ಧರ್ಮಯುದ್ಧ ಮತ್ತು ಕೂಟಯುದ್ಧ
विशिष्टो देशकालाभ्यां
भिन्नारिप्रकृतिर्बली ।
कुर्यात् प्रकाशयुद्धं
च कूटयुद्धं विपर्यये ॥ (कामन्दकीयनीतिः १८/५४)
ದೇಶಕಾಲವು ಅನುಕೂಲವಾಗಿದ್ದರೆ ಶತ್ರುರಾಜನ ಪ್ರಜೆಗಳು ಅವನಿಗೆ ವಿರುದ್ಧವಾಗಿದ್ದರೆ ಆಗ ಬಲಶಾಲಿಯಾದವನು
ನೇರಯುದ್ಧವನ್ನು ಮಾಡಬೇಕು. ಅದಕ್ಕೆ ವಿಪರೀತವಾಗಿದ್ದಲ್ಲಿ ಕೂಟಯುದ್ಧ ಮಾಡಬೇಕು.
ಇಲ್ಲಿ ನೇರಯುದ್ಧ(Open War) ಹಾಗೂ
ಕೂಟಯುದ್ಧದ (Diplomatic War) ವಿಚಾರವಾಗಿ
ಹೇಳಲಾಗಿದೆ. ಕಾಮಂದಕೀಯನೀತಿಯಲ್ಲಿ ಇಂಥ ಕೂಟಯುದ್ಧದ
ವಿಸ್ತೃತವಾದ ವಿವರಣೆಯನ್ನು ಮಾಡಲಾಗಿದೆ/ಕೊಡಲಾಗಿದೆ. ಅವುಗಳಲ್ಲಿ ಕೆಲವು ಶ್ಲೋಕಗಳ
ಅರ್ಥವನ್ನು ನಾವಿಲ್ಲಿ ಕೊಡುತ್ತಿದ್ದೇವೆ.
ಶತ್ರುವಿನ ಮುಂದೆ ಕಾಣಿಸಿಕೊಂಡು ಅವನ ಗಮನವೆಲ್ಲ ನಮ್ಮ ಮೇಲಿದ್ದಾಗ
ಯಾವನಾದರೂ ಬಲಶಾಲಿಯಾದ ವೀರನ ಮುಖಾಂತರ ಹಿಂದಿನಿಂದ ಹೊಡೆದು ಸಾಯಿಸಬೇಕು.
ಹಿಂದಿನಿಂದ ಗದ್ದಲವೆಬ್ಬಿಸುತ್ತ ನಡೆಯಬೇಕು.
ಪೂರ್ವದ ಕಡೆಯಿಂದ/ಮುಂದಿನಿಂದ ಬಲವಾದ ಪ್ರಹಾರವನ್ನು ಕೊಡಬೇಕು. ಇದನ್ನು ಎರಡೂ ಕಡೆಯಿಂದ
ಗಾಬರಿಗೊಳಿಸಿ ಹೊಡೆಯುವ ಕೂಟಯುದ್ಧವೆಂದು ಕರೆಯಲಾಗಿದೆ.
ಮುಂದೆ ವಿಷಮಪ್ರದೇಶವಿದ್ದಲ್ಲಿ(ಡೆಂಜರಸ್
ಜಾಗವಿದ್ದಲ್ಲಿ) ವೇಗವಾಗಿ ಶತ್ರುವಿಗೆ ಹಿಂದಿನಿಂದ ಹೊಡೆಯಬೇಕು. ನನಗೆ ಗೆಲುವುಂಟಾಯಿತು ಎಂದು
ನಂಬಿದ ಶತ್ರುವನ್ನು ಆಶ್ರಯಹೀನನನ್ನಾಗಿ ಮಾಡಬೇಕು.
ಶಿಬಿರದಲ್ಲಿ ಪಟ್ಟಣದಲ್ಲಿ ಗ್ರಾಮದಲ್ಲಿ ಅಥವಾ ಅಂಥಹುದೇ
ಇನ್ನಿತರ ಕಡೆ ಇರುವ ಶತ್ರುಸೇನೆಯನ್ನು ಪ್ರಲೊಭನೆಯಿಂದ ತಾನು ಸಾವಧಾನದಿಂದಿದ್ದುಕೊಂಡು
ನಾಶಗೊಳಿಸಬೇಕು.
ತನ್ನ ಸಂಪೂರ್ಣ ಸೇನೆಯನ್ನು ಒಂದು ಸಣ್ಣ ತುಕಡಿಯಿಂದ
ಕಾಣಿಸದಂತೆ ಮಾಡಿ ಶತ್ರು ಆ ಸಣ್ಣ ತುಕಡಿಯ ಮೇಲೆ ದಾಳಿ ಮಾಡಿದಾಗ ತತ್ಕ್ಷಣ ಸಿಂಹದಂತೆ ಎರಗಿ
ಶತ್ರುವನ್ನು ನಾಶಗೊಳಿಸಬೇಕು.
नियतमिति निहन्यात्
कूटयुद्धॆषु शत्रुः ।
नहि निरयति
धर्मच्छद्मना शत्रुनाशः ॥
अचकितमिव सुप्तं
पाण्डवानामनीकम् ।
निशि सुनिशितशत्रो
द्रोणसूनुर्जघान ॥ (कामन्दकीयनीतिः १८/३९)
ಈ ರೀತಿಯಾಗಿ ಕೂಟಯುದ್ಧದಿಂದ ಶತ್ರುವಿನ ವಧೆಯನ್ನು
ಅನಿವಾರ್ಯವಾಗಿ ಮಾಡಬೇಕು. ಈ ರೀತಿಯಾಗಿ ಶತ್ರುನಾಶದಿಂದ ಅಧರ್ಮ ಅಥವಾ ನರಕವುಂಟಾಗುವುದಿಲ್ಲ. ನಿಶ್ಚಿಂತೆಯಿಂದ
ನಿದ್ರೆ ಮಾಡುತ್ತಿದ್ದ ಪಾಂಡವರ ಸೈನ್ಯವನ್ನು
ಶಸ್ತ್ರ ಹಿಡಿದು ಅಶ್ವತ್ಥಾಮ ರಾತ್ರಿಯಲ್ಲಿ ನಾಶ ಮಾಡಿದ.
ಮೇಲೆ ಹೇಳಿದ ಕಾಮಂದಕೀಯನೀತಿಯ ಶ್ಲೋಕಗಳಿಂದ, ಅದರ
ಆದೇಶಗಳಿಂದ ನಮ್ಮ ನೀತಿಕಾರರು ಶತ್ರುವನ್ನು ಪರಾಜಯಗೊಳಿಸಲು ಕೂಟಯುದ್ಧವನ್ನು ತಪ್ಪೆಂದು
ಭಾವಿಸುತ್ತಿರಲಿಲ್ಲ. ಮತ್ತು ಸ್ಪಷ್ಟಶಬ್ದಗಳಿಂದ ಯಾವುದೇ ರೀತಿಯ ಕೂಟಯುದ್ಧದಿಂದಲಾದರೂ ಶತ್ರುವನ್ನು ಸೋಲಿಸಬೇಕು ಎಂಬುದಾಗಿ
ಆದೇಶಿಸುತ್ತಿದ್ದರು ಎಂಬುದಾಗಿ ತಿಳಿಯುತ್ತದೆ.
ಭಗವಾನ್ ಶ್ರೀಕೃಷ್ಣನೂ ಸಹ ಕಾಲಕಾಲಕ್ಕೆ ಇದೇ ಕೂಟಯುದ್ಧದ
ಆಶ್ರಯವನ್ನು ಪಡೆದಿದ್ದ ಎಂಬುದರ ಉದಾಹರಣೆಗಳನ್ನು ನಾವು ಹಿಂದೆ ಕೊಟ್ಟಿದ್ದೇವೆ.
ಧರ್ಮಯುದ್ಧವನ್ನು ಧರ್ಮಾತ್ಮನಾದ ಶತ್ರುವಿನ ಜೊತೆಗೆ
ಮಾತ್ರ ಮಾಡಬೇಕು. ಅಂದರೆ ಮೋಸದ ಕುಟಿಲ ಕೂಟಯುದ್ಧವನ್ನು ಮಾಡದ ಶತ್ರುವಿನ ಜೊತೆಗೆ ಧರ್ಮಯುದ್ಧವನ್ನು ಮಾಡಬೇಕು. ಅವನ ಜೊತೆ ಕೂಟಯುದ್ಧ
ಮಾಡುವುದರಿಂದ ಪಾಪ ಬರಬಹುದು.
ಆದರೆ ಶತ್ರು ದುಷ್ಟನಾಗಿದ್ದಲ್ಲಿ
ಧರ್ಮಾಧರ್ಮವಿವೇಕಹೀನನಾಗಿದ್ದಲ್ಲಿ ಅತ್ಯಾಚಾರಿ, ಅಧರ್ಮಿ, ಕಪಟಿಯಾಗಿದ್ದಲ್ಲಿ ಅಂತಹ ಶತ್ರುವನ್ನು
ಬಿಟ್ಟುಬಿಡುವುದೇ ಬಹು ದೊಡ್ಡ ಪಾಪವಾಗುತ್ತದೆ. ಅಂಥವನ ಜೊತೆಗೆ ಅನಿವಾರ್ಯವಾಗಿ ಕೂಟಯುದ್ಧವನ್ನು ಮಾಡಬೇಕು. ಶಾಸ್ತ್ರವೂ
ಸಹ ಇದನ್ನೇ ಹೇಳಿ ಮುಗಿಸುತ್ತದೆ.
“इत्येवं कूटयुद्धेन
हन्याच्छ्त्रुं लघूत्थितम्”
ಈ ರೀತಿಯಾಗಿ ಕೂಟಯುದ್ಧದಿಂದ ಶತ್ರುವನ್ನು
ಅವಶ್ಯವಾಗಿ ಕೊಂದು ಮುಗಿಸಬೇಕು.
ನಮ್ಮ ದೇಶದ ರಾಜರುಗಳು, ವೀರ ರಜಪೂತರು ಒಂದು ವೇಳೆ
ದೊಡ್ಡ ತಪ್ಪನ್ನು ಮಾಡಿದ್ದೇ ಹೌದಾದರೆ ಅದು ಧರ್ಮದ ಅರ್ಥವನ್ನು ತಪ್ಪಾಗಿ ತಿಳಿದದ್ದು.
ಶರಣಾಗತನಾದವನ ರಕ್ಷಣೆಯನ್ನು ಮಾಡುವುದು, ಪಲಾಯನಗೈಯುತ್ತಿರುವ ಶತ್ರುವಿನ ಮೇಲೆ ಶಸ್ತ್ರವನ್ನು
ಪ್ರಯೊಗಿಸದಿರುವುವುದು, ನಿಶ್ಯಸ್ತ್ರ ಹಾಗು
ಕ್ಷಮೆ ಕೇಳುತ್ತಿರುವ ಶತ್ರುವಿನ ಜೊತೆಗೆ ಯುದ್ಧ
ಮಾಡದಿರುವುದು, ಯುದ್ಧದಲ್ಲಿ ಯಾವುದೇ ಮೋಸ ವಂಚನೆ ಮಾಡದಿರುವುದು, ಜೀವವಿರುವ ತನಕ
ಧರ್ಮಯುದ್ಧವನ್ನೇ ಮಾಡುತ್ತಿರುವುದು ಇತ್ಯಾದಿಗಳನ್ನೇ ನಮ್ಮ ವೀರರು ಬಹು ದೊಡ್ಡ ಕ್ಷಾತ್ರ
ಧರ್ಮವೆಂದು ತಿಳಿದಿದ್ದರು/ಭಾವಿಸಿದ್ದರು. ಪರಿಣಾಮವಾಗಿ ಮಹಾನ್ ವೀರರಾಗಿದ್ದರೂ ಕೂಡ ಶೌರ್ಯ
ಸಾಹಸ ಹಾಗು ಬಲಿದಾನಗಳಿಗೆ ಅವರಿಗೆ ಜಗತ್ತಿನಲ್ಲಿ
ಯಾರೂ ಸಾಟಿಯಿಲ್ಲದಿದ್ದರೂ ಸಹ, ಅವರು ತಮ್ಮ
ರುಜುಮಾರ್ಗವನ್ನೂ ಬಿಡದೆ, ಶತ್ರುವಿನೊಂದಿಗೆ ಕೂಟಯುದ್ಧವನ್ನೂ ಮಾಡದೆ ಇದ್ದುದರಿಂದ ಸದಾ ಕಾಲಕ್ಕೂ
ಪರಾಜಿತರಾಗಿ ಬಿಟ್ಟರು. ಇದಕ್ಕೆ ಸಂಬಂಧಿಸಿದಂತೆ ಕವಿ ಪ್ರಕಾಶ್ಚಂದ್ರರು ಬರೆಯುತ್ತಾರೆ –
पानी भरे नाव में उचित
है उलीच दॆना,
लग जाय आग तो बुझाना
ही उचित है ॥
विविध प्रकार उपचार
करके प्रकाश
रोग को शरीर से हठाना
ही उचित है ॥
आती हों अनेक आपदायें
जहां
उस ठौर से तो टल जाना ही उचित हैं ॥
बल से कि छल से या किसी अटकल से भी,
शत्रु को तो सर्वदा मिठाना
ही उचित है ॥
No comments:
Post a Comment