5. ಸೋಮನಾಥದ ಮೇಲೆ ದಾಳಿ
ರಾಜಾ ಜಯಪಾಲನು ಚಿತೆಗೆ ಹಾರಿ ಮರಣವನ್ನಪ್ಪಿದ ಬಳಿಕ
ಪಶ್ಚಿಮ ಪಂಜಾಬ್ ನಲ್ಲಿ ಮುಸಲ್ಮಾನರ ಆಡಳಿತ ಆರಂಭಗೊಂಡಿತು. ಗಜನಿಯ ಸುಲ್ತಾನ್ ಮೊಹಮ್ಮದ್
ಹಿಂದುಸ್ಥಾನದ ಮೇಲೆ ಸತತವಾಗಿ ೧೭ ಬಾರಿ ದಾಳಿ ಮಾಡಿದ. ಅವನು ಎಲ್ಲೆಲ್ಲಿ ಹೋದನೋ ಹಿಂದುಗಳ
ಕಗ್ಗೊಲೆಯನ್ನು ಮಾಡುತ್ತಾ, ದೇವಾಲಯಗಳನ್ನು ಕೆಡವುತ್ತಾ ನಗರಗಳನ್ನು ಲೂಟಿಗೈಯುತ್ತಾ ಮತಾಂಧತೆಯ ಹಮ್ಮಿನಲ್ಲಿ ಅವನ್ನೆಲ್ಲ ಸುಟ್ಟು
ಸಂತೋಷಪಡುತ್ತಿದ್ದ. ಸಾವಿರಾರು ಹಿಂದುಗಳನ್ನು ಗುಲಾಮರನ್ನಾಗಿ ಮಾಡಿ ಗಜನಿಯ
ಮಾರುಕಟ್ಟೆಗಳಲ್ಲಿ ಮೂರು ಮೂರು ಪೈಸೆಗಳಿಗೆ ಮಾರುತ್ತಿದ್ದ.
ಅಷ್ಟಾದರೂ ಸಂಘಟಿತರಾಗಿ ಈ ಲೂಟಿಕೋರರನ್ನು ಎದುರಿಸಬೇಕೆಂದು ಇಲ್ಲಿನ ಹಿಂದುಗಳು
ಯೋಚಿಸಲಿಲ್ಲ. ಅಂತಿಮವಾಗಿ ೧೦೨೪ ನೇ ಇಸವಿಯಂದು ಕಾತಿಯಾವಾಡದ ಪ್ರಸಿದ್ಧ ಸೋಮನಾಥ ದೇವಾಲಯದ ಮೇಲೆ ಮೊಹಮ್ಮದ್ ದಾಳಿ
ಮಾಡಿದ. ಅವನ ಸೈನ್ಯ ಸಂಪೂರ್ಣ ಪಂಜಾಬ್, ರಜಪೂತಾನಾ ಮತ್ತು ಕಾತಿಯಾವಾಡವನ್ನು ದಾಟಿ ಸಮುದ್ರ ಕಿನಾರೆಯಲ್ಲಿರುವ
ಸೋಮನಾಥವನ್ನು ತಲುಪಿತು. ಆಶ್ಚರ್ಯವೆಂದರೆ ಒಬ್ಬನೇ ಒಬ್ಬ ಹಿಂದು ರಾಜ ಚಾ ಚೂ ಎನ್ನಲಿಲ್ಲ. ಏನು
ಎಲ್ಲರಿಗೂ ಹಾವು ಕಚ್ಚಿತ್ತೇ ?
ಸೋಮನಾಥದ ರಕ್ಷಣೆಗಾಗಿ ಒಂದು ದೊಡ್ಡ ಹಿಂದು ಸೈನ್ಯ
ಸಿದ್ಧವಾಗಿತ್ತು. ಆದರೆ ಅಲ್ಲಿನ ಕೆಟ್ಟ
ಜ್ಯೊತಿಷಿಗಳಿಂದ “ಈಗ ಮುಹೂರ್ತ ಹಾಗೂ ಗ್ರಹಗತಿ ಚೆನ್ನಾಗಿಲ್ಲ” ಎಂದು ಹೇಳಿ ಆ ವೀರ ರಜಪೂತರನ್ನು
ತಡೆಯಲಾಯಿತು. ಹಾಗೆ ಗಜನಿ ಮೊಹಮ್ಮದನಿಗೆ ಆತನ
ಸಿದ್ಧತೆಗೆ ಮತ್ತೆ ಕಾಲಾವಕಾಶವನ್ನು
ಕೊಟ್ಟಂತಾಯಿತು. ಸರಿ, ಯುದ್ಧದಲ್ಲಿ ಮುಹೂರ್ತ ಮತ್ತು ಗ್ರಹಗತಿ ನೋಡುತ್ತಾರೆಯೇ ? ಇಂಥ ಮೂರ್ಖತನದ
ಮೂಢನಂಬಿಕೆಯಿಂದಲೇ ಹಿಂದೂಧರ್ಮದ ಹಡಗು ಮುಳುಗುತ್ತಿದೆ ಮತ್ತು ವಿನಾಶದ ಆಳವಾದ ಕಂದರದಲ್ಲಿ ತಂದು
ನಿಲ್ಲಿಸಿದೆ.
ಮತ್ತೆ ಸೋಮನಾಥದ ಯುದ್ಧ ಆರಂಭವಾದಾಗ ಮೊಹಮ್ಮದ್ ೩೦೦
ಗೋವುಗಳನ್ನು ತರಿಸಿ ತನ್ನ ಸೇನೆಯ ಮುಂದೆ ನಿಲ್ಲಿಸಿದ. ಎಕೆಂದರೆ ಹಿಂದುಗಳು ಮುಂದೆ ನಿಂತಿರುವ
ದನಗಳನ್ನು ನೋಡಿ ದಾಳಿ ಮಾಡುವುದಿಲ್ಲ ಎಂಬುದಾಗಿ ಅವನಿಗೆ ಗೊತ್ತಿತ್ತು. ಹಾಗೆಯೇ ಆಯಿತು. ಹಿಂದೂ
ಸೈನಿಕರು ಮುಂದೆ ನಿಂತಿರುವ ಗೋಮಾತೆಯರನ್ನು ನೋಡಿ
ಶಸ್ತ್ರಪ್ರಯೊಗವನ್ನೇ ಮಾಡಲಿಲ್ಲ. ಪರಿಣಾಮಸ್ವರೂಪವಾಗಿ ಅವರು ಸೋತು ಹೋದರು. ಮಹಮ್ಮದನ ಸೈನ್ಯ ಅವರನ್ನು ತುಳಿದು ಹಾಕಿತು. ಮತ್ತು
ಮಂದಿರವನ್ನು ಹೊಕ್ಕು ಸೋಮನಾಥನ ವಿಗ್ರಹವನ್ನು ಪುಡಿಗೈಯಿತು. ಹಾಗೆಯೇ ಅದರ ಒಂಡು ತುಂಡನ್ನು
ತೆಗೆದುಕೊಂಡು ಹೋಗಿ ರಾಜದ್ವಾರದ ಹೊಸ್ತಿಲಿನಲ್ಲಿ ಎಲ್ಲರೂ ಮೆಟ್ಟಿಕೊಂಡು ತಿರುಗಾಡಲಿ ಎಂದು
ಹುದುಗಿಸಿ ಇಟ್ಟರು.
ಹಿಂದುಗಳ ಅಸಂಬದ್ಧವಾದ ದಯಾಭಾವನೆಯ ಪರಿಣಾಮವಾಗಿ ಅದರ
ಲಾಭವನ್ನು ಮಹಮ್ಮದ್ ಪಡೆದುಕೊಂಡುಬಿಟ್ಟ. ಆ ಸಮಯದಲ್ಲಿ ಆ ಹಿಂದೂ ಸೈನಿಕರು ತಮ್ಮ ಮಂದಿರ, ಧರ್ಮ
ಹಾಗೂ ದೇಶದ ರಕ್ಷಣೆಗಾಗಿ ೩೦೦ ಗೋವುಗಳ ಮೇಲೆ ದಯೆಯನ್ನು
ತೋರಿಸದೆ ಶತ್ರುವಿನ ಮೇಲೆ ಆಕ್ರಮಣವನ್ನು
ಮಾಡಿದ್ದಿದ್ದರೆ ಇವತ್ತು ಪ್ರತಿದಿನ ಎಪ್ಪತ್ತು ಸಾವಿರ ಗೋವುಗಳನ್ನು ಭಾರತದಲ್ಲಿ
ಕೊಲ್ಲಲಾಗುತ್ತಿದೆಯೋ ಅದಕ್ಕೆ ಅವಕಾಶವೇ ಇರುತ್ತಿರಲಿಲ್ಲ. ಏಕೆಂದರೆ ಮಹಮ್ಮದನ ಸೈನ್ಯ ಸೋತ ಬಳಿಕ ಯಾವನೇ ಆಕ್ರಮಣಕಾರಿ ಮುಸಲ್ಮಾನ್
ಭಾರತದ ಮೇಲೆ ಆಕ್ರಮಣ ಮಾಡುವ ಸಾಹಸವನ್ನೇ ಮಾಡುತ್ತಿರಲಿಲ್ಲ. ಇಲ್ಲಿ ಮುಸಲ್ಮಾನರ ಜನಸಂಖ್ಯೆ
ಇಷ್ಟರಮಟ್ಟಿಗೆ ಬೆಳೆಯುತ್ತಿರಲಿಲ್ಲ. ಪ್ರತಿದಿನ ಇಷ್ಟು ಗೋವುಗಳ ಹತ್ಯೆಯಾಗುತ್ತಿರಲಿಲ್ಲ.
ಪಾಕಿಸ್ಥಾನ ಹುಟ್ಟುತ್ತಿರಲಿಲ್ಲ. ಹಾಗಾಗಿ ಹಿಂದುಗಳ ಅಸಂಬದ್ಧ ಔದಾರ್ಯಕ್ಕೆ ಧಿಕ್ಕಾರ. ಇವೆಲ್ಲದಕ್ಕೆ ಸಾಕ್ಷಿಯಾಗಿ ಇಂದಿಗೂ ಸಹ
ಸೋಮನಾಥಮಂದಿರದ ಭಗ್ನಾವಶೇಷ ಉಳಿದುಕೊಂಡಿದೆ. ನಾನು ನನ್ನ ಕಾತಿಯಾವಾಡ ದ
ಪ್ರವಾಸದಲ್ಲಿ ಈ ಮಂದಿರದ ಧ್ವಂಸಗೊಳಿಸಿದ
ಶಿಖರವೇರಿ ಆಗಿನ ಹಿಂದುಗಳ ಮೂರ್ಖತನಕ್ಕಾಗಿ ಕಣ್ಣೀರು ಸುರಿಸಿದೆ. ಸಮುದ್ರದ ಅಲೆಗಳ ಭೋರ್ಗರೆತದಲ್ಲಿ
ಭಗ್ನ ಶಿಖರದ ಅಳು ಬೆರೆತು ನನ್ನೊಂದಿಗೆ ಅತ್ತಂತೆ ಭಾಸವಾಯಿತು.
No comments:
Post a Comment