್ಲಿ ಒಬ್ಬನೇ ಒಬ್ಬ ಮುಸಲ್ಮಾನ್ ಇರಲಿಲ್ಲ. ಇಂತಹ ಪೈಶಾಚಿಕ ಕೃತ್ಯದ ಹೆಸರು ಕೂಡ ಎಲ್ಲೂ ಕೇಳಿ
ಬರುತ್ತಿರಲಿಲ್ಲ. ಮುಸಲ್ಮಾನರನ್ನು ಭಾರತಕ್ಕೆ ಕರೆದು ಅವರಿಗೆ ಆಶ್ರಯ
ಕೊಟ್ಟ ಹೊಣೆ ನಮ್ಮ ಅದೂರದರ್ಶಿ ಪೂರ್ವಜರದ್ದಾಗಿದೆ. ಅವರದ್ದೇ ಸಂತತಿಯ ಮಕ್ಕಳ ಅತ್ಯಾಚಾರವನ್ನು, ಕೊಲೆಯನ್ನು ಈ ಆಶ್ರಯ ಪಡೆದ ಮುಸಲ್ಮಾನರು
ಮಾಡುತ್ತಾರೆಂಬುದು ಅವರಿಗೆ ಗೊತ್ತಿರಲಿಲ್ಲ. ನಮ್ಮ ದಡ್ಡತನ
ಮತ್ತು ದೇಶದ್ರೋಹದಿಂದಾಗಿ ಭಾರತದಲ್ಲಿ ಮುಸಲ್ಮಾನರ ಆಗಮನವಾಯಿತು. ಮತ್ತು ನಮ್ಮವರ ವಿಶ್ವಾಸಾಘಾತದಿಂದ, ವಂಚನೆಯಿಂದ ಇಲ್ಲಿ ಮುಸಲ್ಮಾನರ ಸಂತತಿ ದೃಢವಾಗಿ ಬೆಳೆಯಿತು. ಹೇಗೆ ? ಕೇಳಿ.....
ಖಲೀಫನಾದ ವಾಲಿದನ ಆಡಳಿತಾವಧಿಯಲ್ಲಿ ಕೋಫೆಯ
ಶಾಸಕನಾದ ಹಜ್ಜಾಜ್ ಇಬ್ಬನ್ ಯೂಸುಫ್ ನಿಂದ ಬೆಸರಗೊಂಡ
ಅಲ್ಲಾಫಿ ಜಾತಿಯ ಕೆಲವು ಮುಸಲ್ಮಾನರು ಹಿಂದುಸ್ಥಾನದ ಕಡೆಗೆ ಹೊರಟರು. ಬಳಿಕ ಸಿಂಧ್ ನ ರಾಜನಾದ ದಾಹರನ ಬಳಿಯಲ್ಲಿ
ಆಶ್ರಯವನ್ನು ಕೇಳಿದರು. ಭ್ರಾಂತನಾದ ರಾಜ ದಾಹರನು ಅವರಿಗೆ ಆಶ್ರಯವನ್ನು ಕೊಟ್ಟ. ಜಹಗೀರನ್ನು ಕೊಟ್ಟು ತನ್ನ ಸೇನೆಯಲ್ಲಿ
ಭರ್ತಿಗೊಳಿಸಿದ. ಅಲ್ಲಿಯತನಕ ಭಾರತದಲ್ಲಿ ಒಬ್ಬನೇ ಒಬ್ಬ ಮುಸಲ್ಮಾನನೂ
ಕೂಡಾ ಇರಲಿಲ್ಲ. ಅಲ್ಲಾಫಿಗಳಿಗೆ ರಕ್ಷಣೆಯನ್ನು ಕೊಟ್ಟು ದಾಹರನು
ಮೊದಲನೆಯದಾಗಿ ತಪ್ಪು ಮಾಡಿದ. ಹಜ್ಜಾಜ್ ಕೇಳಿದರೂ ಸಹ ದಾಹರನು ಅಲ್ಲಾಫಿಗಳನ್ನು ವಾಪಾಸು ಕಳುಹಿಸಲಿಲ್ಲ. ಏಕೆಂದರೆ ಶರಣಾಗತರ ರಕ್ಷಣೆ ಮಾಡುವುದು ತನ್ನ ಧರ್ಮ
ಎಂದು ಆತ ತಿಳಿದಿದ್ದ. ಆದರೆ ಅದೇ ಶರಣಾಗತರು ತನ್ನ ಕಂಕುಳದ
ಕುರವಾಗುತ್ತಾರೆಂದು ಅವನಿಗೇನು ಗೊತ್ತಿತ್ತು ?
ಹಜ್ಜಾಜನು ತನ್ನ ಸೇನಾಧಿಪತಿಯಾದ ಬದೈಲ್ ನನ್ನು
ಸಿಂಧೂದೇಶದ ಮೇಲೆ ಆಕ್ರಮಣ ಮಾಡಲು ಕಳುಹಿಸಿದಾಗ ರಾಜ ದಾಹರನ ಮಗನಾದ ಯಶರಾಜನು
ನಾರಾಯಣಕೋಟೆಯುದ್ಧದಲ್ಲಿ ಅವನನ್ನು ಸೋಲಿಸಿದ. ಸೇನಾಪತಿ ಬದೈಲ್
ಯುದ್ಧದಲ್ಲಿ ಕೊಲ್ಲಲ್ಪಟ್ಟ. ಆಗ ದಾಹರನ ಬಳಿ ಆಶ್ರಿತರಾದ ಅಲ್ಲಾಫಿಗಳ ಸಂಚಿನಿಂದ
ನಾರಾಯಣಾಕೋಟೆಯ ಸೇನಾಪತಿಯಾದ ಸಮನೀ ಎಂಬಾತ ಸಿಂಧ್ ನ ಮೇಲೆ ಎರಡನೆಯ ಬಾರಿ ಆಕ್ರಮಣ ಮಾಡಲು ಆಮಂತ್ರಿಸಿ ಪತ್ರವನ್ನು ಬರೆದು ಕಳುಹಿಸಿದ. ಕೃತಘ್ನ ಅಲ್ಲಾಫಿಗಳ ಒಳಸಂಚಿನಿಂದ ಸೇನಾಪತಿ
ಸಮನೀ ರಾಜಾ ದಾಹಿರನಿಗೆ ಮಾಡಿದ ವಿಶ್ವಾಸಾಘಾತ
ಇದಾಗಿತ್ತು. ಅವರಿಗೆ ರಾಜಾ ದಾಹಿರನು ಆಶ್ರಯವನ್ನು ಕೊಟ್ಟಿದ್ದನು. ಅದರಿಂದಾಗಿಯೇ ಹಜ್ಜಾಜನು ದಾಹರನ ಮೇಲೆ ದಾಳಿಯನ್ನು
ಮಾಡಿದ.
ಈ ಬಾರಿ ಹಜ್ಜಾಜನು ಮಹಮ್ಮದ್ ಬಿನ್ ಕಾಸಿಮ್ ನನ್ನು
ಸೇನಾಧಿಪತಿಯನ್ನಾಗಿ ಮಾಡಿ ಆರುಸಾವಿರ ಸೈನಿಕರು ಹಾಗೂ ಮೂರುಸಾವಿರ ಒಂಟೆಗಳೊಂದಿಗೆ ಕ್ರಿ.ಶ. 712 ರಲ್ಲಿ ದಾಳಿ
ಮಾಡಲು ಕಳುಹಿಸಿದ. ಇದನ್ನು ತಿಳಿದ ರಾಜಾ ದಾಹರನು ಹಜ್ಜಾಜನ ಸೇನೆಯನ್ನು
ಸಿಂಧ್ ನ ಗಡಿಯಲ್ಲೇ ತಡೆಯಲು ಅಲ್ಲಾಫಿಗಳ ಸರದಾರನಾದ ಮಹಮ್ಮದ್ ಬಾರಿಸ್ ನಿಗೆ ಹೇಳಿದ. ಆದರೆ ಮಹಮ್ಮದ್ ಬಾರಿಸ್ – “ಶತ್ರುಗಳನ್ನು ಗಡಿಯಲ್ಲೇ ತಡೆಯುವ ಅವಶ್ಯಕತೆಯಿಲ್ಲ. ಅವರನ್ನು ರಾಜಧಾನಿಯ ತನಕ ಬರಲು ಬಿಡಿ. ನಾವು ಕ್ಷಣಮಾತ್ರದಲ್ಲಿ ಅವರನ್ನು
ಮುಗಿಸಿಬಿಡುತ್ತೇವೆ” ಎಂಬುದಾಗಿ ದಾಹರನಿಗೆ ಸಲಹೆಯನ್ನು ನೀಡಿದ. ಮೂರ್ಖನಾದ ರಾಜಾ ದಾಹರ ಅವನ ಸಲಹೆಯನ್ನು ಒಪ್ಪಿದ. ಶತ್ರುಗಳು ರಾಜಧಾನಿಯ ಬಳಿ ಬರುತ್ತಿದ್ದಂತೆಯೇ ರಾಜ
ಅಲ್ಲಾಫಿಗಳಿಗೆ ಹೇಳಿದ –“ನಾವು ನಿಮ್ಮ ಪ್ರಾಣವನ್ನು ಉಳಿಸಿದೆವು, ರಕ್ಷಣೆಯನ್ನು ಕೊಟ್ಟೆವು, ಜಹಗೀರುಗಳನ್ನು ಕೊಟ್ಟೆವು, ಮತ್ತು ನಮ್ಮ ಸೇನೆಯಲ್ಲಿ ಸೇರಿಸಿಕೊಂಡೆವು. ಈಗ ನಮ್ಮ ಕಡೆಯಿಂದ ಶತ್ರುಗಳೊಂದಿಗೆ ಹೋರಾಡಿರಿ”. ಅದಕ್ಕೆ ಬಾರಿಸ್ ಉತ್ತರವಾಗಿ – “ನೀವು ನಮಗೆ ಒಳ್ಳೆಯದನ್ನೇ ಮಾಡಿದಿರಿ. ಆದರೆ ದಾಳಿ ಮಾಡುತ್ತಿರುವವರು ಮುಸಲ್ಮಾನರು. ಅವರೊಂದಿಗೆ ನಾವು ಯುದ್ಧ ಮಾಡಲಾರೆವು. ಯಾಕೆಂದರೆ ಮುಸಲ್ಮಾನ್ ಮುಸಲ್ಮಾನರೊಂದಿಗೆ ಹೋರಾಡಲು
ಇಸ್ಲಾಂಧರ್ಮವು ಅನುಮತಿಯನ್ನು ಕೊಡುವುದಿಲ್ಲ” ಎಂಬುದಾಗಿ
ಹೇಳಿದ. ಕೃತಘ್ನ ಮಿತ್ರದ್ರೋಹಿ ಮಹಮ್ಮದ್ ಬಾರಿಸ್ ನ ಉತ್ತರ
ಇದಾಗಿತ್ತು. ಅದನ್ನು ಕೇಳಿ ರಾಜಾ ದಾಹರನು ತನ್ನ ಅವಿವೆಕಕ್ಕಾಗಿ
ತಲೆ ಚಚ್ಚಿಕೊಂಡ. ತಮಗೆ ರಕ್ಷಣೆಯನ್ನು ಕೊಟ್ಟ ರಾಜಾ ದಾಹರನಿಗೆ
ಸಹಾಯವನ್ನು ಮಾಡುವುದರ ಬದಲಾಗಿ ಎಲ್ಲಾ ಅಲ್ಲಾಫಿಗಳೂ “ಅಲ್ಲಾ ಹೊ ಅಕ್ಬರ್” ಎಂದು ಕೂಗುತ್ತಾ ಮಹಮ್ಮದ್ ಬಿನ್ ಕಾಸಿಮನ
ಸೇನೆಯನ್ನು ಸೇರಿಕೊಂಡರು, ಮತ್ತೆ ದಾಹರನ ಮೇಲೆಯೇ ಎರಗಿ ಬಂದರು. ಈ ಮಾತನ್ನು ಮುನ್ಶಿ ಕರಮ್ ಇಲಾಹಿ ಎಂಬವನು ತನ್ನ
ಪುಸ್ತಕ “ಬಹಾದುರಾನೆ ಇಸ್ಲಾಂ”ದಲ್ಲಿ ಬಹಳ ಹೆಮ್ಮೆಯಿಂದ ಹೇಳುತಾನೆ. ಏನು! ಆ ಕೃತಘ್ನ
ಬಾರಿಸ್ ಇಸ್ಲಾಂನ ಅದೆಂಥಾ ಬಹಾದೂರನಾಗಿದ್ದ ? ಧಿಕ್ಕಾರವಿರಲಿ
ಅವನಿಗೆ.
ಅಲ್ಲಾಫಿಗಳ ಜೊತೆಗೆ ನಮ್ಮ ಭಾರತದ ಕೆಲವು ಜಾತಿಯವರೂ
ಕೂಡ ದಾಹರನಿಗೆ ವಿಶ್ವಾಸಾಘಾತವೆಸಗಿದರು. ಪ್ರಯಾಗ-ವಿಶ್ವವಿದ್ಯಾಲಯದ ಡಾ.ಈಶ್ವರೀಪ್ರಸಾದಜೀಯವರು ತಮ್ಮ “A History of
Muslim Rule in India” ಎಂಬ
ಪುಸ್ತಕದ 27ನೆಯ ಪುಟದಲ್ಲಿ ಹಾಗೆ ಬರೆದಿದ್ದಾರೆ. ಸಿಂಧ್ ನ ಜಾಟ್ ಮತ್ತು ಮೇಡರು ರಾಜಾ ದಾಹರನಿಂದ ಹಾಗೂ ಉಚ್ಛ ಜಾತಿಯವರಿಂದ
ಅಸಂತುಷ್ಟರಾಗಿದ್ದರು. ಯಾಕೆಂದರೆ ಅವರಿಗೆ ಒಳ್ಳೆಯ ಬಟ್ಟೆ ತೊಟ್ಟುಕೊಳ್ಳುವ
ಅವಕಾಶ ಸೈನ್ಯದಲ್ಲಿರಲಿಲ್ಲ. ಕುದುರೆ ಸವಾರಿ ಮಾಡುವಂತಿರಲಿಲ್ಲ. ಹಾಗೂ ಅವರು ಶಿರಸ್ತ್ರಾಣವನ್ನು ಧರಿಸುವಂತಿರಲಿಲ್ಲ. ಹಿಂದುಗಳ ನಡುವೆ ಅವರನ್ನು ಅವಮಾನದ ದೃಷ್ಟಿಯಿಂದ
ನೋಡಲಾಗುತ್ತಿತ್ತು. ನಮ್ಮಲ್ಲಿರುವ ಜಾತಿಪದ್ಧತಿ ಉಚ್ಚನೀಚ ಭೇದಭಾವ ಆ
ಜನರನ್ನು ನಮ್ಮ ಶತ್ರುಗಳ ಸೇನೆಯಲ್ಲಿ ಸೇರುವಂತೆ ಮಾಡಿತು. ಇದರಿಂದ ಶತ್ರುಗಳಿಗೆ ಎರಡು ಪಟ್ಟು ಬಲ
ಸಿಕ್ಕಿದಂತಾಯಿತು. ಇದು ನಮ್ಮ ಜಾತೀಯ ಜಗಳದ ಕೆಟ್ಟ ಪರಿಣಾಮ.
ಈ ಎಲ್ಲ ಶತ್ರುಗಳನ್ನು ಪಡೆದು ಮಹಮ್ಮದ್ ಬಿನ್ ಕಾಸಿಮನು ಸಿಂಧ್ ನ ಪ್ರಸಿದ್ಧ ನಗರವಾದ
ದೇವಲದ ಮೇಲೆ ದಾಳೀ ನಡೆಸಿದ. ಆ ನಗರದಲ್ಲಿ ಒಂದು ದೊಡ್ಡ ದೇವಾಲಯವಿತ್ತು. ಅಲ್ಲಿ ಎಂಟು ದಿನಗಳ ಕಾಲ ಮಚ್ಚು ಮೆರೆದಾಡಿತು. ಕೊನೆಗೆ ಕಾಸಿಮ್ ಸೋತು ಓಡಿಹೋಗುವವನಿದ್ದ. ಆಗ ಒಬ್ಬ ದೇಶದ್ರೋಹಿ ಅರ್ಚಕ ಕಾಸಿಮನ ಬಳಿಗೆ ಹೋಗಿ “ಒಂದು ವೇಳೆ ನೀನು ನನಗೆ ರಕ್ಷಣೆಯನ್ನು ಕೊಟ್ಟು
ದಕ್ಷಿಣೆಯನ್ನು ನೀಡಿದರೆ ದೇವಲವನ್ನು ಗೆಲ್ಲುವ ಉಪಾಯವನ್ನು ಹೇಳುತ್ತೇನೆ[1]” ಎಂದನು. ಆಗ ಕಾಸಿಮನು ಅವನ ಮಾತನ್ನು ಕೇಳಿ ಬಹಳ
ಆನಂದಿತನಾದನು. “ದೇವಾಲಯದ ಮೇಲೆ ಹಾರಾಡುತ್ತಿರುವ ಧ್ವಜವನ್ನು
ಕಿತ್ತೆಸೆದರೆ ಹಿಂದುಸೈನಿಕರು ಹೆದರುತ್ತಾರೆ. ಭಗವಂತ
ಅಪ್ರಸನ್ನನಾಗಿದ್ದಾನೆಂದು ತಿಳಿಯುತ್ತಾರೆ, ಮತ್ತು
ಅದರಿಂದಾಗಿಯೇ ಧ್ವಜವು ಬಿದ್ದಿದೆಯೆಂದು ಯುದ್ಧಕ್ಷೇತ್ರದಿಂದ ಓಡಿಹೋಗುತ್ತಾರೆ” ಎಂದು ಅರ್ಚಕ ಹೇಳಿದಾಗ ಕಾಸಿಮ್ ಹಾಗೆಯೇ ಮಾಡಿದ. ಆಗ ದಾಹರನ ಸೈನ್ಯದ ಧೈರ್ಯ ಉಡುಗಿ ಹೋಯಿತು. ಸೈನಿಕರೆಲ್ಲಾ ಓಡಲು ಶುರುಮಾಡಿದರು. ದೇವಲನಗರದ ಮೇಲೆ ಮುಸಲ್ಮಾನರ ಅಧಿಕಾರ ಆರಂಭವಾಯಿತು. ನಗರವನ್ನು ಹಾಳುಗೆಡವಲಾಯಿತು. ಮೂರು ದಿನಗಳ ಕಾಲ ಅಲ್ಲಿ ಹಿಂದುಗಳ ಸಂಹಾರಕಾರ್ಯ
ನಡೆಯಿತು. ಮಂದಿರವನ್ನು ಉರುಳಿಸಿ ಅಲ್ಲಿ ಮಸೀದಿಯನ್ನು
ನಿರ್ಮಿಸಲಾಯಿತು. ಆ ಅರ್ಚಕ ಕಾಸಿಮ್ ನ ಬಳಿಗೆ ಬಂದು “ನೋಡು, ನಾನು
ನಿನ್ನನ್ನು ವಿಜಯಿಯನ್ನಾಗಿ ಮಾಡಿದೆ. ಒಂದು ವೇಳೆ ನೀನು
ಯಥೇಚ್ಛವಾಗಿ ಉಣಬಡಿಸಿದರೆ ನಾನು ನಿನಗೆ ಒಂದು ಗುಪ್ತ ಖಜಾನೆಯನ್ನು ತಿಳಿಸಬಲ್ಲೆ.” ಎಂದು ಹೇಳಿದ. ಕಾಸಿಮನು ಅವನಿಗೆ ಚೆನ್ನಾಗಿ ಉಣಬಡಿಸಿದ. ಆಗ ಆ ಅರ್ಚಕನು ಕಾಸಿಮನನ್ನು ರಾಜ್ಯದ ಖಜಾನೆ
ಇರುವೆಡೆಗೆ ಕರೆದುಕೊಂಡು ಹೋದ. ಶ್ರೀ ಗಣಪತ್
ರಾಯ್ ಅಗರ್ವಾಲ್ ಎಂಬವರು ತಮ್ಮ ಪುಸ್ತಕದಲ್ಲಿ ಪ್ರಾಚೀನ ಇತಿಹಾಸದ ಆಧಾರದ ಮೇಲೆ ಹೀಗೆ
ಬರೆಯುತ್ತಾರೆ – ಆ ಖಜಾನೆಯಲ್ಲಿ
ಚಿನ್ನದಿಂದ ತುಂಬಿದ ತಾಮ್ರದ ಗಜಗಾತ್ರದ ೪೦ ಪಾತ್ರೆಗಳನ್ನು ಇಡಲಾಗಿತ್ತು. ಅವುಗಳಲ್ಲಿ ೧೭೨೦೦ ಮಣಭಾರದ ಬಂಗಾರವಿತ್ತು. ಅದರ ಬೆಲೆ
ಈಗಿನ ಲೆಕ್ಕಾಚಾರದಂತೆ(೫೦ ವರುಷಗಳ
ಹಿಂದೆ) ೫೧ ಬಿಲಿಯ ರುಪಾಯಿಗಳು. ಅದಲ್ಲದೆ ಬಂಗಾರದಿಂದ ಮಾಡಿದ ೬೦೦೦ ಸುರಥದ
ವಿಗ್ರಹಗಳಿದ್ದವು. ಅವುಗಳಲ್ಲಿ ಅತ್ಯಂತ ದೊಡ್ಡ ವಿಗ್ರಹದ ಭಾರ ೩೦
ಮಣದಷ್ಟಿತ್ತು. ಮುತ್ತು, ರತ್ನ, ವಜ್ರ, ವೈಢೂರ್ಯಗಳು ತುಂಬಿ ತುಳುಕುತ್ತಿದ್ದವು. ಅವುಗಳನ್ನು ನೂರಾರು ಒಂಟೆಗಳ ಮೇಲೆ ಸಾಗಿಸಲಾಯಿತು.
ದೇವಲದಲ್ಲಿ ವಿಜಯವನ್ನು ಸಾಧಿಸಿ ಕಾಸಿಮ್ ಮೀರನ್ ನ
ಕಡೆಗೆ ಸಾಗಿದ. ಮತ್ತೆ ರಾವರ್ ನ ಕಡೆಗೆ ಹೋಗಿ ಮುತ್ತಿಗೆ ಹಾಕಿದ. ಅಲ್ಲಿ ದಾಹರನೊಂದಿಗೆ ಯುದ್ಧವಾಯಿತು. ದಾಹರ ಸೇನಾಪತಿಯಾದ ಸಮನಿಯಂತೆಯೇ ಸೇನಾಪತಿ ಮೋಕಾ
ಎಂಬವನು ಕೂಡ ದಾಹರನಿಗೆ ಮೋಸ ಮಾಡಿದ. ವಿಶ್ವಾಸಾಘಾತವೆಸಗೆದ. ಅವನು ಕೋಟೆಯ ಕೀಲಿಕೈಯನ್ನು ಕಾಸಿಮನಿಗೆ
ಕೊಟ್ಟುಬಿಟ್ಟ. ಹೀಗೆಯೇ ಸೇನಾಪತಿಯಾದ ವಲ್ಶಿ ಎಂಬವನು ಕೂಡ ಮುಸಲ್ಮಾನರೊಂದಿಗೆ ಸೇರಿಕೊಂಡ. ಈ ಸೇನಾಪತಿಗಳ
ವಿಶ್ವಾಸದ್ರೊಹದಿಂದಾಗಿ ದಾಹರನ ಮನಸ್ಸು ಮುರಿಯಿತು. ಆದರೂ ಸಹ ಯುದ್ಧ ಮಾಡಿದ. ಆದರೆ ಅವನ ಸೇನೆಯ ಹಿಂಭಾಗದ ನೇತೃತ್ವವನ್ನು ವಹಿಸಿದ
ಇನ್ನೊಬ್ಬ ಸೇನಾಪತಿ ಯುದ್ಧ ನಡೆಯುತ್ತಿದ್ದಂತೆಯೇ
ನಂಬಿಕೆದ್ರೋಹ ಬಗೆದು ಹಿಂಬದಿಯಿಂದ ದಾಹರನ ಮೇಲೆಯೇ ದಾಳಿ ಮಾಡಲಾರಂಭಿಸಿದ. ದಾಹರ ಈಗ ಏನು
ಮಾಡಬಲ್ಲ ? ಹೋರಾಡುತ್ತಾ
ಹೋರಾಡುತ್ತಲೇ ವೀರಸ್ವರ್ಗವನ್ನು ಪಡೆದ. ಆವತ್ತು ೨೧
ಜೂನ್ ಕ್ರಿ.ಶ. ೭೧೨ ರಂದು
ಭಾರತಕ್ಕೆ ಬಹಳ ದೊಡ್ಡ ದೌರ್ಭಾಗ್ಯದ ದಿನವಾಗಿತ್ತು. ಕಾಸಿಮ್ ರಾವರ್ ನ ಕೋಟೆಯನ್ನು ವಶಪಡಿಸಿಕೊಂಡು ಆರು
ಸಾವಿರ ಜನರನ್ನು ಕೊಂದು ಹಾಕಿದ. ನಂತರ ಬ್ರಾಹ್ಮಣಬಾದ್
ನ ಮೇಲೆಯೂ ವಿಜಯವನ್ನು ಸಾಧಿಸಿದ. ಅಲ್ಲಿ ಸಾವಿರಾರು ಹಿಂದುಗಳನ್ನು ಕೊಂದು ಹಾಕಿದ. ಎಲ್ಲ ಆದ
ಬಳಿಕ ಆ ಅರ್ಚಕ ಕಾಸಿಮ್ ನ್ ಬಳಿಗೆ
ದಕ್ಷಿಣೆಯನ್ನು ಪಡೆಯಲು ಹೋದ. ಕಾಸಿಮನು ಅವನಿಗೆ ದಕ್ಷಿಣೆಯನ್ನು ಚೆನ್ನಾಗಿ ಕೊಟ್ಟ. ಕಟುಕರನ್ನು ಕರೆಸಿ “ತನ್ನ ಮಾಲಿಕನಿಗೆ ನಂಬಿಕೆ ದ್ರೋಹವನ್ನು ಬಗೆದ
ಮತ್ತು ತನ್ನ ಧರ್ಮದವರಿಗೇ ಮೋಸವನ್ನು ಮಾಡಿದವನಿಗೆ
ಈ ಜಗತ್ತಿನಲ್ಲಿ ಬದುಕಿರಲು ಯಾವ ಹಕ್ಕೂ ಇಲ್ಲ” ಎಂದು ಹೇಳುತ್ತಾ ಆ ಅರ್ಚಕನನ್ನು ಯಮಪುರಿಗಟ್ಟಿದ. ಹಾಗೆಯೇ
ದಾಹರನಿಗೆ ನಂಬಿಕೆದ್ರೋಹವನ್ನುಂಟುಮಾಡಿ ಕಾಸಿಮನ ಜೊತೆಗೆ ಸೇರಿಕೊಂಡ ಎಲ್ಲ ಸೇನಾಪತಿಗಳನ್ನೂ ಸಹ ಕೊಂದು ಹಾಕಿದ. ಈ ರೀತಿಯಾಗಿ ವಿಶ್ವಾಸಾಘಾತಕ
ದೇಶದ್ರೋಹಿಗಳಿಗೆ ಅವರ ಕರ್ಮದ ಫಲ ದಕ್ಕಿತು. ಆದರೆ ಅವರ ಪಾಪದ
ಫಲವನ್ನು ಈಗಲೂ ಸಹ ಹಿಂದುಗಳು ಭಯಂಕರವಾಗಿ ಅನುಭವಿಸುತ್ತಿರುವುದು ನಮಗೆ ಗೊತ್ತಿದೆ. ಇವು ನಮ್ಮ ಭಯಂಕರ ಪ್ರಮಾದಗಳು ಈಗಲೂ ಸಹ ನಮ್ಮನ್ನು
ಪಶ್ಚಾತ್ತಾಪಪಡುವಂತೆ ಮಾಡುತ್ತವೆ.
2. ದಕ್ಷಿಣದ ರಾಜರುಗಳ ಪ್ರಮಾದ
ಅ) ಕಲ್ಲಿಕೋಟೆಯ
ಜಾಮೋರಿನ್
ಸಿಂಧ್ ನ ರಾಜಾ ದಾಹರನು ಅಲ್ಲಾಫಿ ಮುಸಲ್ಮಾನರಿಗೆ
ಆಶ್ರಯವನ್ನು ಕೊಟ್ಟು ದೊಡ್ಡ ತಪ್ಪನ್ನು ಎಸಗಿ ಅವರಿಗೆ ಸಿಂಧ್ ನಲ್ಲಿ ಕಾಲೂರಲು ಅವಕಾಶವನ್ನು
ಮಾಡಿಕೊಟ್ಟಂತೆ ದಕ್ಷಿಣದಲ್ಲಿ ಕಲ್ಲಿಕೋಟೆಯ ರಾಜ ಜಾಮೋರಿನ್ ಕೂಡ ಮಾಡಿದ. ಅರಬ್ ದೇಶದ ಮುಸಲ್ಮಾನ ವ್ಯಾಪಾರಿಗಳು ಶ್ರೀಲಂಕಾ
ಹಾಗೂ ಭಾರತದ ಪಶ್ಚಿಮ ಸಮುದ್ರತೀರದಲ್ಲಿ ಹಡಗುಗಳ ಮೂಲಕ ವ್ಯಾಪಾರ ಮಾಡಲು ಬರುತ್ತಿದ್ದರು. ಅವರಲ್ಲಿ ಕೆಲವರು ವ್ಯಾಪಾರದಲ್ಲಿ ನಿಪುಣರಾಗಿದ್ದರು. ಆ ವ್ಯಾಪಾರಿಗಳು ತನ್ನ ರಾಜ್ಯದಲ್ಲಿಯೇ
ಉಳಿದುಕೊಳ್ಳಲಿ ಎಂಬುದಾಗಿ ಜಾಮೋರಿನ್ ಬಯಸಿದ್ದ. ಆದರೆ ಅವರು
ಹೇಳಿದರು – “ನಮ್ಮ ಜೊತೆಗೆ ನಮ್ಮ ಹೆಂಡಿರು ಇಲ್ಲವಲ್ಲ ? ಅವರಿಲ್ಲದೆ ನಾವು ಇಲ್ಲಿ ಹೇಗಿರಲು ಸಾಧ್ಯ ?”
ಜಾಮೋರಿನ್ ತನ್ನ ಹಿಂದು ಅಂಬಿಗರಿಗೆ ತಮ್ಮ ತಮ್ಮ
ಮನೆಯಲ್ಲಿರುವ ಒಂದೊಂದು ಹೆಣ್ಣನ್ನು ಆ ಮುಸಲ್ಮಾನ್ ವ್ಯಾಪಾರಿಗಳಿಗೆ ಮದುವೆಮಾಡಿ ಕೊಡಲು
ಆಜ್ಞಾಪಿಸಿದ. ಹೀಗೆ ಮಾಡಿದ ಬಳಿಕ ಅರಬ್ ನ ಮುಸಲ್ಮಾನ ವ್ಯಾಪಾರಿಗಳು ದಕ್ಷಿಣಭಾರತದಲ್ಲಿ
ಹರಡಿಕೊಂಡುಬಿಟ್ಟರು. ಅವರದ್ದೇ ಸಂತಾನ ಮುಂದೆ ಮೋಪ್ಲಾ (ಮಾಪಿಳ್ಳೆ) ಎಂಬುದಾಗಿ ಕರೆಯಲ್ಪಟ್ಟಿತು. ಈ ಮೋಪ್ಲಾಗಳು ಕ್ರಿ.ಶ.೧೯೨೩ ರಲ್ಲಿ ಹಿಂದುಗಳ ವಿರುದ್ಧ ವಿದ್ರೊಹವನ್ನೆಸಗಿ
ಅವರನ್ನು ಸಾಯಿಸಿ ಅವರ ಹೆಣಗಳಿಂದ ಅಲ್ಲಿನ ಬಾವಿಗಳನ್ನು ತುಂಬಿಸಿದರು. ಹಾಗೆಯೇ
ಹಿಂದುಗಳ ಮೇಲೆ ಅನೇಕ ರೀತಿಯ ಅತ್ಯಾಚಾರವನ್ನೆಸಗಿದರು. ಈ ಅತ್ಯಾಚಾರ ಹಾಗೂ ಹಿಂದುಗಳ ವಿನಾಶಕ್ಕೆ ಮೂಲಕಾರಣ
ಜಾಮೋರಿನ್ ನ ಆ ಮೂರ್ಖತನದಿಂದ‘ ಮಾಡಿದ
ಪ್ರಮಾದವಾಗಿತ್ತು. ಆದ್ದರಿಂದಲೇ ದಕ್ಷಿಣದ ಹಿಂದುಗಳು ಈಗಲೂ
ದುಃಖಿಸುತ್ತಿದ್ದಾರೆ.
ಆ) ರಾಜಾ ಚೇರಾಮನ್
ಪೀರುಮಲ್
ದಕ್ಷಿಣದ ಇನ್ನೊಬ್ಬ ರಾಜ ಚೇರಾಮನ್ ಪೀರುಮಲ್ ನ
ಮೂರ್ಖತನ ಹಾಗೂ ಮೂಢನಂಬಿಕೆಯ ಕತೆ ಇದಕ್ಕಿಂತಲೂ ತುಂಬ ವಿಚಿತ್ರವಾಗಿದೆ. ಇದನ್ನು ಡಾ.ರಾಮಪ್ರಸಾದ ತ್ರಿಪಾಠಿಯವರು ತಮ್ಮ ಮುಸ್ಲಿಂ ಕಾಲದ
ವೈಭವಕ್ಕೆ ಸಂಬಂಧಪಟ್ಟ ಪುಸ್ತಕದಲ್ಲಿ ಉಲ್ಲೆಖಿಸಿದ್ದಾರೆ. ಅದನ್ನು Chronical of the Deccan ಎಂಬುದನ್ನು
ಆಧರಿಸಿ ಬರೆಯಲಾಗಿದೆ. ಇದರ ಉಲ್ಲೆಖ “Gazeteer of India” ದಲ್ಲಿ
ಮಾಡಲಾಗಿದೆ.
ಒಂದು ಬಾರಿ ರಾಜಾ ಚೇರಾಮನ್ ಪೀರುಮಲ್ ನಿಗೆ ರಾತ್ರಿ
ಒಂದು ಕನಸು ಬಿತ್ತು. ಅದರಲ್ಲಿ ಚಂದ್ರ ಎರಡು ತುಂಡಾಗಿದ್ದ. ಬೆಳಿಗ್ಗೆ ಎದ್ದು ಪಂಡಿತರ ಬಳಿಯಲ್ಲಿ ಸ್ವಪ್ನದ
ರಹಸ್ಯವನ್ನು ಕೇಳಿದ. ಪಂಡಿತರು ಹೇಳಿದ ಉತ್ತರದಿಂದ ಅವನು
ಸಂತುಷ್ಟನಾಗಲಿಲ್ಲ. ಅದೇ ದಿನಗಳ್ಳಿ ಅರಬ್ ನ್ ಒಬ್ಬ ಮುಸಲ್ಮಾನ್ ವ್ಯಾಪಾರಿಅಲ್ಲಿಗೆ ಬಂದ ಹಾಗೂ ಅವಕಾಶವನ್ನು ಪಡೆದು
ರಾಜನ ಭೇಟಿಯಾದ. ಅವನು ರಾಜನ ಸ್ವಪ್ನದ ಕುರಿತಾದ ಸಂದೇಹವನ್ನು ಹೀಗೆ
ಬಿಡಿಸಿದ –
“ಹಜರತ್
ಮೊಹಮ್ಮದರು ಚಂದ್ರನನ್ನು ಎರಡಾಗಿ ತುಂಡರಿಸಿದರು. ಅದೇ ನಿಮಗೆ
ಕಾಣಿಸಿದೆ. ಹಜರತ್
ಮೊಹಮ್ಮದರಿಗೆ ನಿಮ್ಮ ಮೇಲೆ ವಿಶೆಷವಾದ ಅನುಕಂಪವಿದೆ. ಆದ್ದರಿಂದ ನೀವು ಅವರಲ್ಲಿ ಶರಣಾಗತರಾಗಿರಿ. ಇಲ್ಲದೆ ಹೋದರೆ ನಿಮ್ಮ ರಾಜ್ಯಕ್ಕೆ ದೊಡ್ಡ
ಅನಿಷ್ಟವುಂಟಾಗಲಿದೆ.” ಆ ಮೂರ್ಖ ರಾಜ ಆ ವ್ಯಾಪಾರಿಯ ಮಾತನ್ನು ನಂಬಿ ಅವನ
ಜೊತೆಗೆ ಮಕ್ಕಾಕ್ಕೆ ಹೊರಟು ಹೋದ. ಅಲ್ಲಿ
ಮುಸಲ್ಮಾನನಾಗಿ ಮತಾಂತರಗೊಂಡು ಅಲ್ಲಿಯೇ
ಇರಲಾರಂಭಿಸಿದ. ಅಲ್ಲಿಂದ ಅವನು
ಇಸ್ಲಾಂನ ಪ್ರಚಾರಕ್ಕಾಗಿ ಮೌಲವಿಗಳನ್ನು ಕಳುಹಿಸಿದ. ಹಾಗೆಯೇ ತನ್ನ
ಮಂತ್ರಿಗೆ “ಆ ಮೌಲವಿಗಳ
ಎಲ್ಲಾ ಖರ್ಚನ್ನೂ ರಾಜ್ಯದ ಖಜಾನೆಯಿಂದಲೇ ಭರಿಸಬೇಕು ಹಾಗೂ ರಾಜ್ಯದಲ್ಲೆಲ್ಲಾ ಮಸೀದಿಗಳನ್ನು
ನಿರ್ಮಿಸಬೇಕು” ಎಂಬುದಾಗಿ
ಆದೇಶವನ್ನು ಪತ್ರದ ಮೂಲಕ ಬರೆದು ಕಳುಹಿಸಿದ. ಹಾಗೆಯೇ ಆಯಿತು. ರಾಜ್ಯದಲ್ಲೆಲ್ಲಾ ಇಸ್ಲಾಂನ ಪ್ರಚಾರ ಮಾಡಲಾಯಿತು. ಇವೆಲ್ಲಾ ಯಾರ ಮೂರ್ಖತನದಿಂದ ? ಆ ಮೂರ್ಖ
ಅಂಧವಿಶ್ವಾಸಿ ರಾಜನಿಂದ. ಯಾವಾಗ ಇಂತಿಂಥಾ
ಮೂರ್ಖ ರಾಜರುಗಳು ತಮ್ಮ ಹಿಂದೂಧರ್ಮದ ಕಾಲುಗಳನ್ನು ಸ್ವತಃ ಕಡಿದು ಹಾಕಿದರೆ ಮುಸಲ್ಮಾನರದು ತಾನೆ
ಏನು ತಪ್ಪು ? ನಮ್ಮ ಇಂತಹ
ಪ್ರಮಾದಗಳೇ ಹಿಂದೂಧರ್ಮದ ವಿನಾಶಕ್ಕೆ ಕಾರಣಗಳಾದವು.ಅದರ ಫಲವನ್ನು
ಈಗಲೂ ನಾವು ಅನುಭವಿಸುತ್ತಿದ್ದೇವೆ.
3. ಕಾಶ್ಮೀರದ ಪಂಡಿತರು
ಕಾಶ್ಮೀರವನ್ನು ಭಾರತದ ಸ್ವರ್ಗ ಎಂಬುದಾಗಿ
ಕರೆಯುತ್ತಾರೆ.ಅದು ನಿಜವಾಗಿಯೂ ಸ್ರಿಯಾಗಿಯೇ ಇದೆ.
ಗರ್ ಫಿರ್ ದೌಸ್
ಬರ್ ರೂಯೇ ಜಮೀನಸ್ತ್ l
ಅಮೀನಸ್ತೊ
ಅಮೀನಸ್ತೊ ಅಮೀನಸ್ತ್ ll
ಅರ್ಥಾತ್ – ಒಂದು ವೇಳೆ ಏ ಭೂಮಿಯಲ್ಲಿ ಸ್ವರ್ಗವಿರುವುದಾದರೆ
ಅದಿಲ್ಲೇ ಇದೆ ಇಲ್ಲೇ ಇದೆ ಇಲ್ಲೇ ಇದೆ. ಇಂತಹ
ಸ್ವರ್ಗತುಲ್ಯವಾದ ಕಾಶ್ಮೀರದ ನೆಲದಲ್ಲಿ ಇಂದು ಯವನರು ವಿಹರಿಸುತ್ತಿದ್ದಾರೆ. ಅಲ್ಲಿ ಕೇವಲ ಪಂಡಿತರದ್ದೇ ಬಾಹುಳ್ಯವಿತ್ತು. ಒಬ್ಬನೇ ಒಬ್ಬ ಮುಸಲ್ಮಾನನಿರಲಿಲ್ಲ. ಅಲ್ಲಿ ಇವತ್ತು ಮುಸಲ್ಮಾನರ ಸಂಖ್ಯೆ೮೫% ಹೇಗಾಯಿತು.
ಇತಿಹಾಸ ಹೇಳುತ್ತದೆ – ಒಂದು ಬಾರಿ ತುರ್ಕಿಸ್ಥಾನದಿಂದ ಸಿಕಂದರನೆಂಬ
ತುರ್ಕಿಯ ಸರದಾರ ಕಾಶ್ಮೀರದ ಮೇಲೆ ದಾಳಿ ಮಾಡಿ ಗೆದ್ದುಬಿಟ್ಟ. ಅವನು ಯಾವುದೇ ಮತವನ್ನೂ ಪುರಸ್ಕರಿಸುತ್ತಿರಲಿಲ್ಲ. “ಯಾರಾದರೂ ತಮ್ಮ ಧರ್ಮದ ಸಿದ್ಧಾಂತಗಳನ್ನು ನನಗೆ
ತಿಳಿ ಹೇಳಿದರೆ ಅದೇ ಧರ್ಮವನ್ನು ನಾನು ಸ್ವೀಕರಿಸುತ್ತೇನೆ” ಎಂಬುದಾಗಿ ಘೋಷಣೆಯನ್ನು ಮಾಡಿದ. ಆಗಿನ ಕಾಶ್ಮೀರೀಪಂಡಿತರು ಆತನನ್ನು
ಮ್ಲೇಚ್ಛನೆಂಬುದಾಗಿ ಜರೆದು ತಮ್ಮ ಧರ್ಮವನ್ನು ಆತನಿಗೆ ಉಪದೇಶಿಸಲು ನಿರಾಕರಿಸದರು. ಅದೇ ಸಮಯದಲ್ಲಿ ಪಂಜಾಬಿನ ಒಬ್ಬ ಬುಲ್ಬಲ್ ಶಾಹ ಎಂಬ
ಮುಸ್ಲಿಂ ಫಕೀರ ಆತನ ಬಳಿಗೆ ಹೋಗಿ ಇಸ್ಲಾಮ್ ನ ಸಿದ್ಧಾಂತವನ್ನು ಬೊಧಿಸಿದ. ನಂತರ ರಾಜಾ ಸಿಕಂದರ್ ಮುಸಲ್ಮಾನನಾಗಿ ಮತಾಂತರಗೊಂಡು
ಕಾಶ್ಮೀರದಲ್ಲಿ ಇಸ್ಲಾಂ ಮತವನ್ನು ಹರಡಲು ಆಜ್ಞಾಪಿಸಿದ. “ಯಥಾ ರಾಜಾ ತಥಾ ಪ್ರಜಾಃ” ಎಂಬಂತೆ ಕಾಶ್ಮೀರದಲ್ಲಿ ಒಂದೇ ಸಮನೆ ಹಿಂದುಗಳನ್ನು
ಮುಸಲ್ಮಾನರನ್ನಾಗಿ ಮತಾಂತರಿಸಲಾಯಿತು. ಯಾರು
ಮತಾಂತರಗೊಳ್ಳಲು ಒಪ್ಪಲಿಲ್ಲವೋ ಅವರನ್ನು ಕೊಂದು ಮುಗಿಸಲಾಯಿತು. ಅನೆಕ ಹಿಂದುಗಳನ್ನು ಸಜೀವವಾಗಿ ಗೋಣಿಚೀಲದಲ್ಲಿ
ತುಂಬಿಸಿ ಝೀಲಂನದಿಗೆ ಎಸೆಯಲಾಯಿತು.
ಇವತ್ತು ಕಾಶ್ಮೀರೀಪಂಡಿತರು ಅಳುತ್ತಾ ಹೇಳುತ್ತಾರೆ – “ನಮ್ಮ ಮೇಲೆ ಅತ್ಯಾಚಾರ ಮಾಡಲಾಗುತ್ತಿದೆ” ಎಂಬುದಾಗಿ. ಆದರೆ ಆವತ್ತು ಸಿಕಂದರನಿಗೆ ತಮ್ಮ ಪೂರ್ವಜರು ತಮ್ಮ
ಧರ್ಮವನ್ನು ಉಪದೇಶಿಸಲು ನಿರಾಕರಿಸಿದ್ದರು, ಮತ್ತು
ಅದರಿಂದಾಗಿಯೇ ಇಸ್ಲಾಮ್ ಅಲ್ಲಿ ಹರಡಿತು ಎಂಬುದನ್ನು ನೆನಪು ಮಾಡಿಕೊಳ್ಳಬೇಕು. ಅದು ಒಂದು ದೊಡ್ಡ ಪ್ರಮಾದವಾಗಿತ್ತು. ಅದ್ರ ಫಲವನ್ನು ಇಂದಿಗೂ ಕಾಶ್ಮೀರದ ಹಿಂದುಗಳು
ಅನುಭವಿಸುತ್ತಿದ್ದಾರೆ. ಅದಕ್ಕೆ ಪುರಾವೆಯಾಗಿ ಅಲ್ಲಿನ ಹಿಂದುಗಳ ಜನಸಂಖ್ಯೆ
೧೦% ದ ಹತ್ತಿರ ಬರುತ್ತಿದೆ. ಒಂದು ವೇಳೆ ಅವತ್ತು ಧರ್ಮದ ಗುತ್ತಿಗೆಯನ್ನು ಪಡೆದ
ಕಾಶ್ಮೀರೀಪಂಡಿತರು ತಮ್ಮ ಕರ್ತವ್ಯವನ್ನು
ಚೆನ್ನಾಗಿ ಅರಿತು “ಕೃಣ್ವಂತೊ ವಿಶ್ವಮಾರ್ಯಮ್” (ಇಡೀ ಜಗತ್ತಿನ ಜನರನ್ನು ಸುನಾಗರಿಕರನ್ನಾಗಿ
ಮಾಡಬೇಕು) ಎಂಬ ವೇದದ ಆಜ್ಞೆಯನ್ನು ಪಾಲಿಸಿದ್ದರೆ ರಾಜಾ
ಸಿಕಂದರನು ಹಿಂದೂಧರ್ಮವನ್ನು ಸ್ವೀಕರಿಸುತ್ತಿದ್ದ. ಹಾಗೆಯೇ
ಕಾಶ್ಮೀರದಲ್ಲಿ ಇಸ್ಲಾಮ್ ಮತದ ಪ್ರವೇಶವೇ ಆಗುತ್ತಿರಲಿಲ್ಲ. ಇವತ್ತು ಅಲ್ಲಿ ನಡೆಯುತ್ತಿರುವ ಗೋಹತ್ಯೆ, ಹಿಂದೂಧರ್ಮದ ಹಾಗೂ ಸಂಸ್ಕೃತಿಯ ಮೇಲಿನ ಆಘಾತ
ಆಗುತ್ತಿರಲಿಲ್ಲ. ಎವೆಲ್ಲದರ ಕಾರಣ ಆ ಕಾಶ್ಮೀರೀಪಂಡಿತರೇ ಆಗಿದ್ದಾರೆ.
[1] ಈ ರೀತಿಯಾಗಿ ಹೇಳಿದ ಅರ್ಚಕನ ಬಗ್ಗೆ ಲೇಖಕರಿಗೆ ಆಧಾರ ಅದೆಲ್ಲಿಂದ ಸಿಕ್ಕಿತೋ ನಾ ಕಾಣೆ. ಅವರು ಹೇಳಿದ ಆ ದೇವಾಲಯದಲ್ಲಿದ್ದ ಪುಕ್ಕಲು ಅರ್ಚಕನಿಗೆ ಅದು ಹೇಗೆ ರಣರಂಗವಾದ ದೇವಾಲಯದಲ್ಲಿ ಮೀರ್ ಖಾಸಿಮ್ ಸೋಲುತ್ತಿರುವುದು ನೋಡಲು ಸಾಧ್ಯವಾಯಿತೋ ಗೊತ್ತಿಲ್ಲ. ಹಾಗೆಯೇ ರಣಾಂಗಣದಲ್ಲಿ ಇಲ್ಲದ ಒಬ್ಬ ಅರ್ಚಕ ಸೋಲುತ್ತಿರುವ ಮೀರ್ ಖಾಸಿಮ್ ನನ್ನು ಭೇಟಿ ಮಾಡಲು ಸಾಧ್ಯವಿದ್ದಾಗ ರಣಾಂಗಣದಲ್ಲಿಯೇ ಇದ್ದ ನಮ್ಮ ಸೈನಿಕರ ಕೈಗೆ ಆತ ಯಾಕೆ ಸಿಕ್ಕು ಸಾಯಲಿಲ್ಲ !!! ಒಟ್ಟಾರೆ ಎಡಪಂಥವಾಗಲಿ ಬಲಪಂಥವಾಗಲಿ, ನಿಂದಿಸಲು ತೆಗಳಲು ಹೀಯಾಳಿಸಲು ಆರೊಪಿಸಲು ಆರಿಸುವುದು ಬ್ರಾಹ್ಮಣನನ್ನೇ.ಯಾಕೆಂದರೆ ಬ್ರಾಹ್ಮಣ ಯಾವತ್ತೂ ತನ್ನ ವಿರುದ್ಧ ಏನೇ ಸಂಚು ನಡೆದರೂ ಪ್ರತಿಭಟಿಸುವುದೇ ಇಲ್ಲ.
ಅನುವಾದಕ
No comments:
Post a Comment