ನಿಮ್ಮ ಗೋವಿನ ಬಗ್ಗೆ ಇರುವ ಸಂವೇದನೆ ನಿಜವಾಗ್ಲೂ ಒಪ್ಪುವಂತದ್ದೆ.
ಆದ್ರೆ ಹಿಂದುಗಳು ಮಾರಿದ್ರೆ ಮಾತ್ರ ಮುಸ್ಲಿಂ ರು ತಿಂತಾರೆಯೇ?
ಪ್ರತಿನಿತ್ಯ ರಸ್ತೆ ಬದೀಲಿ ಮಲ್ನಾಡು ಮುಂತಾದೆಡೆ ಮಲಗಿದ್ದ ಹಸುಗಳನ್ನು ಯಾರಿಗೆ ದುಡ್ಡು ಕೊಟ್ಟು ರಾತ್ರಿ ಎಲ್ಲ ಮಲಗಿದ್ದಾಗ ಖರೀದಿಸುತ್ತಾರೆ?
ಗೋಶಾಲೆಗೆ ನುಗ್ಗಿ ಹಾಡು ಹಗಲೇ ಗೋವುಗಳನ್ನು ಕದಿಯುವ ಪ್ರಕರಣಗಳು ಯಾಕಾಗ್ತಾವೆ?
ಖರೀದಿಸಿಯೇ ಸಾಗಿಸುವುದಾದರೆ ಕದ್ದು ಮುಚ್ಕೊಂಡು ಯಾಕೆ ಸಾಗಿಸಬೇಕು? ಅದಕ್ಕೆ ಕಾಗದಪತ್ರಗಳನ್ನು ಮಾಡಿ ನಿಯಮಅನುಗುಣವಾಗಿಯೇ ಸಾಗಿಸಲು ವ್ಯವಸ್ಥೆ ಇದೆಯಲ್ಲ.
ಇನ್ನು ಕೃಷಿಕರು ಯಾಕೆ ಮಾರುತ್ತಾರೆ? ಇದು ತುಂಬಾ ಚರ್ಚಾರ್ಹ ವಿಷಯ. ಇದಕ್ಕೆ ಬಹಳ ಆಯಾಮಗಳಿವೆ.
ಗೋವನ್ನು ಸಾಕುವ ಕೃಷಿಕರು ಇಂದು ಗಣನೀಯವಾಗಿ ಕಡಿಮೆಯಾಗುತ್ತಿದ್ದಾರೆ.
50 ರೂಪಾಯಿಗೆ ಹಾಲು ಸಿಗುವಾಗ 600 ರೂ ಸಂಬಳ ಕೊಟ್ಟು ಯಾವನೆ ಕೃಷಿಕ ಯಾಕೆ ಬೆವರಿಳಿಸಬಲ್ಲ?
ಅವನ ಬೆನ್ನಿಗೆ ಸರಕಾರ ಮತ್ತು ಸಮಾಜ ನಿಂತರೆ ಮಾತ್ರ ಅವನು ತನಗಾಗುವ ನಷ್ಟವನ್ನೂ ಸಹಿಸಿಕೊಳ್ಳಬಲ್ಲ.
ಇದನ್ನು ಬೆವರಿಳಿಸದೇ, ಹಾಲಿಗೆ 2 ರೂ ಜಾಸ್ತಿಯದಾಗ ಬೇರೆಯವರನ್ನು ಬಯ್ಯುತ್ತಾ ಕಾಲ ಕಳೆಯುವವರು ಸ್ವಲ್ಪ ಯೋಚಿಸಬೇಕು.