Monday, January 21, 2013

ಮುನ್ನುಡಿ (ಆನಂದ ಸುಮನ ಸಿಂಹರ "ನಾನೇಕೆ ಹಿಂದುವಾದೆ" ಎಂಬ ಪುಸ್ತಕದ ನಾನು ಮಾಡಿದ ಅನುವಾದಕ್ಕೆ)

ಮುನ್ನುಡಿ
“ ಯೋನೂಚಾನಃ ಸ ನೋ ಮಹಾನ್ ”
“ ನಾನೇಕೆ ಹಿಂದುವಾದೆ’” ಎಂಬ  ಡಾ| ಆನಂದ ಸುಮನ್ ಸಿಂಹರವರ ಹಿಂದೀ ಕೃತಿಯ ಸರಳ ಹಾಗೂ ಸರಸ ಕನ್ನಡಾನುವಾದ ಮಾಡಿ ಡಾ| ಹರಿಪ್ರಸಾದರವರು  ಯೋಗ್ಯ ಕೃತಿಯನ್ನು ಹೊರತಂದಿರುತ್ತಾರೆ. ಧರ್ಮವೆಂದರೆ ಸನಾತನಧರ್ಮ.  ಅದು ಎಂದೂ ಶಾಶ್ವತವಾಗಿ ಇರುವುದರಿಂದಲೇ ಸನಾತನಧರ್ಮವೆಂದು ಹೆಸರು ಗಳಿಸಿದೆ. ಈ ಜಗತ್ತಿನಲ್ಲಿ ಅದೆಷ್ಟೋ ಮತಗಳು ಉದಯಿಸಿದ್ದರೂ ಅವುಗಳ ಮೌಲಿಕಸಾರವು ಹಿಂದೂಧರ್ಮದ್ದಾಗಿರುತ್ತದೆ. ಮತಭೇದಗಳು ಮನುಷ್ಯನನ್ನು   ಮತಾಂಧತೆಗೆ  ಒಯ್ದು ಧರ್ಮಕ್ಕೆ ಕಳಂಕವನ್ನುಂಟುಮಾಡುತ್ತವೆ. ಅದರಿಂದಾಗುವ ಅಪಚಾರಗಳು ಮತ್ತು ಹಿಂದೂಧರ್ಮದ ಹಿರಿಮೆಯನ್ನು ತಿಳಿಯಾಗಿ  ತಿಳಿಸಲು  ಪೂಜ್ಯ ದಯಾನಂದ ಸರಸ್ವತಿಯವರ  ವೇದವೇದಾರ್ಥವಿಚಾರಪರಕ ಗ್ರಂಥಗಳನ್ನು ಓದಬೇಕು. ಅದನ್ನು ಓದಿದ ಯಾವುದೇ ವಿಚಾರಕನಾಗಲಿ ಇತರ ಮತಗಳಲ್ಲಿರುವ  ನ್ಯೂನತೆಗಳನ್ನು ಕಂಡು  ಸ್ವಯಂ ಪ್ರೇರಿತನಾಗಿ  ಹಿಂದೂಧರ್ಮಾನುಯಾಯಿ ಆಗುತ್ತಾನೆಂಬುದನ್ನು ಸ್ವಜೀವನವೃತ್ತಾಂತದೊಂದಿಗೆ  ಡಾ| ಸುಮನ್ ರವರು ಚೆನ್ನಾಗಿ ತಿಳಿಸಿದ್ದಾರೆ.
ಹೆಣ್ಣು ಹೊನ್ನು ಮಣ್ಣು ಇತ್ಯಾದಿ ಪ್ರಾಪಂಚಿಕ  ಆಮಿಷಗಳನ್ನು  ಮುಂದೊಡ್ಡಿ  ಮತಾಂತರಗೊಳಿಸುತ್ತಿರುವ ಕ್ರಿಶ್ಚಿಯನ್ ಇಸ್ಲಾಮ್  ಮುಂತಾದ ಮತಗಳ  ದುರುದ್ದೇಶವನ್ನು ದೂರಗೊಳಿಸಲು ಈ ಸದ್ಗ್ರಂಥವು ಸಹಾಯಕವಾಗಿದೆ. ಜನರ  ಅಜ್ಞಾನ  ಹಾಗೂ ದೌರ್ಬಲ್ಯಗಳನ್ನು ಬಳಸಿಕೊಂಡು  ಶಾಂತಿಯ ಹೆಸರಿನ  ಅಶಾಂತಿಯನ್ನು ಹಬ್ಬುವ ಮತಗಳ  ಬಂಧನಕ್ಕೊಳಗಾಗದೆ ಸಮಸ್ತ ಜನರ ಕಲ್ಯಾಣವಾಗಲೆಂದು ಹಾರೈಸುತ್ತೇನೆ.
ಇಂತಿ
 ಪ್ರೊ. ಎ.ಪಿ.ಸಚ್ಚಿದಾನಂದ
ಕುಲಪತಿಗಳು
ರಾಷ್ಟ್ರಿಯ ಸಂಸ್ಕೃತ ಸಂಸ್ಥಾನ(ಮಾನಿತ ವಿಶ್ವವಿದ್ಯಾಲಯ)
ಜನಕಪುರೀ, ನವದೆಹಲಿ

No comments:

Post a Comment