೪.ರಾಜಾ ಜಯಪಾಲ
ಕ್ರಿ.ಶ. 997 ರಲ್ಲಿ ಖುರಾಸಾನ್ ನ ಅಧಿಕಾರಿಯಾದ ಸಬಕ್ತಗೀನ್ ಗಜನಿಯ ಮೇಲೆ
ತನ್ನ ಅಧಿಕಾರವನ್ನು ವಿಸ್ತರಿಸಿ ಹಿಂದುಸ್ಥಾನದ ಮೇಲೆ ಆಕ್ರಮಣಗೈಯ್ಯಲು ಆರಂಭಿಸಿದ. ಆಗ ಜಯಪಾಲ
ಪಂಜಾಬ್ ನ ರಾಜನಾಗಿದ್ದ. ಅವನು ಅಫಘಾನಿಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಶೇಖ್ ಹಮೀದನೆಂಬ ಒಬ್ಬ
ಮುಸಲ್ಮಾನನನ್ನು ಗಡಿಯಲ್ಲಿ ನಿಯೋಜಿಸಿದ. ಹಾಗೆಯೇ ಅವನಿಗೆ ಪೇಶಾವರದಿಂದ ಖೈಬರ್ ವರೆಗಿನ
ಭಾಗವನ್ನು ಕೊಟ್ಟು ಅಲ್ಲಿನ ನವಾಬನನ್ನಾಗಿ ಮಾಡಿದ. ಹಮೀದ್ ಆಣೆ ಮಾಡಿ “ಕಾಬೂಲ್ ನಿಂದ ದಾಳಿಯನ್ನು
ನಾನು ತಡೆಯುತ್ತೇನೆ” ಎಂದು ಜಯಪಾಲನಿಗೆ ಹೇಳಿದ.
ಸಬಕ್ತಗೀನ್ ನನ್ನು ವಶಪಡಿಸಿಕೊಳ್ಳಲು ಜಯಪಾಲನು
ಅಫಘಾನಿಸ್ತಾನದ ಮೇಲೆ ಆಕ್ರಮಣವನ್ನು ಮಾಡಿದ. ಹಾಗೆಯೇ ಜಲಾಲಾಬಾದ್ ತಲುಪಿ ಅಲ್ಲಿ ಶಿಬಿರ ಹೂಡಿದ.
ಸಬಕ್ತಗೀನ್ ಯದ್ಧವನ್ನು ಮುಂದೂಡುತ್ತಾ ಕಾಲ ಕಳೆದ. ಯಾವಾಗ ಚಳಿಗಾಲ ಆರಂಭವಾಗಿ
ಹಿಮಗಡ್ಡೆಗಳುಂಟಾಗಲು ಆರಂಭಿಸಿದವೋ ಆಗ ಜಯಪಾಲ ತನ್ನ ಸೇನೆಯನ್ನು ವಾಪಾಸು ಕಳುಹಿಸಲು ಆರಂಭಿಸಿದ. ಆಗ
ಆದ ಹಿಂದುಸ್ಥಾನದ ದಾರಿಯನ್ನು ದ್ರೊಹಿಯಾದ ಶೆಖ್ ಹಮೀದ್ ಮುಚ್ಚಿಸಿದ್ದ. ಎಕೆಂದರೆ ಅವನು
ಮುಸಲ್ಮಾನರೊಂದಿಗೆ ಕೈಜೋಡಿಸಿದ್ದ. ಜಯಪಾಲನ ಸೇನೆ ಎರಡೂ ಕಡೆಯಿಂದ ಶತ್ರುಗಳಿಂದ
ಆವರಿಸಲ್ಪಟ್ಟಿತು. ಸಬಕ್ತಗೀನ್ ಗೆ ದೊಡ್ಡ ಮೊತ್ತದ ಹಣವನ್ನು ಕೊಟ್ಟು ಬಹಳ ಕಷ್ಟದಿಂದ ಬಿಡುಗಡೆಯನ್ನು ಪಡೆಯಬೇಕಾಯಿತು.
ಕೆಲವು ದಿವಸಗಳ ಬಳಿಕ ಸಬಕ್ತಗೀನ್ ಜಯಪಾಲನ ಮೇಲೆ
ಮತ್ತೆ ಆಕ್ರಮಣವನ್ನು ಮಾಡಿದ. ಜಯಪಾಲ ಒಂದು ದೊಡ್ಡ ಸೈನ್ಯದೊಂದಿಗೆ ಪೇಶಾವರದ ಬಳಿ ಹೋಗಿ
ಅವನೊಂದಿಗೆ ಕಾದಾಡಿದ. ಭಾರೀ ಪ್ರಮಾಣದ ಯುದ್ಧವಾಗುತ್ತಿದ್ದಂತೆ ಜಯಪಾಲನು ಇನ್ನೊಂದು ದೊಡ್ಡ
ಪ್ರಮಾದವನ್ನೆಸಗಿದ. ಆತ ತಾನು ಕುಳಿತಿದ್ದ ಆನಿಯಿಂದ ಇಳಿದು ಬಂದು ಕುದುರೆಯನ್ನು ಏರಿದ. ಅವನ
ಸೈನ್ಯವು ರಾಜನಿಲ್ಲದ ಆನೆಯನ್ನು ನೋಡಿ ರಾಜ ಕೊಲ್ಲಲ್ಪಟ್ಟನೆಂದು ಭಾವಿಸಿತು. ಆದ್ದರಿಂದಲೇ ಆತನ
ಸೇನೆ ಹೆದರಿ ಕಾಲ್ಕಿತ್ತಿತು. ಹಿಂದೂಗಳಿಗೆ ಸೋಲುಂಟಾಯಿತು. ರಾಜ ಜೀವಂತವಾಗಿ ಚಿತೆಯೇರಿ ಸುಟ್ಟು
ಸತ್ತು ಹೋದ. ಮುಸಲ್ಮಾನರು ಆತನ ಎಲ್ಲಾ ಸಾಮಾನುಗಳನ್ನು ಲೂಟಿಗೈದರು.
ಈ ಐತಿಹಾಸಿಕ ಘಟನೆಯಿಂದ ರಾಜಾ ಜಯಪಾಲನು ಯುದ್ದನೀತಿ
ಕುಶಲನಾಗಿರಲಿಲ್ಲ ಎಂಬುದಾಗಿ ತಿಳಿಯುತ್ತದೆ. ಅವನು ಒಂದಲ್ಲ ಎರಡಲ್ಲ. ನಿರಂತರವಾಗಿ ಮೂರು ಪ್ರಮಾದವನ್ನೆಸಗಿದ. ತನ್ನ ಗಡಿಯ ರಕ್ಷಣೆಗೆ ಶೇಖ್ ಹಮೀದನನ್ನು
ನಿಯುಕ್ತಿಗೊಳಿಸಿದ್ದು ಅವನು ಮಾಡಿದ ಮೊದಲ ದೊಡ್ಡ ತಪ್ಪು ಆಗಿತ್ತು. ಸಿಂಧ್ ನ ರಾಜನಾದ ದಾಹರನಿಗೆ
ಅಲ್ಲಾಫಿ ಮುಸಲ್ಮಾನರು ಇದೇ ರೀತಿಯಾಗಿ ದ್ರೊಹವನ್ನೆಸಗಿದ್ದನ್ನು ಜಯಪಾಲ ನೊಡಿದ್ದ. ಅವನಿಗೆ ತನ್ನ
ಗಡಿಯ ರಕ್ಷಣೆಗೆ ಒಬ್ಬ ವೀರ ಹಿಂದೂ ಕ್ಷತ್ರಿಯ ಸಿಗಲಿಲ್ಲವೇ ?
ಅವನು ಎರಡನೆಯದಾಗಿ ಯುದ್ಧಕ್ಷೇತ್ರದಲ್ಲಿ
ರಣರಂಗದಲ್ಲಿ ಆನೆಯಿಂದಿಳಿದು ಕುದುರೆಯನ್ನೇರುವುದರ ಮೂಲಕ ತಪ್ಪನ್ನು ಮಾಡಿದ. ಆತನ ಈ ಕೆಲಸ
ಯುದ್ಧನೀತಿಗೆ ವಿರುದ್ಧವಾಗಿತ್ತು.
ಮೂರನೆಯದಾಗಿ ಆತ ಜೀವಂತವಾಗಿ ಚಿತೆಯನ್ನೇರಿ ಸುಟ್ಟು
ಸಾಯುವ ತಪ್ಪನ್ನು ಮಾಡಿದ. ಅದು ಕ್ಷತ್ರಿಯನಿಗೆ
ಸರ್ವಥಾ ಅನುಚಿತವಾದ ಕೆಲಸವೆನ್ನಿಸುವುದು. ಯುದ್ಧದಲ್ಲಿ ಸೋಲುಂಟಾದರೆ ಸೈನ್ಯವನ್ನು ಒಂದುಗೂಡಿಸಿ
ಪುನಃ ಯುದ್ಧವನ್ನು ಮಾಡಬೆಕಾಗಿತ್ತು. ಕ್ಷತ್ರಿಯ ಆತ್ಮಹತ್ಯೆಯನ್ನು ಮಾಡುವುದು ಮಹಾಪಾಪವಾಗುತ್ತದೆ.
ಮತ್ತೆ ನಾವು ಕಷ್ಟಕಾಲದಲ್ಲಿ ತನ್ನ ಸ್ವಾಮಿಗಿ
ನಂಬಿಕೆ ದ್ರೋಹವನ್ನು ಬಗೆದ ಆ ದುಷ್ಟ ಶೇಖ್ ಹಮೀದ್ ನ ವಿಷಯದಲ್ಲಿ ಏನು ಹೇಳಬೇಕು ?
ಆದರೆ ಮುನ್ಶಿ ಕರಮ್ ಇಲಾಹಿಯು ತನ್ನ ಪುಸ್ತಕ “ಬಹಾದುರಾನೆ ಇಸ್ಲಾಂ” ನಲ್ಲಿ ಈ
ವಿಶ್ವಾಸದ್ರೋಹಿಯ ಪ್ರಶಂಶೆಯನ್ನು ಮಾಡುತ್ತಾ “ಶೆಖ್ ಹಮೀದನು ಸಬಕ್ತಗೀನ್ ನೊಂದಿಗೆ ಕೈಜೋಡಿಸಿದ್ದು
ಯೋಗ್ಯ ಹಾಗು ಉಚಿತವಾಗಿತ್ತು. ಅವನು ಸರಿಯಾಗಿಯೇ ಮಾಡಿದ್ದಾನೆ. ಅವನು ಈ ರೀತಿಯಾಗಿ ಇಸ್ಲಾಂ ನ
ಸೇವೆಯನ್ನು ಮಾಡಿದ್ದಾನೆ” ಎಂದು ಹೇಳಿದ್ದಾನೆ.
ವಾರೆ ವ್ಹಾ !!! ಇಸ್ಲಾಂ ನ ಸೇವೆ !!!
ಇಂತಹ ಸೇವೆಗೆ ಧಿಕ್ಕಾರವಿರಲಿ.
ವಿಶ್ವಾಸಾಘಾತವನ್ನೆಸಗಲು ಕಲಿಸುವ ಇಂತಹ ಮತದ ಸೇವೆಗೆ ಧಿಕ್ಕಾರವಿರಲಿ.
No comments:
Post a Comment