ನಾನೇಕೆ ಹಿಂದುವಾದೆ ?
ಮೂಲ : ಡಾ| ಆನಂದ ಸುಮನ ಸಿಂಹ (ಡಾ| ಕುಂವರ್ ರಫತ್ ಅಖ್ಲಾಖ್ )
ಅನುವಾದಕನಾದ ನನ್ನೆರಡು ಮಾತುಗಳು
.
ಸುಮಾರು ಏಳು ವರ್ಷಗಳ ಹಿಂದೆ ನಾನು ಮುಂಬಯಿಗೆ ಹೋದಾಗ ನನ್ನ ಮಿತ್ರರಾದ ದೇವದತ್ತ ಸರೋದೆಯವರು ಒಂದು ಪುಸ್ತಕವನ್ನು ಓದಲು ಕೊಟ್ಟರು. ಕೇವಲ 30 ಪುಟಗಳ ಪುಸ್ತಕವಾದರೂ ಓದುತ್ತಿದ್ದಂತೆ ನನಗೆ ರೋಮಾಂಚನವಾಗತೊಡಗಿತು.
ನಾನು ಓದಿದ ಇತಿಹಾಸ ನೆಹರೂ ಉದ್ದೇಶಪೂರ್ವಕವಾಗಿ ಭಾರತೀಯರನ್ನು ಭಾರತೀಯತೆಯನ್ನು ವಂಚಿಸಲು ಬರೆಸಿದ ಇತಿಹಾಸವಾಗಿತ್ತು. ಬಳಿಕ ನಾನು ಭಾರತದ ನೈಜ ಇತಿಹಾಸವನ್ನು ಓದಲು ಆರಂಭಿಸಿದಂತೆ ಭಾರತದ ಸೋಲಿನ ಇತಿಹಾಸ ಮಣ್ಣು ಮುಕ್ಕಿ ಗೆಲುವಿನ ಇತಿಹಾಸದ ಬೆಳಕು ನನ್ನ ಚಿಂತನೆಯ ದಿಕ್ಕನ್ನೇ ಬದಲಾಯಿಸಿತು.
ಸ್ವಾಮಿ ಶ್ರದ್ಧಾನಂದರು ಶುದ್ಧಿಚಳವಳಿಯನ್ನು ಮಾಡಿ “ಮರಳಿ ಮಾತೃಧರ್ಮಕ್ಕೆ” ಎಂಬ ಸತ್ಕಾರ್ಯವನ್ನು ಮಾಡಿದ್ದರೂ ರಾಮನಾಮವನ್ನು ಜಪಿಸುತ್ತಿದ್ದ ಢೋಂಗಿ ಮಹಾತ್ಮನ ರಾಜಕೀಯ ದುರಾಸೆಗೆ ಬಲಿಯಾಗಬೇಕಾಯಿತು.ಆ ಬಳಿಕ 24 ವರ್ಷ ಆತ ಮಾಡಿದ್ದೆಲ್ಲ ದೇಶದ್ರೋಹಿ ಮುಸಲ್ಮಾನರನ್ನು ಮುತ್ತಿಕ್ಕುತ್ತಲೇ . ಆ ಬಳಿಕ ಹದಿನೇಳು ವರ್ಷ ಅಕ್ಷರಶಃ ಔರಂಗಜೇಬನ ಅಪರಾವತಾರಿಯ ತುಘಲಕ್ ದರ್ಬಾರು. ಪಾಕಿಸ್ತಾನ ಹುಟ್ಟುವ ಮೊದಲೇ ಅಲ್ಲಿ 16 ಲಕ್ಷ ಹಿಂದುಗಳ ಮಾರಣಹೋಮವನ್ನು ( ) ಕಣ್ಣಾರೆ ಕಂಡರೂ ಅದನ್ನು ಸಹಿಸದ ನೌಖಾಲಿಯ ಹಿಂದೂಗಳ ಮೇಲೆ ಬಾಂಬು ಹಾಕುತ್ತೇನೆ ಎಂಬ ನೆಹರೂ, ಮತ್ತವನ ವಂಶಜರು ಭಾರತೀಯರಿಗೆ ಬದುಕಿನ ಭರವಸೆ ಹೇಗೆ ತಾನೇ ಕೊಡಬಲ್ಲರು ? ಇಂತಹ ಇತಿಹಾಸದ ಹಿನ್ನಲೆಯಲ್ಲಿ ಮತಾಂತರದ ವಿಷಯದಲ್ಲಿ ಅದರಲ್ಲೂ ಇಸ್ಲಾಮ್ ನ ವಿಷಯದಲ್ಲಿ ನನ್ನನ್ನು ಬಹಳವಾಗಿ ಕಾಡುತ್ತಿದ್ದ ಪ್ರಶ್ನೆಗೆ ಈ ಪುಸ್ತಕ ನನಗೆ ಸರಿಯಾದ ಉತ್ತರವನ್ನು ಕೊಟ್ಟಿದೆ. ಪ್ರಶ್ನೆ ಏನು ಅಂತ ಕೇಳ್ತೀರಾ ?
ಶ್ರದ್ಧಾನಂದರ ಬಳಿಕ ಮುಸಲ್ಮಾನರು ಹಿಂದೂಧರ್ಮಕ್ಕೆ ಮತಾಂತರಗೊಂಡ ಒಂದೇ ಒಂದು ಉದಾಹರಣೆ ನಮ್ಮ ಇತಿಹಾಸದಲ್ಲಿ ಏಕಿಲ್ಲ ?
ಈ ಪುಸ್ತಕ ಖಂಡಿತವಾಗಿಯೂ ಹಿಂದುಗಳಿಗೆ ಮತಾಂತರದ ವಿಷಯದಲ್ಲಿ ಒಂದು ಹೊಸ ಭರವಸೆಯನ್ನು ಮೂಡಿಸುತ್ತದೆ. ಆದ್ದರಿಂದಲೇ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಲು ಮುಂದಾದೆ. ಆಗಲೇ 2006 ಡಿಸೆಂಬರ್ ನಲ್ಲಿ ಅನುವಾದಿಸಿ ಮೂಲಲೇಖಕರ ಅನುಮತಿಯನ್ನು ಪಡೆದು 2007 ರಲ್ಲಿ ರಾಷ್ತ್ರೋತ್ಥಾನ ಪರಿಷತ್ತಿನ ಪ್ರಕಾಶನ ವಿಭಾಗದ ಚಂದ್ರಶೇಖರರನ್ನು ಭೇಟಿಯಾಗಿ ಇದನ್ನು ಪ್ರಕಾಶಿಸಲು ವಿನಂತಿಸಿಕೊಂಡೆ. ಅವರು ಪ್ರಕಾಶನ ಸಮಿತಿಯ ಮುಂದೆ ಚರ್ಚಿಸಿ ತಿಳಿಸುವುದಾಗಿ ಹೇಳಿ 6 ತಿಂಗಳ ಬಳಿಕ ನಿರಾಕರಿಸಿ ಬಿಟ್ಟರು. ಅವರ ರಾಜಕೀಯ ಅವರಿಗಿರಲಿ.
ಈಗ ಆರು ವರ್ಷಗಳು ಕಳೆದಿವೆ. ನನ್ನ ಸೋದರಳಿಯ ಅಭಿಯಂತರ ರಾಜೇಶ ರಾವ್ ಇವತ್ತು ದೂರವಾಣಿಯ ಮೂಲಕ ನೆನಪಿಸಿದ್ದಾನೆ. ಹಾಗಾಗಿ ಈಗ ಕಂಪ್ಯೂಟರ್ ನ ಮುಂದೆ ಕುಳಿತಿದ್ದೇನೆ ನಿಮಗೆ ಆ ಪುಸ್ತಕವನ್ನು ಸಮರ್ಪಿಸುವುದಕ್ಕಾಗಿ.
ನಾನೊಬ್ಬ ಹಿಂದು. ನನಗೆ ಧರ್ಮದಲ್ಲಿ ಶ್ರದ್ಧೆಯಿದೆ, ಆದರೆ ಮೂಢನಂಬಿಕೆಯಿಲ್ಲ. ಮತಗಳಲ್ಲಿ ಮರುಕವಿದೆ, ಆದರೆ ಆದರವಿಲ್ಲ. ಮಾನವೀಯತೆಯಲ್ಲಿ ಪ್ರೀತಿಯಿದೆ, ಆದರೆ ಕಾಪಟ್ಯವಿಲ್ಲ. ಸಮಾನತೆಯಲ್ಲಿ ಸಂತಸವಿದೆ, ಆದರೆ ಅದು ದುಃಸಾಧ್ಯವೆಂಬುದರಲ್ಲಿ ಸಂಶಯವಿಲ್ಲ. ಹಿತಶತ್ರುಗಳಲ್ಲಿ ಮರುಕವಿದೆ, ಆದರೆ ಕಪಟಸ್ನೇಹವಿಲ್ಲ. ಆತತಾಯಿಗಳ ಆತಂಕವಿದೆ, ಆದರೆ ಭಯವಿಲ್ಲ.
ಇತಿಹಾಸ ನಮಗೆ ಕಲಿಸಿದ ಪಾಠವನ್ನು ನೆನಪು ಮಾಡಿಕೊಳ್ಳುವುದು ಭಾರತೀಯನಿಗಂತೂ ಬಹಳ ಪ್ರಮುಖ ಕರ್ತವ್ಯವೆನ್ನುವುದರಲ್ಲಿ ಸಂದೇಹವಿಲ್ಲ. ಏಕೆಂದರೆ ನಾವು ಎದ್ದು ಹೋರಾಡಿದ್ದಕ್ಕಿಂತ ಎಡವಿ ಬಿದ್ದಿದ್ದೇ ಹೆಚ್ಚು. ಇನ್ಯಾವತ್ತೂ ನಾವು ಎಡವಿ ಬೀಳಬಾರದು. ನಾವು ಎದ್ದು ಎದೆಯುಬ್ಬಿಸಿ ಉಳಿದವರನ್ನೆಬ್ಬಿಸಿ ಮುನ್ನುಗ್ಗುವ ಹಂಬಲವನ್ನು ಈ ಸಣ್ಣ ಪುಸ್ತಕ ಹುಟ್ಟುಹಾಕಬಲ್ಲದೆಂದು ನಾನು ಭಾವಿಸುತ್ತೇನೆ.
ನಾನು ಈ ಪುಸ್ತಕವನ್ನು ಅನುವಾದಿಸಿ ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಸನ್ಮಾನ್ಯ ಪ್ರೊ. ಸಚ್ಚಿದಾನಂದ ಉಡುಪರನ್ನು ಮುನ್ನುಡಿಗಾಗಿ ಕೇಳಿಕೊಂಡಾಗ ತುಂಬಾ ಸಂತೋಷದಿಂದ ಆಶೀರ್ವದಿಸಿ ಬರೆದು ಕೊಟ್ಟು ಅನುಗ್ರಹಿಸಿದ್ದಾರೆ . ಅವರಿಗೆ ನನ್ನ ಪ್ರಣಾಮಪೂರ್ವಕ ಕೃತಜ್ಞತೆಗಳು. ಇದೇ ಸಂದರ್ಭದಲ್ಲಿ ನಾನು ರಾಜಸ್ಥಾನ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಸನ್ಮಾನ್ಯ ಪ್ರೊ.ರಾಮಾನುಜ ದೇವನಾಥನ್ ರವರಿಗೂ ಹಾರ್ದಿಕವಾಗಿ ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ. ಏಕೆಂದರೆ ಅವರು ನಾನು ಅನುವಾದಿಸಿದ ಇದೇ ಪುಸ್ತಕದ ಸಂಸ್ಕೃತಾನುವಾದಕ್ಕೆ ಸುದೀರ್ಘವಾದ ಮುನ್ನುಡಿಯನ್ನು ಬರೆದು ಅನುಗ್ರಹಿಸಿದ್ದಾರೆ. ಆ ಪುಸ್ತಕ ಸಂಸ್ಕೃತ ಭಾರತೀ ಯಿಂದ 2009 ರಲ್ಲಿ ಪ್ರಕಾಶನಗೊಂಡಿದೆ. ನನ್ನ ಮಾತು ಇಷ್ಟೇ ಸಾಕು ಅಲ್ಲವೇ ?
ಇಂತಿ ನಿಮ್ಮವ
ಡಾ| ಹರಿಪ್ರಸಾದ. ಕೆ
(ಮುಂದುವರಿಯುವುದು)
No comments:
Post a Comment