Saturday, June 29, 2013

ಮಹರ್ಷಿ ದಯಾನಂದರ ಉಪಕಾರ




ಮಹರ್ಷಿ ದಯಾನಂದರ  ಉಪಕಾರ
 


ಡಾ|| ಕುಂವರ್ ರಫತ್ ಅಖಲಾಖ್ 
            ಸತ್ಯಾರ್ಥಪ್ರಕಾಶವು  ಸಮಾಜದ   ಒಂದು ಅಮೂಲ್ಯ ನಿಧಿಯಾಗಿದೆ. ಅದರಲ್ಲಿ ಮಾನವಜೀವನದ ಪ್ರತಿಯೊಂದು ಮಜಲಿನ ತಾರ್ಕಿಕ ಮತ್ತು ವಿವೇಕಪೂರ್ಣ ವಿವರಣೆಯನ್ನು ನೀಡಲಾಗಿದೆ.  ಸತ್ಯಾರ್ಥಪ್ರಕಾಶದ ಆಧಾರ ವಿಜ್ಞಾನ.  ವಸ್ತುತಃ ಇಂದು ಯಾವ ವಿಜ್ಞಾನವಿದೆಯೋ  ಅದೆಲ್ಲಾ ಪವಿತ್ರವಾದ ವೇದಗಳ ಆಧಾರದ ಮೇ ಲೆ ನಿಂತಿದೆ. ನೂರು ವರ್ಷಗಳಷ್ಟು  ಮಹರ್ಷಿ ದಯಾನಂದರು  ಸಂಸ್ಕಾರಹೀನ ಮಾನವಸಮಾಜವನ್ನು  ಸುಸಂಸ್ಕೃತಗೊಳಿಸಲು ಸತ್ಯಾರ್ಥಪ್ರಕಾಶದ ರಚನೆಯನ್ನು ಮಾಡಿದರು. ಅದು ಅಜ್ಞಾನ, ಅಂಧಕಾರ, ಪಾಖಂಡಿತನ, ಕುಟಿಲತೆ ಹಾಗೂ ಪರತಂತ್ರದ ಕಾಲವಾಗಿತ್ತು. ಭೀಕರವಾತಾವರಣದಲ್ಲಿ ಸತ್ಯವನ್ನು ಮೇಲೆತ್ತುವುದು, ಕಪ್ಪು ಮೋಡಗಳ ಮಧ್ಯೆ  ಸೂರ್ಯಕಿರಣಗಳನ್ನು ಪ್ರಕಾಶಿಸುವಂತೆ ಮಾಡುವ ಹಾಗೆ. ಆದರೆ ದಯಾನಂದ ಸರಸ್ವತಿಯವರು ಹೆದರಲಿಲ್ಲ. ಕತ್ತಲೆಯಿಂದ ಗಾಬರಿಗೊಳ್ಳಲಿಲ್ಲ. ಧೈರ್ಯ ಬೆಳೆಯುತ್ತಾ ಹೋಯಿತು. ಫಲರೂಪವಾಗಿ ಮಾನವಜೀವನದ ಆವಶ್ಯಕತೆಯನ್ನು ವಿವರಿಸಲು ಹತ್ತು ಅಧ್ಯಾಯ ಹಾಗೂ ಪಾಖಂಡಿಗಳ ಖಂಡನೆಗಾಗಿ  ನಾಲ್ಕು ಅಧ್ಯಾಯಗಳಿಂದ ಕೂಡಿದ  ಸತ್ಯಾರ್ಥಪ್ರಕಾಶದ ರಚನೆಯಾಯಿತು. ವಿಶ್ವದ ಶ್ರೇಷ್ಠ ಸಂಸ್ಕೃತಿಗೆ ಸಂಬಂಧಿಸಿದಂತೆ  ಬಹಳಷ್ಟು ಸಂದೆಹಗಳಿದ್ದವು. ಪವಿತ್ರ ವೇದವಾದರೋ ಲುಪ್ತವಾಗಿಯೇ ಹೋಗಿತ್ತು. ಜ್ಞಾನವಿಜ್ಞಾನ ನಶಿಸಲು ಶುರುವಾಯಿತು. ಅಂಧಕಾರ ಹರಡಬೇಕಾಗಿತ್ತು.ಹರಡಿಬಿಟ್ಟಿತು. ಮಾನವತೆ ಉರುಳಿಬಿತ್ತು. ವಿವೇಕಕ್ಕೆ ಒಂದು ಸ್ತರವೇ ಇರಲಿಲ್ಲ. ಜಗತ್ತು ಪ್ರಳಯದ ಕಡೆಗೆ ತೆರಳುತ್ತಿತ್ತು.  ಆಗ ಒಬ್ಬ ಮೂಲಶಂಕರ ಉದಿಸಿದ. ಆತ ಮೂಲಕ್ಕೇ ಹೊರಟ ಮತ್ತು  ಶಂಕರನಂತೆ ನಿಶ್ಚಲಭಾವದಿಂದ ಜಗತ್ತನ್ನು ಸತ್ಯದ ದಾರಿಯಲ್ಲಿ ನಡೆಸಲು ಹೊರಟ.  ದಾಸ್ಯ ಕೊನೆಗೊಂಡಿತು. ಸ್ವಾತಂತ್ರ್ಯ ಸಿಕ್ಕಿತು. ಆದರೆ ದುರದೃಷ್ಟವಶಾತ್ ಸ್ವಾತಂತ್ರ್ಯಪ್ರಾಪ್ತಿಗಿಂತ ಮೋದಲೇ  ದಯಾನಂದರು ದಿವಂಗತರಾದರು. ಅವರ ತೇಜಸ್ಸು ಮಾತ್ರ ಸತ್ಯಾರ್ಥಪ್ರಕಾಶದ ಮೂಲಕ ಮಾನವಸಮೂಹವನ್ನೇ ಬೆಳಗಿಸಿತು. ಇವತ್ತು ಯಾವ ಮಾನವತೆ, ವಿಜ್ಞಾನ, ವಿವೇಕದ ಹೊಸಯುಗ ಪ್ರಾರಂಭವಾಗಿದೆಯೋ ಅದು ದಯಾನಂದರ ಸತ್ಯಾರ್ಥಪ್ರಕಾಶದ ಪ್ರಭಾವದಿಂದ ಉಂಟಾಗಿದೆ.
          ಸತ್ಯಾರ್ಥಪ್ರಕಾಶದ 14ನೇ ಸಮುಲ್ಲಾಸ  ಇಸ್ಲಾಮಿಗೆ ಸಂಬಂಧಿಸಿದ್ದಾಗಿದೆ. ಇಸ್ಲಾಂ  ಇವತ್ತು ಜಗತ್ತಿನ ¼ ಭಾಗದ ಮೇಲೆ ತನ್ನ  ಅಧಿಕಾರವನ್ನು  ಸ್ಥಾಪಿಸಿದೆ. ಮಾನವನ  ಮನಸ್ಸಿನಲ್ಲಿ ಸ್ವರ್ಗ ನರಕಗಳ ಭಯವನ್ನು ಹುಟ್ಟಿಸಿದೆ. ಅಲ್ಲಾಹುವಿನ  ಅನವಶ್ಯಕ ರೂಪಜಾಲದಲ್ಲಿ ಮುಗ್ಧಜನರನ್ನು ಬೀಳಿಸಿದೆ. ಅದೇ ತಾನೇ ಇಸ್ಲಾಮ್ !  ಇಸ್ಲಾಮನ್ನು ಆರಂಭಿಸಿದ ಕೀರ್ತಿ ಮೊಹಮ್ಮದ್ ಸಾಹೇಬರಿಗೆ ಸಲ್ಲಿಸಬೇಕು. ಅವರದ್ದೇ ಆದ ವಿಚಾರಸರಣಿಗೆ ಇಸ್ಲಾಂನ ರೂಪವನ್ನು ಕೊಡಲಾಯಿತು. ಇವತ್ತು ಎಲ್ಲಾ ಕಡೆ “ಅಂತಿಮ ಮತ ಇಸ್ಲಾಂ, ಮಹಮ್ಮದ್ ಸಾಹೇಬರೇ ಭಗವಂತನ ಕೊನೆಯ ದೂತ”  ಎಂಬುದಾಗಿ ಪ್ರಚಾರ ಮಾಡಲಾಗುತ್ತಿದೆ. ಕುರಾನನ್ನು ಅಲ್ಲಾಹ್ ಕಾಣಿಕೆಯಾಗಿ ಕೊಟ್ಟ ಕೃತಿ (ಉಡುಗೊರೆ) ಎಂಬುದಾಗಿ ಜನ ನಂಬುತ್ತಾರೆ. ಮಹಮ್ಮದ್ ಸಾಹೇಬರು ಏನು ಹೇಳಿದರೋ ಅದೇ ಇಸ್ಲಾಂ ಧರ್ಮದ ನಿಯಮವಾಗುತ್ತಾ ಹೋಯಿತು. 14 ಶತಮಾನಗಳ ಹಿಂದೆ  ಯಾವಾಗ ಇಸ್ಲಾಂ ಪಂಥದ ಉದಯವಾಯಿತೋ  ಅದಕ್ಕಿಂತ ಮೊದಲೂ ಸಹ ಭಗವಂತನ ಕೃತಿಗಳು (ಅತಿಮಾನವೀಯ ರಚನೆಗಳು ಉದಾ: ವೇದಗಳು) ಈ ಭೂಮಿಯ ಮೇಲೆ ಇದ್ದವು. ಜಗತ್ತು ಯಾವಾಗಲೂ ವೇದಗಳ ಸಂದೇಶಕ್ಕನುಗುಣವಾಗಿ, ಅದು ತಿಳಿಸಿದ ವ್ಯವಸ್ಥೆಗನುಗುಣವಾಗಿ ನಡೆಯುತ್ತಿತ್ತು. ವೈದಿಕೇತರ ಮತಗಳಿಂದ ಕೂಡಿದ ಈ ಯುಗ ಎಲ್ಲೋ ಐದು ಸಾವಿರ ವರ್ಷಗಳಷ್ಟು ಹಳೆಯದಿರಬಹುದು. ಎರಡು ಸಾವಿರ ಕೋಟಿ ವರ್ಷಗಳಿಂದ  ಆರ್ಷ ವೈದಿಕ ಸಂಸ್ಕೃತಿ  ಜಗತ್ತಿಗೆ ಮಾರ್ಗದರ್ಶನವನ್ನು ನೀಡುತ್ತಾ ಬಂದಿದೆ. ಆದ್ದರಿಂದಲೇ ಇಂದಿಗೂ ಸಹ ಮಾನವೀಯತೆ ಎಂಬುದು ಸ್ವಲ್ಪಮಟ್ಟಿಗೆ ಉಳಿದುಕೊಂಡಿದೆ. ಹಾಗಿಲ್ಲದಿದ್ದಲ್ಲಿ ಇಂದಿನ ತಥಾಕಥಿತ ಧರ್ಮ ಹಾಗೂ ಮಜ್ಹಬ್ ಗಳು ಮನುಷ್ಯತ್ವವನ್ನು ಕೊನೆಗೊಳಿಸಿ, ಪಾಶವಿಕತೆಯನ್ನು ನ್ಯಾಯವನ್ನು ಕೊನೆಗೊಳಿಸಿ, ಬಲಾತ್ಕಾರವನ್ನು ; ಸತ್ಯವನ್ನು ಕೊನೆಗೊಳಿಸಿ ಪಾಖಂಡಿತನವನ್ನು; ವಿಜ್ಞಾನವನ್ನು ಕೊನೆಗೊಳಿಸಿ, ಕೇವಲ ಚಮತ್ಕಾರವನ್ನು; ಜಗತ್ತಿನ ಪ್ರಮುಖ ಚಿಂತನೆಯ ವಿಷಯವನ್ನಾಗಿ ಮಾಡುತ್ತಿವೆ. ಆದರೆ ಬೆಳಕನ್ನು ಬಹಳಹೊತ್ತು ಮೋಡದಿಂದ ಮುಚ್ಚಲು ಸಾಧ್ಯವಿಲ್ಲ. ವೇದಗಳ ಜ್ಞಾನರಾಶಿಯು  ಬ್ರಹ್ಮನಿಂದ ಜೈಮಿನಿಯ ತನಕ ಇತ್ತು ಎಂಬುದಾಗಿ ಹೇಳಲಾಗುತ್ತಿತ್ತು. ಆದರೆ ಇವತ್ತು ಹಾಗೆ ಹೇಳಲು ಆಗುವುದಿಲ್ಲ. ನಾವು ಹೇಳುತ್ತೇವೆ- ನಿಶ್ಚಯವಾಗಿಯೂ ವೇದಗಳು ಬ್ರಹ್ಮನಿಂದ ದಯಾನಂದರ ತನಕ ಬಂದಿವೆ. ಹಾಗೆಯೇ ಮುಂದೆ ಆರ್ಯಕುಲವಿರುವ ತನಕ ಇರುವುದು. ಎಲ್ಲಿಯ ತನಕ ಆರ್ಯಸಂತತಿ ಹಾಗೂ ಸತ್ಯಾರ್ಥಪ್ರಕಾಶ ಇರುವುದೋ ಅಲ್ಲಿಯತನಕ ವೇದ ಮತ್ತು ವೈದಿಕಸಂಸ್ಕೃತಿಯ ನಾಶ ಅಸಂಭವ.

          ಹಜರತ್ ಮಹಮ್ಮದ್ (ಪೈಗಂಬರ್) ಇಸ್ಲಾಂನ ಸಹಾಯದಿಂದ ಮೊದಲು ಅರಬ್ ವಾಸಿಗಳಲ್ಲಿ ಭೀತಿಯನ್ನು ಹರಡಿದರು. ಆ ಕಾಲದಲ್ಲಿ ಅರಬ್ ದೇಶದಲ್ಲಿ ಪಾಶವಿಕತೆಯ ನಗ್ನ ನೃತ್ಯ ನಡೆಯುತ್ತಿತ್ತು. ಸಾಮೂಹಿಕ ಕಗ್ಗೊಲೆ, ಅತ್ಯಾಚಾರ, ಸಜೀವದಹನ, ಕೋಟಿದೇವತೋಪಾಸನೆ ಇತ್ಯಾದಿ ಅರಬ್ ವಾಸಿಗಳಲ್ಲಿ ದಿನಚರಿಯಾಗಿತ್ತು. ಮಹಮ್ಮದ್ ಸಾಹೇಬರು ಮೊದಲು “ನಾನು ಅಲ್ಲಾಹನ ಸಂದೇಶವನ್ನು ಹೊತ್ತು ತಂದಿದ್ದೇನೆ, ಯಾರು ಅದನ್ನು ಒಪ್ಪುವುದಿಲ್ಲವೋ ಅವರು ಮಂದೆ (ಫಲವನ್ನು) ಅನುಭವಿಸುವರು” ಎಂಬುದಾಗಿ ಅರಬ್ ವಾಸಿಗಳಲ್ಲಿ ಭಯವನ್ನು ಹೆಚ್ಚಿಸಿದರು. ಜಾದುಗಾರನೊಬ್ಬ ಹುಡುಗನೊಬ್ಬನ ಕೊರಳನ್ನು ಕತ್ತರಿಸಿದಂತೆ ಮಾಡಿ, ರಕ್ತ ಚಿಮ್ಮಿದಂತೆ ಮಾಡಿ ಹೇಗೆ ಜನರನ್ನು ಮರುಳು ಮಾಡುತ್ತಾನೋ ಹಾಗೆಯೇ ಮಹಮ್ಮದ್ ಸಾಹೇಬರೂ ಸಹ  ಅಂತಹುದೇ ಮೂರ್ನಾಲ್ಕು  ಚಮತ್ಕಾರವನ್ನು ತೋರಿಸಿ ಜನರನ್ನು ಮರುಳು ಮಾಡಿದರು. ಸುದ್ದಿ ಹರಡಿಸಬೇಕಾಗಿತ್ತು. ಹರಡಿಬಿಟ್ಟಿತು.  ಪೂರ್ತಿ ಅರಬ್ ದೇಶ ಥರಗುಟ್ಟಿತು. ಆಗ ಮಹಮ್ಮದ್ ಸಾಹೇಬರಿಗೂ ಮಜಾ ಆಗಲಿಕ್ಕೆ ಶುರುವಾಯಿತು. ಮತದ ಹೆಸರಿನಲ್ಲಿ ಅನೇಕ ಒಳ್ಳೆಯ ಹಾಗೂ ಕೆಟ್ಟ ಕೆಲಸಗಳು ಆರಂಭಗೊಂಡವು.  ಮಹಮ್ಮದ್ ಸಾಹೇಬರ ಚೇಲಾಗಳ ಸಂಖ್ಯೆ ಬೆಳೆಯಲು ಶುರುವಾಯಿತು. ಎಲ್ಲರಿಗೂ ಸ್ವರ್ಗವನ್ನು ಅನುಭವಿಸುವ ಇಚ್ಛೆ ಇತ್ತು. ಅಷ್ಟೇ, ಮಹಮ್ಮದ್ ಸಾಹೇಬ್ರು ಹೇಳಿದ್ರು “ನಾನು ನಿಮ್ಮನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗಬಲ್ಲೆ” ಎಂಬುದಾಗಿ.  ಚಮತ್ಕಾರದ ವಂಚನೆಯ ಹೊಸ ನೀತಿ ಆರಂಭವಾಯಿತು. ಒಬ್ಬೊಬ್ಬರಾಗಿ ಕೋಟ್ಯಂತರ ಮಂದಿ ಮತಾಂತರಗೊಳ್ಳಲ್ಪಟ್ಟರು. 1500 ವರ್ಷಗಳ ಅವಧಿಯಲ್ಲಿ ನೂರಾರು ನಗರಗಳು, ದೇಶಗಳು ಇಸ್ಲಾಂನ ಚಮತ್ಕಾರವಾದಿ ವಿಚಾರದಲ್ಲಿ ಕೊಚ್ಚಿ ಹೋದವು. ಕೆಲವೆಡೆ ಹಣದ ಆಮಿಷ, ಕೆಲವೆಡೆ ಬಹುಪತ್ನಿತ್ವದ ಮೋಹ, ಮತ್ತು ಕೆಲವೆಡೆ ಕತ್ತಿಯ ಭೀತಿ ಮತಾಂತರದ ಕೆಲಸವನ್ನು ಮಾಡಿತು. ವೈದಿಕರು ಹಾಗೂ ಪೌರಾಣಿಕರು ಆಶ್ಚರ್ಯದಿಂದ ಈ ದುಸ್ಥಿತಿಯನ್ನು ನೋಡುತ್ತಿದ್ದರು. ಪಂಡಾಗಳಿಗೆ ಸವಾಲೊಡ್ಡುವ  ದೈರ್ಯವುಂಟಾಗಲಿಲ್ಲ. ಅವರೂ ಅದೇ ಪ್ರವಾಹದಲ್ಲಿ ಕೊಚ್ಚಿ ಹೋದರು.
          ವಿನಾಶರೂಪಿ ಕಾಲನ ಉದಯವಾಯಿತು. ಮಾನವತೆ ಥರಗುಟ್ಟತೊಡಗಿತು. ಕತ್ತಲಿನಿಂದ ಆವರಿಸಲ್ಪಟ್ಟ ಭಯಾನಕ ವಾತಾವರಣದಲ್ಲಿ ಜಗತ್ತಿಗೆ ಮಾರ್ಗದರ್ಶನವನ್ನು ಮಾಡುವವರು ಅವರವರ ದಾರಿ ಬಿಟ್ಟು ದೂರ ನಡೆದರು. ಆ ಆದ್ಯ ಸಂಸ್ಕೃತಿಯ, ವಿಶ್ವದ ಶ್ರೇಷ್ಠ ಸಭ್ಯತೆಯ ಸಂದೇಶವನ್ನು ಮರೆತುಬಿಟ್ಟರು. ಅಜ್ಞಾನದ ಕತ್ತಲೆಯಲ್ಲಿ ಮುಳುಗಿದರು. 5000 ವರ್ಷಗಳಲ್ಲಿ ನಾವು ಎಲ್ಲವನ್ನೂ ಕಳೆದುಕೊಂಡೆವು. ಯಾವುದು ನಮ್ಮದಲ್ಲವವೋ ಆ ನಾಗರಿಕತೆಯನ್ನು ನಾವು ನಮ್ಮದಾಗಿಸಿಕೊಂಡೆವು. ಇಂತಹ ವಿಕಟ ಪರಿಸ್ಥಿತಿಯಲ್ಲಿ ದಯಾನಂದರೂಪಿ ಸೂರ್ಯ ಪ್ರಕಾಶಿಸಿದ. ಅವನೇ ಮಾತೃಭೂಮಿಯ, ಮಾತೃಸಂಸ್ಕೃತಿಯ ಮಾತೃಭಾಷೆಯ ಸ್ವರೂಪವನ್ನು ಸರಿಪಡಿಸಿದ. ಕಾಡಿಗೆಯನ್ನು ಶೃಂಗಾರ ಸಾಧನವನ್ನಾಗಿ, ಕತ್ತಲೆಯನ್ನು ಬೆಳಕನ್ನಾಗಿ ಪರಿವರ್ತಿಸಿದ. ಸತ್ಯಾರ್ಥಪ್ರಕಾಶದ ಮೂಲಕ ಬ್ರಿಟಿಷರಿಗೆ ಬಹು ದೊಡ್ಡ ಹೊಡೆತವನ್ನು ಕೊಟ್ಟ. ಮುಲ್ಲಾಗಳಿಗೆ ಮತ್ತು ಪಾದ್ರಿಗಳಿಗೆ ಪಂಥಾಹ್ವಾನವನ್ನು ನೀಡಿದ. ಪಂಡಾಗಳಿಗೆ ಕರೆ ಕೊಟ್ಟ. ವಿದ್ರೋಹಿಗಳಿಗೆ ಆಘಾತವನ್ನುಂಟುಮಾಡಿದ.
          ಸ್ವಾಮೀ ದಯಾನಂದರ ದೇಹಾವಸಾನವಾಗಿ 103 ವರ್ಷಗಳು ಕಳೆದವು. ದಯಾನಂದರ ಬಳಿಕ ನಮ್ಮ ಸಮಾಜವು 50 ವರ್ಷಗಳ ಕಾಲ ಜಗತ್ತಿನಲ್ಲಿ ಅವರ ಪ್ರಕಾಶವನ್ನು ಪಸರಿಸಿತು. ಆದರೆ ಕಳೆದ 50 ವರ್ಷಗಳಲ್ಲಿ ಘೋರವಾದ ಅವ್ಯವಸ್ಥೆ, ಭ್ರಷ್ಟಾಚಾರ, ವಿನಾಶ, ಪಾಖಂಡಿತನ, ಕಪಟಾಚರಣೆ, ಚಮತ್ಕಾರವಾದ ಇತ್ಯಾದಿಗಳು ಪುನಃ ಮಾನವನ ಹೃದಯದಲ್ಲಿ ತಮ್ಮ ಅಧಿಕಾರವನ್ನು ಸ್ಥಾಪಿಸತಡಗಿದವು. ಸಮಾಜವು ದಿಕ್ಕು ದೆಸೆಯನ್ನು ಕಳೆದುಕೊಂಡಿದೆ. ಕೇವಲ ಒಂದು ದೇಶವಷ್ಟೇ ಅಲ್ಲ, ಇಡೀ ಜಗತ್ತು ಭಯಭೀತಗೊಂಡಿದೆ. ಇವರೆಲ್ಲರಿಗೂ ಜ್ಞಾನಮಾರ್ಗವನ್ನು ತೋರಿಸುವುದು ದಯಾನಂದಪುತ್ರರ ಕಾರ್ಯವಲ್ಲವೇ ? ಇವತ್ತು ನಾವೆಲ್ಲರೂ ಒಟ್ಟಾಗಿ ವೇದಗಳ ಜ್ಞಾನಜ್ಯೋತಿಯನ್ನು ಸಮಸ್ತ ವಿಶ್ವಕ್ಕೆ ತೋರಿಸಿಕೊಡುವ ಕಾಲ ಸನ್ನಿಹಿತವಾಗಿದೆ. ದಯಾನಂದರ ಪ್ರಕಾಶವನ್ನು ಪುನಃ ಪಸರಿಸೋಣ. ಇಡೀ ಜಗತ್ತಿನಲ್ಲಿ ವೈದಿಕಸಂಸ್ಕೃತಿಯ ಧ್ವಜವನ್ನು ಹಾರಿಸೋಣ. ಇದೇ ಈ ಯುಗದ ಬಯಕೆಯಾಗಿದೆ. ಇದೇ ಆರ್ಯ ಬಂಧುಗಳಿಗೆ ಪರೀಕ್ಷೆಯ ಕಾಲವಾಗಿದೆ. ಬನ್ನಿ, “ಕೃಣ್ವಂತೋ ವಿಶ್ವಮಾರ್ಯಮ್” ನ  ಸ್ವಪ್ನವನ್ನು ಸಾಕಾರಗೊಳಿಸೋಣ.
(ಮುಂದುವರಿಯುವುದು)

No comments:

Post a Comment