Monday, May 9, 2022

ಯುದ್ಧನೀತಿ ಮತ್ತು ಅಹಿಂಸೆ (6. ಪೃಥ್ವಿರಾಜ ಮತ್ತು ಜಯಚಂದ)

 

6. ಪೃಥ್ವಿರಾಜ ಮತ್ತು ಜಯಚಂದ

 

ಕ್ರಿ.ಶ. ೧೩ ನೇ ಶತಮಾನದಲ್ಲಿ ಹಿಂದುಸ್ಥಾನದಲ್ಲಿ  ೪ ರಜಪೂತ ವಂಶಗಳು ರಾಜ್ಯಭಾರವನ್ನು ನಡೆಸುತ್ತಿದ್ದವು.

1.     ದಿಲ್ಲಿ ಮತ್ತು ಅಜ್ಮೀರ್ ನಲ್ಲಿ ಚೌಹಾಣರು

2.     ಕನೋಜ್ ನಲ್ಲಿ ರಾಠೊಡರು

3.     ಗುಜರಾತ್ ನಲ್ಲಿ ಸೋಲಂಕಿಗಳು

4.     ಚಿತ್ತೋಡ್ ನಲ್ಲಿ ಸಿಸೋಡಿಯಾಗಳು

ಈ ನಾಲ್ಕು ವಂಶಸ್ಥರು ಪರಸ್ಪರ ಸಂಬಂಧಿಗಳಾಗಿದ್ದರೂ ಸಹ ಪರಸ್ಪರರಲ್ಲಿ ವೈರವಿತ್ತು.

 

೧. ಮೀಸೆ ಪುರಾಣ

ಗುಜರಾತ್ ನ ಕೆಲವು ಸೋಲಂಕಿ ರಜಪೂತರು ತಮ್ಮ ರಾಜನೊಂದಿಗೆ ಮುನಿಸಿಕೊಂಡು ಅಜ್ಮೀರ್ ಗೆ ಹೋದರು. ಅಲ್ಲಿ ಪೃಥ್ವೀರಾಜ ಚೌಹಾಣನು  ಅವರಿಗೆ ಆಶ್ರಯವನ್ನು ಕೊಟ್ಟ. ಒಂದು ದಿನ ರಾಜಸಭೆಯಲ್ಲಿ(ದರ್ಬಾರಿನಲ್ಲಿ) ಒಬ್ಬ ಸೋಲಂಕಿ ಸರದಾರನು ತನ್ನ ಮೀಸೆಯ ಮೇಲೆ ಕೈಯಾಡಿಸುತ್ತಾ ಗತ್ತನ್ನು ಮೆರೆದ. ಅದನ್ನು ನೋಡಿದ ಪೃಥ್ವೀರಾಜನ ಚಿಕ್ಕಪ್ಪನಾದ ಕಾನ್ಹಕವರನು  ಚೌಹಾಣನ ಮುಂದೆ ಯಾವನೇ ಒಬ್ಬನೂ ಸಹ ಮೀಸೆ ತಿರುವುವಂತಿಲ್ಲ ಎಂದು ಹೇಳುತ್ತಾ ಸೋಲಂಕಿ ಸರದಾರನ ತಲೆ ಕಡಿದು ಹಾಕಿದ. ಈ ಸುದ್ದಿಯನ್ನು ಕೇಳಿ ಗುಜರಾತ್ ನ ರಾಜನಾದ ಮೂಲರಾಜ ಸೋಲಂಕಿ ತನ್ನ ಸೋದರನ ಸಾವಿಗೆ  ಪ್ರತೀಕಾರವನ್ನೆಸಗಲು ಅಜ್ಮೀರ್ ನ ಮೇಲೆ ದಾಳಿ ಮಾಡಿ  ಸಾಮವತಿಯ ಯುದ್ಧದಲ್ಲಿ ಪೃಥ್ವೀರಾಜನ ತಂದೆಯಾದ  ಸೋಮೇಶ್ವರನ ತಲೆ ಕಡಿದು ಹಾಕಿದ. ಮೀಸೆಯ ಮೇಲೆ ಕೈಯಾಡಿಸಿದ್ದಕ್ಕಾಗಿ ಮೂರ್ಖತನದ ಈ ಘಟನೆ ನಡೆದು ಹೋಯಿತು ಮತ್ತು ಅದರಿಂದಾಗಿ ಎರಡು ರಾಜವಂಶಗಳ ಮಧ್ಯೆ ಯಾವತ್ತೂ ಜೋಡಿಸಲಾಗದ ಒಡಕು ಉಂಟಾಯಿತು. ಮುಂದೆ ಇದೇ ಪೃಥ್ವೀರಾಜನ ಸೋಲಿಗೆ ಕಾರಣವಾಯಿತು.

೨. ಪೃಥ್ವೀರಾಜನ ಪ್ರಮಾದ

ಗಜನಿ ಮಹಮ್ಮದನು ೧೭ ಬಾರಿ  ಭಾರತದ ಮೇಲೆ ದಾಳಿ ಮಾಡಿ  ಸತ್ತ ಬಳಿಕ ಗೋರ್ ನ ಬಾದಶಹ ಅಲ್ಲಾವುದ್ದೀನನು  ಮಹಮ್ಮದನ ರಾಜಧಾನಿಯಾದ ಗಜನಿಯ ಮೇಲೆ ದಾಳಿ ಮಾಡಿ ಅದನ್ನೂ ಸರ್ವನಾಶ ಮಾಡಿಬಿಟ್ಟ. ಗಜನಿ ಮಹಮ್ಮದನ ಎಲುಬುಗಳನ್ನುಆತನ ಗೋರಿಯಿಂದ ಹೊರಗೆ ತೆಗೆಸಿ  ನಾಯಿಗಳಿಗೆ ಎಸೆದ. ಗಜನಿಯ ಹಾಕಿಮ್(ರಾಜಾಧಿಕಾರಿ)  ಮೀರ್ ಹಸನ್  ಹೇಗೋ ಪ್ರಾಣ ಉಳಿಸಿಕೊಂಡು ಹಿಂದುಸ್ಥಾನಕ್ಕೆ ಓಡಿ ಬಂದು ಪೃಥ್ವೀರಾಜನ ರಕ್ಷಣೆ ಪಡೆದ.. ಪೃಥ್ವೀರಾಜ ಆತನಿಗೆ ಆಶ್ರಯವನ್ನು ಕೊಟ್ಟ. ಶಹಬ್ಬಾಶ್ !!! ಹಿಂದುಗಳ ಔದಾರ್ಯಕ್ಕೆ ಮಿತಿಯೇ ಇಲ್ಲ.

ಯಾವ ದುಷ್ಟ ಗಜನಿ ಮೊಹಮ್ಮದ್  ಇಲ್ಲಿ ಬಂದು ಇಲ್ಲಿನ ದೇವಾಲಯಗಳನ್ನು ಪುಡಿಗೈದು ಸಾವಿರಾರು ಹಿಂದುಗಳನ್ನು ಗುಲಾಮರನ್ನಾಗಿ ಮಾಡಿ ಗಜನಿಯ ಮಾರುಕಟ್ಟೆಗಳಲ್ಲಿ ೨,೩ ಪೈಸೆಗಳಿಗೆ ಮಾರಿದ್ದನೋ, ಯಾವ ಮೊಹಮ್ಮದ್ ಭಾರತದಲ್ಲಿ  ಲಕ್ಷಾಂತರ  ಅಮಾಯಕ ಹಿಂದುಗಳನ್ನು ಕಡಿದು ಲೂಟಿ ಮಾಡಿ  ರಕ್ತದ ಹೊಳೆಯನ್ನೇ  ಹರಿಸಿದ್ದನೋ ಅವನದ್ದೇ ವಂಶಜನಿಗೆ ಭಾರತದ ಒಬ್ಬ ಹಿಂದು ರಾಜ (ಪೃಥ್ವೀರಾಜ ಚೌಹಾಣ) ರಕ್ಷಣೆ ನೀಡುತ್ತಿದ್ದಾನೆ. ಮುಂದೆ ಇದೇ ಕಾರಣದಿಂದ ಮತ್ತೆ ಮತ್ತೆ ಸರ್ವನಾಶದ ಹಾದಿಗೆ ಬಂತು ಭಾರತ.

ಅಲ್ಲಾವುದ್ದೀನನು ಮೀರ್ ಹಸನ್ ನನ್ನು  ಬಂಧಿಸಲು ತನ್ನ ತಮ್ಮನಾದ ಶಹಾಬುದ್ದೀನ್ ಗೋರಿಯ ಜೊತೆಗೆ  ಒಂದು ದೊಡ್ಡ ಸೈನ್ಯವನ್ನು  ಹಿಂದುಸ್ಥಾನಕ್ಕೆ ಕಳುಹಿಸಿದ. ಇಲ್ಲಿಂದಲೇ ಪೃಥ್ವೀರಾಜ ಮತ್ತು ಮಹಮ್ಮದ್ ಗೋರಿಯ ನಡುವೆ ಶತ್ರುತ್ವ ಆರಂಭವಾಗುತ್ತದೆ. ಮಹಮ್ಮದ್ ಘೋರಿ ಪೃಥ್ವೀರಾಜನ ಮೇಲೆ  ಒಂದು ಬಾರಿಯಲ್ಲ, ನಿರಂತರ ಏಳು ಬಾರಿ  ದಾಳಿ ನಡೆಸಿ  ಪೆಟ್ಟು ತಿಂದು ಹೋಗಿದ್ದ. ಪೃಥ್ವೀರಾಜ ಚೌಹಾಣನು ಅನೇಕ ಬಾರಿ ಘೋರಿ ಮಹಮ್ಮದ್ ನನ್ನು ಬಂಧಿಸಿ, ಬಳಿಕ ಕ್ಷಮೆ ಯಾಚಿಸಿದ ಮೇಲೆ ಬಿಟ್ಟು ಬಿಡುತ್ತಿದ್ದ. ಶತ್ರುವನ್ನು ಈ ರೀತಿಯಾಗಿ ಬಿಟ್ಟು ಬಿಡುವುದು ಯುದ್ಧ ನೀತಿಗೆ ಸರ್ವಥಾ ವಿರುದ್ಧವಾಗಿದೆ. ಆದರೆ ಪೃಥ್ವೀರಾಜನ ಔದಾರ್ಯಕ್ಕೆ  ಏನು ಹೇಳಬೇಕು ?  ಈ ರೀರಿಯ ಔದಾರ್ಯ ಅವನ ಮತ್ತು ಸಮಸ್ತ ಹಿಂದೂ ಧರ್ಮದ ವಿನಾಶಕ್ಕೆ ಕಾರಣವಾಯಿತು.

೩. ಜಯಚಂದನ ದೇಶದ್ರೋಹ

ಕನೋಜದ ರಾಜನಾದ ಜಯಚಂದ ರಾಠೋಡ ನ ಮಗಳಾದ ಸಂಯೋಗಿತಾ ಜಯಚಂದನ ಇಚ್ಛೆಗೆ ವಿರುದ್ಧವಾಗಿ ಪೃಥ್ವೀರಾಜನನ್ನು ವರಿಸಿದಳು. ಹಾಗಾಗಿ ಜಯಚಂದನು ಪೃಥ್ವೀರಾಜನನ್ನು  ದ್ವೇಷಿಸುತ್ತಿದ್ದ.  ಜಯಚಂದ ಪೃಥ್ವೀರಾಜನಿಗೆ  ಪ್ರತೀಕಾರವೆಸಗಲು ಅವಕಾಶವನ್ನು ಹುಡುಕುತ್ತಿದ್ದ. ಹಾಗಾಗಿಯೇ ಘೋರಿ ಮೊಹಮ್ಮದ್ ಕೊನೆಯ ಬಾರಿ ಪೂರ್ತಿ ಸೋಲುಂಡು ಗಜನಿಯಲ್ಲಿ ಹೆದರಿ ಕುಳಿತಿದ್ದಾಗ ಈ ದೇಶದ್ರೊಹಿ ಜಯಚಂದ್ ಅವನಿಗೆ ಒಂದು ಪತ್ರ ಬರೆದು ಭಾರತದ ಮೇಲೆ ಮತ್ತೊಂದು ಬಾರಿ ಆಕ್ರಮಣವನ್ನು ಮಾಡಲು  ಅಮಂತ್ರಿಸಿದ ಮತ್ತು ಅವನಿಗೆ ಸೈನಿಕ ಸಹಾಯವನ್ನು ಕೂಡ ಮಾಡುವುದಾಗಿ ಮಾತು ಕೊಟ್ಟ. ಇದರಿಂದ ಉತ್ಸಾಹಗೊಂಡ ಘೋರಿ ಮಹಮ್ಮದ್  ಪುನಃ ಒಂದು ಬಾರಿ ಪೃಥ್ವೀರಾಜನ ಮೇಲೆ ದಾಳಿ ನಡೆಸಿದ. ಜಯಚಂದ್ ತನ್ನ ೫೦ ಸಾವಿರ ಸೈನಿಕರೊಂದಿಗೆ  ಘೋರಿ ಮಹಮ್ಮದ್ ನ ಸಹಾಯಕ್ಕಾಗಿ ಹೊರಟ. ಜಯಚಂದನ ಮಗಳು ಸಂಯೋಗಿತಾ ಗೌಪ್ಯವಾಗಿ ತನ್ನ ತಂದೆಯ ಡೇರೆಯನ್ನು  ಹೊಕ್ಕಿ “ನೀವು ನನ್ನ ಮತ್ತು ನನ್ನ ಪತಿಯ ವ್ಯಕ್ತಿಗತ ದ್ವೇಷದಿಂದ ಒಬ್ಬ ಪರದೇಶಿಗೆ  ಸಹಾಯ ಮಾಡಬೇಡಿ. ನೀವು ನನಗೆ ಯಾವ ಶಿಕ್ಷೆಯನ್ನು ಬೇಕಾದರೂ ಕೊಡಿ. ಆದರೆ ನಮ್ಮ ದೇಶ ಮತ್ತು ಹಿಂದೂ ಧರ್ಮದ ನಾಶವನ್ನು ಯಾವತ್ತೂ ಉಂಟುಮಾಡಬೇಡಿ” ಎಂಬುದಾಗಿ ಪ್ರಾರ್ಥಿಸಿದಳು. ಆದರೆ ದೇಶದ್ರೋಹಿಯಾದ  ಜಯಚಂದನು ಅವಳ ಮಾತನ್ನು ಕೇಳಲಿಲ್ಲ. ಘೋರಿ ಮಹಮ್ಮದನಿಗೆ ಸಹಾಯ ಮಾಡುವುದನ್ನು ಮುಂದುವರಿಸಿದ. ಅತ್ತ ಮಹಮ್ಮದ್ ಘೋರಿಯು  ಪೃಥ್ವೀರಾಜನೊಂದಿಗೆ ಸಂಧಾನದ ಪ್ರಸ್ತಾವವನ್ನು ಮುಂದಿಟ್ಟ. ಆ ಪ್ರಸ್ತಾಪ(ವ) ಮೋಸದ್ದಾಗಿತ್ತು. !!!  ಯಾವಾಗ ಪೃಥ್ವೀರಾಜನ ಸೈನಿಕರು ಸಂಧಾನವೇರ್ಪಡುವ ಖುಷಿಯಲ್ಲಿ ಮೈಮರೆತಿದ್ದರೋ ಆಗ ಘೋರಿಯ ಸೈನ್ಯ  ಒಂದೇ ಸಮನೆ ಅವರ ಮೇಲೆ ದಾಳಿ ಮಾಡಲಾರಂಭಿಸಿತು. ಹಿಂದಿನಿಂದ ಪೃಥ್ವೀರಾಜನ ಮಹಾಮಂತ್ರಿಯ ಮಗ  ವಿಜಯಸಿಂಹ  ತನ್ನ ಒಂದು ಲಕ್ಷ ಸೈನಿಕರೊಂದಿಗೆ  ಮೋಸದಿಂದ  ಪೃಥ್ವೀರಾಜನ ಮೇಲೆಯೇ  ದಾಳಿ ನಡೆಸಿದ. ಎಕೆಂದರೆ  ಅವನಿಗೆ ದೆಹಲಿಯ ರಾಜನನ್ನಾಗಿ ಮಾಡುವ ಆಸೆ ಹುಟ್ಟಿಸಲಾಗಿತ್ತು.  ಹಾಗಾಗಿ ಆತ ಘೋರಿ ಮಹಮ್ಮದನ  ಪರವಾಗಿ ಪೃಥ್ವೀರಾಜನ ಮೇಲೆಯೇ  ದಾಳಿ ನಡೆಸಿದ. ಅತ್ತ ಜಯಚಂದನ  ೫೦ ಸಾವಿರ ಸೈನಿಕರೂ ಕೂಡ  ಪೃಥ್ವೀರಾಜನ ಮೇಲೆ ಆಕ್ರಮಣ  ನಡೆಸಿದರು.  ಪೃಥ್ವೀರಾಜ ಬಹಳ  ವೀರಾವೇಶದಿಂದ ಬಡಿದಾಡಿದ. ಆದರೇನು ಮಾಡುವುದು ?  ಎದುರುಗಡೆ ಶತ್ರು ನಿಂತಿದ್ದಾನೆ. ಹಿಂಬದಿಯಲ್ಲಿ ಅವನ ಅನ್ನ ತಿಂದು ಕೇಡು ಬಗೆವ  ವಿಶ್ವಾಸದ್ರೋಹಿ ಸೇನಾಪತಿಯೇ  ಬೆನ್ನಿಗೆ ಚೂರಿಯಿಂದ ಇರಿಯುತ್ತಿದ್ದಾನೆ. ಕೊನೆಯದಾಗಿ ಸೋಲುಣ್ಣುವುದು ಅನಿವಾರ್ಯವಾಗಿತ್ತು.

ಪೃಥ್ವೀರಾಜನನ್ನು ಯುದ್ಧದಲ್ಲಿ ಸೆರೆ ಹಿಡಿದು  ಘೋರಿ ಮಹಮ್ಮದನ ಬಳಿಗೆ ತರಲಾಯಿತು. ಆಗ ಆತ ಘೋರಿಗೆ ಹೇಳ್ತಾನೆ –

“ನಾನು ನಿನ್ನನ್ನು ಅನೇಕ ಬಾರಿ ಸೆರೆ ಹಿಡಿದಿದ್ದರೂ ಔದಾರ್ಯದಿಂದ ಬಿಡುಗಡೆಗೊಳಿಸಿದ್ದೆ. ಈಗ ನೀನು ನನ್ನನ್ನು  ಒಂದು ಬಾರಿ ಬಿಟ್ಟು ಬಿಡುವ ಸಜ್ಜನಿಕೆಯನ್ನು ತೋರಿಸು”

ಆದರೆ ಘೋರಿ ಹೇಳ್ತಾನೆ –

“ನಾನು ನಿನ್ನಂತಹ ಬಲಿಷ್ಠ ಶತ್ರುವನ್ನು ಬಿಟ್ಟುಬಿಡಲು ಹಿಂದುಗಳಂತೆ ಮೂರ್ಖನಲ್ಲ. ನೀನು ಪ್ರಾಣ ಉಳಿಸಿಕೊಳ್ಳಲು ಬಯಸುವೆಯಾದರೆ ಮೊದಲು ಮುಸಲ್ಮಾನನಾಗು”

ವೀರ ಪೃಥ್ವೀರಾಜ ಹಿಂದೆ ಘೋರಿ ಮಹಮ್ಮದನನ್ನು ಅನೇಕ ಬಾರಿ  ಸ್ವತಂತ್ರಗೊಳಿಸಿದ್ದರೂ ಸಹ ಈ ಬಾರಿ ಘೋರಿಯ ಮಾತನ್ನು ಕೇಳಿ  ತನ್ನ ಮೂರ್ಖತನದ ಔದಾರ್ಯಕ್ಕಾಗಿ ಅದೆಷ್ಟು ಕಣ್ಣೀರು ಹಾಕಿದ್ದನೋ ಗೊತ್ತಿಲ್ಲ. ಆತನ ಆ ಅನುಚಿತ ಔದಾರ್ಯ  ಹಾಗೂ ಮೂರ್ಖತನದಿಂದ ಕೂಡಿದ ದಯಾಭಾವನೆಯೇ  ಅವನನ್ನು ಹಾಗೂ ಸಮಸ್ತ ಹಿಂದೂ ಸಾಮ್ರಾಜ್ಯವನ್ನು ನಾಶಪಡಿಸಿತು. ಹಿಂದೂ ಧರ್ಮಾವಲಂಬಿಗಳಾದ  ಇಂತಹ ಮಹಾನ್ ಸಾಮ್ರಾಟರ ಇಂತಹ ದೊಡ್ಡ ದೊಡ್ಡ ತಪ್ಪುಗಳು  ಹಿಂದೂ ಧರ್ಮವನ್ನು ಈ ದುರ್ದೆಸೆಯ ಕೊಳ್ಳಕ್ಕೆ ಕೆಡವಿದವು.

ಮತ್ತೆ ಆ ದೇಶದ್ರೋಹಿ, ಧರ್ಮದ್ರೋಹಿ, ಧರ್ಮದ್ವೇಷಿ, ವಿಶ್ವಾಸಘಾತಕ ವಿಜಯಸಿಂಹ ಹಾಗೂ ಜಯಚಂದರ ವಿಷಯದಲ್ಲಿ ಏನು ಹೇಳಬೇಕು ?  ಅವರಿಬ್ಬರು ತಮ್ಮ ತಮ್ಮ ಹೆಸರಿಗೆ ಕಳಂಕವನ್ನುಂಟುಮಾಡಿಕೊಂಡರು.

ದುಷ್ಟ ವಿಜಯಸಿಂಹ, ನಿನ್ನ ಸ್ವಾಮಿಗೆ ವಿಶ್ವಾಸದ್ರೋಹವನ್ನು ಬಗೆದು, ನಿನಗೇನು ದಿಲ್ಲಿಯ ಸಿಂಹಾಸನ ಸಿಕ್ಕಿತೇ ?

ದೇಶದ್ರೋಹಿ ಜಯಚಂದ್, ಪರಾಕ್ರಮವೇ ಮೈವೆತ್ತಂತಿದ್ದ ಪೃಥ್ವೀರಾಜನಿಗೆ ಸೋಲುಣಿಸಿ ತನ್ನ ದೇಶವನ್ನು ವಿದೇಶೀಯರ ಕೈಗೆ ಸಮರ್ಪಿಸಿ ನಿನಗೇನು  ಸಿಕ್ಕಿತು ?  ಏನೂ ಇಲ್ಲ.

ಮಾರನೇ ವರ್ಷ ಅದೇ ಘೋರಿ ಮಹಮ್ಮದ್ ಜಯಚಂದನ ಮೇಲೆ ದಾಳಿ ನಡೆಸಿ ಕನೋಜವನ್ನು ಹೊಸಕಿ ಹಾಕಿದ. ಜಯಚಂದನು ಒಂದು ಪಿಪ್ಪಲದ ಮರವನ್ನು ಹತ್ತಿ ಗಂಗಾ ನದಿಗೆ ಹಾರಿ ಪ್ರಾಣ ಕಳೆದುಕೊಂಡು ಬಿಟ್ಟ. ಜಯಚಂದನು ತನ್ನ ಸೈನ್ಯದಲ್ಲಿ೪೦ ಸಾವಿರಕ್ಕಿಂತಲೂ ಹೆಚ್ಚು ಅಫಘಾನ್ ಸೈನಿಕರನ್ನು ಸೇರಿಸಿಕೊಂಡಿದ್ದ.  ಅವರೆಲ್ಲರೂ ಕನೋಜದ ಮೇಲೆ ದಾಳಿಯಾದಾಗ  ಘೋರಿ ಮಹಮ್ಮದನ ಜೊತೆ ಸೇರಿಕೊಂಡು ಬಿಟ್ಟರು. ಹಾಗೆಯೇ ಜಯಚಂದನ ಸೇನೆಯನ್ನೇ ಮುಗಿಸಲಾರಂಭಿಸಿದರು. ಹೀಗೆ ಜಯಚಂದನ ವಿಶ್ವಾಸದ್ರೋಹಕ್ಕೆ  ವಿಶ್ವಾಸದ್ರೋಹವೇ ಫಲರೂಪದಲ್ಲಿ ಸಿಕ್ಕಿತು.


Sunday, May 8, 2022

ಯುದ್ಧನೀತಿ ಮತ್ತು ಅಹಿಂಸೆ (ಧರ್ಮಯುದ್ಧ ಮತ್ತು ಕೂಟಯುದ್ಧ)

 

ಧರ್ಮಯುದ್ಧ ಮತ್ತು ಕೂಟಯುದ್ಧ

विशिष्टो देशकालाभ्यां भिन्नारिप्रकृतिर्बली ।

कुर्यात् प्रकाशयुद्धं च कूटयुद्धं विपर्यये ॥ (कामन्दकीयनीतिः १८/५४)

ದೇಶಕಾಲವು ಅನುಕೂಲವಾಗಿದ್ದರೆ  ಶತ್ರುರಾಜನ ಪ್ರಜೆಗಳು  ಅವನಿಗೆ ವಿರುದ್ಧವಾಗಿದ್ದರೆ ಆಗ ಬಲಶಾಲಿಯಾದವನು ನೇರಯುದ್ಧವನ್ನು ಮಾಡಬೇಕು. ಅದಕ್ಕೆ ವಿಪರೀತವಾಗಿದ್ದಲ್ಲಿ ಕೂಟಯುದ್ಧ ಮಾಡಬೇಕು.

ಇಲ್ಲಿ ನೇರಯುದ್ಧ(Open War) ಹಾಗೂ ಕೂಟಯುದ್ಧದ (Diplomatic War) ವಿಚಾರವಾಗಿ ಹೇಳಲಾಗಿದೆ. ಕಾಮಂದಕೀಯನೀತಿಯಲ್ಲಿ ಇಂಥ ಕೂಟಯುದ್ಧದ  ವಿಸ್ತೃತವಾದ ವಿವರಣೆಯನ್ನು ಮಾಡಲಾಗಿದೆ/ಕೊಡಲಾಗಿದೆ. ಅವುಗಳಲ್ಲಿ ಕೆಲವು ಶ್ಲೋಕಗಳ ಅರ್ಥವನ್ನು ನಾವಿಲ್ಲಿ ಕೊಡುತ್ತಿದ್ದೇವೆ.

ಶತ್ರುವಿನ ಮುಂದೆ  ಕಾಣಿಸಿಕೊಂಡು ಅವನ ಗಮನವೆಲ್ಲ ನಮ್ಮ ಮೇಲಿದ್ದಾಗ ಯಾವನಾದರೂ ಬಲಶಾಲಿಯಾದ ವೀರನ ಮುಖಾಂತರ ಹಿಂದಿನಿಂದ  ಹೊಡೆದು ಸಾಯಿಸಬೇಕು.

ಹಿಂದಿನಿಂದ ಗದ್ದಲವೆಬ್ಬಿಸುತ್ತ ನಡೆಯಬೇಕು. ಪೂರ್ವದ ಕಡೆಯಿಂದ/ಮುಂದಿನಿಂದ ಬಲವಾದ ಪ್ರಹಾರವನ್ನು ಕೊಡಬೇಕು. ಇದನ್ನು ಎರಡೂ ಕಡೆಯಿಂದ ಗಾಬರಿಗೊಳಿಸಿ ಹೊಡೆಯುವ ಕೂಟಯುದ್ಧವೆಂದು ಕರೆಯಲಾಗಿದೆ.

ಮುಂದೆ ವಿಷಮಪ್ರದೇಶವಿದ್ದಲ್ಲಿ(ಡೆಂಜರಸ್ ಜಾಗವಿದ್ದಲ್ಲಿ) ವೇಗವಾಗಿ ಶತ್ರುವಿಗೆ ಹಿಂದಿನಿಂದ ಹೊಡೆಯಬೇಕು. ನನಗೆ ಗೆಲುವುಂಟಾಯಿತು ಎಂದು ನಂಬಿದ ಶತ್ರುವನ್ನು ಆಶ್ರಯಹೀನನನ್ನಾಗಿ ಮಾಡಬೇಕು.

ಶಿಬಿರದಲ್ಲಿ ಪಟ್ಟಣದಲ್ಲಿ ಗ್ರಾಮದಲ್ಲಿ ಅಥವಾ ಅಂಥಹುದೇ ಇನ್ನಿತರ ಕಡೆ ಇರುವ ಶತ್ರುಸೇನೆಯನ್ನು ಪ್ರಲೊಭನೆಯಿಂದ ತಾನು ಸಾವಧಾನದಿಂದಿದ್ದುಕೊಂಡು ನಾಶಗೊಳಿಸಬೇಕು.

ತನ್ನ ಸಂಪೂರ್ಣ ಸೇನೆಯನ್ನು ಒಂದು ಸಣ್ಣ ತುಕಡಿಯಿಂದ ಕಾಣಿಸದಂತೆ ಮಾಡಿ ಶತ್ರು ಆ ಸಣ್ಣ ತುಕಡಿಯ ಮೇಲೆ ದಾಳಿ ಮಾಡಿದಾಗ ತತ್ಕ್ಷಣ ಸಿಂಹದಂತೆ ಎರಗಿ ಶತ್ರುವನ್ನು ನಾಶಗೊಳಿಸಬೇಕು.

नियतमिति निहन्यात् कूटयुद्धॆषु शत्रुः ।

नहि निरयति धर्मच्छद्मना शत्रुनाशः ॥

अचकितमिव सुप्तं पाण्डवानामनीकम् ।

निशि सुनिशितशत्रो द्रोणसूनुर्जघान ॥ (कामन्दकीयनीतिः १८/३९)

 

ಈ ರೀತಿಯಾಗಿ ಕೂಟಯುದ್ಧದಿಂದ ಶತ್ರುವಿನ ವಧೆಯನ್ನು ಅನಿವಾರ್ಯವಾಗಿ ಮಾಡಬೇಕು. ಈ ರೀತಿಯಾಗಿ ಶತ್ರುನಾಶದಿಂದ ಅಧರ್ಮ ಅಥವಾ ನರಕವುಂಟಾಗುವುದಿಲ್ಲ. ನಿಶ್ಚಿಂತೆಯಿಂದ ನಿದ್ರೆ ಮಾಡುತ್ತಿದ್ದ  ಪಾಂಡವರ ಸೈನ್ಯವನ್ನು ಶಸ್ತ್ರ ಹಿಡಿದು ಅಶ್ವತ್ಥಾಮ ರಾತ್ರಿಯಲ್ಲಿ ನಾಶ ಮಾಡಿದ.

ಮೇಲೆ ಹೇಳಿದ ಕಾಮಂದಕೀಯನೀತಿಯ ಶ್ಲೋಕಗಳಿಂದ, ಅದರ ಆದೇಶಗಳಿಂದ ನಮ್ಮ ನೀತಿಕಾರರು ಶತ್ರುವನ್ನು ಪರಾಜಯಗೊಳಿಸಲು ಕೂಟಯುದ್ಧವನ್ನು ತಪ್ಪೆಂದು ಭಾವಿಸುತ್ತಿರಲಿಲ್ಲ. ಮತ್ತು ಸ್ಪಷ್ಟಶಬ್ದಗಳಿಂದ ಯಾವುದೇ ರೀತಿಯ  ಕೂಟಯುದ್ಧದಿಂದಲಾದರೂ  ಶತ್ರುವನ್ನು ಸೋಲಿಸಬೇಕು ಎಂಬುದಾಗಿ ಆದೇಶಿಸುತ್ತಿದ್ದರು  ಎಂಬುದಾಗಿ ತಿಳಿಯುತ್ತದೆ. ಭಗವಾನ್ ಶ್ರೀಕೃಷ್ಣನೂ ಸಹ ಕಾಲಕಾಲಕ್ಕೆ ಇದೇ ಕೂಟಯುದ್ಧದ  ಆಶ್ರಯವನ್ನು ಪಡೆದಿದ್ದ ಎಂಬುದರ ಉದಾಹರಣೆಗಳನ್ನು ನಾವು ಹಿಂದೆ ಕೊಟ್ಟಿದ್ದೇವೆ.

ಧರ್ಮಯುದ್ಧವನ್ನು ಧರ್ಮಾತ್ಮನಾದ ಶತ್ರುವಿನ ಜೊತೆಗೆ ಮಾತ್ರ ಮಾಡಬೇಕು. ಅಂದರೆ ಮೋಸದ ಕುಟಿಲ ಕೂಟಯುದ್ಧವನ್ನು ಮಾಡದ ಶತ್ರುವಿನ ಜೊತೆಗೆ  ಧರ್ಮಯುದ್ಧವನ್ನು ಮಾಡಬೇಕು. ಅವನ ಜೊತೆ ಕೂಟಯುದ್ಧ ಮಾಡುವುದರಿಂದ ಪಾಪ ಬರಬಹುದು.

ಆದರೆ ಶತ್ರು ದುಷ್ಟನಾಗಿದ್ದಲ್ಲಿ ಧರ್ಮಾಧರ್ಮವಿವೇಕಹೀನನಾಗಿದ್ದಲ್ಲಿ ಅತ್ಯಾಚಾರಿ, ಅಧರ್ಮಿ, ಕಪಟಿಯಾಗಿದ್ದಲ್ಲಿ ಅಂತಹ ಶತ್ರುವನ್ನು ಬಿಟ್ಟುಬಿಡುವುದೇ ಬಹು ದೊಡ್ಡ ಪಾಪವಾಗುತ್ತದೆ. ಅಂಥವನ ಜೊತೆಗೆ  ಅನಿವಾರ್ಯವಾಗಿ ಕೂಟಯುದ್ಧವನ್ನು ಮಾಡಬೇಕು. ಶಾಸ್ತ್ರವೂ ಸಹ ಇದನ್ನೇ ಹೇಳಿ ಮುಗಿಸುತ್ತದೆ.

“इत्येवं कूटयुद्धेन हन्याच्छ्त्रुं लघूत्थितम्”

ಈ ರೀತಿಯಾಗಿ ಕೂಟಯುದ್ಧದಿಂದ ಶತ್ರುವನ್ನು ಅವಶ್ಯವಾಗಿ ಕೊಂದು ಮುಗಿಸಬೇಕು.

ನಮ್ಮ ದೇಶದ ರಾಜರುಗಳು, ವೀರ ರಜಪೂತರು ಒಂದು ವೇಳೆ ದೊಡ್ಡ ತಪ್ಪನ್ನು ಮಾಡಿದ್ದೇ ಹೌದಾದರೆ ಅದು ಧರ್ಮದ ಅರ್ಥವನ್ನು ತಪ್ಪಾಗಿ ತಿಳಿದದ್ದು. ಶರಣಾಗತನಾದವನ ರಕ್ಷಣೆಯನ್ನು ಮಾಡುವುದು, ಪಲಾಯನಗೈಯುತ್ತಿರುವ ಶತ್ರುವಿನ ಮೇಲೆ ಶಸ್ತ್ರವನ್ನು ಪ್ರಯೊಗಿಸದಿರುವುವುದು,  ನಿಶ್ಯಸ್ತ್ರ ಹಾಗು ಕ್ಷಮೆ ಕೇಳುತ್ತಿರುವ ಶತ್ರುವಿನ ಜೊತೆಗೆ  ಯುದ್ಧ ಮಾಡದಿರುವುದು, ಯುದ್ಧದಲ್ಲಿ ಯಾವುದೇ ಮೋಸ ವಂಚನೆ ಮಾಡದಿರುವುದು, ಜೀವವಿರುವ ತನಕ ಧರ್ಮಯುದ್ಧವನ್ನೇ ಮಾಡುತ್ತಿರುವುದು ಇತ್ಯಾದಿಗಳನ್ನೇ ನಮ್ಮ ವೀರರು ಬಹು ದೊಡ್ಡ ಕ್ಷಾತ್ರ ಧರ್ಮವೆಂದು ತಿಳಿದಿದ್ದರು/ಭಾವಿಸಿದ್ದರು. ಪರಿಣಾಮವಾಗಿ ಮಹಾನ್ ವೀರರಾಗಿದ್ದರೂ ಕೂಡ ಶೌರ್ಯ ಸಾಹಸ  ಹಾಗು ಬಲಿದಾನಗಳಿಗೆ ಅವರಿಗೆ ಜಗತ್ತಿನಲ್ಲಿ ಯಾರೂ ಸಾಟಿಯಿಲ್ಲದಿದ್ದರೂ ಸಹ,  ಅವರು ತಮ್ಮ ರುಜುಮಾರ್ಗವನ್ನೂ ಬಿಡದೆ, ಶತ್ರುವಿನೊಂದಿಗೆ ಕೂಟಯುದ್ಧವನ್ನೂ ಮಾಡದೆ ಇದ್ದುದರಿಂದ ಸದಾ ಕಾಲಕ್ಕೂ ಪರಾಜಿತರಾಗಿ ಬಿಟ್ಟರು. ಇದಕ್ಕೆ ಸಂಬಂಧಿಸಿದಂತೆ ಕವಿ ಪ್ರಕಾಶ್ಚಂದ್ರರು ಬರೆಯುತ್ತಾರೆ –

पानी भरे नाव में उचित है उलीच दॆना,

लग जाय आग तो बुझाना ही उचित है ॥

विविध प्रकार उपचार करके प्रकाश

रोग को शरीर से हठाना ही उचित है ॥

आती हों अनेक आपदायें जहां

 उस ठौर से तो टल जाना  ही उचित हैं ॥

बल से कि छल से  या किसी अटकल से भी,

शत्रु को तो सर्वदा मिठाना ही उचित है ॥

Saturday, May 7, 2022

ಯುದ್ಧನೀತಿ ಮತ್ತು ಅಹಿಂಸೆ(ಆಡಳಿತ ಮತ್ತು ದಂಡನೆ)

 

ಆಡಳಿತ ಮತ್ತು ದಂಡನೆ

ನಾಲ್ಕು ವರ್ಣಗಳಲ್ಲಿ ನಮ್ಮ ಹಿಂದೂ ಸಮಾಜವನ್ನು ಒಗ್ಗೂಡಿಸಲಾಗಿದೆ. ಅವುಗಳಲ್ಲಿ ಕ್ಷತ್ರಿಯರು ಶಕ್ತಿ ಹಾಗು ಸಾಮರ್ಥ್ಯಕ್ಕೆ ಪ್ರತೀಕ. ನಮ್ಮ ಶರೀರದಲ್ಲಿ ಮಿದುಳು ಹೇಗೆ ಜ್ಞಾನಭಂಡಾರವೋ  ಹಾಗೆ ಭುಜಗಳು ಶಕ್ತಿ ಹಾಗೂ ರಕ್ಷಣೆಯ ಪ್ರತೀಕ.  ಆದ್ದರಿಂದ ಕ್ಷತ್ರಿಯರು ಭುಜಬಲದಿಂದ ಸಮಾಜದ ರಕ್ಷಣೆಯನ್ನು ಮಾಡುವವರಾಗಬೇಕು. ಅವರು ಶಕ್ತಿ ಹಾಗೂ ಸಾಮರ್ಥ್ಯಗಳ ಭಂಡಾರವಾಗಬೇಕು. ಧರ್ಮ ಹಾಗೂ ದೇಶದ  ರಕ್ಷಣೆಯ ಭಾರ ಅವರ ಹೆಗಲ ಮೇಲಿರುತ್ತದೆ. ಆದರೆ ರಾಷ್ಟ್ರದ ರಕ್ಷಣೆಯನ್ನು ಅವರು ಯಾವ ರೀತಿಯಾಗಿ ಮಾಡಬಲ್ಲರು ? ಅವರ ಬಹುದೊಡ್ಡ ಪ್ರತಿನಿಧಿ ಹಾಗೂ ಸಮಸ್ತ ರಾಷ್ಟ್ರದ ಗೌರವಸ್ವರೂಪನಾದ ರಾಜ ತನ್ನ ರಾಷ್ಟ್ರದ ರಕ್ಷಣೆಯನ್ನು ಯಾವ ಉಪಾಯದಿಂದ ಮಾಡಬಲ್ಲ ? ತನ್ನ ವೀರವಾಹಿನಿ ಶಕ್ತಿಶಾಲಿ ಸೈನ್ಯದ ಸಹಾಯದಿಂದ. ಒಂದು ವೇಳೆ ರಾಜ ಅಥವಾ ಆಡಳಿತವರ್ಗ ದುರ್ಬಲವಾಗಿದ್ದರೆ, ಶತ್ರುವನ್ನು ಹೆದರಿಸಲು ಅಸಮರ್ಥವಾಗಿದ್ದರೆ ಆ ರಾಜ್ಯ ಸುರಕ್ಷಿತವಾಗಿರಲಾರದು. ಹೊರಗಿನ ಶತ್ರು ಆಕ್ರಮಣ ಮಾಡದಿದ್ದರೂ ಸಹ ರಾಜ್ಯದ ಒಳಗೆಯೇ ಕೊಲೆ, ದರೋಡೆ, ಲೂಟಿ ಗೂಂಡಾಗಿರಿ ಮುಂತಾದವುಗಳಿಂದ ರಾಜ್ಯದ ಆಡಳಿತವ್ಯವಸ್ಥೆ ಅಸ್ತವ್ಯಸ್ತಗೊಳ್ಳುತ್ತದೆ.  ಆಗ ಅಂತಹ ರಾಜ್ಯದಲ್ಲಿ ಜ್ಞಾನದ ವಿಕಾಸ ಹಾಗೂ ಧರ್ಮದ ಆಚರಣೆ  ಇರಲು ಸಾಧ್ಯವಿಲ್ಲ. ಆದ್ದರಿಂದಲೇ -

 “शस्त्रेण रक्षिते राष्ट्रे शास्त्रचिन्ता प्रवर्तते” ಎಂಬುದಾಗಿ ಶಾಸ್ತ್ರಕಾರರು ಹೇಳಿದ್ದಾರೆ.

ಅರ್ಥಾತ್ ಶಸ್ತ್ರದಿಂದ ರಕ್ಷಣೆ ಮಾಡಲ್ಪಡುವ ರಾಷ್ಟ್ರದಲ್ಲಿ  ಶಾಸ್ತ್ರದ ಚಿಂತನೆ (ಜ್ಞಾನದ ವಿಕಾಸ) ನಡೆಯುತ್ತದೆ. ಆದ್ದರಿಂದಲೇ ಅಧಿಕ ಶಕ್ತಿಶಾಲಿಯಾದ ಶತ್ರುಗಳಿಂದ ವಿಜಯವನ್ನು ಪಡೆಯುವ ಪುರುಷನನ್ನೇ  ರಾಜನನ್ನಾಗಿ ಮಾಡಬೇಕು ಎಂದು ವೆದಗಳು ಆದೆಶಿಸುತ್ತವೆ.

इन्द्रो जयाति न परो जयाता अधिराजो राजसु राजतायै । चर्कृत्य ईढ्यो वन्द्यश्चोपसद्यो नमस्यो भवेह ॥ (अथर्ववेदः ६-१०- १८-१)

ಅರ್ಥಾತ್ ಈ ಮಾನವ ಸಮುದಾಯದಲ್ಲಿ ವೀರನಾದವನು ಇಂದ್ರನಂತೆ ಐಶ್ವರ್ಯಕರ್ತನಾಗಿ ಶತ್ರುಗಳನ್ನು ಗೆಲ್ಲಬೇಕು. ಆತ ಯಾವತ್ತೂ ಶತ್ರುಗಳಿಂದ ಪರಾಜಿತನಾಗಬಾರದು. ಕ್ಷತ್ರಿಯರಲ್ಲಿ ಎಲ್ಲರಿಗಿಂತಲೂ ಎತ್ತರದಲ್ಲಿ ವಿರಾಜಮಾನನಾಗಿ  ಅತ್ಯಂತ ಯೋಗ್ಯ ಪ್ರಶಂಸನೀಯ ಗುಣಗಳಿಂದ  ಕೂಡಿ ಸತ್ಕಾರಯೋಗ್ಯ ಹಾಗು ಮಾನನೀಯನಾಗಿರುವವನನ್ನು ಸಭಾಪತಿಯು ರಾಜನನ್ನಾಗಿ ಮಾಡಬೇಕು.

ಈ ವೆದಮಂತ್ರದಿಂದ ಸ್ಪಷ್ಟವಾಗುವುದೇನೆಂದರೆ ನಮ್ಮ ರಾಷ್ಟ್ರಪತಿ ಅಥವಾ ರಾಜನಲ್ಲಿ ಯಾವ ಗುಣಗಳಿರಬೇಕು ಎಂಬುದಾಗಿ.  ಶತ್ರುವಿನ ಗುಂಡಿಗೆಯನ್ನೊಡೆಯುವ ಯೋಗ್ಯತೆ ಹಾಗೂ ದುಷ್ಟರಿಗೆ ದಂಡನೆಯನ್ನು ನೀಡುವ ಸಾಮರ್ಥ್ಯ ಆತನ ಮೊದಲ ಗುಣವಾಗಿರಬೇಕು.  ಆತನ ಆಡಳಿತಯಂತ್ರ ಸರಿಯಾದ ರೀತಿಯಲ್ಲಿ  ನಡೆಯಬೇಕಾದರೆ ಬಿಗಿಯಾದ ಶಾಸನದಂಡವನ್ನು ಸರಿಯಾಗಿ ಬಳಸಬೇಕು. ನಮ್ಮ ನೀತಿಕಾರರು ಆಡಳಿತವ್ಯವಸ್ಥೆಯನ್ನು ಸರಿಯಾಗಿಸಲು ದಂಡದ ಆವಶ್ಯಕತೆ ಬಹಳವಾಗಿರುವುದನ್ನು ತಿಳಿಸಿದ್ದಾರೆ. ನೋಡಿ, ಮನುಮಹಾರಾಜ  ಮನುಸ್ಮೃತಿಯ ಏಳನೇ ಅಧ್ಯಾಯದಲ್ಲಿ  ಆಡಳಿತದಲ್ಲಿನ ದಂಡದ ವಿಷಯವಾಗಿ ಏನು ಹೇಳಿದ್ದಾನೆ ಅಂತ -

तस्यार्थे सर्वभूतानां गोप्तारं धर्ममात्मजम् ।

ब्रह्मतेजोमयं दण्डमसृजत्पूर्वमीश्वरः ॥

ರಾಜನ ಹಿತಕ್ಕಾಗಿ ಭಗವಂತನು ಮೊದಲು ಪ್ರಾಣಿಗಳ ರಕ್ಷಕನಾದ, ಧರ್ಮರೂಪನಾದ, ಬ್ರಹ್ಮತೆಜಸ್ಸಿನಿಂದ ಕೂಡಿದ ತನ್ನ ಪುತ್ರನಾದ ದಂಡನನ್ನು(ವನ್ನು/ಶಿಕ್ಷೆಯನ್ನು) ಸೃಷ್ಟಿಸಿದ.

तस्य सर्वाणि भूतानि स्थावराणि चराणि च ।

भयाद्भोगाय कल्पन्ते स्वधर्मान्न चलन्ति च ॥

ದಂಡದ ಭಯದಿಂದಾಗಿ ಎಲ್ಲಾ ಚರಾಚರ ಪ್ರಾಣಿಗಳೂ ತಮ್ಮ ತಮ್ಮ ಭೋಗವನ್ನು ಭೋಗಿಸುತ್ತವೆ. ಯಾವುದೂ ಕೂಡ ಧರ್ಮಮಾರ್ಗದಿಂದ ವಿಚಲಿತವಾಗುವುದಿಲ್ಲ.

स राजा पुरुषो दण्डः नेता शासितचेतसः ।

चतुर्णामाश्रमाणाञ्च धर्मस्य प्रतिभूः स्मृतः ॥

ಆ ರಾಜನೇ ದಂಡ/ಶಿಕ್ಷೆ, ದಂಡವೇ ರಾಜ್ಯದ ನೇತಾರ ಮತ್ತು ಶಿಕ್ಷಕ. ಋಷಿಗಳು ದಂಡವನ್ನು/ಶಿಕ್ಷೆಯನ್ನು ನಾಲ್ಕು ಆಶ್ರಮಗಳಲ್ಲಿ ಧರ್ಮದ ಸಾಕ್ಷಿ ಎಂಬುದಾಗಿ ಹೇಳಿದ್ದಾರೆ.

दण्डः शास्ति प्रजाः सर्वाः दण्ड एवाभिरक्षति ।

दण्डः सुप्तेषु जागर्ति दण्डं धर्म विदुर्बुधाः ॥

ದಂಡವೇ ಪ್ರಜೆಗಳನ್ನೆಲ್ಲ ಆಳುತ್ತದೆ. ದಂಡವೇ ಎಲ್ಲ ಪ್ರಾಣಿಗಳ ರಕ್ಷಣೆಯನ್ನು ಮಾಡುತ್ತದೆ. ಎಲ್ಲರೂ ಮಲಗಿರುವಾಗ ದಂಡ ಮಾತ್ರ ಎಚ್ಚೆತ್ತುಕೊಂಡಿರುತ್ತದೆ. ಆದ್ದರಿಂದ ವಿದ್ವಾಂಸರು ದಂಡವನ್ನೇ ಧರ್ಮವೆಂದು ಹೇಳಿರುತ್ತಾರೆ.

यदि न प्रणयेद्राजा दण्डं दण्ड्येष्वतन्द्रितः ।

शूले मत्स्यानिवापश्यन् दुर्बलान् बलवत्तरः ॥

ರಾಜನಾದವನು ಅಲಸ್ಯವನ್ನು ತೊರೆದು ದಂಡನೀಯರಾದವರನ್ನು ದಂಡಿಸದಿದ್ದರೆ ದೊಡ್ಡ ಮೀನು ಸಣ್ಣ ಮೀನನ್ನು ತಿಂದು ಬದುಕುವಂತೆ ಬಲಶಾಲಿಯಾದವನು ದುರ್ಬಲನನ್ನು ಸ್ವಕಾರ್ಯಕ್ಕೆ ಬಲವಂತವಾಗಿ ಬಳಸಿಕೊಂದು ಬದುಕುತ್ತಾನೆ.

सर्वो दण्डजितो लोके दुर्लभो हि शुचिर्नरः ।

दण्डस्य हि भयात्सर्वं जगद्भोगाय कल्पते ॥

ಎಲ್ಲಾ ಜನರೂ ಕೂಡ ದಂಡದಿಂದಲೇ ಗೆಲ್ಲಲ್ಪಡುತ್ತಾರೆ. ಶುದ್ಧಾಚಾರವಂತನಾದ ಮಾನವ ಅತ್ಯಂತ ವಿರಳ. ದಂಡದ ಭಯದಿಂದಲೇ ಜಗತ್ತೆಲ್ಲ ಅನುಭವಿಸಲು ಯೊಗ್ಯವಾಗುತ್ತದೆ.

दुष्येयुः सर्ववर्णाश्च भिद्येरन् सर्वसेतवः ।

सर्वलोकप्रकोपाच्च भवेद्दण्दस्य विभ्रमात् ॥

ದಂಡವಿಲ್ಲದಿದ್ದರೆ ನಾಲ್ಕೂ ವರ್ಣಗಳು ದೂಷಿತವಾಗುವುವು. ಶಾಸ್ತ್ರನಿಯಮಗಳೆಲ್ಲ ನಾಶವಾಗುವುವು. ಪ್ರಜೆಗಳೆಲ್ಲ ದುಃಖಿಗಳಾಗುವರು.

तस्याहुः सम्प्रणेतारं राजानं सत्यवादिनम् ।

समीक्ष्यकारिणं प्राज्ञं धर्मकामार्थकोविदम्  ॥

ದಂಡಿಸುವ ರಾಜನನ್ನು ಸತ್ಯವಾದಿ, ವಿಚಾರಮಾಡಿ ಕೆಲಸ ಮಾಡುವವ, ಬುದ್ಧಿವಂತ, ಹಾಗೂ ಧರ್ಮಾರ್ಥಕಾಮವನ್ನು ಚೆನ್ನಾಗಿ ತಿಳಿದಿರುವವನು ಎಂಬುದಾಗಿ ಶಾಸ್ತ್ರಕಾರರು ಹೇಳಿದ್ದಾರೆ.

स्वराष्ट्रे न्यायवृत्तः स्यात् भृशदण्डश्च शत्रुषु ।

सुहृत्स्वजिह्मः स्निग्धेषु ब्राह्मणेषु क्षमान्वितः ॥

ರಾಜನಾದವನಿಗೆ ತನ್ನ ರಾಜ್ಯದಲ್ಲಿ ನ್ಯಾಯೋಚಿತವಾಗಿ ನಡೆದುಕೊಳ್ಳುವುದು(ದಂಡ ನೀಡುವುದು), ಶತ್ರುಗಳನ್ನು ಚೆನ್ನಾಗಿ ದಂಡಿಸುವುದು, ಪ್ರೀತಿಪಾತ್ರರ ಜೊತೆಗೆ ನಿಷ್ಕಪಟನಂತೆ ವ್ಯವಹರಿಸುವುದು ಹಾಗೂ ಬ್ರಾಹ್ಮಣರಲ್ಲಿ ಕ್ಷಮೆಯನ್ನು ಹೊಂದುವುದು ಯೊಗ್ಯವಾಗಿದೆ.

ಈ ರೀತಿಯಾಗಿ ದುಷ್ಟರನ್ನು ದಂಡಿಸಲು ಬೇಕಾದ ಶಾಸ್ತ್ರೀಯ ಆದೇಶಗಳು  ನಮ್ಮ ಇತರ ಪ್ರಾಚೀನ ಗ್ರಂಥಗಳಲ್ಲಿಯೂ ಹೇರಳವಾಗಿವೆ. ದುಷ್ಟರನ್ನು ಕ್ಷಮಿಸುವುದು ದಯೆ ತೋರಿಸುವುದು ಅಥವಾ ಅವರಿಗೆ ಸಣ್ಣ ಪ್ರಮಾಣದ ಶಿಕ್ಷೆಯನ್ನು ಕೊಡುವುದು ಮುಂತಾದವುಗಳಿಂದ ದೇಶದಲ್ಲಿ ಯಾವತ್ತೂ ಶಾಂತಿ ನೆಲೆಸಲು ಸಾಧ್ಯವಿಲ್ಲ. ಮತ್ತು ಯಾವತ್ತೂ ಧರ್ಮದ ಪಾಲನೆಯಾದಂತಾಗುವುದಿಲ್ಲ. ಮಹಾಭಾರತದ ಶಾಂತಿಪರ್ವದಲ್ಲಿ ಮಹಾರಾಜ ಯುಧಿಷ್ಠಿರನು ಯುದ್ಧದಲ್ಲಾದ ಸಾವುನೋವುಗಳಿಂದ ಉದ್ವಿಗ್ನನಾಗಿ ರಾಜ್ಯವನ್ನು ಬಿಟ್ಟು ಬಿಡುವ  ವಿಚಾರವನ್ನು ಮಾಡುತ್ತಿದ್ದಾಗ ೧೫ನೇ ಸರ್ಗದಲ್ಲಿ ಆತನಿಗೆ ವೀರಪುತ್ರ ಅರ್ಜುನನು  “ಶಾಸನದಂಡ” ಕ್ಕೆ ಸಂಬಂಧಿಸಿದಂತೆ ತಿಳಿಯಪಡಿಸುತ್ತ ಏನು ಹೇಳಿದನೋ ಅದು ಬಹಳ  ಮಹತ್ವಪೂರ್ಣಾವಾಗಿದೆ. ಅದರಿಂದ ಕೆಲವು ಉಪದೇಶಗಳನ್ನು ಇಲ್ಲಿ ಕೊಡಲಾಗಿದೆ.

दण्डः शास्ति प्रजाः सर्वाः दण्ड एवाभिरक्षति ।

दण्डः सुप्तेषु जागर्ति दण्डं धर्म विदुर्बुधाः ॥

दण्डः संरक्षते धर्मं तथैवार्थं जनाधिप ।

कामं संरक्षते दण्डस्त्रिवर्गो दण्ड उच्यते ॥

दण्डेन रक्ष्यते धान्यं धनं दण्डेन रक्ष्यते ।

एवं विद्वन्नुपाधत्स्व भावं पश्यस्व लौकिकम् ॥

ಪ್ರಜೆಗಳನ್ನು ಆಳುವುದು ಮತ್ತು ಪೋಷಿಸುವುದು  ದಂಡವೇ. ಜಗವೆಲ್ಲ ಮಲಗಿರಲು ದಂಡವೊದೇ ಎಚ್ಚೆತ್ತಿರುವುದು. ಆದ್ದರಿಂದಲೇ ಪಂಡಿತರು ದಂಡವನ್ನು ಧರ್ಮವೆಂದಿದ್ದಾರೆ.

ದಂಡವು ಧರ್ಮವನ್ನು ಸಂರಕ್ಷಿಸುತ್ತದೆ. ಅರ್ಥವನ್ನು ಕಾಪಾಡುತ್ತದೆ. ಕಾಮವನ್ನು ಪೋಷಿಸುತ್ತದೆ. ಆದ್ದರಿಂದ ದಂಡವನ್ನು ತ್ರಿವರ್ಗವೆಂದು ಕರೆಯಲಾಗುತ್ತದೆ.

ದಂಡದಿಂಡ ಧನಧಾನ್ಯಗಳ ರಕ್ಷಣೆಯಾಗುತ್ತದೆ. ಆದ್ದರಿಂದ ಹೇ ರಾಜೇಂದ್ರ,  ಹೀಗೆಯೇ ಲೊಕರಕ್ಷಾಸ್ವರೂಪವಾದ ದಂಡವನ್ನು ಹಿಡಿದು ಲೌಕಿಕಭಾವವನ್ನು ಹೊಂದುವಂತವನಾಗು.

नान्यतः कीर्तिरस्तीह न वित्तं न पुनः प्रजाः ।

इन्द्रो वृत्त्रवधेनैव महेन्द्रः समपद्यत ॥

ರಾಜರುಗಳು ತಮ್ಮ ಶತ್ರುಗಳನ್ನು ಮುಗಿಸದಿದ್ದರೆ ಅವರ ಸಂಪತ್ತು ಕೀರ್ತಿ ಹಾಗೂ ಪ್ರಜೆಗಳು ಸ್ಥಾಯಿಯಾಗುಳಿಯುವುದಿಲ್ಲ. ಇಂದ್ರನು ವೃತ್ರಾಸುರನನ್ನು ಕೊಂದಿದ್ದಿಂದಲೇ ಮಹೇಂದ್ರನೆಂದು ಪ್ರಸಿದ್ಧನಾದ.

 

दण्डनीत्यां प्रणीतायां सर्वे सर्वे सिध्यन्त्युपक्रमाः ।

कौन्तेय सर्वभूतानां तत्र मे नास्ति संशयः ॥

दण्दश्चेन्न भवेल्लोके विनश्येयुरिमाः प्रजाः ।

जले मत्स्यानिवाभक्षन् दुर्बलान् बलवत्तरः ॥

 

दण्डे स्थिताः प्रजाः सर्वाः भयं दण्डे विदुर्बुधाः ।

दण्डे स्वर्गो मनुष्याणां लोकोयं सुप्रतिष्ठितः ॥

न तत्र कूटं पापं या वञ्चना वापि दृश्यते ।

यत्र दण्डः सुविहितश्चरत्यरिविनाशनः ॥

Friday, May 6, 2022

ಯುದ್ಧನೀತಿ ಮತ್ತು ಅಹಿಂಸೆ (5. ಸೋಮನಾಥದ ಮೇಲೆ ದಾಳಿ)

 

5. ಸೋಮನಾಥದ ಮೇಲೆ ದಾಳಿ

 

ರಾಜಾ ಜಯಪಾಲನು ಚಿತೆಗೆ ಹಾರಿ ಮರಣವನ್ನಪ್ಪಿದ ಬಳಿಕ ಪಶ್ಚಿಮ ಪಂಜಾಬ್ ನಲ್ಲಿ ಮುಸಲ್ಮಾನರ ಆಡಳಿತ ಆರಂಭಗೊಂಡಿತು. ಗಜನಿಯ ಸುಲ್ತಾನ್ ಮೊಹಮ್ಮದ್ ಹಿಂದುಸ್ಥಾನದ ಮೇಲೆ ಸತತವಾಗಿ ೧೭ ಬಾರಿ ದಾಳಿ ಮಾಡಿದ. ಅವನು ಎಲ್ಲೆಲ್ಲಿ ಹೋದನೋ ಹಿಂದುಗಳ ಕಗ್ಗೊಲೆಯನ್ನು ಮಾಡುತ್ತಾ, ದೇವಾಲಯಗಳನ್ನು ಕೆಡವುತ್ತಾ ನಗರಗಳನ್ನು ಲೂಟಿಗೈಯುತ್ತಾ  ಮತಾಂಧತೆಯ ಹಮ್ಮಿನಲ್ಲಿ ಅವನ್ನೆಲ್ಲ ಸುಟ್ಟು ಸಂತೋಷಪಡುತ್ತಿದ್ದ. ಸಾವಿರಾರು ಹಿಂದುಗಳನ್ನು ಗುಲಾಮರನ್ನಾಗಿ ಮಾಡಿ ಗಜನಿಯ ಮಾರುಕಟ್ಟೆಗಳಲ್ಲಿ  ಮೂರು ಮೂರು ಪೈಸೆಗಳಿಗೆ  ಮಾರುತ್ತಿದ್ದ.  ಅಷ್ಟಾದರೂ ಸಂಘಟಿತರಾಗಿ ಈ ಲೂಟಿಕೋರರನ್ನು ಎದುರಿಸಬೇಕೆಂದು ಇಲ್ಲಿನ ಹಿಂದುಗಳು ಯೋಚಿಸಲಿಲ್ಲ. ಅಂತಿಮವಾಗಿ ೧೦೨೪ ನೇ ಇಸವಿಯಂದು ಕಾತಿಯಾವಾಡದ  ಪ್ರಸಿದ್ಧ ಸೋಮನಾಥ ದೇವಾಲಯದ ಮೇಲೆ ಮೊಹಮ್ಮದ್ ದಾಳಿ ಮಾಡಿದ. ಅವನ ಸೈನ್ಯ ಸಂಪೂರ್ಣ ಪಂಜಾಬ್, ರಜಪೂತಾನಾ ಮತ್ತು ಕಾತಿಯಾವಾಡವನ್ನು ದಾಟಿ ಸಮುದ್ರ ಕಿನಾರೆಯಲ್ಲಿರುವ ಸೋಮನಾಥವನ್ನು ತಲುಪಿತು. ಆಶ್ಚರ್ಯವೆಂದರೆ ಒಬ್ಬನೇ ಒಬ್ಬ ಹಿಂದು ರಾಜ ಚಾ ಚೂ ಎನ್ನಲಿಲ್ಲ. ಏನು ಎಲ್ಲರಿಗೂ ಹಾವು ಕಚ್ಚಿತ್ತೇ ?

ಸೋಮನಾಥದ ರಕ್ಷಣೆಗಾಗಿ ಒಂದು ದೊಡ್ಡ ಹಿಂದು ಸೈನ್ಯ ಸಿದ್ಧವಾಗಿತ್ತು.  ಆದರೆ ಅಲ್ಲಿನ ಕೆಟ್ಟ ಜ್ಯೊತಿಷಿಗಳಿಂದ “ಈಗ ಮುಹೂರ್ತ ಹಾಗೂ ಗ್ರಹಗತಿ ಚೆನ್ನಾಗಿಲ್ಲ” ಎಂದು ಹೇಳಿ ಆ ವೀರ ರಜಪೂತರನ್ನು ತಡೆಯಲಾಯಿತು. ಹಾಗೆ ಗಜನಿ ಮೊಹಮ್ಮದನಿಗೆ  ಆತನ ಸಿದ್ಧತೆಗೆ  ಮತ್ತೆ ಕಾಲಾವಕಾಶವನ್ನು ಕೊಟ್ಟಂತಾಯಿತು. ಸರಿ, ಯುದ್ಧದಲ್ಲಿ ಮುಹೂರ್ತ ಮತ್ತು ಗ್ರಹಗತಿ ನೋಡುತ್ತಾರೆಯೇ ? ಇಂಥ ಮೂರ್ಖತನದ ಮೂಢನಂಬಿಕೆಯಿಂದಲೇ ಹಿಂದೂಧರ್ಮದ ಹಡಗು ಮುಳುಗುತ್ತಿದೆ ಮತ್ತು ವಿನಾಶದ ಆಳವಾದ ಕಂದರದಲ್ಲಿ ತಂದು ನಿಲ್ಲಿಸಿದೆ.

ಮತ್ತೆ ಸೋಮನಾಥದ ಯುದ್ಧ ಆರಂಭವಾದಾಗ ಮೊಹಮ್ಮದ್ ೩೦೦ ಗೋವುಗಳನ್ನು ತರಿಸಿ ತನ್ನ ಸೇನೆಯ ಮುಂದೆ ನಿಲ್ಲಿಸಿದ. ಎಕೆಂದರೆ ಹಿಂದುಗಳು ಮುಂದೆ ನಿಂತಿರುವ ದನಗಳನ್ನು ನೋಡಿ ದಾಳಿ ಮಾಡುವುದಿಲ್ಲ ಎಂಬುದಾಗಿ ಅವನಿಗೆ ಗೊತ್ತಿತ್ತು. ಹಾಗೆಯೇ ಆಯಿತು. ಹಿಂದೂ ಸೈನಿಕರು ಮುಂದೆ ನಿಂತಿರುವ  ಗೋಮಾತೆಯರನ್ನು ನೋಡಿ ಶಸ್ತ್ರಪ್ರಯೊಗವನ್ನೇ ಮಾಡಲಿಲ್ಲ. ಪರಿಣಾಮಸ್ವರೂಪವಾಗಿ ಅವರು ಸೋತು ಹೋದರು.  ಮಹಮ್ಮದನ ಸೈನ್ಯ ಅವರನ್ನು ತುಳಿದು ಹಾಕಿತು. ಮತ್ತು ಮಂದಿರವನ್ನು ಹೊಕ್ಕು ಸೋಮನಾಥನ ವಿಗ್ರಹವನ್ನು ಪುಡಿಗೈಯಿತು. ಹಾಗೆಯೇ ಅದರ ಒಂಡು ತುಂಡನ್ನು ತೆಗೆದುಕೊಂಡು ಹೋಗಿ ರಾಜದ್ವಾರದ ಹೊಸ್ತಿಲಿನಲ್ಲಿ ಎಲ್ಲರೂ ಮೆಟ್ಟಿಕೊಂಡು ತಿರುಗಾಡಲಿ ಎಂದು ಹುದುಗಿಸಿ ಇಟ್ಟರು.

ಹಿಂದುಗಳ ಅಸಂಬದ್ಧವಾದ ದಯಾಭಾವನೆಯ ಪರಿಣಾಮವಾಗಿ ಅದರ ಲಾಭವನ್ನು ಮಹಮ್ಮದ್ ಪಡೆದುಕೊಂಡುಬಿಟ್ಟ. ಆ ಸಮಯದಲ್ಲಿ ಆ ಹಿಂದೂ ಸೈನಿಕರು ತಮ್ಮ ಮಂದಿರ, ಧರ್ಮ ಹಾಗೂ ದೇಶದ ರಕ್ಷಣೆಗಾಗಿ ೩೦೦ ಗೋವುಗಳ ಮೇಲೆ ದಯೆಯನ್ನು  ತೋರಿಸದೆ  ಶತ್ರುವಿನ ಮೇಲೆ ಆಕ್ರಮಣವನ್ನು ಮಾಡಿದ್ದಿದ್ದರೆ  ಇವತ್ತು ಪ್ರತಿದಿನ  ಎಪ್ಪತ್ತು ಸಾವಿರ ಗೋವುಗಳನ್ನು ಭಾರತದಲ್ಲಿ ಕೊಲ್ಲಲಾಗುತ್ತಿದೆಯೋ ಅದಕ್ಕೆ ಅವಕಾಶವೇ ಇರುತ್ತಿರಲಿಲ್ಲ. ಏಕೆಂದರೆ  ಮಹಮ್ಮದನ ಸೈನ್ಯ ಸೋತ ಬಳಿಕ ಯಾವನೇ ಆಕ್ರಮಣಕಾರಿ ಮುಸಲ್ಮಾನ್ ಭಾರತದ ಮೇಲೆ ಆಕ್ರಮಣ ಮಾಡುವ ಸಾಹಸವನ್ನೇ ಮಾಡುತ್ತಿರಲಿಲ್ಲ. ಇಲ್ಲಿ ಮುಸಲ್ಮಾನರ ಜನಸಂಖ್ಯೆ ಇಷ್ಟರಮಟ್ಟಿಗೆ ಬೆಳೆಯುತ್ತಿರಲಿಲ್ಲ. ಪ್ರತಿದಿನ ಇಷ್ಟು ಗೋವುಗಳ ಹತ್ಯೆಯಾಗುತ್ತಿರಲಿಲ್ಲ. ಪಾಕಿಸ್ಥಾನ ಹುಟ್ಟುತ್ತಿರಲಿಲ್ಲ. ಹಾಗಾಗಿ ಹಿಂದುಗಳ ಅಸಂಬದ್ಧ ಔದಾರ್ಯಕ್ಕೆ  ಧಿಕ್ಕಾರ. ಇವೆಲ್ಲದಕ್ಕೆ ಸಾಕ್ಷಿಯಾಗಿ ಇಂದಿಗೂ ಸಹ ಸೋಮನಾಥಮಂದಿರದ ಭಗ್ನಾವಶೇಷ   ಉಳಿದುಕೊಂಡಿದೆ. ನಾನು ನನ್ನ ಕಾತಿಯಾವಾಡ ದ ಪ್ರವಾಸದಲ್ಲಿ  ಈ ಮಂದಿರದ ಧ್ವಂಸಗೊಳಿಸಿದ ಶಿಖರವೇರಿ ಆಗಿನ ಹಿಂದುಗಳ ಮೂರ್ಖತನಕ್ಕಾಗಿ ಕಣ್ಣೀರು ಸುರಿಸಿದೆ. ಸಮುದ್ರದ ಅಲೆಗಳ ಭೋರ್ಗರೆತದಲ್ಲಿ ಭಗ್ನ ಶಿಖರದ ಅಳು ಬೆರೆತು ನನ್ನೊಂದಿಗೆ ಅತ್ತಂತೆ ಭಾಸವಾಯಿತು.

Thursday, May 5, 2022

ಯುದ್ಧನೀತಿ ಮತ್ತು ಅಹಿಂಸೆ (೪.ರಾಜಾ ಜಯಪಾಲ)

 

೪.ರಾಜಾ ಜಯಪಾಲ

ಕ್ರಿ.ಶ. 997 ರಲ್ಲಿ ಖುರಾಸಾನ್ ನ ಅಧಿಕಾರಿಯಾದ ಸಬಕ್ತಗೀನ್ ಗಜನಿಯ ಮೇಲೆ ತನ್ನ ಅಧಿಕಾರವನ್ನು ವಿಸ್ತರಿಸಿ ಹಿಂದುಸ್ಥಾನದ ಮೇಲೆ ಆಕ್ರಮಣಗೈಯ್ಯಲು ಆರಂಭಿಸಿದ. ಆಗ ಜಯಪಾಲ ಪಂಜಾಬ್ ನ ರಾಜನಾಗಿದ್ದ. ಅವನು ಅಫಘಾನಿಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಶೇಖ್ ಹಮೀದನೆಂಬ ಒಬ್ಬ ಮುಸಲ್ಮಾನನನ್ನು ಗಡಿಯಲ್ಲಿ ನಿಯೋಜಿಸಿದ. ಹಾಗೆಯೇ ಅವನಿಗೆ ಪೇಶಾವರದಿಂದ ಖೈಬರ್ ವರೆಗಿನ ಭಾಗವನ್ನು ಕೊಟ್ಟು ಅಲ್ಲಿನ ನವಾಬನನ್ನಾಗಿ ಮಾಡಿದ. ಹಮೀದ್ ಆಣೆ ಮಾಡಿ “ಕಾಬೂಲ್ ನಿಂದ ದಾಳಿಯನ್ನು ನಾನು ತಡೆಯುತ್ತೇನೆ”  ಎಂದು ಜಯಪಾಲನಿಗೆ ಹೇಳಿದ.

ಸಬಕ್ತಗೀನ್ ನನ್ನು ವಶಪಡಿಸಿಕೊಳ್ಳಲು ಜಯಪಾಲನು ಅಫಘಾನಿಸ್ತಾನದ ಮೇಲೆ ಆಕ್ರಮಣವನ್ನು ಮಾಡಿದ. ಹಾಗೆಯೇ ಜಲಾಲಾಬಾದ್ ತಲುಪಿ ಅಲ್ಲಿ ಶಿಬಿರ ಹೂಡಿದ. ಸಬಕ್ತಗೀನ್ ಯದ್ಧವನ್ನು ಮುಂದೂಡುತ್ತಾ ಕಾಲ ಕಳೆದ. ಯಾವಾಗ ಚಳಿಗಾಲ ಆರಂಭವಾಗಿ ಹಿಮಗಡ್ಡೆಗಳುಂಟಾಗಲು ಆರಂಭಿಸಿದವೋ ಆಗ ಜಯಪಾಲ ತನ್ನ ಸೇನೆಯನ್ನು ವಾಪಾಸು ಕಳುಹಿಸಲು ಆರಂಭಿಸಿದ. ಆಗ ಆದ ಹಿಂದುಸ್ಥಾನದ ದಾರಿಯನ್ನು ದ್ರೊಹಿಯಾದ ಶೆಖ್ ಹಮೀದ್ ಮುಚ್ಚಿಸಿದ್ದ. ಎಕೆಂದರೆ ಅವನು ಮುಸಲ್ಮಾನರೊಂದಿಗೆ ಕೈಜೋಡಿಸಿದ್ದ. ಜಯಪಾಲನ ಸೇನೆ ಎರಡೂ ಕಡೆಯಿಂದ ಶತ್ರುಗಳಿಂದ ಆವರಿಸಲ್ಪಟ್ಟಿತು. ಸಬಕ್ತಗೀನ್ ಗೆ ದೊಡ್ಡ ಮೊತ್ತದ ಹಣವನ್ನು ಕೊಟ್ಟು ಬಹಳ ಕಷ್ಟದಿಂದ  ಬಿಡುಗಡೆಯನ್ನು ಪಡೆಯಬೇಕಾಯಿತು.

ಕೆಲವು ದಿವಸಗಳ ಬಳಿಕ ಸಬಕ್ತಗೀನ್ ಜಯಪಾಲನ ಮೇಲೆ ಮತ್ತೆ ಆಕ್ರಮಣವನ್ನು ಮಾಡಿದ. ಜಯಪಾಲ ಒಂದು ದೊಡ್ಡ ಸೈನ್ಯದೊಂದಿಗೆ ಪೇಶಾವರದ ಬಳಿ ಹೋಗಿ ಅವನೊಂದಿಗೆ ಕಾದಾಡಿದ. ಭಾರೀ ಪ್ರಮಾಣದ ಯುದ್ಧವಾಗುತ್ತಿದ್ದಂತೆ ಜಯಪಾಲನು ಇನ್ನೊಂದು ದೊಡ್ಡ ಪ್ರಮಾದವನ್ನೆಸಗಿದ. ಆತ ತಾನು ಕುಳಿತಿದ್ದ ಆನಿಯಿಂದ ಇಳಿದು ಬಂದು ಕುದುರೆಯನ್ನು ಏರಿದ. ಅವನ ಸೈನ್ಯವು ರಾಜನಿಲ್ಲದ ಆನೆಯನ್ನು ನೋಡಿ ರಾಜ ಕೊಲ್ಲಲ್ಪಟ್ಟನೆಂದು ಭಾವಿಸಿತು. ಆದ್ದರಿಂದಲೇ ಆತನ ಸೇನೆ ಹೆದರಿ ಕಾಲ್ಕಿತ್ತಿತು. ಹಿಂದೂಗಳಿಗೆ ಸೋಲುಂಟಾಯಿತು. ರಾಜ ಜೀವಂತವಾಗಿ ಚಿತೆಯೇರಿ ಸುಟ್ಟು ಸತ್ತು ಹೋದ. ಮುಸಲ್ಮಾನರು ಆತನ ಎಲ್ಲಾ ಸಾಮಾನುಗಳನ್ನು ಲೂಟಿಗೈದರು.

ಈ ಐತಿಹಾಸಿಕ ಘಟನೆಯಿಂದ ರಾಜಾ ಜಯಪಾಲನು ಯುದ್ದನೀತಿ ಕುಶಲನಾಗಿರಲಿಲ್ಲ ಎಂಬುದಾಗಿ ತಿಳಿಯುತ್ತದೆ. ಅವನು ಒಂದಲ್ಲ ಎರಡಲ್ಲ. ನಿರಂತರವಾಗಿ  ಮೂರು ಪ್ರಮಾದವನ್ನೆಸಗಿದ.  ತನ್ನ ಗಡಿಯ ರಕ್ಷಣೆಗೆ ಶೇಖ್ ಹಮೀದನನ್ನು ನಿಯುಕ್ತಿಗೊಳಿಸಿದ್ದು ಅವನು ಮಾಡಿದ ಮೊದಲ ದೊಡ್ಡ ತಪ್ಪು ಆಗಿತ್ತು. ಸಿಂಧ್ ನ ರಾಜನಾದ ದಾಹರನಿಗೆ ಅಲ್ಲಾಫಿ ಮುಸಲ್ಮಾನರು ಇದೇ ರೀತಿಯಾಗಿ ದ್ರೊಹವನ್ನೆಸಗಿದ್ದನ್ನು ಜಯಪಾಲ ನೊಡಿದ್ದ. ಅವನಿಗೆ ತನ್ನ ಗಡಿಯ ರಕ್ಷಣೆಗೆ ಒಬ್ಬ ವೀರ ಹಿಂದೂ ಕ್ಷತ್ರಿಯ ಸಿಗಲಿಲ್ಲವೇ ?

ಅವನು ಎರಡನೆಯದಾಗಿ ಯುದ್ಧಕ್ಷೇತ್ರದಲ್ಲಿ ರಣರಂಗದಲ್ಲಿ ಆನೆಯಿಂದಿಳಿದು ಕುದುರೆಯನ್ನೇರುವುದರ ಮೂಲಕ ತಪ್ಪನ್ನು ಮಾಡಿದ. ಆತನ ಈ ಕೆಲಸ ಯುದ್ಧನೀತಿಗೆ ವಿರುದ್ಧವಾಗಿತ್ತು.

ಮೂರನೆಯದಾಗಿ ಆತ ಜೀವಂತವಾಗಿ ಚಿತೆಯನ್ನೇರಿ ಸುಟ್ಟು ಸಾಯುವ ತಪ್ಪನ್ನು ಮಾಡಿದ.  ಅದು ಕ್ಷತ್ರಿಯನಿಗೆ ಸರ್ವಥಾ ಅನುಚಿತವಾದ ಕೆಲಸವೆನ್ನಿಸುವುದು. ಯುದ್ಧದಲ್ಲಿ ಸೋಲುಂಟಾದರೆ ಸೈನ್ಯವನ್ನು ಒಂದುಗೂಡಿಸಿ ಪುನಃ ಯುದ್ಧವನ್ನು ಮಾಡಬೆಕಾಗಿತ್ತು. ಕ್ಷತ್ರಿಯ ಆತ್ಮಹತ್ಯೆಯನ್ನು ಮಾಡುವುದು ಮಹಾಪಾಪವಾಗುತ್ತದೆ. ಮತ್ತೆ ನಾವು  ಕಷ್ಟಕಾಲದಲ್ಲಿ ತನ್ನ ಸ್ವಾಮಿಗಿ ನಂಬಿಕೆ ದ್ರೋಹವನ್ನು ಬಗೆದ ಆ ದುಷ್ಟ ಶೇಖ್ ಹಮೀದ್ ನ ವಿಷಯದಲ್ಲಿ ಏನು ಹೇಳಬೇಕು ?

ಆದರೆ ಮುನ್ಶಿ ಕರಮ್ ಇಲಾಹಿಯು ತನ್ನ ಪುಸ್ತಕ “ಬಹಾದುರಾನೆ ಇಸ್ಲಾಂ” ನಲ್ಲಿ ಈ ವಿಶ್ವಾಸದ್ರೋಹಿಯ ಪ್ರಶಂಶೆಯನ್ನು ಮಾಡುತ್ತಾ “ಶೆಖ್ ಹಮೀದನು ಸಬಕ್ತಗೀನ್ ನೊಂದಿಗೆ ಕೈಜೋಡಿಸಿದ್ದು ಯೋಗ್ಯ ಹಾಗು ಉಚಿತವಾಗಿತ್ತು. ಅವನು ಸರಿಯಾಗಿಯೇ ಮಾಡಿದ್ದಾನೆ. ಅವನು ಈ ರೀತಿಯಾಗಿ ಇಸ್ಲಾಂ ನ ಸೇವೆಯನ್ನು ಮಾಡಿದ್ದಾನೆ” ಎಂದು ಹೇಳಿದ್ದಾನೆ.

ವಾರೆ ವ್ಹಾ !!! ಇಸ್ಲಾಂ ನ ಸೇವೆ !!!

ಇಂತಹ ಸೇವೆಗೆ ಧಿಕ್ಕಾರವಿರಲಿ.

ವಿಶ್ವಾಸಾಘಾತವನ್ನೆಸಗಲು ಕಲಿಸುವ ಇಂತಹ ಮತದ ಸೇವೆಗೆ ಧಿಕ್ಕಾರವಿರಲಿ.