Sunday, September 28, 2025

ವಿಜಯವಾಣಿಗೆ ಪ್ರತಿಕ್ರಿಯೆ 30/01/2016

 



ಮಾನ್ಯ ಹರಿಪ್ರಕಾಶ ಕೋಣೆಮನೆಯವರಿಗೆ ನಮಸ್ಕಾರಗಳು.

ವಿಜಯವಾಣಿ ಪತ್ರಿಕೆಯಲ್ಲಿ ಬರೆದ ತಮ್ಮ ಇಂದಿನ ಲೆಖನ ಓದಿ ಅಚ್ಚರಿ ಹಾಗೂ ಕಿಚ್ಚು ಎರಡೂ ಹೆಚ್ಚಾಯಿತು. ಎರಡಕ್ಕೂ ಕಾರಣ ಒಂದೇ – ಎ.ಎಸ್.ಎ. ಮತ್ತು ಅದರ ಸಂಬಂಧಿಗಳಾದ ಕೇಜ್ರಿವಾಲ್, ರಾಹುಲ್ ಗಾಂಧಿ, ಸೀತಾರಾಮ ಯೆಚೂರಿ ಮುಂತಾದವರ ಕಪಟತನ ಮತ್ತು ದೇಶದ್ರೋಹ. ತಮ್ಮ ಲೇಖನದಲ್ಲಿ ಕೊಟ್ಟ ವಿವರಣೆ ನಿಜವಾಗಲೂ ಯಥಾರ್ಥವೆಂದಾದಲ್ಲಿ  ತಮಗೆ ಕೋಟಿ ಪ್ರಣಾಮಗಳನ್ನು ಸಲ್ಲಿಸುತ್ತಾ ನಾನು ನನ್ನ ಅನಿಸಿಕೆಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.

ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಕಾರಣೀಕರ್ತರಲ್ಲೊಬ್ಬನಾದ ಯಾಕುಬ್ ಮೆಮೊನ್ ನನ್ನು ಗಲ್ಲಿಗೆರಿಸಿದ್ದನ್ನು ವಿರೊಧಿಸಿದ ಯಾವನೆ ವ್ಯಕ್ತಿಯಾಗಲಿ ಆತ ಭಾರತವಿರೋಧಿ/ರಾಷ್ಟ್ರವಿರೋಧಿ ಹಾಗೂ ಮಾನವತಾವಿರೋಧಿ ಎಂಬುದು ಸ್ಪಷ್ಟ. ಅದನ್ನು ನಿರ್ಣಯಿಸಲು ಯಾವುದೇ ನ್ಯಾಯಿಕ ಪ್ರಕ್ರಿಯೆಯ ಆವಶ್ಯಕತೆಯಿರಬಾರದು. ಯಾಕೆಂದರೆ ಭಾರತವನ್ನು ನಾಶಮಾಡಲು ಹೊರಟಿರುವ ರಾಕ್ಷಸರಾದ ಉಗ್ರಗಾಮಿಗಳು ಮಾಡಿದ ಅಮಾನವೀಯ ಕೃತ್ಯ ಅದು. ಅದರಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿ ಸಾವಿರಾರುಮಂದಿ ಗಾಯಗೊಂಡು ಈಗಲೂ ಜೀವನ್ಮರಣಸ್ಥಿತಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಹಾಗಾಗಿ ಇದಕ್ಕೆಲ್ಲ ಕಾರಣನಾದ ಯಾಕುಬ್ ಮೆಮೊನ್ ನನ್ನು ಗಲ್ಲಿಗೆರಿಸಿದ್ದನ್ನು ವಿರೊಧಿಸಿದ ಎ.ಎಸ್.ಎ. ಒಂದು ದೇಶದ್ರೋಹಿ ಸಂಘಟನೆ ಎಂದು ತೀರ್ಮಾನಿಸುವುದು ಉಚಿತ. ಆದ್ದರಿಂದ ಆ ಸಂಘಟನೆಯನ್ನು ನಿಷೇಧಿಸಿ ಅದರ ಸದಸ್ಯರೆಲ್ಲರಿಗೂ ಗಡಿಪಾರಿನ ಶಿಕ್ಷೆ ಅಥವಾ ಯಾಕುಬ್ ನಿಗೆ ವಿಧಿಸಿದ ಶಿಕ್ಷೆಯನ್ನು ನೀಡಬೇಕು. ಏಕೆಂದರೆ ಯಾಕುಬ್ ನ ಗಲ್ಲುಶಿಕ್ಷೆಯನ್ನು ವಿರೋಧಿಸುವುದೆಂದರೆ ಸಾವಿರಾರು ಅಮಾಯಕ ಭಾರತೀಯರ ಅಮಾನವೀಯ ಕಗ್ಗೊಲೆಯನ್ನು ಸಮರ್ಥಿಸಿದಂತೆ. ಅದನ್ನು ಸಮರ್ಥಿಸುವ ವ್ಯಕ್ತಿಗಳು ಮುಂದೆ ಲಕ್ಷಾಂತರ ಕೊಟ್ಯಾಂತರ ಭಾರತೀಯರ ಸಾವಿಗೆ ಪ್ರೇರಣೆ ಹಾಗೂ ಸಹಕಾರವನ್ನು ಕೊಡುವವರೇ. ಆದ್ದರಿಂದಲೇ ಗಡಿಪಾರು ಅಥವಾ ಗಲ್ಲು ದೇಶದ್ರೋಹಿಗಳಿಗೆ ಉಚಿತವಾದ ಶಿಕ್ಷೆ.

          ಹಾಗೆಯೇ ಎ.ಎಸ್.ಎ. ಯಾಕುಬ್ ನ ಗಲ್ಲುಶಿಕ್ಷೆಯನ್ನು ವಿರೋಧಿಸಿದ್ದಲ್ಲದೆ ಸುಶೀಲ್ ಕುಮಾರ್ ನನ್ನು ನಿರ್ದಯವಾಗಿ ಥಳಿಸಿ ಕಾನೂನನ್ನು ಕೈಗೆತ್ತಿಕೊಂಡಿದ್ದು ಇನ್ನೊಂದು ಅಪರಾಧ. ಭಾರತದ ಗೌರವಾನ್ವಿತ ಸಮಾಜಸುಧಾರಕರಾದ ಅಂಬೆಡ್ಕರರ ಹೆಸರನ್ನು ಸಂಘಟನೆಗೆ ಇಟ್ಟುಕೊಂಡು ಅವರ ಹೆಸರಿಗೆ ಮಸಿ ಬಳಿಯುವ  ಇಂತಹ ದುರುಳರಿಗೆ ಗಲ್ಲುಶಿಕ್ಷೆಯೂ ಕಡಿಮೆಯೇ. ಹಾಗಾಗಿ ಸುಶೀಲ್ ಕುಮಾರ್ ಗೆ ಹಲ್ಲೆ ಮಾಡಿದ ಮೂವತ್ತು ಜನರಲ್ಲಿ ಪುನಃ ವಿಚಾರಣೆಯ ಬಳಿಕ ಅತ್ಯಂತ ಕೆಟ್ಟವರೆಂದು ವಿಶ್ವವಿದ್ಯಾಲಯದ ವಿಚಾರಣಾಸಮಿತಿಯೇ ತೀರ್ಮಾನಿಸಿದ ಐವರಲ್ಲಿ ಒಬ್ಬನಾದ ವೇಮುಲ ಆತ್ಮಹತ್ಯೆ ಮಾಡಿಕೊಂಡಿದ್ದು ಒಬ್ಬ ಉಗ್ರಗಾಮಿ ಸೈನಿಕರ ಕೈಗೆ ಸಿಕ್ಕಿಬೀಳಬಾರದೆಂದು ತನ್ನನ್ನು ತಾನೇ ಸ್ಫೋಟಿಸಿಕೊಂಡಂತೆ.  “ತುಮ್ ಕಿತನೇ ಯಾಕುಬ್ ಮಾರ್ ದೇಂಗೇ ? ಹರ್ ಘರ್ ಸೇ ಎಕ್ ಎಕ್ ಯಾಕುಬ್ ನಿಕಲೇಗಾ” ಎಂದು ಘೋಷಣೆ ಕೂಗುವವರು ಭಾರತದ ಮೂವತ್ತು ಕೋಟಿ ಕುಟುಂಬಗಳಿಂದ ಮೂವತ್ತು ಕೋಟಿ ಯಾಕುಬ್ ನಂತಹ ಉಗ್ರಗಾಮಿಗಳ ಹುಟ್ಟಿಗಾಗಿ ಕಾಯುತ್ತಿರುವವರು. ಒಬ್ಬ ಯಾಕುಬ್ ಭಾರತದಲ್ಲಿ ಸಾವಿರಾರು ಜನರ ರಕ್ತ ಕುಡಿದಿದ್ದಾನೆ. ಇನ್ನು ಮೂವತ್ತು ಕೋಟಿ ಯಾಕುಬ್ ಹುಟ್ಟಿಕೊಂಡರೆ ? ಇಂತಹ ಸಂಘಟನೆಯನ್ನು ಸಮರ್ಥಿಸುವ, ವೇಮುಲನನ್ನು ಸಮರ್ಥಿಸುವ, ಅದನ್ನೇ ದಾಳವಾಗಿಸಿ ಶಾಂತಿಯಿಂದ ತಮ್ಮ ಪಾಡಿಗೆ ತಾವಿರುವವರನ್ನು ಪ್ರಚೋದಿಸಿ ದೇಶದ್ರೋಹಿಗಳನ್ನಾಗಿಸುವ ಕೇಜ್ರಿವಾಲ್ ರಾಹುಲ್ ಯೆಚೂರಿ ಮುತ್ತಿತರರು ಮಹಾಕಪಟಿಗಳು ಮತ್ತು ದೇಶದ್ರೋಹಿಗಳು. ಯಾಕುಬ್ ನ ಗಲ್ಲುಶಿಕ್ಷೆಯನ್ನು ವಿರೋಧಿಸಿದವರನ್ನು ಸಮರ್ಥಿಸುವ ಇವರು ಇಡೀ ದೇಶಕ್ಕೆ ಬಾಂಬಿಡುವಂತೆ ಪ್ರೇರೇಪಿಸುವ ದೊಡ್ಡ ಉಗ್ರಗಾಮಿಗಳು. ಮೊದಲು ಇವರನ್ನು ಗಲ್ಲಿಗೇರಿಸಬೇಕು.

ಅಲ್ಲಾ ರೀ, ಅರಬ್ ರಾಷ್ಟ್ರಗಳಲ್ಲಿ ದೇಶದ್ರೋಹಿಗಳನ್ನು ಸಾರ್ವಜನಿಕವಾಗಿ ಕಲ್ಲು ಹೊಡೆದೋ, ಗುಂಡಿಟ್ಟೋ, ಕತ್ತು ಕುಯ್ದೋ ಸಾಯಿಸ್ತಾರೆ. ಚೀನಾದಲ್ಲಿ ವಿಚಾರಣೆಯನ್ನೇ ಮಾಡದೆ ಸೇನೆ ಮುಗಿಸಿಬಿಡುತ್ತದೆ. ರಷ್ಯಾದಲ್ಲಿ ಗಲ್ಲುಶಿಕ್ಷೆಗಿಂತಲೂ ಘೋರವಾದ ಸೈಬೀರಯಾದ ಜೈಲಲ್ಲಿ ಕೊಳೆಯಿಸುತ್ತಾರೆ. ಪಾಕಿಸ್ತಾನದಲ್ಲಿ ಮೋದಿಗೆ ಜೈಕಾರ ಹಾಕಿದ್ದಕ್ಕೇ ಬೈಕಿನ ಹಿಂಬದಿಗೆ ಕಟ್ಟಿ ಊರಿಡೀ ಎಳೆದಾಡಿ ಅಮಾನವೀಯವಾಗಿ ಸಾಯಿಸುತ್ತಾರೆ. ಅಮೇರಿಕಾದಲ್ಲಿ ಅಡ್ರೆಸ್ಸೇ ಸಿಗುವುದಿಲ್ಲ. ಆದರೆ ಭಾರತದಲ್ಲಿ ನಾವು ಅವರಿಗೆ ಉಗ್ರಗಾಮಿಯಾಗಿದ್ದರೂ ಪಾಕಿಸ್ತಾನದವನಾಗಿದ್ದರೂ ಭಾರತವಿರೋಧಿಯಾದ ಬಾಂಗ್ಲಾದೇಶದವನಾಗಿದ್ದರೂ ಮೊದಲು ರೇಶನ್ ಕಾರ್ಡ್ ಕೊಡುತ್ತೇವೆ, ದೇಶದ್ರೋಹಿಗಳನ್ನು ಆರಿಸಿ ಎಂದು ವೋಟರ್ ಐಡಿ ಕೊಡುತ್ತೇವೆ. ಆಧಾರ್ ಕಾರ್ಡ್ ಕೊಡುತ್ತೇವೆ. ಒಂದು ರುಪಾಯಿಗೆ ಕೆ.ಜಿ.ಗಟ್ಟಲೆ ಅಕ್ಕಿ ಗೋಧಿ ರಾಗಿ ಕೊಡುತ್ತೇವೆ. ಸೀಮೆ ಎಣ್ಣೆ ಸಕ್ಕರೆ ಸೀರೆ ಇತ್ಯಾದಿ ಕೊಡುತ್ತೇವೆ. ಸರ್ಕಾರಿ ಕೆಲಸದಲ್ಲಿ ಹೈಕೋರ್ಟ್ ನಿಷೇಧಿಸಿದ್ದರೂ ವೈ ಎಸ್ ರಾಜಶೆಖರ ರೆಡ್ಡಿ ೬% ಮೀಸಲಾತಿ ಕೊಡುತ್ತೇನೆಂದಿದ್ದ. ಅವನನ್ನೇ ಇನ್ನು ಕೆಲವರು ಅನುಸರಿಸಿದ್ದರು. ಜ್ಯೋತಿ ಬಸು ಮತ್ತು ಭಟ್ಟಾಚಾರ್ಯ ಸೇರಿಕೊಂಡು ಏಳೂವರೆ ಸಾವಿರ ಮದರಸಾ ಪಶ್ಚಿಮ ಬಂಗಾಳದಲ್ಲಿ ಕಟ್ಟಿಸಿಕೊಟ್ಟು ಅಲ್ಲಿ ಭಾರತದ ವಿರುದ್ಧ ಕತ್ತಿ ಮಸೆಯಲು ಮುಲ್ಲಾಮೌಲವಿಗಳನ್ನು ನೇಮಿಸಿ ಖಜಾನೆಯಿಂದ ಅವರಿಗೆ ಸಂಬಳವನ್ನೂ ಕೊಟ್ಟರು. ಮಮತಾ ಒಂದು ಹೆಜ್ಜೆ ಮುಂದೆ ಹೋಗಿ ನಾಲ್ಕೇ ವರ್ಷಗಳಲ್ಲಿ ಅವರನ್ನು ಹಿಂದಿಕ್ಕಲು ಹೊರಟಿದ್ದಾಳೆ. ಕಮ್ಯುನಿಷ್ಟಿನ ಕಾರ್ಯಕರ್ತರಂತೂ  ಭಾರತೀಯ ಜಮೀನುದಾರರ ಭೂಮಿಯನ್ನು ಬಲವಂತವಾಗಿ ಕಿತ್ತುಕೊಂಡು ಬಾಂಗ್ಲಾದೇಶದಿಂದ ನಿಯಮಬಾಹಿರವಾಗಿ ಒಳನುಸುಳಿದ ಮುಸಲ್ಮಾನರಿಗೆ ಹಂಚುತ್ತಾರೆ. ಇನ್ನು ಲಾಲು, ಮುಲಾಯಾಮ್, ಸಿದ್ದರಾಮಯ್ಯ, ಚಾಂಡಿ, ಡಿಗ್ಗಿ, ರೆಡ್ಡಿಗಳನ್ನೆಲ್ಲ ನೆನಪು ಮಾಡಿಕೊಳ್ಳದಿರುವುದೇ ಲೇಸು.

ಆದರೆ ಇಂಥವರಿಂದಾಗಿಯೇ ದೇಶದಲ್ಲಿರುವ ಕೋಟ್ಯಂತರ ಸಜ್ಜನ ಮುಸಲ್ಮಾನ ಬಂಧುಗಳನ್ನು ಸಂಶಯದಿಂದ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ರಾಹುಲ್ ಕೇಜ್ರಿ ಡಿಗ್ಗಿ ಯೆಚೂರಿಗಳು ದೇಶದಲ್ಲಿ ಐಸಿಸ್,  ಜೈಶ್, ಸಿಮಿ ಮುಂತಾದ ವಿಷವೃಕ್ಷಗಳು ಬೆಳೆಯಲು ಕಾರಣ. ಹಾಗಾಗಿ ಈ ವಿಷವೃಕ್ಷದ ಬೀಜಗಳನ್ನು ಸುಟ್ಟುಹಾಕಬೇಕು. ಭಾರತ ಯಾವತ್ತೂ ನಮಗೆ ಹೇಡಿಗಳಾಗಿರಿ ಎಂದು ಹೇಳಿಕೊಟ್ಟಿಲ್ಲ. ಕೃಷ್ಣ ಗೀತೆಯಲ್ಲಿ “ಜಹಿ ಶತ್ರುಂ” ಎಂದಿದ್ದಾನೆ. ನಮ್ಮ ಎಲ್ಲ ದೇವತೆಗಳ ಕೈಯಲ್ಲಿ ಆಯುಧಗಳಿರುವುದರ ಸಂಕೇತವೇ ಸಜ್ಜನರನ್ನು ರಕ್ಷಿಸಬೇಕು, ದುರ್ಜನರನ್ನು ಶಿಕ್ಷಿಸಬೇಕು ಎಂಬುದಾಗಿ. ಕೃಷ್ಣ ಅದನ್ನೇ ಹೀಗೆ ಹೇಳಿದ್ದಾನೆ “ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್” ಅಂತ. ಹಾಗಾಗಿ ದೇಶದ ಬೆಳವಣಿಗೆಯನ್ನು ಸಹಿಸದೆ ತಮ್ಮ ತಮ್ಮ ಸ್ವಾರ್ಥಕ್ಕಾಗಿ ದೇಶಕ್ಕೇ ಬಾಂಬಿಡುವಂತೆ ಪ್ರೇರೇಪಿಸುವ ರಾಹುಲಾದಿ ವಂಚಕದೇಶದ್ರೋಹಿಗಳಿಂದ ಮೊದಲು ದೇಶವನ್ನು ರಕ್ಷಿಸಲು ಎಲ್ಲರೂ ಒಗ್ಗಟ್ಟಾಗಿ ಎಂದು ಎಲ್ಲ ಭಾರತೀಯರನ್ನು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ.

ಧನ್ಯವಾದಗಳು.

ಡಾ. ಹರಿಪ್ರಸಾದ ಕೆ.

ಅಸಿಸ್ಟೆಂಟ್ ಪ್ರೊಫೆಸರ್

ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ (ಮಾನಿತವಿಶ್ವವಿದ್ಯಾಲಯ)

ರಾಜೀವಗಾಂಧಿ ಪರಿಸರ ಶೃಂಗೇರಿ.

 

 

 

 

No comments:

Post a Comment