Saturday, June 29, 2013

ನಾನೇಕೆ ಇಸ್ಲಾಮನ್ನು ತ್ಯಜಿಸಿದೆ ?



ನಾನೇಕೆ  ಇಸ್ಲಾಮನ್ನು ತ್ಯಜಿಸಿದೆ ?
ಇಸ್ಲಾಮ್ ನಲ್ಲಿ ನನ್ನ ನಂಬಿಕೆ ದೃಢವಾಗಿತ್ತು. ನಾನು ಬಾಲ್ಯದಿಂದಲೇ ಇಸ್ಲಾಮ್ ನ ನಿಯಮಗಳನ್ನು ಪಾಲಿಸುತ್ತಿದ್ದೆ. ವಿಜ್ಞಾನದ ವಿದ್ಯಾರ್ಥಿಯಾದ ಬಳಿಕ ಅನೇಕ ಪ್ರಶ್ನೆಗಳು ನನ್ನನ್ನು  ಇಸ್ಲಾಮ್ ನ ವಿಷಯದಲ್ಲಿ ಚಿಂತನೆ ನಡೆಸುವಂತೆ ಮಾಡಿದವು. ಇಸ್ಲಾಮ್ ನ  ನಿಯಮದಂತೆ ಪವಿತ್ರ ಕುರಾನ್ ಅಥವಾ ಹಜರತ್ ಮಹಮ್ಮದರ ವಿಷಯದಲ್ಲಿ ಶಂಕಿಸುವುದೆಂದರೆ ( ಯಾವನೊ ಒಬ್ಬನನ್ನು ಯಾವನೋ ಒಬ್ಬನ ಕೊಲೆಯಲ್ಲಿ ಅಪರಾಧಿಯನ್ನಾಗಿ ಮಾಡಿದಷ್ಟು) ದೊಡ್ಡ  ಅಪರಾಧವಾಗುತ್ತದೆ. ನಾನು ಯುವಾವಸ್ಥೆಗೆ ಬಂದ ಬಳಿಕ ನನ್ನ ಮನಸ್ಸಿನಲ್ಲಿ ಎಲ್ಲಕ್ಕಿಂತ ಮೊದಲು ಒಂದು ಪ್ರಶ್ನೆ ಹುಟ್ಟುತ್ತಿತ್ತು –“ಅಲ್ಲಾಹ ದಯಾಳುವಾಗಿದ್ದಾನೆ, ನ್ಯಾಯವನ್ನು ದಯಪಾಲಿಸುವವನಾಗಿದ್ದಾನೆ, ಅಂತ ಮುಲ್ಲಾ ಉಪದೇಶ ಮಾಡುತ್ತಾನೆ. ಮತ್ತೆ ಯಾಕೆ ಈ ಜಗತ್ತಿನಲ್ಲಿ ಒಬ್ಬ ಬಡವ, ಒಬ್ಬ ಶ್ರೀಮಂತ,  ಒಬ್ಬ ಮಾನವ ಇನ್ನೊಬ್ಬ ದಾನವ ಎಂಬುದಾಗಿ ವೈರುಧ್ಯ ಕಾಣುತ್ತಿದೆ ? ಎಲ್ಲರಿಗೂ ಸಮಾನವಾಗಿ ನ್ಯಾಯವನ್ನು ಅಲ್ಲಾಹ ಕೊಡುತ್ತಾನೆ ಎಂಬುದಾಗಿ ಕುರಾನ್ ನಲ್ಲಿ ವರ್ಣಿಸಿದೆ ಎಂದಾದಲ್ಲಿ ಎಲ್ಲರೂ ಒಂದೇ ರೀತಿಯಾಗಿರಬೇಕಾಗಿತ್ತು. ಒಬ್ಬ ಹುಟ್ಟಿನಿಂದಲೇ ಕಷ್ಟವನ್ನು ಅನುಭವಿಸುತ್ತಿದ್ದರೆ, ಇನ್ನೊಬ್ಬ ಸಮಸ್ತವೈಭೋಗಗಳ ನಡುವೆಯೇ ಹುಟ್ಟುತ್ತಾನೆ. ಜಗತ್ತಿನಲ್ಲಿ ಎಲ್ಲಾ ಕಡೆ ಹೀಗೆಯೇ ಕಾಣುತ್ತಿರುವಾಗ  ಅಲ್ಲಾಹ ನ್ಯಾಯ ಒದಗಿಸುವವನು ಹೇಗಾಗಲು ಸಾಧ್ಯ.  ಈ ಪ್ರಶ್ನೆಯನ್ನು ನಾನು ಬಹಳ ವರ್ಷಗಳವರೆಗೆ ನನ್ನ ಮಿತ್ರರಲ್ಲಿ, ಪರಿಚಿತರಲ್ಲಿ, ಮುಲ್ಲಾ ಮೌಲವಿಗಳ ಬಳಿಯಲ್ಲಿ ಕೇಳ್ತಾ ಇದ್ದೆ. ಆದರೆ ಎಲ್ಲರೂ ಒಟ್ಟಾಗಿ ಒಂದೇ ದನಿಯಲ್ಲಿ ಹೇಳುತ್ತಿದ್ದ ಉತ್ತರವೆಂದರೆ –
“ನೀನು ಅಲ್ಲಾಹನ ವಿಷಯದಲ್ಲಿ ತರ್ಕ ಯಾಕೆ ಮಾಡುತ್ತಿರುವೆ ? ನವಯುವಕ ನೀನು. ಹುರುಪಿನಿಂದ ಧರ್ಮದ ಕೆಲಸ ಮಾಡುತ್ತಾ ಕಾಲ ಕಳೆಯುತ್ತಿರು” ಎಂಬುದಾಗಿ. ಇದು ನನ್ನ ಪ್ರಶ್ನೆಗೆ ಉತ್ತರವಾಗಿರಲಿಲ್ಲ. ಈ ವಿಷಯ ನಿರಂತರವಾಗಿ ನನ್ನನ್ನು ಕಾಡುತ್ತಿತ್ತು. ನಾನೂ ಸಹ ನಿರಂತರವಾಗಿ ತಿಳಿದವರ ಬಳಿಯಲ್ಲಿ ಈ ಪ್ರಶ್ನೆಯನ್ನು ಕೇಳ್ತಾನೇ ಇದ್ದೆ. ಆದರೆ  ಅವರಿಂದ ಉತ್ತರ ಯಾವತ್ತೂ ಸಿಗಲಿಲ್ಲ.
ಕೊನೆಗೆ ಉತ್ತರ ಸಿಕ್ಕಿದ್ದು ಮಹರ್ಷಿ ದಯಾನಂದರ ಪವಿತ್ರ ವೈಜ್ಞಾನಿಕ ಗ್ರಂಥವಾದ ಸತ್ಯಾರ್ಥಪ್ರಕಾಶದಲ್ಲಿ.
ಅದರಲ್ಲಿ ಮಹರ್ಷಿ ದಯಾನಂದರು, ಈ ಜನ್ಮದಲ್ಲಿ ಮಾಡಿದ ಒಳ್ಳೆಯ ಮತ್ತು ಕೆಟ್ಟ ಕೆಲಸದ ಫಲವನ್ನು ಮುಂದಿನ ಜನ್ಮದಲ್ಲಿ ಜನರು ಅನುಭವಿಸುತ್ತಾರೆ ಎಂದು ವರ್ಣಿಸಿದ್ದಾರೆ. ಈ ರೀತಿಯ ವ್ಯಾಖ್ಯಾನ ತರ್ಕಬದ್ಧವೂ ಹೌದು. ನಾವು ಬ್ಯಾಂಕಿನಲ್ಲಿ ಖಾತೆ ತೆರೆದರೆ ನಮಗೆ ಉಳಿತಾಯ ಖಾತೆಯಲ್ಲಿ ನಿಯಮಿತವಾಗಿ ಆರು ತಿಂಗಳಿಗೊಂದು ಬಾರಿ ಬಡ್ಡಿ ದೊರೆಯುತ್ತದೆ. ಮೂಲಧನವೂ ಹಾಗೆಯೇ ಉಳಿಯುತ್ತದೆ. ಅದರಂತೆ ಜೀವಾತ್ಮ ಸೃಷ್ಟಿಯ ಬಳಿಕ ಬೇರೆ ಬೇರೆ ಶರೀರಗಳಲ್ಲಿ ಪ್ರವೇಶಿಸುತ್ತಾನೆ. ಹಾಗೆಯೇ ತನ್ನ ಒಳ್ಳೆಯ ಹಾಗೂ ಕೆಟ್ಟ ಕೆಲಸಗಳ ಫಲವನ್ನು ಅನುಭವಿಸುತ್ತಾನೆ. ಪುನರ್ಜನ್ಮವಿಲ್ಲದೆ ಇದೆಲ್ಲ ಸಾಧ್ಯವಿಲ್ಲ. ಆದ್ದರಿಂದ ಪುನರ್ಜನ್ಮವನ್ನು ಒಪ್ಪುವುದು ಅನಿವಾರ್ಯ. ಆದರೆ ಮುಸಲ್ಮಾನರು ಪುನರ್ಜನ್ಮವನ್ನು ನಂಬುವುದಿಲ್ಲ, ಒಪ್ಪುವುದಿಲ್ಲ. 14ನೇ ಶತಮಾನದಲ್ಲಿ ಜಗತ್ತು ಇಲ್ಲವಾಗುವುದೆಂಬುದನ್ನು ಮಾತ್ರ ಅವರು ಒಪ್ಪುತ್ತಾರೆ. ಸೃಷ್ಟಿಯ ಕೊನೆಯ ದಿನ ಬರುತ್ತದೆ. ಆಗ ಅಲ್ಲಾಹನೆದುರು ನ್ಯಾಯನಿರ್ಣಯಮೈದಾನದಲ್ಲಿ  ಎಲ್ಲರ ಪಾಪಪುಣ್ಯದ ನಿರ್ಣಯವಾಗುವುದು. ಅದರಂತೆ ಶಿಕ್ಷೆಯಾಗುವುದು. ಆದರೆ ಆ ಮೈದಾನದಲ್ಲಿ ಯಾರು ಮಹಮ್ಮದ ಪೈಗಂಬರರನ್ನು ತಮ್ಮ ಮಾರ್ಗದರ್ಶಕರೆಂದು ಒಪ್ಪಿ  ಅವರ ಧ್ವಜದಡಿಯಲ್ಲಿ ಬರುತ್ತಾರೋ, ಕೇವಲ ಅವರಿಗೆ ಮಾತ್ರ ಇನಾಮು ಕೊಡಲಾಗುತ್ತದೆ. ಅರ್ಥಾತ್ ಅವರಿಗೆ ಕೆಟ್ಟಕೆಲಸದ ಫಲವನ್ನು ಅನುಭವಿಸಬೇಕಾದ ಅಗತ್ಯವಿರುವುದಿಲ್ಲ. ಅವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ.
ಇವೆಲ್ಲ ಮೂರ್ಖತನ ಅಂತ ಅನಿಸುತ್ತದೆ. ಯಾಕೆಂದರೆ ಒಬ್ಬ ವ್ಯಕ್ತಿ (ಪೈಗಂಬರ) ಹೇಳಿದ ಮಾತ್ರಕ್ಕೆ ಈ ಎಲ್ಲಾ ಆಟ ನಡೆಯುತ್ತದೆಂದಾದರೆ ಜಗತ್ತಿನಲ್ಲಿ ಉಳಿದ ಮತಗಳನ್ನು ಒಪ್ಪಿಕೊಳ್ಳುವ ಅವಶ್ಯಕತೆ ಏನಿದೆ ?
ಸೃಷ್ಟಿಯ ಅಂತ್ಯ 14 ನೇ ಶತಮಾನದಲ್ಲಿ ಆಗುವುದೆಂದು ಮುಸಲ್ಮಾನರು ನಂಬುತ್ತಾರೆ. ಆದರೆ 14 ನೇ ಶತಮಾನ ಕಳೆದುಹೋಗಿದೆ. ಹಾಗಿದ್ದರೂ ಈ ಜಗತ್ತು ಯಾಕೆ ನಾಶ ಹೊಂದಲಿಲ್ಲ ? ನ್ಯಾಯನಿರ್ಣಯ (ಪೈಗಂಬರರ ಉಪಸ್ಥಿತಿಯಲ್ಲಿ ಪ್ರಳಯಕಾಲದಲ್ಲಿ ಅಲ್ಲಾಹ ಮಾಡುವ ನ್ಯಾಯನಿರ್ಣಯ ) ಏಕಾಗಲಿಲ್ಲ. ಮಹಮ್ಮದ ಪೈಗಂಬರರಿಗಿಂತ ಮೊದಲು(ಕ್ರಿ.ಶ 6ನೇ ಶತಮಾನ) ಅಥವಾ ಇಸ್ಲಾಮ್ ಆರಂಭವಾಗುವುದಕ್ಕಿಂತ ಮೊದಲು ಈ ಜಗತ್ತು ಇರಲಿಲ್ಲವೇ ? ಏಕೆಂದರೆ  ಇಸ್ಲಾಮ್ ಮತದ ಉದಯವಾಗಿ ಕೇವಲ 1400 ವರ್ಷಗಳು ಕಳೆಯುತ್ತಿವೆ. ಜಗತ್ತು ಅದಕ್ಕಿಂತ ಮೊದಲೂ ಇತ್ತು. ನಂತರವೂ ಇರುವುದು.
ನನ್ನ  2 ನೇ ಪ್ರಶ್ನೆ ಏನೆಂದರೆ, ಒಬ್ಬ ಮುಸ್ಲಿಂ ಗಂಡಸು ಏಕಕಾಲದಲ್ಲಿ 4 ಪತ್ನಿಯರನ್ನಿಟ್ಟುಕೊಳ್ಳಬಹುದಾದರೆ ಒಬ್ಬಳು ಮುಸ್ಲಿಂ ಹೆಂಗಸು ಏಕಕಾಲದಲ್ಲಿ ನಾಲ್ವರು ಗಂಡಂದಿರನ್ನು ಏಕೆ ಇಟ್ಟುಕೊಳ್ಳಬಾರದು ?
ಇಸ್ಲಾಮ್ ನಲ್ಲಿ ಹೆಂಗಸಿಗೆ ಹೆಚ್ಚು ಅಧಿಕಾರವಿಲ್ಲ. ಒಬ್ಬ ಪುರುಷನ ಎದುರಿಗೆ ಇಬ್ಬರು ಸ್ತ್ರೀಯರ ಸಾಕ್ಷಿಯನ್ನು ಪೂರ್ಣ ಎಂದು ತಿಳಿಯಲಾಗುತ್ತದೆ. ಕಡೇ ಪಕ್ಷ ಹೆಂಗಸು ಮಾನವ ಸಮುದಾಯದ ಒಂದು ಅಂಗವೇ ತಾನೇ ? ಮತ್ತೆ ಅವಳನ್ನು ಅರ್ಧ ಎಂದು ಭಾವಿಸಿ ಅವಳ ಮೇಲೆ ಶೋಷಣೆ ಮಾಡುವುದು ಎಲ್ಲಿಯ ನ್ಯಾಯ ? ಎಲ್ಲಿಯವರೆಗೆ ಇದನ್ನು ಅಲ್ಲಾಹನ  ನ್ಯಾಯ ಎಂದು ತಿಳಿಯಲು ಸಾಧ್ಯ ? 80 ವರ್ಷದ ಒಬ್ಬ ಮುದುಕ 18ವರ್ಷದ ಹುಡುಗಿಯ ಜೊತೆಗೆ ಮದುವೆಯಾಗಿ ಅದನ್ನು ಇಸ್ಲಾಂ ಧರ್ಮಕ್ಕನುಗುಣವಾಗಿದೆ ಎಂದು ಹೇಳುತ್ತಾ ಧರ್ಮದ ಹೆಸರಿನಲ್ಲಿ ಎಲ್ಲರನ್ನೂ ಮೂರ್ಖರನ್ನಾಗಿ ಮಾಡುವ ಈ ಕೃತ್ಯ ಎಷ್ಟರಮಟ್ಟಿಗೆ ಸರಿ ?
ಈ ಪ್ರಶ್ನೆಗೆ ಕೂಡ ಉತ್ತರ ನನಗೆ ಸತ್ಯಾರ್ಥಪ್ರಕಾಶದಲ್ಲಿ ಸಿಕ್ಕಿತು. ಸ್ತ್ರೀಪುರುಷರಿಗೆ ಸಮಾನ ಅಧಿಕಾರವಿರುವುದಾಗಿ ಮಹರ್ಷಿ ದಯಾನಂದ ಸರಸ್ವತಿಯವರು,  ಭಗವಾನ್ ಮನು ಮತ್ತು ವೇದವಾಕ್ಯಗಳ ಆಧಾರದ ಮೇಲೆ ಸಾರಿ ಹೇಳಿದರು. ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಕೇವಲ ವಿಶೇಷಪರಿಸ್ಥಿತಿಯಲ್ಲಿ (ಪತ್ನಿ ಬಂಜೆಯಾಗಿದ್ದಲ್ಲಿ) ಮಾತ್ರ ಪಡೆಯಬಹುದು. ಹಾಗಿಲ್ಲದಿದ್ದಲ್ಲಿ  ಏಕಪತ್ನೀವ್ರತನಾಗಿರುವುದು ಸ್ವಾಭಾವಿಕಗುಣವಾಗಿರಬೇಕು. ಮತ್ತೆ ಮನು ಮುಂದೆ ಹೇಳುತ್ತಾನೆ –
“ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ”
(ಎಲ್ಲಿ ಸ್ತ್ರೀಯರಿಗೆ ಗೌರವವಿರುವುದೋ ಅಲ್ಲಿ ದೇವತೆಗಳು ನೆಲೆಸುತ್ತಾರೆ)
ನನ್ನ ಮೂರನೇ ಪ್ರಶ್ನೆ ಸ್ವರ್ಗ ನರಕಗಳಿಗೆ ಸಂಬಂಧಿಸಿದ್ದು. ಮುಸಲ್ಮಾನಬಂಧುಗಳು ಸೃಷ್ಟಿಯ ಕೊನೆಯ ದಿನದಂದು ಪಾಪಪುಣ್ಯದ ಲೆಕ್ಕಾಚಾರವಾಗುವುದೆಂದು ತಿಳಿಯುತ್ತಾರೆ. ಅದರಲ್ಲಿ ಒಳ್ಳೆಯ ಕೆಲಸ ಮಾಡಿದವರಿಗೆ ಸ್ವರ್ಗ ಹಾಗೂ ಕೆಟ್ಟ ಕೆಲಸ ಮಾಡಿದವರಿಗೆ ನರಕ ಪ್ರಾಪ್ತಿಯಾಗುವುದು. (ಕುರಾನ್ ನಲ್ಲಿ ) ಸ್ವರ್ಗದ  ವರ್ಣನೆ ಹೀಗಿದೆ – ಅಲ್ಲಿ ಸೇಬು, ಕಿತ್ತಳೆ,  ಶರಾಬು ಮತ್ತು ಒಬ್ಬ ವ್ಯಕ್ತಿಗೆ 70 ಅಪ್ಸರೆಯರು ಹಾಗೂ 72 ಕೋಮಲ ಶರೀರದ ದಾಸಿಯರು ಸಿಗುತ್ತಾರೆ.
ನಾನು ಮುಲ್ಲಾ ಮೌಲವಿಗಳಲ್ಲಿ ಕೇಳ್ತಾ ಇದ್ದೆ – ಹೇಳಿ, ಒಬ್ಬ ಗಂಡಸಿಗೆ ಸ್ವರ್ಗದಲ್ಲಿ 70,72 ಅಪ್ಸರೆಯರು ಹಾಗೂ ದಾಸಿಯರು ಸಿಗುವುದಾದರೆ ಒಬ್ಬಳು ಹೆಂಗಸಿಗೆ  ಅಲ್ಲಿ ಏನು ಸಿಗುತ್ತದೆ ?
ನನ್ನ ಈ ಪ್ರಶ್ನೆಯಿಂದ  ಅವರು ಸಿಟ್ಟಾಗುತ್ತಿದ್ದರು. 14 ನೇ ಶತಮಾನ ಕಳೆದುಹೋಗಿದೆ. ಮತ್ತೆ ಯಾಕೆ ಖಯಾಮತ್ (ನ್ಯಾಯನಿರ್ಣಯದ ದಿನ) ಬರಲಿಲ್ಲ ?  ಅದು ಈಗ ಬರುವುದಿಲ್ಲವೇ ? ಅಲ್ಲಾಹ ಕೊಟ್ಟಿರುವ  ವಾಯಿದೆ ಏನಾಯಿತು ? ಇದರಿಂದ ಕುರಾನನ್ನು ಒಬ್ಬ ಸಾಮಾನ್ಯ ಮನುಷ್ಯ ಬರೆದದ್ದು ಎನ್ನುವುದು ಸಾಬೀತಾಗುವುದಿಲ್ಲವೇ ?
(ಮುಂದುವರಿಯುವುದು)

ಮಹರ್ಷಿ ದಯಾನಂದರ ಉಪಕಾರ




ಮಹರ್ಷಿ ದಯಾನಂದರ  ಉಪಕಾರ
 


ಡಾ|| ಕುಂವರ್ ರಫತ್ ಅಖಲಾಖ್ 
            ಸತ್ಯಾರ್ಥಪ್ರಕಾಶವು  ಸಮಾಜದ   ಒಂದು ಅಮೂಲ್ಯ ನಿಧಿಯಾಗಿದೆ. ಅದರಲ್ಲಿ ಮಾನವಜೀವನದ ಪ್ರತಿಯೊಂದು ಮಜಲಿನ ತಾರ್ಕಿಕ ಮತ್ತು ವಿವೇಕಪೂರ್ಣ ವಿವರಣೆಯನ್ನು ನೀಡಲಾಗಿದೆ.  ಸತ್ಯಾರ್ಥಪ್ರಕಾಶದ ಆಧಾರ ವಿಜ್ಞಾನ.  ವಸ್ತುತಃ ಇಂದು ಯಾವ ವಿಜ್ಞಾನವಿದೆಯೋ  ಅದೆಲ್ಲಾ ಪವಿತ್ರವಾದ ವೇದಗಳ ಆಧಾರದ ಮೇ ಲೆ ನಿಂತಿದೆ. ನೂರು ವರ್ಷಗಳಷ್ಟು  ಮಹರ್ಷಿ ದಯಾನಂದರು  ಸಂಸ್ಕಾರಹೀನ ಮಾನವಸಮಾಜವನ್ನು  ಸುಸಂಸ್ಕೃತಗೊಳಿಸಲು ಸತ್ಯಾರ್ಥಪ್ರಕಾಶದ ರಚನೆಯನ್ನು ಮಾಡಿದರು. ಅದು ಅಜ್ಞಾನ, ಅಂಧಕಾರ, ಪಾಖಂಡಿತನ, ಕುಟಿಲತೆ ಹಾಗೂ ಪರತಂತ್ರದ ಕಾಲವಾಗಿತ್ತು. ಭೀಕರವಾತಾವರಣದಲ್ಲಿ ಸತ್ಯವನ್ನು ಮೇಲೆತ್ತುವುದು, ಕಪ್ಪು ಮೋಡಗಳ ಮಧ್ಯೆ  ಸೂರ್ಯಕಿರಣಗಳನ್ನು ಪ್ರಕಾಶಿಸುವಂತೆ ಮಾಡುವ ಹಾಗೆ. ಆದರೆ ದಯಾನಂದ ಸರಸ್ವತಿಯವರು ಹೆದರಲಿಲ್ಲ. ಕತ್ತಲೆಯಿಂದ ಗಾಬರಿಗೊಳ್ಳಲಿಲ್ಲ. ಧೈರ್ಯ ಬೆಳೆಯುತ್ತಾ ಹೋಯಿತು. ಫಲರೂಪವಾಗಿ ಮಾನವಜೀವನದ ಆವಶ್ಯಕತೆಯನ್ನು ವಿವರಿಸಲು ಹತ್ತು ಅಧ್ಯಾಯ ಹಾಗೂ ಪಾಖಂಡಿಗಳ ಖಂಡನೆಗಾಗಿ  ನಾಲ್ಕು ಅಧ್ಯಾಯಗಳಿಂದ ಕೂಡಿದ  ಸತ್ಯಾರ್ಥಪ್ರಕಾಶದ ರಚನೆಯಾಯಿತು. ವಿಶ್ವದ ಶ್ರೇಷ್ಠ ಸಂಸ್ಕೃತಿಗೆ ಸಂಬಂಧಿಸಿದಂತೆ  ಬಹಳಷ್ಟು ಸಂದೆಹಗಳಿದ್ದವು. ಪವಿತ್ರ ವೇದವಾದರೋ ಲುಪ್ತವಾಗಿಯೇ ಹೋಗಿತ್ತು. ಜ್ಞಾನವಿಜ್ಞಾನ ನಶಿಸಲು ಶುರುವಾಯಿತು. ಅಂಧಕಾರ ಹರಡಬೇಕಾಗಿತ್ತು.ಹರಡಿಬಿಟ್ಟಿತು. ಮಾನವತೆ ಉರುಳಿಬಿತ್ತು. ವಿವೇಕಕ್ಕೆ ಒಂದು ಸ್ತರವೇ ಇರಲಿಲ್ಲ. ಜಗತ್ತು ಪ್ರಳಯದ ಕಡೆಗೆ ತೆರಳುತ್ತಿತ್ತು.  ಆಗ ಒಬ್ಬ ಮೂಲಶಂಕರ ಉದಿಸಿದ. ಆತ ಮೂಲಕ್ಕೇ ಹೊರಟ ಮತ್ತು  ಶಂಕರನಂತೆ ನಿಶ್ಚಲಭಾವದಿಂದ ಜಗತ್ತನ್ನು ಸತ್ಯದ ದಾರಿಯಲ್ಲಿ ನಡೆಸಲು ಹೊರಟ.  ದಾಸ್ಯ ಕೊನೆಗೊಂಡಿತು. ಸ್ವಾತಂತ್ರ್ಯ ಸಿಕ್ಕಿತು. ಆದರೆ ದುರದೃಷ್ಟವಶಾತ್ ಸ್ವಾತಂತ್ರ್ಯಪ್ರಾಪ್ತಿಗಿಂತ ಮೋದಲೇ  ದಯಾನಂದರು ದಿವಂಗತರಾದರು. ಅವರ ತೇಜಸ್ಸು ಮಾತ್ರ ಸತ್ಯಾರ್ಥಪ್ರಕಾಶದ ಮೂಲಕ ಮಾನವಸಮೂಹವನ್ನೇ ಬೆಳಗಿಸಿತು. ಇವತ್ತು ಯಾವ ಮಾನವತೆ, ವಿಜ್ಞಾನ, ವಿವೇಕದ ಹೊಸಯುಗ ಪ್ರಾರಂಭವಾಗಿದೆಯೋ ಅದು ದಯಾನಂದರ ಸತ್ಯಾರ್ಥಪ್ರಕಾಶದ ಪ್ರಭಾವದಿಂದ ಉಂಟಾಗಿದೆ.
          ಸತ್ಯಾರ್ಥಪ್ರಕಾಶದ 14ನೇ ಸಮುಲ್ಲಾಸ  ಇಸ್ಲಾಮಿಗೆ ಸಂಬಂಧಿಸಿದ್ದಾಗಿದೆ. ಇಸ್ಲಾಂ  ಇವತ್ತು ಜಗತ್ತಿನ ¼ ಭಾಗದ ಮೇಲೆ ತನ್ನ  ಅಧಿಕಾರವನ್ನು  ಸ್ಥಾಪಿಸಿದೆ. ಮಾನವನ  ಮನಸ್ಸಿನಲ್ಲಿ ಸ್ವರ್ಗ ನರಕಗಳ ಭಯವನ್ನು ಹುಟ್ಟಿಸಿದೆ. ಅಲ್ಲಾಹುವಿನ  ಅನವಶ್ಯಕ ರೂಪಜಾಲದಲ್ಲಿ ಮುಗ್ಧಜನರನ್ನು ಬೀಳಿಸಿದೆ. ಅದೇ ತಾನೇ ಇಸ್ಲಾಮ್ !  ಇಸ್ಲಾಮನ್ನು ಆರಂಭಿಸಿದ ಕೀರ್ತಿ ಮೊಹಮ್ಮದ್ ಸಾಹೇಬರಿಗೆ ಸಲ್ಲಿಸಬೇಕು. ಅವರದ್ದೇ ಆದ ವಿಚಾರಸರಣಿಗೆ ಇಸ್ಲಾಂನ ರೂಪವನ್ನು ಕೊಡಲಾಯಿತು. ಇವತ್ತು ಎಲ್ಲಾ ಕಡೆ “ಅಂತಿಮ ಮತ ಇಸ್ಲಾಂ, ಮಹಮ್ಮದ್ ಸಾಹೇಬರೇ ಭಗವಂತನ ಕೊನೆಯ ದೂತ”  ಎಂಬುದಾಗಿ ಪ್ರಚಾರ ಮಾಡಲಾಗುತ್ತಿದೆ. ಕುರಾನನ್ನು ಅಲ್ಲಾಹ್ ಕಾಣಿಕೆಯಾಗಿ ಕೊಟ್ಟ ಕೃತಿ (ಉಡುಗೊರೆ) ಎಂಬುದಾಗಿ ಜನ ನಂಬುತ್ತಾರೆ. ಮಹಮ್ಮದ್ ಸಾಹೇಬರು ಏನು ಹೇಳಿದರೋ ಅದೇ ಇಸ್ಲಾಂ ಧರ್ಮದ ನಿಯಮವಾಗುತ್ತಾ ಹೋಯಿತು. 14 ಶತಮಾನಗಳ ಹಿಂದೆ  ಯಾವಾಗ ಇಸ್ಲಾಂ ಪಂಥದ ಉದಯವಾಯಿತೋ  ಅದಕ್ಕಿಂತ ಮೊದಲೂ ಸಹ ಭಗವಂತನ ಕೃತಿಗಳು (ಅತಿಮಾನವೀಯ ರಚನೆಗಳು ಉದಾ: ವೇದಗಳು) ಈ ಭೂಮಿಯ ಮೇಲೆ ಇದ್ದವು. ಜಗತ್ತು ಯಾವಾಗಲೂ ವೇದಗಳ ಸಂದೇಶಕ್ಕನುಗುಣವಾಗಿ, ಅದು ತಿಳಿಸಿದ ವ್ಯವಸ್ಥೆಗನುಗುಣವಾಗಿ ನಡೆಯುತ್ತಿತ್ತು. ವೈದಿಕೇತರ ಮತಗಳಿಂದ ಕೂಡಿದ ಈ ಯುಗ ಎಲ್ಲೋ ಐದು ಸಾವಿರ ವರ್ಷಗಳಷ್ಟು ಹಳೆಯದಿರಬಹುದು. ಎರಡು ಸಾವಿರ ಕೋಟಿ ವರ್ಷಗಳಿಂದ  ಆರ್ಷ ವೈದಿಕ ಸಂಸ್ಕೃತಿ  ಜಗತ್ತಿಗೆ ಮಾರ್ಗದರ್ಶನವನ್ನು ನೀಡುತ್ತಾ ಬಂದಿದೆ. ಆದ್ದರಿಂದಲೇ ಇಂದಿಗೂ ಸಹ ಮಾನವೀಯತೆ ಎಂಬುದು ಸ್ವಲ್ಪಮಟ್ಟಿಗೆ ಉಳಿದುಕೊಂಡಿದೆ. ಹಾಗಿಲ್ಲದಿದ್ದಲ್ಲಿ ಇಂದಿನ ತಥಾಕಥಿತ ಧರ್ಮ ಹಾಗೂ ಮಜ್ಹಬ್ ಗಳು ಮನುಷ್ಯತ್ವವನ್ನು ಕೊನೆಗೊಳಿಸಿ, ಪಾಶವಿಕತೆಯನ್ನು ನ್ಯಾಯವನ್ನು ಕೊನೆಗೊಳಿಸಿ, ಬಲಾತ್ಕಾರವನ್ನು ; ಸತ್ಯವನ್ನು ಕೊನೆಗೊಳಿಸಿ ಪಾಖಂಡಿತನವನ್ನು; ವಿಜ್ಞಾನವನ್ನು ಕೊನೆಗೊಳಿಸಿ, ಕೇವಲ ಚಮತ್ಕಾರವನ್ನು; ಜಗತ್ತಿನ ಪ್ರಮುಖ ಚಿಂತನೆಯ ವಿಷಯವನ್ನಾಗಿ ಮಾಡುತ್ತಿವೆ. ಆದರೆ ಬೆಳಕನ್ನು ಬಹಳಹೊತ್ತು ಮೋಡದಿಂದ ಮುಚ್ಚಲು ಸಾಧ್ಯವಿಲ್ಲ. ವೇದಗಳ ಜ್ಞಾನರಾಶಿಯು  ಬ್ರಹ್ಮನಿಂದ ಜೈಮಿನಿಯ ತನಕ ಇತ್ತು ಎಂಬುದಾಗಿ ಹೇಳಲಾಗುತ್ತಿತ್ತು. ಆದರೆ ಇವತ್ತು ಹಾಗೆ ಹೇಳಲು ಆಗುವುದಿಲ್ಲ. ನಾವು ಹೇಳುತ್ತೇವೆ- ನಿಶ್ಚಯವಾಗಿಯೂ ವೇದಗಳು ಬ್ರಹ್ಮನಿಂದ ದಯಾನಂದರ ತನಕ ಬಂದಿವೆ. ಹಾಗೆಯೇ ಮುಂದೆ ಆರ್ಯಕುಲವಿರುವ ತನಕ ಇರುವುದು. ಎಲ್ಲಿಯ ತನಕ ಆರ್ಯಸಂತತಿ ಹಾಗೂ ಸತ್ಯಾರ್ಥಪ್ರಕಾಶ ಇರುವುದೋ ಅಲ್ಲಿಯತನಕ ವೇದ ಮತ್ತು ವೈದಿಕಸಂಸ್ಕೃತಿಯ ನಾಶ ಅಸಂಭವ.

          ಹಜರತ್ ಮಹಮ್ಮದ್ (ಪೈಗಂಬರ್) ಇಸ್ಲಾಂನ ಸಹಾಯದಿಂದ ಮೊದಲು ಅರಬ್ ವಾಸಿಗಳಲ್ಲಿ ಭೀತಿಯನ್ನು ಹರಡಿದರು. ಆ ಕಾಲದಲ್ಲಿ ಅರಬ್ ದೇಶದಲ್ಲಿ ಪಾಶವಿಕತೆಯ ನಗ್ನ ನೃತ್ಯ ನಡೆಯುತ್ತಿತ್ತು. ಸಾಮೂಹಿಕ ಕಗ್ಗೊಲೆ, ಅತ್ಯಾಚಾರ, ಸಜೀವದಹನ, ಕೋಟಿದೇವತೋಪಾಸನೆ ಇತ್ಯಾದಿ ಅರಬ್ ವಾಸಿಗಳಲ್ಲಿ ದಿನಚರಿಯಾಗಿತ್ತು. ಮಹಮ್ಮದ್ ಸಾಹೇಬರು ಮೊದಲು “ನಾನು ಅಲ್ಲಾಹನ ಸಂದೇಶವನ್ನು ಹೊತ್ತು ತಂದಿದ್ದೇನೆ, ಯಾರು ಅದನ್ನು ಒಪ್ಪುವುದಿಲ್ಲವೋ ಅವರು ಮಂದೆ (ಫಲವನ್ನು) ಅನುಭವಿಸುವರು” ಎಂಬುದಾಗಿ ಅರಬ್ ವಾಸಿಗಳಲ್ಲಿ ಭಯವನ್ನು ಹೆಚ್ಚಿಸಿದರು. ಜಾದುಗಾರನೊಬ್ಬ ಹುಡುಗನೊಬ್ಬನ ಕೊರಳನ್ನು ಕತ್ತರಿಸಿದಂತೆ ಮಾಡಿ, ರಕ್ತ ಚಿಮ್ಮಿದಂತೆ ಮಾಡಿ ಹೇಗೆ ಜನರನ್ನು ಮರುಳು ಮಾಡುತ್ತಾನೋ ಹಾಗೆಯೇ ಮಹಮ್ಮದ್ ಸಾಹೇಬರೂ ಸಹ  ಅಂತಹುದೇ ಮೂರ್ನಾಲ್ಕು  ಚಮತ್ಕಾರವನ್ನು ತೋರಿಸಿ ಜನರನ್ನು ಮರುಳು ಮಾಡಿದರು. ಸುದ್ದಿ ಹರಡಿಸಬೇಕಾಗಿತ್ತು. ಹರಡಿಬಿಟ್ಟಿತು.  ಪೂರ್ತಿ ಅರಬ್ ದೇಶ ಥರಗುಟ್ಟಿತು. ಆಗ ಮಹಮ್ಮದ್ ಸಾಹೇಬರಿಗೂ ಮಜಾ ಆಗಲಿಕ್ಕೆ ಶುರುವಾಯಿತು. ಮತದ ಹೆಸರಿನಲ್ಲಿ ಅನೇಕ ಒಳ್ಳೆಯ ಹಾಗೂ ಕೆಟ್ಟ ಕೆಲಸಗಳು ಆರಂಭಗೊಂಡವು.  ಮಹಮ್ಮದ್ ಸಾಹೇಬರ ಚೇಲಾಗಳ ಸಂಖ್ಯೆ ಬೆಳೆಯಲು ಶುರುವಾಯಿತು. ಎಲ್ಲರಿಗೂ ಸ್ವರ್ಗವನ್ನು ಅನುಭವಿಸುವ ಇಚ್ಛೆ ಇತ್ತು. ಅಷ್ಟೇ, ಮಹಮ್ಮದ್ ಸಾಹೇಬ್ರು ಹೇಳಿದ್ರು “ನಾನು ನಿಮ್ಮನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗಬಲ್ಲೆ” ಎಂಬುದಾಗಿ.  ಚಮತ್ಕಾರದ ವಂಚನೆಯ ಹೊಸ ನೀತಿ ಆರಂಭವಾಯಿತು. ಒಬ್ಬೊಬ್ಬರಾಗಿ ಕೋಟ್ಯಂತರ ಮಂದಿ ಮತಾಂತರಗೊಳ್ಳಲ್ಪಟ್ಟರು. 1500 ವರ್ಷಗಳ ಅವಧಿಯಲ್ಲಿ ನೂರಾರು ನಗರಗಳು, ದೇಶಗಳು ಇಸ್ಲಾಂನ ಚಮತ್ಕಾರವಾದಿ ವಿಚಾರದಲ್ಲಿ ಕೊಚ್ಚಿ ಹೋದವು. ಕೆಲವೆಡೆ ಹಣದ ಆಮಿಷ, ಕೆಲವೆಡೆ ಬಹುಪತ್ನಿತ್ವದ ಮೋಹ, ಮತ್ತು ಕೆಲವೆಡೆ ಕತ್ತಿಯ ಭೀತಿ ಮತಾಂತರದ ಕೆಲಸವನ್ನು ಮಾಡಿತು. ವೈದಿಕರು ಹಾಗೂ ಪೌರಾಣಿಕರು ಆಶ್ಚರ್ಯದಿಂದ ಈ ದುಸ್ಥಿತಿಯನ್ನು ನೋಡುತ್ತಿದ್ದರು. ಪಂಡಾಗಳಿಗೆ ಸವಾಲೊಡ್ಡುವ  ದೈರ್ಯವುಂಟಾಗಲಿಲ್ಲ. ಅವರೂ ಅದೇ ಪ್ರವಾಹದಲ್ಲಿ ಕೊಚ್ಚಿ ಹೋದರು.
          ವಿನಾಶರೂಪಿ ಕಾಲನ ಉದಯವಾಯಿತು. ಮಾನವತೆ ಥರಗುಟ್ಟತೊಡಗಿತು. ಕತ್ತಲಿನಿಂದ ಆವರಿಸಲ್ಪಟ್ಟ ಭಯಾನಕ ವಾತಾವರಣದಲ್ಲಿ ಜಗತ್ತಿಗೆ ಮಾರ್ಗದರ್ಶನವನ್ನು ಮಾಡುವವರು ಅವರವರ ದಾರಿ ಬಿಟ್ಟು ದೂರ ನಡೆದರು. ಆ ಆದ್ಯ ಸಂಸ್ಕೃತಿಯ, ವಿಶ್ವದ ಶ್ರೇಷ್ಠ ಸಭ್ಯತೆಯ ಸಂದೇಶವನ್ನು ಮರೆತುಬಿಟ್ಟರು. ಅಜ್ಞಾನದ ಕತ್ತಲೆಯಲ್ಲಿ ಮುಳುಗಿದರು. 5000 ವರ್ಷಗಳಲ್ಲಿ ನಾವು ಎಲ್ಲವನ್ನೂ ಕಳೆದುಕೊಂಡೆವು. ಯಾವುದು ನಮ್ಮದಲ್ಲವವೋ ಆ ನಾಗರಿಕತೆಯನ್ನು ನಾವು ನಮ್ಮದಾಗಿಸಿಕೊಂಡೆವು. ಇಂತಹ ವಿಕಟ ಪರಿಸ್ಥಿತಿಯಲ್ಲಿ ದಯಾನಂದರೂಪಿ ಸೂರ್ಯ ಪ್ರಕಾಶಿಸಿದ. ಅವನೇ ಮಾತೃಭೂಮಿಯ, ಮಾತೃಸಂಸ್ಕೃತಿಯ ಮಾತೃಭಾಷೆಯ ಸ್ವರೂಪವನ್ನು ಸರಿಪಡಿಸಿದ. ಕಾಡಿಗೆಯನ್ನು ಶೃಂಗಾರ ಸಾಧನವನ್ನಾಗಿ, ಕತ್ತಲೆಯನ್ನು ಬೆಳಕನ್ನಾಗಿ ಪರಿವರ್ತಿಸಿದ. ಸತ್ಯಾರ್ಥಪ್ರಕಾಶದ ಮೂಲಕ ಬ್ರಿಟಿಷರಿಗೆ ಬಹು ದೊಡ್ಡ ಹೊಡೆತವನ್ನು ಕೊಟ್ಟ. ಮುಲ್ಲಾಗಳಿಗೆ ಮತ್ತು ಪಾದ್ರಿಗಳಿಗೆ ಪಂಥಾಹ್ವಾನವನ್ನು ನೀಡಿದ. ಪಂಡಾಗಳಿಗೆ ಕರೆ ಕೊಟ್ಟ. ವಿದ್ರೋಹಿಗಳಿಗೆ ಆಘಾತವನ್ನುಂಟುಮಾಡಿದ.
          ಸ್ವಾಮೀ ದಯಾನಂದರ ದೇಹಾವಸಾನವಾಗಿ 103 ವರ್ಷಗಳು ಕಳೆದವು. ದಯಾನಂದರ ಬಳಿಕ ನಮ್ಮ ಸಮಾಜವು 50 ವರ್ಷಗಳ ಕಾಲ ಜಗತ್ತಿನಲ್ಲಿ ಅವರ ಪ್ರಕಾಶವನ್ನು ಪಸರಿಸಿತು. ಆದರೆ ಕಳೆದ 50 ವರ್ಷಗಳಲ್ಲಿ ಘೋರವಾದ ಅವ್ಯವಸ್ಥೆ, ಭ್ರಷ್ಟಾಚಾರ, ವಿನಾಶ, ಪಾಖಂಡಿತನ, ಕಪಟಾಚರಣೆ, ಚಮತ್ಕಾರವಾದ ಇತ್ಯಾದಿಗಳು ಪುನಃ ಮಾನವನ ಹೃದಯದಲ್ಲಿ ತಮ್ಮ ಅಧಿಕಾರವನ್ನು ಸ್ಥಾಪಿಸತಡಗಿದವು. ಸಮಾಜವು ದಿಕ್ಕು ದೆಸೆಯನ್ನು ಕಳೆದುಕೊಂಡಿದೆ. ಕೇವಲ ಒಂದು ದೇಶವಷ್ಟೇ ಅಲ್ಲ, ಇಡೀ ಜಗತ್ತು ಭಯಭೀತಗೊಂಡಿದೆ. ಇವರೆಲ್ಲರಿಗೂ ಜ್ಞಾನಮಾರ್ಗವನ್ನು ತೋರಿಸುವುದು ದಯಾನಂದಪುತ್ರರ ಕಾರ್ಯವಲ್ಲವೇ ? ಇವತ್ತು ನಾವೆಲ್ಲರೂ ಒಟ್ಟಾಗಿ ವೇದಗಳ ಜ್ಞಾನಜ್ಯೋತಿಯನ್ನು ಸಮಸ್ತ ವಿಶ್ವಕ್ಕೆ ತೋರಿಸಿಕೊಡುವ ಕಾಲ ಸನ್ನಿಹಿತವಾಗಿದೆ. ದಯಾನಂದರ ಪ್ರಕಾಶವನ್ನು ಪುನಃ ಪಸರಿಸೋಣ. ಇಡೀ ಜಗತ್ತಿನಲ್ಲಿ ವೈದಿಕಸಂಸ್ಕೃತಿಯ ಧ್ವಜವನ್ನು ಹಾರಿಸೋಣ. ಇದೇ ಈ ಯುಗದ ಬಯಕೆಯಾಗಿದೆ. ಇದೇ ಆರ್ಯ ಬಂಧುಗಳಿಗೆ ಪರೀಕ್ಷೆಯ ಕಾಲವಾಗಿದೆ. ಬನ್ನಿ, “ಕೃಣ್ವಂತೋ ವಿಶ್ವಮಾರ್ಯಮ್” ನ  ಸ್ವಪ್ನವನ್ನು ಸಾಕಾರಗೊಳಿಸೋಣ.
(ಮುಂದುವರಿಯುವುದು)