ಸಂತಸದ ಸುದ್ದಿ
ಇವತ್ತು ಒಂದು ಸಂತಸದ
ಸುದ್ದಿ ಇದೆ. ದೇವರು ನಿಜವಾಗಲೂ ಇದ್ದೇನೆಂದು ಅದೆಷ್ಟು ಬಾರಿ ಸಾಬೀತುಪಡಿಸ್ತಾನೆ ಅಂತ ಆಶ್ಚರ್ಯ
ಆಗುತ್ತದೆ.
ಇವತ್ತು ಸಂಜೆ ೫.೪೫ ರ
ಸಮಯ. ಕಾಲೇಜಿನಲ್ಲಿ ಇನ್ನೇನು ನಾನು ನನ್ನ ಕಂಪ್ಯೂಟರ್ ಶಟ್ ಡೌನ್ ಮಾಡಿ ಬ್ಯಾಗಿಗೆ
ತುಂಬಿಸುವುದರಲ್ಲಿದ್ದೆ. ಆಗ ನಮ್ಮ ಪ್ರೊ.ಚಂದ್ರಕಾಂತ ಭಟ್ಟರು ನಮ್ಮ ವಿಭಾಗದ ಒಳಗೆ ಬಂದರು. ಒಂದು
ಲವ್ ಲೆಟರ್ ನ ಸುದ್ದಿ ಇದೆ. ಗೊತ್ತಾಗಿದೆಯಾ ಅಂತ ಕೇಳಿದರು. ನಾನು ಊಹೆ ಮಾಡಿದ್ದು ಪ್ರಾಯಶಃ ಅದೇ
ಸುಬ್ರಾಯ ಭಟ್ಟರ ಏನೋ ವಿಚಾರ ಇರಬಹುದು ಅಂತ. ನಾನು ಗೊತ್ತಿಲ್ಲ ಅಂದೆ.
ನಮ್ಮ ಕ್ಯಾಂಪಸ್
ಡೈರೆಕ್ಟರ್ ಪ್ರೊ. ಹಂಸಧರ ಝಾ ಹೇಳಿದರು ಅಂತ ಅವ್ರು
ಆರಂಭಿಸಿದ್ರು – ಒಂದು ಲೆಟರ್ ಆರ್ಡಿನರಿ ಪೋಸ್ಟ್ ನಲ್ಲಿ ಶೃಂಗೇರಿಯ ಪೋಸ್ಟ್ ಡಬ್ಬಿಗೆ ಯಾರೋ
ಹಾಕಿದ್ರು. ಪೋಸ್ಟ್ ಮ್ಯಾನ್ ಆ ಪೋಸ್ಟ್ ಡಬ್ಬಿಯನ್ನು ಓಪನ್ ಮಾಡಿದಾಗ ಸ್ಟಾಂಪ್ ಇಲ್ಲದ ಪತ್ರ
ಸಿಕ್ಕಿತು. ಅದರಲ್ಲಿ ಫ್ರಮ್ ಅಡ್ರೆಸ್ ಇರಲಿಲ್ಲ. ಟು ಅಡ್ರೆಸ್ ಇತ್ತು. ಅದು ನಮ್ಮ
ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಶ್ರೀನಿವಾಸ ವರಖೇಡಿಯವರಿಗೆ(ಡಿಲ್ಲಿಗೆ) ಬರೆದ
ಪತ್ರವಾಗಿತ್ತು. ಪೋಸ್ಟ್ ಮ್ಯಾನ್ ಸ್ಟಾಂಪ್ ಇಲ್ಲದ ಪತ್ರ ನಮ್ಮ ಕಾಲೆಜಿನದ್ದೇ ಅಂತ ಊಹಿಸಿ ಕಾಲೇಜಿನ ಆಫೀಸಿಗೆ ತಂದು ಕೊಟ್ಟು ಸ್ಟಾಂಪ್ ಹಚ್ಚಿ
ಕೊಡಲು ಹೇಳಿದ. ಗುರುರಾಜ ಭಟ್ಟರು “ಕುಲಪತಿಗಳಿಗೆ ಇಂತಹ ಯಾವುದೇ ಪತ್ರ ಆರ್ಡಿನರಿ ಪೋಸ್ಟ್ ನಲ್ಲಿ ಇಲ್ಲಿಂದ
ಕಳುಹಿಸುವುದಿಲ್ಲ” ಎಂದು ಚಕಿತರಾಗಿ ಅದನ್ನು ನನ್ನ(ಡೈರಕ್ಟರ್ ರವರ) ಗಮನಕ್ಕೆ ತಂದಾಗ, ಹಾಗಾದ್ರೆ
ಅದರಲ್ಲಿ ಯಾರು ಏನು ಬರೆದಿರಬಹುದು ಎಂದು ಒಂದು ಸಲ ಪರಿಶೀಲಿಸಬೇಕು ಎಂಬುದಾಗಿ ತೆರೆದು ನೋಡಿದಾಗ ಸ್ಪಸ್ಟ
ಆಯಿತು – ಇದು ಅದೇ ಮನುಷ್ಯನ ಕಿತಾಪತಿ ಅಂತ. ಅದರಲ್ಲಿ ಹೀಗೆಲ್ಲಾ ಬರೆದಿತ್ತು - ಬಿಹಾರಿ ಡೈರೆಕ್ಟರ್ ಬಂದಾಗಿನಿಂದ ಇಲ್ಲಿ ಯಾವುದೇ
ರೀತಿಯ ವ್ಯವಸ್ಥಿತ ಅಡ್ಮಿನಿಸ್ಟ್ರೇಶನ್ ಇಲ್ಲ. ಎಲ್ಲರೂ ಸಂತೆಯ ತರಹ ಎಲ್ಲೆಂದರಲ್ಲಿ ವಾಹನಗಳನ್ನು
ನಿಲ್ಲಿಸುತ್ತಾರೆ. ಕೆಲವರಂತೂ ಬಂದು ಸೈನ್ ಮಾಡಿ ಪೇಟೆ ಕಡೆಗೆ ವೈಯಕ್ತಿಕ ಕೆಲಸಗಳಿಗೆ
ಹೋಗುತ್ತಾರೆ. ಒಬ್ಬನಂತೂ ಸೈನ್ ಮಾಡಿದ ತಕ್ಷಣ ಫುರ್ ಅಂತ ಬೈಕ್ ಸ್ಟಾರ್ಟ್ ಮಾಡಿ ಓಡಿ ಹೋಗ್ತಾನೆ.
ಇನ್ನೊಬ್ಬ ಆರೋಗ್ಯ ಸರಿಯಿದ್ದರೂ ಮೆಡಿಕಲ್ ಲೀವ್ ಹಾಕಿ ಪೌರೊಹಿತ್ಯ ಮಾಡ್ತಾನೆ. ಕುಲಪತಿಗಳೂ
ಸರಿಯಿಲ್ಲ. ಯಾರ್ಯಾರಿಗೋ ಶಿಕ್ಷಾವಿಭೂಷಣ ಎಂಬ ಬಿರುದು ಕೊಡ್ತಾರೆ. ಅದು ವಿಭೂಷಣವೋ ವಿಭೀಷಣವೋ ?
ಇಲ್ಲಿ ನ್ಯಾಕ್ ಗಾಗಿ ಎಸ್ಟೆಸ್ಟೋ ಕೆಲಸ ಮಾಡಿದವರಿಗೆ ಏನೂ ಸನ್ಮಾನ ಇಲ್ಲ. ಪುರಸ್ಕಾರವೂ ಇಲ್ಲ
ಇತ್ಯಾದಿ ಇತ್ಯಾದಿ.
ಆ ಕಾಗದವನ್ನು ಹಿಂದಿಯಲ್ಲಿ ಬರೆದಿದ್ದರು. ಅದರ ಭಾಷೆಯಿಂದಲೇ
ಸ್ಪಷ್ಟವಾಗುವುದು ಏನೆಂದರೆ ಇದನ್ನು ಯಾವನೋ ಒಬ್ಬ ಹಿಂದಿ ಮಾತೃಭಾಷೆಯಲ್ಲದವ ಬರೆದದ್ದು ಎಂದು.
ಅದರಲ್ಲಿ ಕೊನೆಗೆ ಶಿಕ್ಷಾವಿಭೂಷಣದ ಬಗ್ಗೆ ಆಕ್ಷೇಪ ಎತ್ತಿದ್ದೇ ಅದನ್ನು ಪಡೆದವರೋ ಅವರ
ಒಡನಾಡಿಗಳೋ ಬರೆದಿದ್ದಲ್ಲವೆಂದು ಸಾಬೀತುಪಡಿಸಲು. ಜೊತೆಗೆ ನ್ಯಾಕ್ ಗಾಗಿ ಕೆಲಸ ಮಾಡಿದವರಗಿಗೆ
ಶಿಕ್ಷಾವಿಭೂಷಣ ಕೊಡಲಿಲ್ಲ ಎಂದು ಬರೆದಿದ್ದೇ ಅನಂತಪದ್ಮನಾಭರು ಈ ಕಾಗದವನ್ನು ಬರೆದಿದ್ದಾರೆ ಎಂದು
ಕುಲಪತಿಗಳು ಊಹಿಸಲಿ ಅಂತ. ಏಕೆಂದರೆ ಹಾಗೆ ಬರೆಯುವುದರಿಂದ ಶಿಕ್ಷಾವಿಭೂಷಣ ಪಡೆದವರಿಗೆ ಯಾವುದೇ ಹಾನಿಯಿಲ್ಲ.
ಜೊತೆಗೆ ಕುಲಪತಿಗಳು ಇಂತಹ ಬಿರುದುಗಳನ್ನು ಸರಿಯಾಗಿ ಕೊಡುತ್ತಿಲ್ಲ ಎಂದು ಆಕ್ಷೇಪಗಳಿವೆ ಎಂಬುದೂ
ಇದರಿಂದ ತಿಳಿಯಲಿ ಅಂತ.
ಸೈನ್ ಮಾಡಿ ಬೈಕ್ ಪುರ್ ಅಂತ ಓಡಿಸಿಕೊಂಡು ಹೋಗುತ್ತಾರೆ ಅಂತ
ಬರೆದಿರುವುದು ಹರಿಪ್ರಸಾದ್ ಕುರಿತಾಗಿ. ನಾನು ಈಗ ಒಂದು ದಿವಸ ಪರಿಸರದ ಅಧ್ಯಾಪಕೇತರ ಕರ್ಮಚಾರಿಗಳಿಗೆ
ಗೀತಾ ಒಲಂಪಿಯಾಡ್ ನ ಪರೀಕ್ಷೆ ಕಟ್ಟಿಸಿದ್ದರಿಂದ ಅವರಿಗೆ ಪಾಠಮಾಡುವ ವ್ಯವಸ್ಥೆ ಮಾಡಿದ್ದೆ.
ಹಾಗಾಗಿ ಅವರ ಅಪೇಕ್ಷೆಯ ಮೇರೆಗೆ ನಾನು ಅವರಿಗೆ ಉಚಿತವಾಗಿ ಗೀತಾ ಪ್ರೆಸ್ ನ ಕನ್ನಡದ ಅರ್ಥ
ಸಹಿತವಾದ ಭಗವದ್ಗೀತೆಯ ಪುಸ್ತಕಗಳನ್ನು ಹಂಚ್ಚುತ್ತಿದ್ದೆ. ಐದಾರು ಪ್ರತಿಗಳು ಕಡಿಮೆಯಾಗಿದ್ದರಿಂದ
ಯಾವತ್ತು ನಾನು ಸೈನ್ ಮಾಡಿ ಅದನ್ನು ತರಲು ಪೇಟೆಗೆ ೯.೩೦ ಕ್ಕೆ ಹೋಗಿದ್ದೆನೋ ಆವತ್ತೇ ಸುಬ್ರಾಯ ಭಟ್ಟರು
ಸೈನ್ ಮಾಡಿ ಪೇಟೆಗೆ ಹೊರಡುತ್ತಿದ್ದ ನನ್ನನ್ನು ನೋಡಿ ಅವತ್ತೇ ಡೈರೆಕ್ಟರ್ ಬಳಿಯಲ್ಲಿ ಕಂಪ್ಲೆಂಟ್
ಮಾಡಿದ್ದರು. ನಾನು ಆವತ್ತು ಹತ್ತು ಗಂಟೆಗೆ ಪುಸ್ತಕ ಖರೀದಿ ಮಾಡಿ ಬಂದ ಮೇಲೆ ತಿಳಿಯಿತು ಈ
ಮನುಷ್ಯ ಡೈರೆಕ್ಟರ್ ಬಳಿಯಲ್ಲಿ ಕಂಪ್ಲೆಂಟ್ ಮಾಡಿದೆ ಅಂತ. ಹೀಗೇ ಆ ಕಾಗದದಲ್ಲಿಯೂ ಬರೆದಿದ್ದರಿಂದ
ಸ್ಪಸ್ಟ ಆಯ್ತು ಏನೆಂದರೆ ಅದನ್ನು ಬರೆದಿದ್ದು ಸುಬ್ರಾಯ ಭಟ್ಟ ಮತ್ತು ಆತನ ಪಟಾಲಮ್ಮೇ ಅಂತ.
ಚಂದ್ರಕಾಂತ ಭಟ್ಟರು ಹೆಚ್. ಪಿ. ಎಲ್. ತೆಗೆದುಕೊಂಡಿದ್ದರು. ಆದರೆ
ಆಫೀಸಿನ ಮಂಜುಳಾ ಎಮ್.ಎಲ್.(ಮೆಡಿಕಲ್ ಲೀವ್) ಅಂತ
ಅಟೆಂಡೆಂನ್ಸ್ ಬುಕ್ ನಲ್ಲಿ ಬರೆದಿದ್ದಳು. ಅದು
ಯಾರದ್ದೋ ಸೂಚನೆಯ ಮೇರೆಗೆ ಬರೆದಂತೆ ಅನಿಸುತ್ತದೆ. ಯಾಕೆಂದರೆ ಯಾವತ್ತೂ ಅಟೆಂಡೆಂನ್ಸ್ ಬುಕ್
ನಲ್ಲಿ ಎಮ್.ಎಲ್.(ಮೆಡಿಕಲ್ ಲೀವ್) ಅಂತ ಬರೆಯುವ ಪದ್ಧತಿ ಇಲ್ಲ. ಹಾಗಾದರೆ ಅವಳ ಕೈಯಲ್ಲಿ ಆ ರೀತಿ
ಬರೆಯಲು ಪ್ರೇರೇಪಿಸಿದವರು ಸುಬ್ರಾಯಭಟ್ಟರ ಪಟಾಲಮ್ಮಿನವರೇ ಎಂಬುದು ಸ್ಪಸ್ಟ.
ದೇವರು ನಿಜವಾಗಲೂ ಇದ್ದಾನೆ ರೀ. ಇಲ್ಲದಿದ್ದರೆ ಖದೀಮರ ಸಂಚು ಹೇಗೆ ಬಯಲಾಗುತ್ತೆ.
No comments:
Post a Comment