Tuesday, May 17, 2022

सततविस्तृतमूल्याङ्कनम् Continuous Comprehensive Evaluation

 

  सततविस्तृतमूल्याङ्कनम् Continuous Comprehensive Evaluation

 

मूल्याकलनं शिक्षणाधिगमप्रक्रियायाः एकम् अविभाज्यं अङ्गम् अस्ति । इत्युक्ते शिक्षणात्परं स्वातन्त्र्येण क्रियमाणं कार्यं मूल्याकलनं नास्ति । शिक्षणेन अधिगमेन च सह एतस्य अत्यन्तं अविनाभावसम्बन्धः अस्ति । मूल्याङ्कनं केवलं छात्रस्य स्तरस्य अवलोकनार्थं क्रियमाणा परीक्षा नास्ति । प्रत्युत शिक्षणस्य अधिगमस्य च प्रभावं वर्धयितुं विद्यमानं महत्वपूर्णं साधनमस्ति । अध्ययनेन छात्रः कियत् साफल्यम् अधिगतवान् इति मूल्याङ्कनेन यथा ज्ञायते तथैव कियत् अध्येतव्यम् अवशिष्टमस्ति ? तदर्थं को वा उपायः आश्रयणीयः अस्ति? इत्यादिरूपेण प्रतिपुष्टिः अपि मूल्याङ्कनेन प्राप्यते । एतादृशम् मूल्याङ्कनं कदा कथं कर्तव्यं  इति चिन्तनस्य एकः उत्तमः परिणामः एव सततविस्तृतमूल्याङ्कनम् इत्युच्यते ।

1986 संवत्सरस्य राष्ट्रीयशिक्षानीतौ एतस्य विषये बलं प्रदत्तमासीत् । सततविस्तृतमूल्याङ्कनम् समग्राध्यापनावधौ शिक्षायाः विद्यालयीयाणां विद्यालयेतराणां च विषयाणां (शैक्षिकान् शिक्षेतरान् च विषयान्)मूल्याङ्कनं  संयोजयति

(Continuous and comprehensive evaluation that incorporates both the schoolastic and non schoolastic aspects of education, spread over the total span of the instructional time.)

भारतस्य अनेकासु माध्यमिकशिक्षासंस्थासु एतस्य क्रियान्वयनं आरब्धमस्ति । केन्द्रीयमाध्यमिकशिक्षापरिषदा एतद्विषये इत्थं स्पष्टीकृतम् –

सततविस्तृतमूल्याङ्कनम्  विद्यालये संचाल्यमानं मूल्याङ्कनं अस्ति यच्च छात्रविकासस्य सर्वान् पक्षान् आदाय प्रवर्तते । एतत् मूल्याङ्कनं मूल्याकलनस्य विकाससम्पादनप्रक्रिया अस्ति यस्य च प्रधानं उद्देश्यद्वयमस्ति मूल्याङ्कने सातत्यम्, अधिगमजनितस्य व्यवहारपरिवर्तनस्य च व्यापकरूपेण मूल्याकलनम् इति ।

 

            तर्हि किं नाम सततविस्तृतमूल्याङ्कनम् ?

 

            नैरन्तर्येण व्यापकरूपेण च क्रियमाणं मूल्याङ्कनं सततविस्तृतमूल्याङ्कनम् इत्युच्यते ।

          मूल्याङ्कनं सत्रे एकवारं क्रियमाणं कार्यं न भवेत् । सम्पूर्णसत्रे निरन्तरं अनेकवारं विभिन्नरीत्या मूल्याङ्कनं कर्तव्यम् । घटकपरीक्षाः अधिकसंख्यया चालनीयाः । ताः नियतरूपेण भवेयुः ।  अध्ययनकाठिन्यानि कानि सन्तीति  मूल्याङ्कनेन ज्ञातव्यम् । तेषां काठिन्यानाम् अपनोदनाय यत्नः कर्तव्यः । पुनः परीक्षणं कर्तव्यम् ।  अनेन आत्ममूल्याङ्कनं कर्तुं छात्रेण शिक्षकेण च प्रतिपुष्टिः लभ्यते । छात्रः प्रतिपुष्ट्या  अधिगमे परिवर्तनम् आनयति ।  शिक्षकः प्रतिपुष्ट्या अध्यापने परिवर्तनमानयति । इत्थं निरन्तरं क्रियमाणेन मूल्याङ्कनेन अधिगमस्य शिक्षणस्य च स्तरः वर्धते ।

          विस्तृतम् इत्युक्ते छात्रविकासस्य सर्वेषां पक्षाणाम्/आयामानाम् मूल्याङ्कनम् इत्यर्थः । इत्युक्ते शैक्षिकविकासस्य शिक्षासहगामिक्रियासु विकासस्य च मूल्याङ्कनं इत्यर्थः । शिक्षासहगामिक्रियाः छात्रस्य सर्वाङ्गिकविकासानुकूलाः भवेयुः । तदानीमेव छात्रविकासस्य सर्वेऽपि पक्षाः विकसिताः भवन्ति ।

           

            सततमूल्याङ्कनं किमर्थं कर्तव्यम् ?

 

            शिक्षणाधिगमप्रक्रियायाः साफल्यं परीक्षितुं मूल्याङ्कनं सामान्यतः कुर्मः । छात्रस्य व्यवहारे कीदृशं परिवर्तनम् अपेक्षितम् इति या योजना कृता अथवा यः सङ्कल्पः कृतः भवति  तस्य अवगमनाय मूल्याङ्कनं क्रियते । एतत् व्यावहारिकं परिवर्तनं ज्ञानेच्छाक्रियारूपं भवति । एते ज्ञानेच्छाक्रियारूपिपक्षाः  Cognitive Domain affective Domain, Conative Domain  इत्युच्यन्ते । ईदृशं ज्ञानेच्छाक्रियारूपि व्यावहारिकं परिवर्तनं शिक्षणाधिगमप्रक्रियायां निरन्तरं भवति । एवमेव  छात्रव्यक्तित्वस्य सर्वेषाम् अपि आयामानाम् परिवर्तनं जायते ।  छात्रे जायमानम् एतादृशं परिवर्तनं शिक्षकः सामान्यतः अवलोकनेनापि अवगन्तुं प्रभवति । छात्रेण सह संवादं कृत्वा तस्य व्यावहारिकं परिवर्तनं ज्ञातुं शक्नोति । ईदृशम् अवलोकनम् विद्यालयीयविषयेषु विद्यालयेतरविषयेषु च कर्तुं शक्यते । विद्यालये नियमितरूपेण पाठ्यचर्यायाम् अन्तर्भावितेषु विषयेषु जायमानं परिवर्तनम्, पाठ्यचर्यायां अविद्यमानेषु विद्यालयाद् बहिः भ्रमणेन विविधसामाजिकक्रियाकलापादिषु भागं ओढ्वा सञ्जातं परिवर्तनं च अवलोकयितुं शक्यते इत्यर्थः । विद्यालयीयेषु शैक्षिकविषयेषु शिक्षासहगामिक्रियासु च  छात्रप्रगतिः अवलोकयितुं शक्यते ।  एतादॄशम् अवलोकनमपि मूल्याङ्कने अन्तर्भवति ।  ईदृशं मूल्याङ्कनं  निरन्तरं नियैतरूपेण क्रियते चेत्   छात्रस्य अधिगमकाठिन्यं ज्ञायते इत्यतः तत् परिहर्तुम् अवसरो भवति । तत् अधिगमकाठिन्यं छात्रस्य कारणात् वा अध्यापकस्य कारणात् वा परिस्थितेः कारणात् वा भवितुम् अर्हति । अतः मूल्याङ्कनात् एतद्विषये प्रतिपुष्टिः प्राप्यते इत्यतः परिहारान्वेषणं, परिहारस्य अनुष्टानम्, पुनः परीक्षणम्, पुनर्बलनं चेति सर्वं सेत्स्यति ।

Thursday, May 12, 2022

ಯುದ್ಧನೀತಿ ಮತ್ತು ಅಹಿಂಸೆ (8 ಚಿತ್ತೋಡದ ಚಿತೆ)

 

8 ಚಿತ್ತೋಡದ ಚಿತೆ

ಚಿತ್ತೋಡದ ರಾಜ ರಾಣಾ ಭೀಮಸಿಂಗ್ ಮತ್ತು ಆತನ ರಾಣಿ ಪದ್ಮಿನಿಯ ಕಥೆ ಎಲ್ಲರಿಗೂ ತಿಳಿದಿದೆ. ರಜಪೂತರ ವೀರಗಾಥೆಗಳು  ಜಗತ್ಪ್ರಸಿದ್ಧವಾಗಿವೆ.  ಆದ್ದರಿಂದಲೇ ಕರ್ನಲ್ ಟಾಂಡ್ ತಾನು ಬರೆದ “ರಾಜಸ್ಥಾನದ ಇತಿಹಾಸ”ದಲ್ಲಿ ಹೇಳ್ತಾನೆ – “ಅರಾವಳಿ ಪರ್ವತದ ಯಾವುದೇ ಕಂದರವೂ/ಬೆಟ್ಟವೂ ಕೂಡ ಥರ್ಮೋಪೋಲಿ ಬೆಟ್ಟಕ್ಕಿಂತ ಕಡಿಮೆ ಇಲ್ಲ” ಮಣ್ಣಿನ ಕಣ ಕಣಗಳಲ್ಲಿ ರಜಪೂತರ ಶೌರ್ಯದ ಕಥೆಯನ್ನು ಬರೆಯದೆ ಇರುವ  ಒಂದೇ ಒಂದು ಇಂಚು ಭೂಮಿಯೂ ಕೂಡ  ರಾಜಸ್ಥಾನದಲ್ಲಿ ಇಲ್ಲ. ಆದರೂ ರಜಪೂತರಂತಹ ವೀರರೂ ಸಹ ಪರಸ್ಪರ ವೈರ ಹಾಗೂ ಮೌಢ್ಯದಿಂದಾಗಿ ಇಂತಹ ದುರ್ಗತಿಯನ್ನು ಹೊಂದಬೇಕಾಗಿ ಬಂದದ್ದರಿಂದ ದುಃಖವುಂಟಾಗುತ್ತದೆ. ರಾಣಾ ಭೀಮಸಿಂಗ್ ನ ಕಾಲದಲ್ಲಿ ಕ್ಷತ್ರಿಯ ವೀರರು ಕಮ್ಮಿ ಇದ್ದರೇನು ?  ಅಲ್ಲಾವುದ್ದೀನನ ಬಳಿಯಲ್ಲಿ ಇವರಿಗಿಂತ ದೊಡ್ಡ ವೀರರಿದ್ದರೇ? ಇಲ್ಲ. ಆದರೂ  ಚಿತ್ತೋಡದ ಪತನವೇಕಾಯಿತು ?  ಮತ್ತೆ ಮಹಾರಾಣಿ ಪದ್ಮಿನಿ ೧೬ ಸಾವಿರ ಕ್ಷತ್ರಿಯ ಸ್ತ್ರೀಯರೊಂದಿಗೆ   ಸಜೀವವಾಗಿ ಚಿತೆಗೆ ಏಕೆ ಹಾರಬೇಕಾಗಿ ಬಂತು ? ಕೇವಲ ರಜಪೂತರ ತಪ್ಪು ಹಾಗು ಮೊಂಡುತನದಿಂದಾಗಿ ಕಪಟ ಶತ್ರುಗಳ ಮೇಲೂ  ದಯೆಯನ್ನು ತೋರಿಸುತ್ತಿದ್ದರು.  ಮತ್ತು ಅವರು ಬೀಸಿದ ಬಲೆಗೆ ಬಿದ್ದು ಬಿಡುತ್ತಿದ್ದರು. ಅವರು ರಾಜಕೀಯದ ಈ ಮಾತನ್ನು ಮರೆತಿದ್ದರು –

ದಂಡೇನೋಪನತಂ  ಶತ್ರುಮನುಗೃಹ್ಣಾತಿ ಯೊ ನರಃ |

ಸ ಮೃತ್ಯುಮುಪಗೃಹ್ಣೀಯಾತ್ ಗರ್ಭಮಶ್ವತರೀ ಯಥಾ || ಮಹಾಭಾರತ ಆದಿಪರ್ವ ೧೪೨/೮೪

ಅರ್ಥಾತ್ ಸೆರೆ ಸಿಕ್ಕ ವೈರಿಯ ಮೇಲೆ ಯಾರು ದಯೆಯನ್ನು ತೋರಿಸುತ್ತಾರೆಯೋ  ಅವರು ಹೇಸರಗತ್ತೆಯ ಗರ್ಭದಂತೆ ಮರಣವನ್ನಪ್ಪುತ್ತಾರೆ.

ಯಾವ ತಪ್ಪನ್ನು ಸೆರೆ ಸಿಕ್ಕ ಘೋರಿ ಮಹಮ್ಮದನನ್ನು ಬಿಡುವುದರ ಮೂಲಕ ಪೃಥ್ವೀರಾಜನ ವಂಶಜರು  ಮಾಡಿದರೋ,  ಹಾಗೆಯೇ  ಅದೇ ಅವರ ವಿನಾಶಕ್ಕೆ ಕಾರಣವಾಯಿತೋ, ಅಂತಹುದೇ ತಪ್ಪನ್ನು ಚಿತ್ತೋಡದ ರಾಜನಾದ ಭೀಮಸಿಂಗನು  ಬಾದಶಹ ಅಲ್ಲಾವುದ್ದೀನ ಖಿಲ್ಜಿಯನ್ನು ಆ ಸಮಯದಲ್ಲಿ ಬಂಧಿಸದೆ ಇರುವುದರ ಮೂಲಕ ಮಾಡಿದ. ಆವಾಗ ಖಿಲ್ಜಿಯು  ಚಿತ್ತೋಡದ ಕೋಟೆಯಲ್ಲಿರುವ ರಾಣಿ ಪದ್ಮಿನಿಯನ್ನು ನೋಡಲು ಹೊರಟಿದ್ದ. ಒಬ್ಬ ಶತ್ರುವು  ಮಹಾರಾಣಿಯನ್ನು ಅಪಹರಿಸಲು ಕೋಟೆಯನ್ನು ನಾಶಗೊಳಿಸುತ್ತಿದ್ದರೆ ಅವನಿಗೆ ಅದೆಂಥಾ ದಯೆ ? ಇದಕ್ಕೆ ಬದಲಾಗಿ ಯಾವಾಗ ಅಲ್ಲಾವುದ್ದೀನನಿಗೆ ಅವಕಾಶ ಸಿಕ್ಕಿತೋ ಆಗ ಅವನು ದಯೆಯನ್ನು ತೋರಿಸಲಿಲ್ಲ. ಮತ್ತು ಅವನನ್ನು ತಲುಪಿಸಲು ಹೊರಟ ಭೀಮಸಿಂಹನನ್ನೇ ಬಂಧಿಸಿದ.

ಹ್ಹಾಂ ! ರಾಣಾನಿಗಿಂತ ಹೆಚ್ಚು ನೀತಿ ನಿಪುಣತೆ ರಾಣಿ ಪದ್ಮಿನಿಗೆ ಇತ್ತು. ಆಕೆ ೭೦೦ ಪಲ್ಲಕಿಗಳ ಒಳಗೆ ರಜಪೂತರನ್ನು ಕೂರಿಸಿ ಅಲ್ಲಾವುದ್ದೀನನ ಡೇರೆಯೊಳಗೆ ಕಳುಹಿಸಿ ಅಲ್ಲಿ ಬಡಿದಾಡಿಸಿ ತನ್ನ ಪತಿಯನ್ನು ಅಲ್ಲಾವುದ್ದೀನನಿಂದ  ಬಿಡಿಸಿ ತಂದಳು. ಆದರೆ ಆಕೆಯೂ ಕೋಪದಲ್ಲಿ ತಪ್ಪೊಂದನ್ನು ಎಸಗಿದಳು. ಅಲ್ಲಾವುದ್ದೀನನ ಡೇರೆಯಲ್ಲಿ ಒಂದೇ ಸಮನೆ  ಕತ್ತಿ ಹೊರಗೆಳೆದು “ರೇ ಕಾಮುಕ, ಮ್ಲೇಚ್ಛ ನೀನು ಯಾವಳನ್ನು ಬಯಸಿದ್ದೆಯೋ ಅವಳು ನಿನ್ನ ಮುಂದೆಯೇ  ನಿಂತಿದ್ದಾಳೆ. ಕ್ಷತ್ರಿಯ ಹೆಂಗಸು ಬರಿಗೈಯವನೊಂದಿಗೆ ಯುದ್ಧ ಮಾಡುವುದಿಲ್ಲ. ತಗೋ ಕತ್ತಿ!” ಎಂದು ಗರ್ಜಿಸಿದಳು. ಅಲ್ಲಾವುದ್ದೀನ್ ಅದರಿಂದ ಹೆದರಿ ಮೂರ್ಛೆ ಹೋಗಿ ಬಿದ್ದು ಬಿಟ್ಟ. ಪದ್ಮಿನಿ ಅವನ ಶಸ್ತ್ರವಿಲ್ಲದಿರುವಿಕೆಯನ್ನು ಹಾಗೂ ಮೂರ್ಛಾವಸ್ಥೆಯಲ್ಲಿರುವುದನ್ನು ತಿಳಿದು ಆತನನ್ನು ಅಲ್ಲೇ ಬಿಟ್ಟು ನಡೆದಳು. ಪದ್ಮಿನಿಯು ಮಾಡಿದ ಈ ತಪ್ಪು ಆಕೆಯ ಮತ್ತು ಚಿತ್ತೋಡದ ನಾಶಕ್ಕೆ ಕಾರಣವಾಯಿತು. ಶತ್ರುವಿನ ಮೇಲೆ ಅದೆಂಥಹ ದಯೆ ?  ಅವಳು ಅಲ್ಲೇ ಅಲ್ಲಾವುದ್ದೀನನನ್ನು ಮುಗಿಸಿಬಿಡಬೇಕಿತ್ತು. ಹಾಗೆ ಮಾಡಿದ್ದಿದ್ದರೆ ಮುಂದೆ ಭಾರತದ ಇತಿಹಾಸವೇ ಬದಲಾಗಿ ಬಿಡುತ್ತಿತ್ತು. ಮತ್ತು ಭಯಂಕರವಾದ ಚಿತ್ತೋಡದ ಚಿತೆ ಉರಿಯುತ್ತಿರಲಿಲ್ಲ.

Wednesday, May 11, 2022

ಯುದ್ಧನೀತಿ ಮತ್ತು ಅಹಿಂಸೆ (7. ಬಿಹಾರದ ಘಟನೆ)

 

 7. ಬಿಹಾರದ ಘಟನೆ

ಸ್ವಾಮೀ ಶ್ರದ್ಧಾನಂದರು  ಬಿಹಾರದಲ್ಲಿ ಶುದ್ಧಿ ಚಳವಳಿಯ ಸಂಬಂಧವಾಗಿ ಒಂದು ಸಲ ಭಾಷಣ ಮಾಡುತ್ತಾ ಹೇಳಿದ್ದರು –

“ಬಿಹಾರದಲ್ಲಿ ಕೆಲವರು ಈಗಲೂ ಸಹ ಆಗ್ರಾ ಮಥುರಾ ಮುಂತಾದ ಜಿಲ್ಲೆಗಳ ಮಲಕಾನ್ ರಂತೆ  ಅರ್ಧ ಮುಸಲ್ಮಾನರಾಗಿದ್ದಾರೆ. ಅವರು ಶುದ್ಧಿಯನ್ನು ಹೊಂದಿ ಹಿಂದುಗಳೊಂದಿಗೆ ಬೆರೆಯಲು ಸಿದ್ಧರಾಗಿದ್ದಾರೆ.”

ಆಗ ಅಲ್ಲಿಯ ಮುಸಲ್ಮಾನರು ಸ್ವಾಮೀಜಿಗಳ ಹತ್ತಿರ ಕೇಳಿದರು –

“ನಮ್ಮ ಪೂರ್ವಜರು ಮುಸಲ್ಮಾನರಾಗಿ ಹೇಗೆ ಮತಾಂತರ ಹೊಂದಿದರು ? “

ಶ್ರದ್ಧಾನಂದರು ಹೇಳಿದರು –

೧೩ ನೇ ಶತಮಾನದ ಆರಂಭದಲ್ಲಿ ಭಕ್ತಿಯಾರ್ ಖಿಲ್ಜಿ ಬಿಹಾರದ ಮೇಲೆ ದಾಳಿ ನಡೆಸಿದ. ಅಲ್ಲಿ ನಲಂದಾ ವಿಶ್ವವಿದ್ಯಾಲಯವನ್ನು ನಾಶಗೊಳಿಸಿ ಮುಂದುವರಿಯುತ್ತಿದ್ದಂತೆ ಅಲ್ಲಿಯ ರಾಜನೊಬ್ಬ  ಸೈನ್ಯವನ್ನು ಸೇರಿಸಿ ಅವನನ್ನು ಅಲ್ಲಿಯೇ ತಡೆಯಲು ಬಯಸಿದ. ಭಕ್ತಿಯಾರ್ ಖಿಲ್ಜಿಯ ಬಳಿ  ಸೈನ್ಯ ತುಂಬ ಕಡಿಮೆ ಇತ್ತು. ಆದ್ದರಿಂದ ಅವನು ಆರಂಭದಲ್ಲಿ ಗಾಬರಿಗೊಂಡ. ಬಳಿಕ  ಅವನಿಗೆ ಒಂದು ಉಪಾಯ ಹೊಳೆಯಿತು.  ಅವನ ಕೆಲವು ಗುಪ್ತಚರರು ಹಿಂದೂ ಸೇನೆಯಲ್ಲಿದ್ದ ಕೆಲವು ಧರ್ಮೋಪದೇಶಕರ ಬಳಿಗೆ ಹೋಗಿ ಹೇಳಿದರು –

“ಹಿಂದು ಸೈನಿಕರು ಯಾವ ಬಾವಿಯ ನೀರನ್ನು ಕುಡಿಯುತ್ತಿದ್ದರೋ ಅದರಲ್ಲಿ ಮುಸಲ್ಮಾನ್ ಸೈನಿಕರು ನಿನ್ನೆ ರಾತ್ರಿ ಗೋಮಾಂಸದ ಚೂರುಗಳನ್ನು ಹಾಕಿದ್ದಾರೆ”

ಇದರಿಂದ ಹಿಂದೂ ಸೇನೆಯಲ್ಲಿ ಗದ್ದಲವೇರ್ಪಟ್ಟಿತು. ಅವರೆಲ್ಲ “ಈಗ ನಮ್ಮ ಧರ್ಮ ನಾಶವಾಯಿತು” ಎಂದು ಆಡಿಕೊಳ್ಳತೊಡಗಿದರು. ಕೆಲವು ಬುದ್ಧಿವಂತ ಸೈನಿಕರು ಧರ್ಮೋಪದೇಶಕರ ಬಳಿಯಲ್ಲಿ ವಿನಯದಿಂದ ಹೇಳಿದರು –

“ಮೊದಲನೆಯದಾಗಿ ಇದಕ್ಕೆ ಯಾವುದೇ ಪುರಾವೆಯಿಲ್ಲ.  ಒಂದು ವೇಳೆ ಬಾವಿಯಲ್ಲಿ ಗೋಮಾಂಸವನ್ನು ಹಾಕಿದ್ದರೂ  ನಾವು ತಿಳಿಯದೆಯೇ ಆ ನೀರನ್ನು ಕುಡಿದಿದ್ದರಿಂದ  ಅದಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಸಿದ್ಧರಿದ್ದೇವೆ”

ಆದ್ರೆ ತಮ್ಮನ್ನೇ ತಾವು ಶ್ರೇಷ್ಠರೆಂದು ತಿಳಿದ ಕೆಲವು ಪಂಡಿತರು ಅವರ ಒಂದು ಮಾತನ್ನೂ ಸಹ ಕೇಳಲಿಲ್ಲ. ಮತ್ತೆ ಹೇಳಿದರು –

“ಒಂದು ಸಲ ಪತಿತನಾಗಿಬಿಟ್ಟರೆ ಪತಿತನೆಂದೇ ಅರ್ಥ”

ಇದರಿಂದ ವೀರ ಸೈನಿಕರೆಲ್ಲ ನಿರಾಶರಾದರು. ಈಗ ಹಿಂದೂ ಧರ್ಮ ದಲ್ಲಿ ಅವರಿಗೆ ಯಾವುದೇ ಸ್ಥಾನ ಉಳಿಯಲಿಲ್ಲ.  ಅವರಲ್ಲಿ ಕೆಲವರು ಧರ್ಮಭ್ರಷ್ಟರಾಗಿ ಜೀವಿಸುವುದು ಉಚಿತವಲ್ಲವೆಂದು  ತಿಳಿದು ಪ್ರಾಣಾರ್ಪಣೆಗೈದರು. ಇನ್ನು ಕೆಲವರು ತಮ್ಮ ತಮ್ಮ ಮನೆಗೆ ಮರಳಿದರು.  ಅವರದ್ದೇ ಸಂತಾನ ಈಗಲೂ ಸಹ ಅರ್ಧ ಮುಸಲ್ಮಾನರಂತೆ  ಬದುಕುತ್ತಿದೆ.  ಕೆಲವರು ಭಕ್ತಿಯಾರ್ ಖಿಲ್ಜಿಯ ಸೇನೆಯಲ್ಲಿ ಸೇರಿಕೊಂಡು ಬಿಟ್ಟರು. ಅವರು ಬಳಿಕ ಶುದ್ಧ ಮುಸಲ್ಮಾನರಂತಾಗಿ ಹಿಂದುಗಳದ್ದೇ ತಲೆ ಕಡಿಯಲಾರಂಭಿಸಿದರು.

 ಹಿಂದುಗಳೆ, ಈಗಲಾದರೂ ನೀವು ಕಣ್ಣೂ ತೆರೆದು ಈ ಎಲ್ಲ ಮಿಥ್ಯಾ ಭಾವನೆಯನ್ನು ಬಿಟ್ಟು  ನಮ್ಮ ಸೋದರರನ್ನು  ನಿಮ್ಮವರನ್ನಾಗಿಸಿಕೊಳ್ಳುವುದಿಲ್ಲವೇ ?

ಶುದ್ಧಿಯ ಬಾಗಿಲನ್ನು ತೆರೆಯಿರಿ || ಯಾವನೇ ಬರಲಿ ||

Monday, May 9, 2022

ಯುದ್ಧನೀತಿ ಮತ್ತು ಅಹಿಂಸೆ (6. ಪೃಥ್ವಿರಾಜ ಮತ್ತು ಜಯಚಂದ)

 

6. ಪೃಥ್ವಿರಾಜ ಮತ್ತು ಜಯಚಂದ

 

ಕ್ರಿ.ಶ. ೧೩ ನೇ ಶತಮಾನದಲ್ಲಿ ಹಿಂದುಸ್ಥಾನದಲ್ಲಿ  ೪ ರಜಪೂತ ವಂಶಗಳು ರಾಜ್ಯಭಾರವನ್ನು ನಡೆಸುತ್ತಿದ್ದವು.

1.     ದಿಲ್ಲಿ ಮತ್ತು ಅಜ್ಮೀರ್ ನಲ್ಲಿ ಚೌಹಾಣರು

2.     ಕನೋಜ್ ನಲ್ಲಿ ರಾಠೊಡರು

3.     ಗುಜರಾತ್ ನಲ್ಲಿ ಸೋಲಂಕಿಗಳು

4.     ಚಿತ್ತೋಡ್ ನಲ್ಲಿ ಸಿಸೋಡಿಯಾಗಳು

ಈ ನಾಲ್ಕು ವಂಶಸ್ಥರು ಪರಸ್ಪರ ಸಂಬಂಧಿಗಳಾಗಿದ್ದರೂ ಸಹ ಪರಸ್ಪರರಲ್ಲಿ ವೈರವಿತ್ತು.

 

೧. ಮೀಸೆ ಪುರಾಣ

ಗುಜರಾತ್ ನ ಕೆಲವು ಸೋಲಂಕಿ ರಜಪೂತರು ತಮ್ಮ ರಾಜನೊಂದಿಗೆ ಮುನಿಸಿಕೊಂಡು ಅಜ್ಮೀರ್ ಗೆ ಹೋದರು. ಅಲ್ಲಿ ಪೃಥ್ವೀರಾಜ ಚೌಹಾಣನು  ಅವರಿಗೆ ಆಶ್ರಯವನ್ನು ಕೊಟ್ಟ. ಒಂದು ದಿನ ರಾಜಸಭೆಯಲ್ಲಿ(ದರ್ಬಾರಿನಲ್ಲಿ) ಒಬ್ಬ ಸೋಲಂಕಿ ಸರದಾರನು ತನ್ನ ಮೀಸೆಯ ಮೇಲೆ ಕೈಯಾಡಿಸುತ್ತಾ ಗತ್ತನ್ನು ಮೆರೆದ. ಅದನ್ನು ನೋಡಿದ ಪೃಥ್ವೀರಾಜನ ಚಿಕ್ಕಪ್ಪನಾದ ಕಾನ್ಹಕವರನು  ಚೌಹಾಣನ ಮುಂದೆ ಯಾವನೇ ಒಬ್ಬನೂ ಸಹ ಮೀಸೆ ತಿರುವುವಂತಿಲ್ಲ ಎಂದು ಹೇಳುತ್ತಾ ಸೋಲಂಕಿ ಸರದಾರನ ತಲೆ ಕಡಿದು ಹಾಕಿದ. ಈ ಸುದ್ದಿಯನ್ನು ಕೇಳಿ ಗುಜರಾತ್ ನ ರಾಜನಾದ ಮೂಲರಾಜ ಸೋಲಂಕಿ ತನ್ನ ಸೋದರನ ಸಾವಿಗೆ  ಪ್ರತೀಕಾರವನ್ನೆಸಗಲು ಅಜ್ಮೀರ್ ನ ಮೇಲೆ ದಾಳಿ ಮಾಡಿ  ಸಾಮವತಿಯ ಯುದ್ಧದಲ್ಲಿ ಪೃಥ್ವೀರಾಜನ ತಂದೆಯಾದ  ಸೋಮೇಶ್ವರನ ತಲೆ ಕಡಿದು ಹಾಕಿದ. ಮೀಸೆಯ ಮೇಲೆ ಕೈಯಾಡಿಸಿದ್ದಕ್ಕಾಗಿ ಮೂರ್ಖತನದ ಈ ಘಟನೆ ನಡೆದು ಹೋಯಿತು ಮತ್ತು ಅದರಿಂದಾಗಿ ಎರಡು ರಾಜವಂಶಗಳ ಮಧ್ಯೆ ಯಾವತ್ತೂ ಜೋಡಿಸಲಾಗದ ಒಡಕು ಉಂಟಾಯಿತು. ಮುಂದೆ ಇದೇ ಪೃಥ್ವೀರಾಜನ ಸೋಲಿಗೆ ಕಾರಣವಾಯಿತು.

೨. ಪೃಥ್ವೀರಾಜನ ಪ್ರಮಾದ

ಗಜನಿ ಮಹಮ್ಮದನು ೧೭ ಬಾರಿ  ಭಾರತದ ಮೇಲೆ ದಾಳಿ ಮಾಡಿ  ಸತ್ತ ಬಳಿಕ ಗೋರ್ ನ ಬಾದಶಹ ಅಲ್ಲಾವುದ್ದೀನನು  ಮಹಮ್ಮದನ ರಾಜಧಾನಿಯಾದ ಗಜನಿಯ ಮೇಲೆ ದಾಳಿ ಮಾಡಿ ಅದನ್ನೂ ಸರ್ವನಾಶ ಮಾಡಿಬಿಟ್ಟ. ಗಜನಿ ಮಹಮ್ಮದನ ಎಲುಬುಗಳನ್ನುಆತನ ಗೋರಿಯಿಂದ ಹೊರಗೆ ತೆಗೆಸಿ  ನಾಯಿಗಳಿಗೆ ಎಸೆದ. ಗಜನಿಯ ಹಾಕಿಮ್(ರಾಜಾಧಿಕಾರಿ)  ಮೀರ್ ಹಸನ್  ಹೇಗೋ ಪ್ರಾಣ ಉಳಿಸಿಕೊಂಡು ಹಿಂದುಸ್ಥಾನಕ್ಕೆ ಓಡಿ ಬಂದು ಪೃಥ್ವೀರಾಜನ ರಕ್ಷಣೆ ಪಡೆದ.. ಪೃಥ್ವೀರಾಜ ಆತನಿಗೆ ಆಶ್ರಯವನ್ನು ಕೊಟ್ಟ. ಶಹಬ್ಬಾಶ್ !!! ಹಿಂದುಗಳ ಔದಾರ್ಯಕ್ಕೆ ಮಿತಿಯೇ ಇಲ್ಲ.

ಯಾವ ದುಷ್ಟ ಗಜನಿ ಮೊಹಮ್ಮದ್  ಇಲ್ಲಿ ಬಂದು ಇಲ್ಲಿನ ದೇವಾಲಯಗಳನ್ನು ಪುಡಿಗೈದು ಸಾವಿರಾರು ಹಿಂದುಗಳನ್ನು ಗುಲಾಮರನ್ನಾಗಿ ಮಾಡಿ ಗಜನಿಯ ಮಾರುಕಟ್ಟೆಗಳಲ್ಲಿ ೨,೩ ಪೈಸೆಗಳಿಗೆ ಮಾರಿದ್ದನೋ, ಯಾವ ಮೊಹಮ್ಮದ್ ಭಾರತದಲ್ಲಿ  ಲಕ್ಷಾಂತರ  ಅಮಾಯಕ ಹಿಂದುಗಳನ್ನು ಕಡಿದು ಲೂಟಿ ಮಾಡಿ  ರಕ್ತದ ಹೊಳೆಯನ್ನೇ  ಹರಿಸಿದ್ದನೋ ಅವನದ್ದೇ ವಂಶಜನಿಗೆ ಭಾರತದ ಒಬ್ಬ ಹಿಂದು ರಾಜ (ಪೃಥ್ವೀರಾಜ ಚೌಹಾಣ) ರಕ್ಷಣೆ ನೀಡುತ್ತಿದ್ದಾನೆ. ಮುಂದೆ ಇದೇ ಕಾರಣದಿಂದ ಮತ್ತೆ ಮತ್ತೆ ಸರ್ವನಾಶದ ಹಾದಿಗೆ ಬಂತು ಭಾರತ.

ಅಲ್ಲಾವುದ್ದೀನನು ಮೀರ್ ಹಸನ್ ನನ್ನು  ಬಂಧಿಸಲು ತನ್ನ ತಮ್ಮನಾದ ಶಹಾಬುದ್ದೀನ್ ಗೋರಿಯ ಜೊತೆಗೆ  ಒಂದು ದೊಡ್ಡ ಸೈನ್ಯವನ್ನು  ಹಿಂದುಸ್ಥಾನಕ್ಕೆ ಕಳುಹಿಸಿದ. ಇಲ್ಲಿಂದಲೇ ಪೃಥ್ವೀರಾಜ ಮತ್ತು ಮಹಮ್ಮದ್ ಗೋರಿಯ ನಡುವೆ ಶತ್ರುತ್ವ ಆರಂಭವಾಗುತ್ತದೆ. ಮಹಮ್ಮದ್ ಘೋರಿ ಪೃಥ್ವೀರಾಜನ ಮೇಲೆ  ಒಂದು ಬಾರಿಯಲ್ಲ, ನಿರಂತರ ಏಳು ಬಾರಿ  ದಾಳಿ ನಡೆಸಿ  ಪೆಟ್ಟು ತಿಂದು ಹೋಗಿದ್ದ. ಪೃಥ್ವೀರಾಜ ಚೌಹಾಣನು ಅನೇಕ ಬಾರಿ ಘೋರಿ ಮಹಮ್ಮದ್ ನನ್ನು ಬಂಧಿಸಿ, ಬಳಿಕ ಕ್ಷಮೆ ಯಾಚಿಸಿದ ಮೇಲೆ ಬಿಟ್ಟು ಬಿಡುತ್ತಿದ್ದ. ಶತ್ರುವನ್ನು ಈ ರೀತಿಯಾಗಿ ಬಿಟ್ಟು ಬಿಡುವುದು ಯುದ್ಧ ನೀತಿಗೆ ಸರ್ವಥಾ ವಿರುದ್ಧವಾಗಿದೆ. ಆದರೆ ಪೃಥ್ವೀರಾಜನ ಔದಾರ್ಯಕ್ಕೆ  ಏನು ಹೇಳಬೇಕು ?  ಈ ರೀರಿಯ ಔದಾರ್ಯ ಅವನ ಮತ್ತು ಸಮಸ್ತ ಹಿಂದೂ ಧರ್ಮದ ವಿನಾಶಕ್ಕೆ ಕಾರಣವಾಯಿತು.

೩. ಜಯಚಂದನ ದೇಶದ್ರೋಹ

ಕನೋಜದ ರಾಜನಾದ ಜಯಚಂದ ರಾಠೋಡ ನ ಮಗಳಾದ ಸಂಯೋಗಿತಾ ಜಯಚಂದನ ಇಚ್ಛೆಗೆ ವಿರುದ್ಧವಾಗಿ ಪೃಥ್ವೀರಾಜನನ್ನು ವರಿಸಿದಳು. ಹಾಗಾಗಿ ಜಯಚಂದನು ಪೃಥ್ವೀರಾಜನನ್ನು  ದ್ವೇಷಿಸುತ್ತಿದ್ದ.  ಜಯಚಂದ ಪೃಥ್ವೀರಾಜನಿಗೆ  ಪ್ರತೀಕಾರವೆಸಗಲು ಅವಕಾಶವನ್ನು ಹುಡುಕುತ್ತಿದ್ದ. ಹಾಗಾಗಿಯೇ ಘೋರಿ ಮೊಹಮ್ಮದ್ ಕೊನೆಯ ಬಾರಿ ಪೂರ್ತಿ ಸೋಲುಂಡು ಗಜನಿಯಲ್ಲಿ ಹೆದರಿ ಕುಳಿತಿದ್ದಾಗ ಈ ದೇಶದ್ರೊಹಿ ಜಯಚಂದ್ ಅವನಿಗೆ ಒಂದು ಪತ್ರ ಬರೆದು ಭಾರತದ ಮೇಲೆ ಮತ್ತೊಂದು ಬಾರಿ ಆಕ್ರಮಣವನ್ನು ಮಾಡಲು  ಅಮಂತ್ರಿಸಿದ ಮತ್ತು ಅವನಿಗೆ ಸೈನಿಕ ಸಹಾಯವನ್ನು ಕೂಡ ಮಾಡುವುದಾಗಿ ಮಾತು ಕೊಟ್ಟ. ಇದರಿಂದ ಉತ್ಸಾಹಗೊಂಡ ಘೋರಿ ಮಹಮ್ಮದ್  ಪುನಃ ಒಂದು ಬಾರಿ ಪೃಥ್ವೀರಾಜನ ಮೇಲೆ ದಾಳಿ ನಡೆಸಿದ. ಜಯಚಂದ್ ತನ್ನ ೫೦ ಸಾವಿರ ಸೈನಿಕರೊಂದಿಗೆ  ಘೋರಿ ಮಹಮ್ಮದ್ ನ ಸಹಾಯಕ್ಕಾಗಿ ಹೊರಟ. ಜಯಚಂದನ ಮಗಳು ಸಂಯೋಗಿತಾ ಗೌಪ್ಯವಾಗಿ ತನ್ನ ತಂದೆಯ ಡೇರೆಯನ್ನು  ಹೊಕ್ಕಿ “ನೀವು ನನ್ನ ಮತ್ತು ನನ್ನ ಪತಿಯ ವ್ಯಕ್ತಿಗತ ದ್ವೇಷದಿಂದ ಒಬ್ಬ ಪರದೇಶಿಗೆ  ಸಹಾಯ ಮಾಡಬೇಡಿ. ನೀವು ನನಗೆ ಯಾವ ಶಿಕ್ಷೆಯನ್ನು ಬೇಕಾದರೂ ಕೊಡಿ. ಆದರೆ ನಮ್ಮ ದೇಶ ಮತ್ತು ಹಿಂದೂ ಧರ್ಮದ ನಾಶವನ್ನು ಯಾವತ್ತೂ ಉಂಟುಮಾಡಬೇಡಿ” ಎಂಬುದಾಗಿ ಪ್ರಾರ್ಥಿಸಿದಳು. ಆದರೆ ದೇಶದ್ರೋಹಿಯಾದ  ಜಯಚಂದನು ಅವಳ ಮಾತನ್ನು ಕೇಳಲಿಲ್ಲ. ಘೋರಿ ಮಹಮ್ಮದನಿಗೆ ಸಹಾಯ ಮಾಡುವುದನ್ನು ಮುಂದುವರಿಸಿದ. ಅತ್ತ ಮಹಮ್ಮದ್ ಘೋರಿಯು  ಪೃಥ್ವೀರಾಜನೊಂದಿಗೆ ಸಂಧಾನದ ಪ್ರಸ್ತಾವವನ್ನು ಮುಂದಿಟ್ಟ. ಆ ಪ್ರಸ್ತಾಪ(ವ) ಮೋಸದ್ದಾಗಿತ್ತು. !!!  ಯಾವಾಗ ಪೃಥ್ವೀರಾಜನ ಸೈನಿಕರು ಸಂಧಾನವೇರ್ಪಡುವ ಖುಷಿಯಲ್ಲಿ ಮೈಮರೆತಿದ್ದರೋ ಆಗ ಘೋರಿಯ ಸೈನ್ಯ  ಒಂದೇ ಸಮನೆ ಅವರ ಮೇಲೆ ದಾಳಿ ಮಾಡಲಾರಂಭಿಸಿತು. ಹಿಂದಿನಿಂದ ಪೃಥ್ವೀರಾಜನ ಮಹಾಮಂತ್ರಿಯ ಮಗ  ವಿಜಯಸಿಂಹ  ತನ್ನ ಒಂದು ಲಕ್ಷ ಸೈನಿಕರೊಂದಿಗೆ  ಮೋಸದಿಂದ  ಪೃಥ್ವೀರಾಜನ ಮೇಲೆಯೇ  ದಾಳಿ ನಡೆಸಿದ. ಎಕೆಂದರೆ  ಅವನಿಗೆ ದೆಹಲಿಯ ರಾಜನನ್ನಾಗಿ ಮಾಡುವ ಆಸೆ ಹುಟ್ಟಿಸಲಾಗಿತ್ತು.  ಹಾಗಾಗಿ ಆತ ಘೋರಿ ಮಹಮ್ಮದನ  ಪರವಾಗಿ ಪೃಥ್ವೀರಾಜನ ಮೇಲೆಯೇ  ದಾಳಿ ನಡೆಸಿದ. ಅತ್ತ ಜಯಚಂದನ  ೫೦ ಸಾವಿರ ಸೈನಿಕರೂ ಕೂಡ  ಪೃಥ್ವೀರಾಜನ ಮೇಲೆ ಆಕ್ರಮಣ  ನಡೆಸಿದರು.  ಪೃಥ್ವೀರಾಜ ಬಹಳ  ವೀರಾವೇಶದಿಂದ ಬಡಿದಾಡಿದ. ಆದರೇನು ಮಾಡುವುದು ?  ಎದುರುಗಡೆ ಶತ್ರು ನಿಂತಿದ್ದಾನೆ. ಹಿಂಬದಿಯಲ್ಲಿ ಅವನ ಅನ್ನ ತಿಂದು ಕೇಡು ಬಗೆವ  ವಿಶ್ವಾಸದ್ರೋಹಿ ಸೇನಾಪತಿಯೇ  ಬೆನ್ನಿಗೆ ಚೂರಿಯಿಂದ ಇರಿಯುತ್ತಿದ್ದಾನೆ. ಕೊನೆಯದಾಗಿ ಸೋಲುಣ್ಣುವುದು ಅನಿವಾರ್ಯವಾಗಿತ್ತು.

ಪೃಥ್ವೀರಾಜನನ್ನು ಯುದ್ಧದಲ್ಲಿ ಸೆರೆ ಹಿಡಿದು  ಘೋರಿ ಮಹಮ್ಮದನ ಬಳಿಗೆ ತರಲಾಯಿತು. ಆಗ ಆತ ಘೋರಿಗೆ ಹೇಳ್ತಾನೆ

ನಾನು ನಿನ್ನನ್ನು ಅನೇಕ ಬಾರಿ ಸೆರೆ ಹಿಡಿದಿದ್ದರೂ ಔದಾರ್ಯದಿಂದ ಬಿಡುಗಡೆಗೊಳಿಸಿದ್ದೆ. ಈಗ ನೀನು ನನ್ನನ್ನು  ಒಂದು ಬಾರಿ ಬಿಟ್ಟು ಬಿಡುವ ಸಜ್ಜನಿಕೆಯನ್ನು ತೋರಿಸು

ಆದರೆ ಘೋರಿ ಹೇಳ್ತಾನೆ

ನಾನು ನಿನ್ನಂತಹ ಬಲಿಷ್ಠ ಶತ್ರುವನ್ನು ಬಿಟ್ಟುಬಿಡಲು ಹಿಂದುಗಳಂತೆ ಮೂರ್ಖನಲ್ಲ. ನೀನು ಪ್ರಾಣ ಉಳಿಸಿಕೊಳ್ಳಲು ಬಯಸುವೆಯಾದರೆ ಮೊದಲು ಮುಸಲ್ಮಾನನಾಗು

ವೀರ ಪೃಥ್ವೀರಾಜ ಹಿಂದೆ ಘೋರಿ ಮಹಮ್ಮದನನ್ನು ಅನೇಕ ಬಾರಿ  ಸ್ವತಂತ್ರಗೊಳಿಸಿದ್ದರೂ ಸಹ ಈ ಬಾರಿ ಘೋರಿಯ ಮಾತನ್ನು ಕೇಳಿ  ತನ್ನ ಮೂರ್ಖತನದ ಔದಾರ್ಯಕ್ಕಾಗಿ ಅದೆಷ್ಟು ಕಣ್ಣೀರು ಹಾಕಿದ್ದನೋ ಗೊತ್ತಿಲ್ಲ. ಆತನ ಆ ಅನುಚಿತ ಔದಾರ್ಯ  ಹಾಗೂ ಮೂರ್ಖತನದಿಂದ ಕೂಡಿದ ದಯಾಭಾವನೆಯೇ  ಅವನನ್ನು ಹಾಗೂ ಸಮಸ್ತ ಹಿಂದೂ ಸಾಮ್ರಾಜ್ಯವನ್ನು ನಾಶಪಡಿಸಿತು. ಹಿಂದೂ ಧರ್ಮಾವಲಂಬಿಗಳಾದ  ಇಂತಹ ಮಹಾನ್ ಸಾಮ್ರಾಟರ ಇಂತಹ ದೊಡ್ಡ ದೊಡ್ಡ ತಪ್ಪುಗಳು  ಹಿಂದೂ ಧರ್ಮವನ್ನು ಈ ದುರ್ದೆಸೆಯ ಕೊಳ್ಳಕ್ಕೆ ಕೆಡವಿದವು.

ಮತ್ತೆ ಆ ದೇಶದ್ರೋಹಿ, ಧರ್ಮದ್ರೋಹಿ, ಧರ್ಮದ್ವೇಷಿ, ವಿಶ್ವಾಸಘಾತಕ ವಿಜಯಸಿಂಹ ಹಾಗೂ ಜಯಚಂದರ ವಿಷಯದಲ್ಲಿ ಏನು ಹೇಳಬೇಕು ?  ಅವರಿಬ್ಬರು ತಮ್ಮ ತಮ್ಮ ಹೆಸರಿಗೆ ಕಳಂಕವನ್ನುಂಟುಮಾಡಿಕೊಂಡರು.

ದುಷ್ಟ ವಿಜಯಸಿಂಹ, ನಿನ್ನ ಸ್ವಾಮಿಗೆ ವಿಶ್ವಾಸದ್ರೋಹವನ್ನು ಬಗೆದು, ನಿನಗೇನು ದಿಲ್ಲಿಯ ಸಿಂಹಾಸನ ಸಿಕ್ಕಿತೇ ?

ದೇಶದ್ರೋಹಿ ಜಯಚಂದ್, ಪರಾಕ್ರಮವೇ ಮೈವೆತ್ತಂತಿದ್ದ ಪೃಥ್ವೀರಾಜನಿಗೆ ಸೋಲುಣಿಸಿ ತನ್ನ ದೇಶವನ್ನು ವಿದೇಶೀಯರ ಕೈಗೆ ಸಮರ್ಪಿಸಿ ನಿನಗೇನು  ಸಿಕ್ಕಿತು ?  ಏನೂ ಇಲ್ಲ.

ಮಾರನೇ ವರ್ಷ ಅದೇ ಘೋರಿ ಮಹಮ್ಮದ್ ಜಯಚಂದನ ಮೇಲೆ ದಾಳಿ ನಡೆಸಿ ಕನೋಜವನ್ನು ಹೊಸಕಿ ಹಾಕಿದ. ಜಯಚಂದನು ಒಂದು ಪಿಪ್ಪಲದ ಮರವನ್ನು ಹತ್ತಿ ಗಂಗಾ ನದಿಗೆ ಹಾರಿ ಪ್ರಾಣ ಕಳೆದುಕೊಂಡು ಬಿಟ್ಟ. ಜಯಚಂದನು ತನ್ನ ಸೈನ್ಯದಲ್ಲಿ೪೦ ಸಾವಿರಕ್ಕಿಂತಲೂ ಹೆಚ್ಚು ಅಫಘಾನ್ ಸೈನಿಕರನ್ನು ಸೇರಿಸಿಕೊಂಡಿದ್ದ.  ಅವರೆಲ್ಲರೂ ಕನೋಜದ ಮೇಲೆ ದಾಳಿಯಾದಾಗ  ಘೋರಿ ಮಹಮ್ಮದನ ಜೊತೆ ಸೇರಿಕೊಂಡು ಬಿಟ್ಟರು. ಹಾಗೆಯೇ ಜಯಚಂದನ ಸೇನೆಯನ್ನೇ ಮುಗಿಸಲಾರಂಭಿಸಿದರು. ಹೀಗೆ ಜಯಚಂದನ ವಿಶ್ವಾಸದ್ರೋಹಕ್ಕೆ  ವಿಶ್ವಾಸದ್ರೋಹವೇ ಫಲರೂಪದಲ್ಲಿ ಸಿಕ್ಕಿತು.


Sunday, May 8, 2022

ಯುದ್ಧನೀತಿ ಮತ್ತು ಅಹಿಂಸೆ (ಧರ್ಮಯುದ್ಧ ಮತ್ತು ಕೂಟಯುದ್ಧ)

 

ಧರ್ಮಯುದ್ಧ ಮತ್ತು ಕೂಟಯುದ್ಧ

विशिष्टो देशकालाभ्यां भिन्नारिप्रकृतिर्बली ।

कुर्यात् प्रकाशयुद्धं च कूटयुद्धं विपर्यये ॥ (कामन्दकीयनीतिः १८/५४)

ದೇಶಕಾಲವು ಅನುಕೂಲವಾಗಿದ್ದರೆ  ಶತ್ರುರಾಜನ ಪ್ರಜೆಗಳು  ಅವನಿಗೆ ವಿರುದ್ಧವಾಗಿದ್ದರೆ ಆಗ ಬಲಶಾಲಿಯಾದವನು ನೇರಯುದ್ಧವನ್ನು ಮಾಡಬೇಕು. ಅದಕ್ಕೆ ವಿಪರೀತವಾಗಿದ್ದಲ್ಲಿ ಕೂಟಯುದ್ಧ ಮಾಡಬೇಕು.

ಇಲ್ಲಿ ನೇರಯುದ್ಧ(Open War) ಹಾಗೂ ಕೂಟಯುದ್ಧದ (Diplomatic War) ವಿಚಾರವಾಗಿ ಹೇಳಲಾಗಿದೆ. ಕಾಮಂದಕೀಯನೀತಿಯಲ್ಲಿ ಇಂಥ ಕೂಟಯುದ್ಧದ  ವಿಸ್ತೃತವಾದ ವಿವರಣೆಯನ್ನು ಮಾಡಲಾಗಿದೆ/ಕೊಡಲಾಗಿದೆ. ಅವುಗಳಲ್ಲಿ ಕೆಲವು ಶ್ಲೋಕಗಳ ಅರ್ಥವನ್ನು ನಾವಿಲ್ಲಿ ಕೊಡುತ್ತಿದ್ದೇವೆ.

ಶತ್ರುವಿನ ಮುಂದೆ  ಕಾಣಿಸಿಕೊಂಡು ಅವನ ಗಮನವೆಲ್ಲ ನಮ್ಮ ಮೇಲಿದ್ದಾಗ ಯಾವನಾದರೂ ಬಲಶಾಲಿಯಾದ ವೀರನ ಮುಖಾಂತರ ಹಿಂದಿನಿಂದ  ಹೊಡೆದು ಸಾಯಿಸಬೇಕು.

ಹಿಂದಿನಿಂದ ಗದ್ದಲವೆಬ್ಬಿಸುತ್ತ ನಡೆಯಬೇಕು. ಪೂರ್ವದ ಕಡೆಯಿಂದ/ಮುಂದಿನಿಂದ ಬಲವಾದ ಪ್ರಹಾರವನ್ನು ಕೊಡಬೇಕು. ಇದನ್ನು ಎರಡೂ ಕಡೆಯಿಂದ ಗಾಬರಿಗೊಳಿಸಿ ಹೊಡೆಯುವ ಕೂಟಯುದ್ಧವೆಂದು ಕರೆಯಲಾಗಿದೆ.

ಮುಂದೆ ವಿಷಮಪ್ರದೇಶವಿದ್ದಲ್ಲಿ(ಡೆಂಜರಸ್ ಜಾಗವಿದ್ದಲ್ಲಿ) ವೇಗವಾಗಿ ಶತ್ರುವಿಗೆ ಹಿಂದಿನಿಂದ ಹೊಡೆಯಬೇಕು. ನನಗೆ ಗೆಲುವುಂಟಾಯಿತು ಎಂದು ನಂಬಿದ ಶತ್ರುವನ್ನು ಆಶ್ರಯಹೀನನನ್ನಾಗಿ ಮಾಡಬೇಕು.

ಶಿಬಿರದಲ್ಲಿ ಪಟ್ಟಣದಲ್ಲಿ ಗ್ರಾಮದಲ್ಲಿ ಅಥವಾ ಅಂಥಹುದೇ ಇನ್ನಿತರ ಕಡೆ ಇರುವ ಶತ್ರುಸೇನೆಯನ್ನು ಪ್ರಲೊಭನೆಯಿಂದ ತಾನು ಸಾವಧಾನದಿಂದಿದ್ದುಕೊಂಡು ನಾಶಗೊಳಿಸಬೇಕು.

ತನ್ನ ಸಂಪೂರ್ಣ ಸೇನೆಯನ್ನು ಒಂದು ಸಣ್ಣ ತುಕಡಿಯಿಂದ ಕಾಣಿಸದಂತೆ ಮಾಡಿ ಶತ್ರು ಆ ಸಣ್ಣ ತುಕಡಿಯ ಮೇಲೆ ದಾಳಿ ಮಾಡಿದಾಗ ತತ್ಕ್ಷಣ ಸಿಂಹದಂತೆ ಎರಗಿ ಶತ್ರುವನ್ನು ನಾಶಗೊಳಿಸಬೇಕು.

नियतमिति निहन्यात् कूटयुद्धॆषु शत्रुः ।

नहि निरयति धर्मच्छद्मना शत्रुनाशः ॥

अचकितमिव सुप्तं पाण्डवानामनीकम् ।

निशि सुनिशितशत्रो द्रोणसूनुर्जघान ॥ (कामन्दकीयनीतिः १८/३९)

 

ಈ ರೀತಿಯಾಗಿ ಕೂಟಯುದ್ಧದಿಂದ ಶತ್ರುವಿನ ವಧೆಯನ್ನು ಅನಿವಾರ್ಯವಾಗಿ ಮಾಡಬೇಕು. ಈ ರೀತಿಯಾಗಿ ಶತ್ರುನಾಶದಿಂದ ಅಧರ್ಮ ಅಥವಾ ನರಕವುಂಟಾಗುವುದಿಲ್ಲ. ನಿಶ್ಚಿಂತೆಯಿಂದ ನಿದ್ರೆ ಮಾಡುತ್ತಿದ್ದ  ಪಾಂಡವರ ಸೈನ್ಯವನ್ನು ಶಸ್ತ್ರ ಹಿಡಿದು ಅಶ್ವತ್ಥಾಮ ರಾತ್ರಿಯಲ್ಲಿ ನಾಶ ಮಾಡಿದ.

ಮೇಲೆ ಹೇಳಿದ ಕಾಮಂದಕೀಯನೀತಿಯ ಶ್ಲೋಕಗಳಿಂದ, ಅದರ ಆದೇಶಗಳಿಂದ ನಮ್ಮ ನೀತಿಕಾರರು ಶತ್ರುವನ್ನು ಪರಾಜಯಗೊಳಿಸಲು ಕೂಟಯುದ್ಧವನ್ನು ತಪ್ಪೆಂದು ಭಾವಿಸುತ್ತಿರಲಿಲ್ಲ. ಮತ್ತು ಸ್ಪಷ್ಟಶಬ್ದಗಳಿಂದ ಯಾವುದೇ ರೀತಿಯ  ಕೂಟಯುದ್ಧದಿಂದಲಾದರೂ  ಶತ್ರುವನ್ನು ಸೋಲಿಸಬೇಕು ಎಂಬುದಾಗಿ ಆದೇಶಿಸುತ್ತಿದ್ದರು  ಎಂಬುದಾಗಿ ತಿಳಿಯುತ್ತದೆ. ಭಗವಾನ್ ಶ್ರೀಕೃಷ್ಣನೂ ಸಹ ಕಾಲಕಾಲಕ್ಕೆ ಇದೇ ಕೂಟಯುದ್ಧದ  ಆಶ್ರಯವನ್ನು ಪಡೆದಿದ್ದ ಎಂಬುದರ ಉದಾಹರಣೆಗಳನ್ನು ನಾವು ಹಿಂದೆ ಕೊಟ್ಟಿದ್ದೇವೆ.

ಧರ್ಮಯುದ್ಧವನ್ನು ಧರ್ಮಾತ್ಮನಾದ ಶತ್ರುವಿನ ಜೊತೆಗೆ ಮಾತ್ರ ಮಾಡಬೇಕು. ಅಂದರೆ ಮೋಸದ ಕುಟಿಲ ಕೂಟಯುದ್ಧವನ್ನು ಮಾಡದ ಶತ್ರುವಿನ ಜೊತೆಗೆ  ಧರ್ಮಯುದ್ಧವನ್ನು ಮಾಡಬೇಕು. ಅವನ ಜೊತೆ ಕೂಟಯುದ್ಧ ಮಾಡುವುದರಿಂದ ಪಾಪ ಬರಬಹುದು.

ಆದರೆ ಶತ್ರು ದುಷ್ಟನಾಗಿದ್ದಲ್ಲಿ ಧರ್ಮಾಧರ್ಮವಿವೇಕಹೀನನಾಗಿದ್ದಲ್ಲಿ ಅತ್ಯಾಚಾರಿ, ಅಧರ್ಮಿ, ಕಪಟಿಯಾಗಿದ್ದಲ್ಲಿ ಅಂತಹ ಶತ್ರುವನ್ನು ಬಿಟ್ಟುಬಿಡುವುದೇ ಬಹು ದೊಡ್ಡ ಪಾಪವಾಗುತ್ತದೆ. ಅಂಥವನ ಜೊತೆಗೆ  ಅನಿವಾರ್ಯವಾಗಿ ಕೂಟಯುದ್ಧವನ್ನು ಮಾಡಬೇಕು. ಶಾಸ್ತ್ರವೂ ಸಹ ಇದನ್ನೇ ಹೇಳಿ ಮುಗಿಸುತ್ತದೆ.

“इत्येवं कूटयुद्धेन हन्याच्छ्त्रुं लघूत्थितम्”

ಈ ರೀತಿಯಾಗಿ ಕೂಟಯುದ್ಧದಿಂದ ಶತ್ರುವನ್ನು ಅವಶ್ಯವಾಗಿ ಕೊಂದು ಮುಗಿಸಬೇಕು.

ನಮ್ಮ ದೇಶದ ರಾಜರುಗಳು, ವೀರ ರಜಪೂತರು ಒಂದು ವೇಳೆ ದೊಡ್ಡ ತಪ್ಪನ್ನು ಮಾಡಿದ್ದೇ ಹೌದಾದರೆ ಅದು ಧರ್ಮದ ಅರ್ಥವನ್ನು ತಪ್ಪಾಗಿ ತಿಳಿದದ್ದು. ಶರಣಾಗತನಾದವನ ರಕ್ಷಣೆಯನ್ನು ಮಾಡುವುದು, ಪಲಾಯನಗೈಯುತ್ತಿರುವ ಶತ್ರುವಿನ ಮೇಲೆ ಶಸ್ತ್ರವನ್ನು ಪ್ರಯೊಗಿಸದಿರುವುವುದು,  ನಿಶ್ಯಸ್ತ್ರ ಹಾಗು ಕ್ಷಮೆ ಕೇಳುತ್ತಿರುವ ಶತ್ರುವಿನ ಜೊತೆಗೆ  ಯುದ್ಧ ಮಾಡದಿರುವುದು, ಯುದ್ಧದಲ್ಲಿ ಯಾವುದೇ ಮೋಸ ವಂಚನೆ ಮಾಡದಿರುವುದು, ಜೀವವಿರುವ ತನಕ ಧರ್ಮಯುದ್ಧವನ್ನೇ ಮಾಡುತ್ತಿರುವುದು ಇತ್ಯಾದಿಗಳನ್ನೇ ನಮ್ಮ ವೀರರು ಬಹು ದೊಡ್ಡ ಕ್ಷಾತ್ರ ಧರ್ಮವೆಂದು ತಿಳಿದಿದ್ದರು/ಭಾವಿಸಿದ್ದರು. ಪರಿಣಾಮವಾಗಿ ಮಹಾನ್ ವೀರರಾಗಿದ್ದರೂ ಕೂಡ ಶೌರ್ಯ ಸಾಹಸ  ಹಾಗು ಬಲಿದಾನಗಳಿಗೆ ಅವರಿಗೆ ಜಗತ್ತಿನಲ್ಲಿ ಯಾರೂ ಸಾಟಿಯಿಲ್ಲದಿದ್ದರೂ ಸಹ,  ಅವರು ತಮ್ಮ ರುಜುಮಾರ್ಗವನ್ನೂ ಬಿಡದೆ, ಶತ್ರುವಿನೊಂದಿಗೆ ಕೂಟಯುದ್ಧವನ್ನೂ ಮಾಡದೆ ಇದ್ದುದರಿಂದ ಸದಾ ಕಾಲಕ್ಕೂ ಪರಾಜಿತರಾಗಿ ಬಿಟ್ಟರು. ಇದಕ್ಕೆ ಸಂಬಂಧಿಸಿದಂತೆ ಕವಿ ಪ್ರಕಾಶ್ಚಂದ್ರರು ಬರೆಯುತ್ತಾರೆ –

पानी भरे नाव में उचित है उलीच दॆना,

लग जाय आग तो बुझाना ही उचित है ॥

विविध प्रकार उपचार करके प्रकाश

रोग को शरीर से हठाना ही उचित है ॥

आती हों अनेक आपदायें जहां

 उस ठौर से तो टल जाना  ही उचित हैं ॥

बल से कि छल से  या किसी अटकल से भी,

शत्रु को तो सर्वदा मिठाना ही उचित है ॥

Saturday, May 7, 2022

ಯುದ್ಧನೀತಿ ಮತ್ತು ಅಹಿಂಸೆ(ಆಡಳಿತ ಮತ್ತು ದಂಡನೆ)

 

ಆಡಳಿತ ಮತ್ತು ದಂಡನೆ

ನಾಲ್ಕು ವರ್ಣಗಳಲ್ಲಿ ನಮ್ಮ ಹಿಂದೂ ಸಮಾಜವನ್ನು ಒಗ್ಗೂಡಿಸಲಾಗಿದೆ. ಅವುಗಳಲ್ಲಿ ಕ್ಷತ್ರಿಯರು ಶಕ್ತಿ ಹಾಗು ಸಾಮರ್ಥ್ಯಕ್ಕೆ ಪ್ರತೀಕ. ನಮ್ಮ ಶರೀರದಲ್ಲಿ ಮಿದುಳು ಹೇಗೆ ಜ್ಞಾನಭಂಡಾರವೋ  ಹಾಗೆ ಭುಜಗಳು ಶಕ್ತಿ ಹಾಗೂ ರಕ್ಷಣೆಯ ಪ್ರತೀಕ.  ಆದ್ದರಿಂದ ಕ್ಷತ್ರಿಯರು ಭುಜಬಲದಿಂದ ಸಮಾಜದ ರಕ್ಷಣೆಯನ್ನು ಮಾಡುವವರಾಗಬೇಕು. ಅವರು ಶಕ್ತಿ ಹಾಗೂ ಸಾಮರ್ಥ್ಯಗಳ ಭಂಡಾರವಾಗಬೇಕು. ಧರ್ಮ ಹಾಗೂ ದೇಶದ  ರಕ್ಷಣೆಯ ಭಾರ ಅವರ ಹೆಗಲ ಮೇಲಿರುತ್ತದೆ. ಆದರೆ ರಾಷ್ಟ್ರದ ರಕ್ಷಣೆಯನ್ನು ಅವರು ಯಾವ ರೀತಿಯಾಗಿ ಮಾಡಬಲ್ಲರು ? ಅವರ ಬಹುದೊಡ್ಡ ಪ್ರತಿನಿಧಿ ಹಾಗೂ ಸಮಸ್ತ ರಾಷ್ಟ್ರದ ಗೌರವಸ್ವರೂಪನಾದ ರಾಜ ತನ್ನ ರಾಷ್ಟ್ರದ ರಕ್ಷಣೆಯನ್ನು ಯಾವ ಉಪಾಯದಿಂದ ಮಾಡಬಲ್ಲ ? ತನ್ನ ವೀರವಾಹಿನಿ ಶಕ್ತಿಶಾಲಿ ಸೈನ್ಯದ ಸಹಾಯದಿಂದ. ಒಂದು ವೇಳೆ ರಾಜ ಅಥವಾ ಆಡಳಿತವರ್ಗ ದುರ್ಬಲವಾಗಿದ್ದರೆ, ಶತ್ರುವನ್ನು ಹೆದರಿಸಲು ಅಸಮರ್ಥವಾಗಿದ್ದರೆ ಆ ರಾಜ್ಯ ಸುರಕ್ಷಿತವಾಗಿರಲಾರದು. ಹೊರಗಿನ ಶತ್ರು ಆಕ್ರಮಣ ಮಾಡದಿದ್ದರೂ ಸಹ ರಾಜ್ಯದ ಒಳಗೆಯೇ ಕೊಲೆ, ದರೋಡೆ, ಲೂಟಿ ಗೂಂಡಾಗಿರಿ ಮುಂತಾದವುಗಳಿಂದ ರಾಜ್ಯದ ಆಡಳಿತವ್ಯವಸ್ಥೆ ಅಸ್ತವ್ಯಸ್ತಗೊಳ್ಳುತ್ತದೆ.  ಆಗ ಅಂತಹ ರಾಜ್ಯದಲ್ಲಿ ಜ್ಞಾನದ ವಿಕಾಸ ಹಾಗೂ ಧರ್ಮದ ಆಚರಣೆ  ಇರಲು ಸಾಧ್ಯವಿಲ್ಲ. ಆದ್ದರಿಂದಲೇ -

 “शस्त्रेण रक्षिते राष्ट्रे शास्त्रचिन्ता प्रवर्तते” ಎಂಬುದಾಗಿ ಶಾಸ್ತ್ರಕಾರರು ಹೇಳಿದ್ದಾರೆ.

ಅರ್ಥಾತ್ ಶಸ್ತ್ರದಿಂದ ರಕ್ಷಣೆ ಮಾಡಲ್ಪಡುವ ರಾಷ್ಟ್ರದಲ್ಲಿ  ಶಾಸ್ತ್ರದ ಚಿಂತನೆ (ಜ್ಞಾನದ ವಿಕಾಸ) ನಡೆಯುತ್ತದೆ. ಆದ್ದರಿಂದಲೇ ಅಧಿಕ ಶಕ್ತಿಶಾಲಿಯಾದ ಶತ್ರುಗಳಿಂದ ವಿಜಯವನ್ನು ಪಡೆಯುವ ಪುರುಷನನ್ನೇ  ರಾಜನನ್ನಾಗಿ ಮಾಡಬೇಕು ಎಂದು ವೆದಗಳು ಆದೆಶಿಸುತ್ತವೆ.

इन्द्रो जयाति न परो जयाता अधिराजो राजसु राजतायै । चर्कृत्य ईढ्यो वन्द्यश्चोपसद्यो नमस्यो भवेह ॥ (अथर्ववेदः ६-१०- १८-१)

ಅರ್ಥಾತ್ ಈ ಮಾನವ ಸಮುದಾಯದಲ್ಲಿ ವೀರನಾದವನು ಇಂದ್ರನಂತೆ ಐಶ್ವರ್ಯಕರ್ತನಾಗಿ ಶತ್ರುಗಳನ್ನು ಗೆಲ್ಲಬೇಕು. ಆತ ಯಾವತ್ತೂ ಶತ್ರುಗಳಿಂದ ಪರಾಜಿತನಾಗಬಾರದು. ಕ್ಷತ್ರಿಯರಲ್ಲಿ ಎಲ್ಲರಿಗಿಂತಲೂ ಎತ್ತರದಲ್ಲಿ ವಿರಾಜಮಾನನಾಗಿ  ಅತ್ಯಂತ ಯೋಗ್ಯ ಪ್ರಶಂಸನೀಯ ಗುಣಗಳಿಂದ  ಕೂಡಿ ಸತ್ಕಾರಯೋಗ್ಯ ಹಾಗು ಮಾನನೀಯನಾಗಿರುವವನನ್ನು ಸಭಾಪತಿಯು ರಾಜನನ್ನಾಗಿ ಮಾಡಬೇಕು.

ಈ ವೆದಮಂತ್ರದಿಂದ ಸ್ಪಷ್ಟವಾಗುವುದೇನೆಂದರೆ ನಮ್ಮ ರಾಷ್ಟ್ರಪತಿ ಅಥವಾ ರಾಜನಲ್ಲಿ ಯಾವ ಗುಣಗಳಿರಬೇಕು ಎಂಬುದಾಗಿ.  ಶತ್ರುವಿನ ಗುಂಡಿಗೆಯನ್ನೊಡೆಯುವ ಯೋಗ್ಯತೆ ಹಾಗೂ ದುಷ್ಟರಿಗೆ ದಂಡನೆಯನ್ನು ನೀಡುವ ಸಾಮರ್ಥ್ಯ ಆತನ ಮೊದಲ ಗುಣವಾಗಿರಬೇಕು.  ಆತನ ಆಡಳಿತಯಂತ್ರ ಸರಿಯಾದ ರೀತಿಯಲ್ಲಿ  ನಡೆಯಬೇಕಾದರೆ ಬಿಗಿಯಾದ ಶಾಸನದಂಡವನ್ನು ಸರಿಯಾಗಿ ಬಳಸಬೇಕು. ನಮ್ಮ ನೀತಿಕಾರರು ಆಡಳಿತವ್ಯವಸ್ಥೆಯನ್ನು ಸರಿಯಾಗಿಸಲು ದಂಡದ ಆವಶ್ಯಕತೆ ಬಹಳವಾಗಿರುವುದನ್ನು ತಿಳಿಸಿದ್ದಾರೆ. ನೋಡಿ, ಮನುಮಹಾರಾಜ  ಮನುಸ್ಮೃತಿಯ ಏಳನೇ ಅಧ್ಯಾಯದಲ್ಲಿ  ಆಡಳಿತದಲ್ಲಿನ ದಂಡದ ವಿಷಯವಾಗಿ ಏನು ಹೇಳಿದ್ದಾನೆ ಅಂತ -

तस्यार्थे सर्वभूतानां गोप्तारं धर्ममात्मजम् ।

ब्रह्मतेजोमयं दण्डमसृजत्पूर्वमीश्वरः ॥

ರಾಜನ ಹಿತಕ್ಕಾಗಿ ಭಗವಂತನು ಮೊದಲು ಪ್ರಾಣಿಗಳ ರಕ್ಷಕನಾದ, ಧರ್ಮರೂಪನಾದ, ಬ್ರಹ್ಮತೆಜಸ್ಸಿನಿಂದ ಕೂಡಿದ ತನ್ನ ಪುತ್ರನಾದ ದಂಡನನ್ನು(ವನ್ನು/ಶಿಕ್ಷೆಯನ್ನು) ಸೃಷ್ಟಿಸಿದ.

तस्य सर्वाणि भूतानि स्थावराणि चराणि च ।

भयाद्भोगाय कल्पन्ते स्वधर्मान्न चलन्ति च ॥

ದಂಡದ ಭಯದಿಂದಾಗಿ ಎಲ್ಲಾ ಚರಾಚರ ಪ್ರಾಣಿಗಳೂ ತಮ್ಮ ತಮ್ಮ ಭೋಗವನ್ನು ಭೋಗಿಸುತ್ತವೆ. ಯಾವುದೂ ಕೂಡ ಧರ್ಮಮಾರ್ಗದಿಂದ ವಿಚಲಿತವಾಗುವುದಿಲ್ಲ.

स राजा पुरुषो दण्डः नेता शासितचेतसः ।

चतुर्णामाश्रमाणाञ्च धर्मस्य प्रतिभूः स्मृतः ॥

ಆ ರಾಜನೇ ದಂಡ/ಶಿಕ್ಷೆ, ದಂಡವೇ ರಾಜ್ಯದ ನೇತಾರ ಮತ್ತು ಶಿಕ್ಷಕ. ಋಷಿಗಳು ದಂಡವನ್ನು/ಶಿಕ್ಷೆಯನ್ನು ನಾಲ್ಕು ಆಶ್ರಮಗಳಲ್ಲಿ ಧರ್ಮದ ಸಾಕ್ಷಿ ಎಂಬುದಾಗಿ ಹೇಳಿದ್ದಾರೆ.

दण्डः शास्ति प्रजाः सर्वाः दण्ड एवाभिरक्षति ।

दण्डः सुप्तेषु जागर्ति दण्डं धर्म विदुर्बुधाः ॥

ದಂಡವೇ ಪ್ರಜೆಗಳನ್ನೆಲ್ಲ ಆಳುತ್ತದೆ. ದಂಡವೇ ಎಲ್ಲ ಪ್ರಾಣಿಗಳ ರಕ್ಷಣೆಯನ್ನು ಮಾಡುತ್ತದೆ. ಎಲ್ಲರೂ ಮಲಗಿರುವಾಗ ದಂಡ ಮಾತ್ರ ಎಚ್ಚೆತ್ತುಕೊಂಡಿರುತ್ತದೆ. ಆದ್ದರಿಂದ ವಿದ್ವಾಂಸರು ದಂಡವನ್ನೇ ಧರ್ಮವೆಂದು ಹೇಳಿರುತ್ತಾರೆ.

यदि न प्रणयेद्राजा दण्डं दण्ड्येष्वतन्द्रितः ।

शूले मत्स्यानिवापश्यन् दुर्बलान् बलवत्तरः ॥

ರಾಜನಾದವನು ಅಲಸ್ಯವನ್ನು ತೊರೆದು ದಂಡನೀಯರಾದವರನ್ನು ದಂಡಿಸದಿದ್ದರೆ ದೊಡ್ಡ ಮೀನು ಸಣ್ಣ ಮೀನನ್ನು ತಿಂದು ಬದುಕುವಂತೆ ಬಲಶಾಲಿಯಾದವನು ದುರ್ಬಲನನ್ನು ಸ್ವಕಾರ್ಯಕ್ಕೆ ಬಲವಂತವಾಗಿ ಬಳಸಿಕೊಂದು ಬದುಕುತ್ತಾನೆ.

सर्वो दण्डजितो लोके दुर्लभो हि शुचिर्नरः ।

दण्डस्य हि भयात्सर्वं जगद्भोगाय कल्पते ॥

ಎಲ್ಲಾ ಜನರೂ ಕೂಡ ದಂಡದಿಂದಲೇ ಗೆಲ್ಲಲ್ಪಡುತ್ತಾರೆ. ಶುದ್ಧಾಚಾರವಂತನಾದ ಮಾನವ ಅತ್ಯಂತ ವಿರಳ. ದಂಡದ ಭಯದಿಂದಲೇ ಜಗತ್ತೆಲ್ಲ ಅನುಭವಿಸಲು ಯೊಗ್ಯವಾಗುತ್ತದೆ.

दुष्येयुः सर्ववर्णाश्च भिद्येरन् सर्वसेतवः ।

सर्वलोकप्रकोपाच्च भवेद्दण्दस्य विभ्रमात् ॥

ದಂಡವಿಲ್ಲದಿದ್ದರೆ ನಾಲ್ಕೂ ವರ್ಣಗಳು ದೂಷಿತವಾಗುವುವು. ಶಾಸ್ತ್ರನಿಯಮಗಳೆಲ್ಲ ನಾಶವಾಗುವುವು. ಪ್ರಜೆಗಳೆಲ್ಲ ದುಃಖಿಗಳಾಗುವರು.

तस्याहुः सम्प्रणेतारं राजानं सत्यवादिनम् ।

समीक्ष्यकारिणं प्राज्ञं धर्मकामार्थकोविदम् 

ದಂಡಿಸುವ ರಾಜನನ್ನು ಸತ್ಯವಾದಿ, ವಿಚಾರಮಾಡಿ ಕೆಲಸ ಮಾಡುವವ, ಬುದ್ಧಿವಂತ, ಹಾಗೂ ಧರ್ಮಾರ್ಥಕಾಮವನ್ನು ಚೆನ್ನಾಗಿ ತಿಳಿದಿರುವವನು ಎಂಬುದಾಗಿ ಶಾಸ್ತ್ರಕಾರರು ಹೇಳಿದ್ದಾರೆ.

स्वराष्ट्रे न्यायवृत्तः स्यात् भृशदण्डश्च शत्रुषु ।

सुहृत्स्वजिह्मः स्निग्धेषु ब्राह्मणेषु क्षमान्वितः ॥

ರಾಜನಾದವನಿಗೆ ತನ್ನ ರಾಜ್ಯದಲ್ಲಿ ನ್ಯಾಯೋಚಿತವಾಗಿ ನಡೆದುಕೊಳ್ಳುವುದು(ದಂಡ ನೀಡುವುದು), ಶತ್ರುಗಳನ್ನು ಚೆನ್ನಾಗಿ ದಂಡಿಸುವುದು, ಪ್ರೀತಿಪಾತ್ರರ ಜೊತೆಗೆ ನಿಷ್ಕಪಟನಂತೆ ವ್ಯವಹರಿಸುವುದು ಹಾಗೂ ಬ್ರಾಹ್ಮಣರಲ್ಲಿ ಕ್ಷಮೆಯನ್ನು ಹೊಂದುವುದು ಯೊಗ್ಯವಾಗಿದೆ.

ಈ ರೀತಿಯಾಗಿ ದುಷ್ಟರನ್ನು ದಂಡಿಸಲು ಬೇಕಾದ ಶಾಸ್ತ್ರೀಯ ಆದೇಶಗಳು  ನಮ್ಮ ಇತರ ಪ್ರಾಚೀನ ಗ್ರಂಥಗಳಲ್ಲಿಯೂ ಹೇರಳವಾಗಿವೆ. ದುಷ್ಟರನ್ನು ಕ್ಷಮಿಸುವುದು ದಯೆ ತೋರಿಸುವುದು ಅಥವಾ ಅವರಿಗೆ ಸಣ್ಣ ಪ್ರಮಾಣದ ಶಿಕ್ಷೆಯನ್ನು ಕೊಡುವುದು ಮುಂತಾದವುಗಳಿಂದ ದೇಶದಲ್ಲಿ ಯಾವತ್ತೂ ಶಾಂತಿ ನೆಲೆಸಲು ಸಾಧ್ಯವಿಲ್ಲ. ಮತ್ತು ಯಾವತ್ತೂ ಧರ್ಮದ ಪಾಲನೆಯಾದಂತಾಗುವುದಿಲ್ಲ. ಮಹಾಭಾರತದ ಶಾಂತಿಪರ್ವದಲ್ಲಿ ಮಹಾರಾಜ ಯುಧಿಷ್ಠಿರನು ಯುದ್ಧದಲ್ಲಾದ ಸಾವುನೋವುಗಳಿಂದ ಉದ್ವಿಗ್ನನಾಗಿ ರಾಜ್ಯವನ್ನು ಬಿಟ್ಟು ಬಿಡುವ  ವಿಚಾರವನ್ನು ಮಾಡುತ್ತಿದ್ದಾಗ ೧೫ನೇ ಸರ್ಗದಲ್ಲಿ ಆತನಿಗೆ ವೀರಪುತ್ರ ಅರ್ಜುನನು  “ಶಾಸನದಂಡ” ಕ್ಕೆ ಸಂಬಂಧಿಸಿದಂತೆ ತಿಳಿಯಪಡಿಸುತ್ತ ಏನು ಹೇಳಿದನೋ ಅದು ಬಹಳ  ಮಹತ್ವಪೂರ್ಣಾವಾಗಿದೆ. ಅದರಿಂದ ಕೆಲವು ಉಪದೇಶಗಳನ್ನು ಇಲ್ಲಿ ಕೊಡಲಾಗಿದೆ.

दण्डः शास्ति प्रजाः सर्वाः दण्ड एवाभिरक्षति ।

दण्डः सुप्तेषु जागर्ति दण्डं धर्म विदुर्बुधाः ॥

दण्डः संरक्षते धर्मं तथैवार्थं जनाधिप ।

कामं संरक्षते दण्डस्त्रिवर्गो दण्ड उच्यते ॥

दण्डेन रक्ष्यते धान्यं धनं दण्डेन रक्ष्यते ।

एवं विद्वन्नुपाधत्स्व भावं पश्यस्व लौकिकम् ॥

ಪ್ರಜೆಗಳನ್ನು ಆಳುವುದು ಮತ್ತು ಪೋಷಿಸುವುದು  ದಂಡವೇ. ಜಗವೆಲ್ಲ ಮಲಗಿರಲು ದಂಡವೊದೇ ಎಚ್ಚೆತ್ತಿರುವುದು. ಆದ್ದರಿಂದಲೇ ಪಂಡಿತರು ದಂಡವನ್ನು ಧರ್ಮವೆಂದಿದ್ದಾರೆ.

ದಂಡವು ಧರ್ಮವನ್ನು ಸಂರಕ್ಷಿಸುತ್ತದೆ. ಅರ್ಥವನ್ನು ಕಾಪಾಡುತ್ತದೆ. ಕಾಮವನ್ನು ಪೋಷಿಸುತ್ತದೆ. ಆದ್ದರಿಂದ ದಂಡವನ್ನು ತ್ರಿವರ್ಗವೆಂದು ಕರೆಯಲಾಗುತ್ತದೆ.

ದಂಡದಿಂಡ ಧನಧಾನ್ಯಗಳ ರಕ್ಷಣೆಯಾಗುತ್ತದೆ. ಆದ್ದರಿಂದ ಹೇ ರಾಜೇಂದ್ರ,  ಹೀಗೆಯೇ ಲೊಕರಕ್ಷಾಸ್ವರೂಪವಾದ ದಂಡವನ್ನು ಹಿಡಿದು ಲೌಕಿಕಭಾವವನ್ನು ಹೊಂದುವಂತವನಾಗು.

नान्यतः कीर्तिरस्तीह न वित्तं न पुनः प्रजाः ।

इन्द्रो वृत्त्रवधेनैव महेन्द्रः समपद्यत ॥

ರಾಜರುಗಳು ತಮ್ಮ ಶತ್ರುಗಳನ್ನು ಮುಗಿಸದಿದ್ದರೆ ಅವರ ಸಂಪತ್ತು ಕೀರ್ತಿ ಹಾಗೂ ಪ್ರಜೆಗಳು ಸ್ಥಾಯಿಯಾಗುಳಿಯುವುದಿಲ್ಲ. ಇಂದ್ರನು ವೃತ್ರಾಸುರನನ್ನು ಕೊಂದಿದ್ದಿಂದಲೇ ಮಹೇಂದ್ರನೆಂದು ಪ್ರಸಿದ್ಧನಾದ.

 

दण्डनीत्यां प्रणीतायां सर्वे सर्वे सिध्यन्त्युपक्रमाः ।

कौन्तेय सर्वभूतानां तत्र मे नास्ति संशयः ॥

दण्दश्चेन्न भवेल्लोके विनश्येयुरिमाः प्रजाः ।

जले मत्स्यानिवाभक्षन् दुर्बलान् बलवत्तरः ॥

 

दण्डे स्थिताः प्रजाः सर्वाः भयं दण्डे विदुर्बुधाः ।

दण्डे स्वर्गो मनुष्याणां लोकोयं सुप्रतिष्ठितः ॥

न तत्र कूटं पापं या वञ्चना वापि दृश्यते ।

यत्र दण्डः सुविहितश्चरत्यरिविनाशनः ॥