Monday, May 9, 2022

ಯುದ್ಧನೀತಿ ಮತ್ತು ಅಹಿಂಸೆ (6. ಪೃಥ್ವಿರಾಜ ಮತ್ತು ಜಯಚಂದ)

 

6. ಪೃಥ್ವಿರಾಜ ಮತ್ತು ಜಯಚಂದ

 

ಕ್ರಿ.ಶ. ೧೩ ನೇ ಶತಮಾನದಲ್ಲಿ ಹಿಂದುಸ್ಥಾನದಲ್ಲಿ  ೪ ರಜಪೂತ ವಂಶಗಳು ರಾಜ್ಯಭಾರವನ್ನು ನಡೆಸುತ್ತಿದ್ದವು.

1.     ದಿಲ್ಲಿ ಮತ್ತು ಅಜ್ಮೀರ್ ನಲ್ಲಿ ಚೌಹಾಣರು

2.     ಕನೋಜ್ ನಲ್ಲಿ ರಾಠೊಡರು

3.     ಗುಜರಾತ್ ನಲ್ಲಿ ಸೋಲಂಕಿಗಳು

4.     ಚಿತ್ತೋಡ್ ನಲ್ಲಿ ಸಿಸೋಡಿಯಾಗಳು

ಈ ನಾಲ್ಕು ವಂಶಸ್ಥರು ಪರಸ್ಪರ ಸಂಬಂಧಿಗಳಾಗಿದ್ದರೂ ಸಹ ಪರಸ್ಪರರಲ್ಲಿ ವೈರವಿತ್ತು.

 

೧. ಮೀಸೆ ಪುರಾಣ

ಗುಜರಾತ್ ನ ಕೆಲವು ಸೋಲಂಕಿ ರಜಪೂತರು ತಮ್ಮ ರಾಜನೊಂದಿಗೆ ಮುನಿಸಿಕೊಂಡು ಅಜ್ಮೀರ್ ಗೆ ಹೋದರು. ಅಲ್ಲಿ ಪೃಥ್ವೀರಾಜ ಚೌಹಾಣನು  ಅವರಿಗೆ ಆಶ್ರಯವನ್ನು ಕೊಟ್ಟ. ಒಂದು ದಿನ ರಾಜಸಭೆಯಲ್ಲಿ(ದರ್ಬಾರಿನಲ್ಲಿ) ಒಬ್ಬ ಸೋಲಂಕಿ ಸರದಾರನು ತನ್ನ ಮೀಸೆಯ ಮೇಲೆ ಕೈಯಾಡಿಸುತ್ತಾ ಗತ್ತನ್ನು ಮೆರೆದ. ಅದನ್ನು ನೋಡಿದ ಪೃಥ್ವೀರಾಜನ ಚಿಕ್ಕಪ್ಪನಾದ ಕಾನ್ಹಕವರನು  ಚೌಹಾಣನ ಮುಂದೆ ಯಾವನೇ ಒಬ್ಬನೂ ಸಹ ಮೀಸೆ ತಿರುವುವಂತಿಲ್ಲ ಎಂದು ಹೇಳುತ್ತಾ ಸೋಲಂಕಿ ಸರದಾರನ ತಲೆ ಕಡಿದು ಹಾಕಿದ. ಈ ಸುದ್ದಿಯನ್ನು ಕೇಳಿ ಗುಜರಾತ್ ನ ರಾಜನಾದ ಮೂಲರಾಜ ಸೋಲಂಕಿ ತನ್ನ ಸೋದರನ ಸಾವಿಗೆ  ಪ್ರತೀಕಾರವನ್ನೆಸಗಲು ಅಜ್ಮೀರ್ ನ ಮೇಲೆ ದಾಳಿ ಮಾಡಿ  ಸಾಮವತಿಯ ಯುದ್ಧದಲ್ಲಿ ಪೃಥ್ವೀರಾಜನ ತಂದೆಯಾದ  ಸೋಮೇಶ್ವರನ ತಲೆ ಕಡಿದು ಹಾಕಿದ. ಮೀಸೆಯ ಮೇಲೆ ಕೈಯಾಡಿಸಿದ್ದಕ್ಕಾಗಿ ಮೂರ್ಖತನದ ಈ ಘಟನೆ ನಡೆದು ಹೋಯಿತು ಮತ್ತು ಅದರಿಂದಾಗಿ ಎರಡು ರಾಜವಂಶಗಳ ಮಧ್ಯೆ ಯಾವತ್ತೂ ಜೋಡಿಸಲಾಗದ ಒಡಕು ಉಂಟಾಯಿತು. ಮುಂದೆ ಇದೇ ಪೃಥ್ವೀರಾಜನ ಸೋಲಿಗೆ ಕಾರಣವಾಯಿತು.

೨. ಪೃಥ್ವೀರಾಜನ ಪ್ರಮಾದ

ಗಜನಿ ಮಹಮ್ಮದನು ೧೭ ಬಾರಿ  ಭಾರತದ ಮೇಲೆ ದಾಳಿ ಮಾಡಿ  ಸತ್ತ ಬಳಿಕ ಗೋರ್ ನ ಬಾದಶಹ ಅಲ್ಲಾವುದ್ದೀನನು  ಮಹಮ್ಮದನ ರಾಜಧಾನಿಯಾದ ಗಜನಿಯ ಮೇಲೆ ದಾಳಿ ಮಾಡಿ ಅದನ್ನೂ ಸರ್ವನಾಶ ಮಾಡಿಬಿಟ್ಟ. ಗಜನಿ ಮಹಮ್ಮದನ ಎಲುಬುಗಳನ್ನುಆತನ ಗೋರಿಯಿಂದ ಹೊರಗೆ ತೆಗೆಸಿ  ನಾಯಿಗಳಿಗೆ ಎಸೆದ. ಗಜನಿಯ ಹಾಕಿಮ್(ರಾಜಾಧಿಕಾರಿ)  ಮೀರ್ ಹಸನ್  ಹೇಗೋ ಪ್ರಾಣ ಉಳಿಸಿಕೊಂಡು ಹಿಂದುಸ್ಥಾನಕ್ಕೆ ಓಡಿ ಬಂದು ಪೃಥ್ವೀರಾಜನ ರಕ್ಷಣೆ ಪಡೆದ.. ಪೃಥ್ವೀರಾಜ ಆತನಿಗೆ ಆಶ್ರಯವನ್ನು ಕೊಟ್ಟ. ಶಹಬ್ಬಾಶ್ !!! ಹಿಂದುಗಳ ಔದಾರ್ಯಕ್ಕೆ ಮಿತಿಯೇ ಇಲ್ಲ.

ಯಾವ ದುಷ್ಟ ಗಜನಿ ಮೊಹಮ್ಮದ್  ಇಲ್ಲಿ ಬಂದು ಇಲ್ಲಿನ ದೇವಾಲಯಗಳನ್ನು ಪುಡಿಗೈದು ಸಾವಿರಾರು ಹಿಂದುಗಳನ್ನು ಗುಲಾಮರನ್ನಾಗಿ ಮಾಡಿ ಗಜನಿಯ ಮಾರುಕಟ್ಟೆಗಳಲ್ಲಿ ೨,೩ ಪೈಸೆಗಳಿಗೆ ಮಾರಿದ್ದನೋ, ಯಾವ ಮೊಹಮ್ಮದ್ ಭಾರತದಲ್ಲಿ  ಲಕ್ಷಾಂತರ  ಅಮಾಯಕ ಹಿಂದುಗಳನ್ನು ಕಡಿದು ಲೂಟಿ ಮಾಡಿ  ರಕ್ತದ ಹೊಳೆಯನ್ನೇ  ಹರಿಸಿದ್ದನೋ ಅವನದ್ದೇ ವಂಶಜನಿಗೆ ಭಾರತದ ಒಬ್ಬ ಹಿಂದು ರಾಜ (ಪೃಥ್ವೀರಾಜ ಚೌಹಾಣ) ರಕ್ಷಣೆ ನೀಡುತ್ತಿದ್ದಾನೆ. ಮುಂದೆ ಇದೇ ಕಾರಣದಿಂದ ಮತ್ತೆ ಮತ್ತೆ ಸರ್ವನಾಶದ ಹಾದಿಗೆ ಬಂತು ಭಾರತ.

ಅಲ್ಲಾವುದ್ದೀನನು ಮೀರ್ ಹಸನ್ ನನ್ನು  ಬಂಧಿಸಲು ತನ್ನ ತಮ್ಮನಾದ ಶಹಾಬುದ್ದೀನ್ ಗೋರಿಯ ಜೊತೆಗೆ  ಒಂದು ದೊಡ್ಡ ಸೈನ್ಯವನ್ನು  ಹಿಂದುಸ್ಥಾನಕ್ಕೆ ಕಳುಹಿಸಿದ. ಇಲ್ಲಿಂದಲೇ ಪೃಥ್ವೀರಾಜ ಮತ್ತು ಮಹಮ್ಮದ್ ಗೋರಿಯ ನಡುವೆ ಶತ್ರುತ್ವ ಆರಂಭವಾಗುತ್ತದೆ. ಮಹಮ್ಮದ್ ಘೋರಿ ಪೃಥ್ವೀರಾಜನ ಮೇಲೆ  ಒಂದು ಬಾರಿಯಲ್ಲ, ನಿರಂತರ ಏಳು ಬಾರಿ  ದಾಳಿ ನಡೆಸಿ  ಪೆಟ್ಟು ತಿಂದು ಹೋಗಿದ್ದ. ಪೃಥ್ವೀರಾಜ ಚೌಹಾಣನು ಅನೇಕ ಬಾರಿ ಘೋರಿ ಮಹಮ್ಮದ್ ನನ್ನು ಬಂಧಿಸಿ, ಬಳಿಕ ಕ್ಷಮೆ ಯಾಚಿಸಿದ ಮೇಲೆ ಬಿಟ್ಟು ಬಿಡುತ್ತಿದ್ದ. ಶತ್ರುವನ್ನು ಈ ರೀತಿಯಾಗಿ ಬಿಟ್ಟು ಬಿಡುವುದು ಯುದ್ಧ ನೀತಿಗೆ ಸರ್ವಥಾ ವಿರುದ್ಧವಾಗಿದೆ. ಆದರೆ ಪೃಥ್ವೀರಾಜನ ಔದಾರ್ಯಕ್ಕೆ  ಏನು ಹೇಳಬೇಕು ?  ಈ ರೀರಿಯ ಔದಾರ್ಯ ಅವನ ಮತ್ತು ಸಮಸ್ತ ಹಿಂದೂ ಧರ್ಮದ ವಿನಾಶಕ್ಕೆ ಕಾರಣವಾಯಿತು.

೩. ಜಯಚಂದನ ದೇಶದ್ರೋಹ

ಕನೋಜದ ರಾಜನಾದ ಜಯಚಂದ ರಾಠೋಡ ನ ಮಗಳಾದ ಸಂಯೋಗಿತಾ ಜಯಚಂದನ ಇಚ್ಛೆಗೆ ವಿರುದ್ಧವಾಗಿ ಪೃಥ್ವೀರಾಜನನ್ನು ವರಿಸಿದಳು. ಹಾಗಾಗಿ ಜಯಚಂದನು ಪೃಥ್ವೀರಾಜನನ್ನು  ದ್ವೇಷಿಸುತ್ತಿದ್ದ.  ಜಯಚಂದ ಪೃಥ್ವೀರಾಜನಿಗೆ  ಪ್ರತೀಕಾರವೆಸಗಲು ಅವಕಾಶವನ್ನು ಹುಡುಕುತ್ತಿದ್ದ. ಹಾಗಾಗಿಯೇ ಘೋರಿ ಮೊಹಮ್ಮದ್ ಕೊನೆಯ ಬಾರಿ ಪೂರ್ತಿ ಸೋಲುಂಡು ಗಜನಿಯಲ್ಲಿ ಹೆದರಿ ಕುಳಿತಿದ್ದಾಗ ಈ ದೇಶದ್ರೊಹಿ ಜಯಚಂದ್ ಅವನಿಗೆ ಒಂದು ಪತ್ರ ಬರೆದು ಭಾರತದ ಮೇಲೆ ಮತ್ತೊಂದು ಬಾರಿ ಆಕ್ರಮಣವನ್ನು ಮಾಡಲು  ಅಮಂತ್ರಿಸಿದ ಮತ್ತು ಅವನಿಗೆ ಸೈನಿಕ ಸಹಾಯವನ್ನು ಕೂಡ ಮಾಡುವುದಾಗಿ ಮಾತು ಕೊಟ್ಟ. ಇದರಿಂದ ಉತ್ಸಾಹಗೊಂಡ ಘೋರಿ ಮಹಮ್ಮದ್  ಪುನಃ ಒಂದು ಬಾರಿ ಪೃಥ್ವೀರಾಜನ ಮೇಲೆ ದಾಳಿ ನಡೆಸಿದ. ಜಯಚಂದ್ ತನ್ನ ೫೦ ಸಾವಿರ ಸೈನಿಕರೊಂದಿಗೆ  ಘೋರಿ ಮಹಮ್ಮದ್ ನ ಸಹಾಯಕ್ಕಾಗಿ ಹೊರಟ. ಜಯಚಂದನ ಮಗಳು ಸಂಯೋಗಿತಾ ಗೌಪ್ಯವಾಗಿ ತನ್ನ ತಂದೆಯ ಡೇರೆಯನ್ನು  ಹೊಕ್ಕಿ “ನೀವು ನನ್ನ ಮತ್ತು ನನ್ನ ಪತಿಯ ವ್ಯಕ್ತಿಗತ ದ್ವೇಷದಿಂದ ಒಬ್ಬ ಪರದೇಶಿಗೆ  ಸಹಾಯ ಮಾಡಬೇಡಿ. ನೀವು ನನಗೆ ಯಾವ ಶಿಕ್ಷೆಯನ್ನು ಬೇಕಾದರೂ ಕೊಡಿ. ಆದರೆ ನಮ್ಮ ದೇಶ ಮತ್ತು ಹಿಂದೂ ಧರ್ಮದ ನಾಶವನ್ನು ಯಾವತ್ತೂ ಉಂಟುಮಾಡಬೇಡಿ” ಎಂಬುದಾಗಿ ಪ್ರಾರ್ಥಿಸಿದಳು. ಆದರೆ ದೇಶದ್ರೋಹಿಯಾದ  ಜಯಚಂದನು ಅವಳ ಮಾತನ್ನು ಕೇಳಲಿಲ್ಲ. ಘೋರಿ ಮಹಮ್ಮದನಿಗೆ ಸಹಾಯ ಮಾಡುವುದನ್ನು ಮುಂದುವರಿಸಿದ. ಅತ್ತ ಮಹಮ್ಮದ್ ಘೋರಿಯು  ಪೃಥ್ವೀರಾಜನೊಂದಿಗೆ ಸಂಧಾನದ ಪ್ರಸ್ತಾವವನ್ನು ಮುಂದಿಟ್ಟ. ಆ ಪ್ರಸ್ತಾಪ(ವ) ಮೋಸದ್ದಾಗಿತ್ತು. !!!  ಯಾವಾಗ ಪೃಥ್ವೀರಾಜನ ಸೈನಿಕರು ಸಂಧಾನವೇರ್ಪಡುವ ಖುಷಿಯಲ್ಲಿ ಮೈಮರೆತಿದ್ದರೋ ಆಗ ಘೋರಿಯ ಸೈನ್ಯ  ಒಂದೇ ಸಮನೆ ಅವರ ಮೇಲೆ ದಾಳಿ ಮಾಡಲಾರಂಭಿಸಿತು. ಹಿಂದಿನಿಂದ ಪೃಥ್ವೀರಾಜನ ಮಹಾಮಂತ್ರಿಯ ಮಗ  ವಿಜಯಸಿಂಹ  ತನ್ನ ಒಂದು ಲಕ್ಷ ಸೈನಿಕರೊಂದಿಗೆ  ಮೋಸದಿಂದ  ಪೃಥ್ವೀರಾಜನ ಮೇಲೆಯೇ  ದಾಳಿ ನಡೆಸಿದ. ಎಕೆಂದರೆ  ಅವನಿಗೆ ದೆಹಲಿಯ ರಾಜನನ್ನಾಗಿ ಮಾಡುವ ಆಸೆ ಹುಟ್ಟಿಸಲಾಗಿತ್ತು.  ಹಾಗಾಗಿ ಆತ ಘೋರಿ ಮಹಮ್ಮದನ  ಪರವಾಗಿ ಪೃಥ್ವೀರಾಜನ ಮೇಲೆಯೇ  ದಾಳಿ ನಡೆಸಿದ. ಅತ್ತ ಜಯಚಂದನ  ೫೦ ಸಾವಿರ ಸೈನಿಕರೂ ಕೂಡ  ಪೃಥ್ವೀರಾಜನ ಮೇಲೆ ಆಕ್ರಮಣ  ನಡೆಸಿದರು.  ಪೃಥ್ವೀರಾಜ ಬಹಳ  ವೀರಾವೇಶದಿಂದ ಬಡಿದಾಡಿದ. ಆದರೇನು ಮಾಡುವುದು ?  ಎದುರುಗಡೆ ಶತ್ರು ನಿಂತಿದ್ದಾನೆ. ಹಿಂಬದಿಯಲ್ಲಿ ಅವನ ಅನ್ನ ತಿಂದು ಕೇಡು ಬಗೆವ  ವಿಶ್ವಾಸದ್ರೋಹಿ ಸೇನಾಪತಿಯೇ  ಬೆನ್ನಿಗೆ ಚೂರಿಯಿಂದ ಇರಿಯುತ್ತಿದ್ದಾನೆ. ಕೊನೆಯದಾಗಿ ಸೋಲುಣ್ಣುವುದು ಅನಿವಾರ್ಯವಾಗಿತ್ತು.

ಪೃಥ್ವೀರಾಜನನ್ನು ಯುದ್ಧದಲ್ಲಿ ಸೆರೆ ಹಿಡಿದು  ಘೋರಿ ಮಹಮ್ಮದನ ಬಳಿಗೆ ತರಲಾಯಿತು. ಆಗ ಆತ ಘೋರಿಗೆ ಹೇಳ್ತಾನೆ

ನಾನು ನಿನ್ನನ್ನು ಅನೇಕ ಬಾರಿ ಸೆರೆ ಹಿಡಿದಿದ್ದರೂ ಔದಾರ್ಯದಿಂದ ಬಿಡುಗಡೆಗೊಳಿಸಿದ್ದೆ. ಈಗ ನೀನು ನನ್ನನ್ನು  ಒಂದು ಬಾರಿ ಬಿಟ್ಟು ಬಿಡುವ ಸಜ್ಜನಿಕೆಯನ್ನು ತೋರಿಸು

ಆದರೆ ಘೋರಿ ಹೇಳ್ತಾನೆ

ನಾನು ನಿನ್ನಂತಹ ಬಲಿಷ್ಠ ಶತ್ರುವನ್ನು ಬಿಟ್ಟುಬಿಡಲು ಹಿಂದುಗಳಂತೆ ಮೂರ್ಖನಲ್ಲ. ನೀನು ಪ್ರಾಣ ಉಳಿಸಿಕೊಳ್ಳಲು ಬಯಸುವೆಯಾದರೆ ಮೊದಲು ಮುಸಲ್ಮಾನನಾಗು

ವೀರ ಪೃಥ್ವೀರಾಜ ಹಿಂದೆ ಘೋರಿ ಮಹಮ್ಮದನನ್ನು ಅನೇಕ ಬಾರಿ  ಸ್ವತಂತ್ರಗೊಳಿಸಿದ್ದರೂ ಸಹ ಈ ಬಾರಿ ಘೋರಿಯ ಮಾತನ್ನು ಕೇಳಿ  ತನ್ನ ಮೂರ್ಖತನದ ಔದಾರ್ಯಕ್ಕಾಗಿ ಅದೆಷ್ಟು ಕಣ್ಣೀರು ಹಾಕಿದ್ದನೋ ಗೊತ್ತಿಲ್ಲ. ಆತನ ಆ ಅನುಚಿತ ಔದಾರ್ಯ  ಹಾಗೂ ಮೂರ್ಖತನದಿಂದ ಕೂಡಿದ ದಯಾಭಾವನೆಯೇ  ಅವನನ್ನು ಹಾಗೂ ಸಮಸ್ತ ಹಿಂದೂ ಸಾಮ್ರಾಜ್ಯವನ್ನು ನಾಶಪಡಿಸಿತು. ಹಿಂದೂ ಧರ್ಮಾವಲಂಬಿಗಳಾದ  ಇಂತಹ ಮಹಾನ್ ಸಾಮ್ರಾಟರ ಇಂತಹ ದೊಡ್ಡ ದೊಡ್ಡ ತಪ್ಪುಗಳು  ಹಿಂದೂ ಧರ್ಮವನ್ನು ಈ ದುರ್ದೆಸೆಯ ಕೊಳ್ಳಕ್ಕೆ ಕೆಡವಿದವು.

ಮತ್ತೆ ಆ ದೇಶದ್ರೋಹಿ, ಧರ್ಮದ್ರೋಹಿ, ಧರ್ಮದ್ವೇಷಿ, ವಿಶ್ವಾಸಘಾತಕ ವಿಜಯಸಿಂಹ ಹಾಗೂ ಜಯಚಂದರ ವಿಷಯದಲ್ಲಿ ಏನು ಹೇಳಬೇಕು ?  ಅವರಿಬ್ಬರು ತಮ್ಮ ತಮ್ಮ ಹೆಸರಿಗೆ ಕಳಂಕವನ್ನುಂಟುಮಾಡಿಕೊಂಡರು.

ದುಷ್ಟ ವಿಜಯಸಿಂಹ, ನಿನ್ನ ಸ್ವಾಮಿಗೆ ವಿಶ್ವಾಸದ್ರೋಹವನ್ನು ಬಗೆದು, ನಿನಗೇನು ದಿಲ್ಲಿಯ ಸಿಂಹಾಸನ ಸಿಕ್ಕಿತೇ ?

ದೇಶದ್ರೋಹಿ ಜಯಚಂದ್, ಪರಾಕ್ರಮವೇ ಮೈವೆತ್ತಂತಿದ್ದ ಪೃಥ್ವೀರಾಜನಿಗೆ ಸೋಲುಣಿಸಿ ತನ್ನ ದೇಶವನ್ನು ವಿದೇಶೀಯರ ಕೈಗೆ ಸಮರ್ಪಿಸಿ ನಿನಗೇನು  ಸಿಕ್ಕಿತು ?  ಏನೂ ಇಲ್ಲ.

ಮಾರನೇ ವರ್ಷ ಅದೇ ಘೋರಿ ಮಹಮ್ಮದ್ ಜಯಚಂದನ ಮೇಲೆ ದಾಳಿ ನಡೆಸಿ ಕನೋಜವನ್ನು ಹೊಸಕಿ ಹಾಕಿದ. ಜಯಚಂದನು ಒಂದು ಪಿಪ್ಪಲದ ಮರವನ್ನು ಹತ್ತಿ ಗಂಗಾ ನದಿಗೆ ಹಾರಿ ಪ್ರಾಣ ಕಳೆದುಕೊಂಡು ಬಿಟ್ಟ. ಜಯಚಂದನು ತನ್ನ ಸೈನ್ಯದಲ್ಲಿ೪೦ ಸಾವಿರಕ್ಕಿಂತಲೂ ಹೆಚ್ಚು ಅಫಘಾನ್ ಸೈನಿಕರನ್ನು ಸೇರಿಸಿಕೊಂಡಿದ್ದ.  ಅವರೆಲ್ಲರೂ ಕನೋಜದ ಮೇಲೆ ದಾಳಿಯಾದಾಗ  ಘೋರಿ ಮಹಮ್ಮದನ ಜೊತೆ ಸೇರಿಕೊಂಡು ಬಿಟ್ಟರು. ಹಾಗೆಯೇ ಜಯಚಂದನ ಸೇನೆಯನ್ನೇ ಮುಗಿಸಲಾರಂಭಿಸಿದರು. ಹೀಗೆ ಜಯಚಂದನ ವಿಶ್ವಾಸದ್ರೋಹಕ್ಕೆ  ವಿಶ್ವಾಸದ್ರೋಹವೇ ಫಲರೂಪದಲ್ಲಿ ಸಿಕ್ಕಿತು.


No comments:

Post a Comment