7. ಬಿಹಾರದ
ಘಟನೆ
ಸ್ವಾಮೀ
ಶ್ರದ್ಧಾನಂದರು ಬಿಹಾರದಲ್ಲಿ ಶುದ್ಧಿ ಚಳವಳಿಯ
ಸಂಬಂಧವಾಗಿ ಒಂದು ಸಲ ಭಾಷಣ ಮಾಡುತ್ತಾ ಹೇಳಿದ್ದರು –
“ಬಿಹಾರದಲ್ಲಿ
ಕೆಲವರು ಈಗಲೂ ಸಹ ಆಗ್ರಾ ಮಥುರಾ ಮುಂತಾದ ಜಿಲ್ಲೆಗಳ ಮಲಕಾನ್ ರಂತೆ ಅರ್ಧ ಮುಸಲ್ಮಾನರಾಗಿದ್ದಾರೆ. ಅವರು ಶುದ್ಧಿಯನ್ನು
ಹೊಂದಿ ಹಿಂದುಗಳೊಂದಿಗೆ ಬೆರೆಯಲು ಸಿದ್ಧರಾಗಿದ್ದಾರೆ.”
ಆಗ
ಅಲ್ಲಿಯ ಮುಸಲ್ಮಾನರು ಸ್ವಾಮೀಜಿಗಳ ಹತ್ತಿರ ಕೇಳಿದರು –
“ನಮ್ಮ
ಪೂರ್ವಜರು ಮುಸಲ್ಮಾನರಾಗಿ ಹೇಗೆ ಮತಾಂತರ ಹೊಂದಿದರು ? “
ಶ್ರದ್ಧಾನಂದರು
ಹೇಳಿದರು –
೧೩
ನೇ ಶತಮಾನದ ಆರಂಭದಲ್ಲಿ ಭಕ್ತಿಯಾರ್ ಖಿಲ್ಜಿ ಬಿಹಾರದ ಮೇಲೆ ದಾಳಿ ನಡೆಸಿದ. ಅಲ್ಲಿ ನಲಂದಾ
ವಿಶ್ವವಿದ್ಯಾಲಯವನ್ನು ನಾಶಗೊಳಿಸಿ ಮುಂದುವರಿಯುತ್ತಿದ್ದಂತೆ ಅಲ್ಲಿಯ ರಾಜನೊಬ್ಬ ಸೈನ್ಯವನ್ನು ಸೇರಿಸಿ ಅವನನ್ನು ಅಲ್ಲಿಯೇ ತಡೆಯಲು
ಬಯಸಿದ. ಭಕ್ತಿಯಾರ್ ಖಿಲ್ಜಿಯ ಬಳಿ ಸೈನ್ಯ ತುಂಬ
ಕಡಿಮೆ ಇತ್ತು. ಆದ್ದರಿಂದ ಅವನು ಆರಂಭದಲ್ಲಿ ಗಾಬರಿಗೊಂಡ. ಬಳಿಕ ಅವನಿಗೆ ಒಂದು ಉಪಾಯ ಹೊಳೆಯಿತು. ಅವನ ಕೆಲವು ಗುಪ್ತಚರರು ಹಿಂದೂ ಸೇನೆಯಲ್ಲಿದ್ದ ಕೆಲವು
ಧರ್ಮೋಪದೇಶಕರ ಬಳಿಗೆ ಹೋಗಿ ಹೇಳಿದರು –
“ಹಿಂದು
ಸೈನಿಕರು ಯಾವ ಬಾವಿಯ ನೀರನ್ನು ಕುಡಿಯುತ್ತಿದ್ದರೋ ಅದರಲ್ಲಿ ಮುಸಲ್ಮಾನ್ ಸೈನಿಕರು ನಿನ್ನೆ
ರಾತ್ರಿ ಗೋಮಾಂಸದ ಚೂರುಗಳನ್ನು ಹಾಕಿದ್ದಾರೆ”
ಇದರಿಂದ
ಹಿಂದೂ ಸೇನೆಯಲ್ಲಿ ಗದ್ದಲವೇರ್ಪಟ್ಟಿತು. ಅವರೆಲ್ಲ “ಈಗ ನಮ್ಮ ಧರ್ಮ ನಾಶವಾಯಿತು” ಎಂದು
ಆಡಿಕೊಳ್ಳತೊಡಗಿದರು. ಕೆಲವು ಬುದ್ಧಿವಂತ ಸೈನಿಕರು ಧರ್ಮೋಪದೇಶಕರ ಬಳಿಯಲ್ಲಿ ವಿನಯದಿಂದ ಹೇಳಿದರು
–
“ಮೊದಲನೆಯದಾಗಿ
ಇದಕ್ಕೆ ಯಾವುದೇ ಪುರಾವೆಯಿಲ್ಲ. ಒಂದು ವೇಳೆ
ಬಾವಿಯಲ್ಲಿ ಗೋಮಾಂಸವನ್ನು ಹಾಕಿದ್ದರೂ ನಾವು
ತಿಳಿಯದೆಯೇ ಆ ನೀರನ್ನು ಕುಡಿದಿದ್ದರಿಂದ
ಅದಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಸಿದ್ಧರಿದ್ದೇವೆ”
ಆದ್ರೆ
ತಮ್ಮನ್ನೇ ತಾವು ಶ್ರೇಷ್ಠರೆಂದು ತಿಳಿದ ಕೆಲವು ಪಂಡಿತರು ಅವರ ಒಂದು ಮಾತನ್ನೂ ಸಹ ಕೇಳಲಿಲ್ಲ.
ಮತ್ತೆ ಹೇಳಿದರು –
“ಒಂದು
ಸಲ ಪತಿತನಾಗಿಬಿಟ್ಟರೆ ಪತಿತನೆಂದೇ ಅರ್ಥ”
ಇದರಿಂದ
ವೀರ ಸೈನಿಕರೆಲ್ಲ ನಿರಾಶರಾದರು. ಈಗ ಹಿಂದೂ ಧರ್ಮ ದಲ್ಲಿ ಅವರಿಗೆ ಯಾವುದೇ ಸ್ಥಾನ
ಉಳಿಯಲಿಲ್ಲ. ಅವರಲ್ಲಿ ಕೆಲವರು ಧರ್ಮಭ್ರಷ್ಟರಾಗಿ
ಜೀವಿಸುವುದು ಉಚಿತವಲ್ಲವೆಂದು ತಿಳಿದು
ಪ್ರಾಣಾರ್ಪಣೆಗೈದರು. ಇನ್ನು ಕೆಲವರು ತಮ್ಮ ತಮ್ಮ ಮನೆಗೆ ಮರಳಿದರು. ಅವರದ್ದೇ ಸಂತಾನ ಈಗಲೂ ಸಹ ಅರ್ಧ ಮುಸಲ್ಮಾನರಂತೆ ಬದುಕುತ್ತಿದೆ.
ಕೆಲವರು ಭಕ್ತಿಯಾರ್ ಖಿಲ್ಜಿಯ ಸೇನೆಯಲ್ಲಿ ಸೇರಿಕೊಂಡು ಬಿಟ್ಟರು. ಅವರು ಬಳಿಕ ಶುದ್ಧ
ಮುಸಲ್ಮಾನರಂತಾಗಿ ಹಿಂದುಗಳದ್ದೇ ತಲೆ ಕಡಿಯಲಾರಂಭಿಸಿದರು.
ಹಿಂದುಗಳೆ, ಈಗಲಾದರೂ ನೀವು ಕಣ್ಣೂ ತೆರೆದು ಈ ಎಲ್ಲ
ಮಿಥ್ಯಾ ಭಾವನೆಯನ್ನು ಬಿಟ್ಟು ನಮ್ಮ
ಸೋದರರನ್ನು ನಿಮ್ಮವರನ್ನಾಗಿಸಿಕೊಳ್ಳುವುದಿಲ್ಲವೇ
?
ಶುದ್ಧಿಯ
ಬಾಗಿಲನ್ನು ತೆರೆಯಿರಿ || ಯಾವನೇ ಬರಲಿ ||
No comments:
Post a Comment