Friday, June 19, 2026

ಧೀರ ದೀಪೇಂದ್ರ ಸೇನೆಗರ್ - ವಿಂಗ್ ಕಮಂಡರ್ ಸುದರ್ಶನ್ ಜೀ ಬರೆದದ್ದು

ಪಠ್ಯಪುಸ್ತಕದಲ್ಲಿ ಈ ಪಾಠ ಬೇಕು ಆ ಪಾಠ ಇರಬಾರದಿತ್ತು ಎನ್ನುವ ವಿವಾದಗಳ ನಡುವೆ ಇಂತಹದ್ದೊಂದು ಪಾಠವಿದ್ದರೆ ಹೇಗಿರುತ್ತದೆ? 

ನೀವೇ ಓದಿನೋಡಿ. ಇದು ನಮ್ಮ ಪುಸ್ತಕ “ ಯೋಧ ನಮನ” ಒಂದು ಅಧ್ಯಾಯ

ಧೀರ ದೀಪೆಂದ್ರ ಸೆನಗರ್

    
ಸಣಕಲ ಮೈಕಟ್ಟಿನ ಸುಮಾರು ಐದೂವರೆ ಅಡಿ ಎತ್ತರದ ಬಾಲಕನೊಬ್ಬ ಚಿಕ್ಕಂದಿನಿಂದಲೇ ಸೈನ್ಯಕ್ಕೆ ಸೇರಲೇ ಬೇಕೆಂಬ ಮಹತ್ತರ ಕನಸು ಕಾಣುತ್ತಾನೆ. ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಪಾಸಾಗುತ್ತಾನೆ ಆದರೆ ದೈಹಿಕ ಅರ್ಹತೆಗಳ ಮಾಪನದಲ್ಲಿ ಪಾಸಾಗುವುದಿಲ್ಲ. ವಯಸ್ಸು ಇನ್ನು ಹದಿನೇಳು ಅಷ್ಟೇ, ಸೈನ್ಯದಲ್ಲಿ ಆಯ್ಕೆ ಆಗದಿದ್ದರೆ ಏನಂತೆ ಮುಂದೆ ಎಂಜಿನಿಯರಿಂಗೋ, ವೈದ್ಯಕೀಯವೋ ಮಾಡುತ್ತೇನೆ ಎನ್ನುವುದು ಸಾಮಾನ್ಯ ಯುವಕರಿಗೆ ಇರುವ ಆಶಾವಾದ, ಆದರೆ ,ಇಲ್ಲಾ ...ನನ್ನ ಜೀವನ ಸೈನ್ಯದಲ್ಲೇ ಮುಂದುವರೆಯ ಬೇಕು ಅದರ ಪರ್ಯಾಯ ವೃತ್ತಿಯ ಬಗ್ಗೆ ನಾನು ಯೋಚಿಸುವುದೇ ಇಲ್ಲ.
 ‘There is no plan B’
ಎನ್ನುವುದು ಛಲವೇ ಅಥವಾ ಉಧ್ಧಟತನವೇ?

ಹೆಸರು ದೀಪೆಂದ್ರ ಸಿಂಗ್ ಸೆನಗರ್. ರಾಜಾಸ್ಥಾನದ ರಾಜಪೂತ ವಂಶದವರು. ಈ ವಂಶದಲ್ಲಿ ಸೇನೆಗೆ ಸೇರುವುದೇ ದೊಡ್ಡ ಹೆಮ್ಮೆಯ ವಿಷಯ. ಅದಕ್ಕೆಂದೇ ಏಳನೇ ತರಗತಿಯಿಂದ ಸೈನಿಕ ಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡಿ ರಾಷ್ಟ್ರೀಯ ರಕ್ಷಣಾ ಅಕ್ಯಾಡೆಮಿಗೆ (NDA) ಸೇರುವ ಹಗಲುಗನಸಿನಲ್ಲೇ ಜೀವಿಸುತ್ತಿದ್ದ ವ್ಯಕ್ತಿಗೆ, ಮೊದಲ ಪ್ರಯತ್ನದಲ್ಲೇ…

‘ ನೀನು ಗಿಡ್ಡ, ಸಣಕಲು, ತೂಕ ತುಂಬಾ ಕಡಿಮೆ ಇದೆ’ 

ಎನ್ನುವ ಕಾರಣಕ್ಕೆ ಅನರ್ಹನನ್ನಾಗಿ ಮಾಡಿದರೆ?

    ' ಸರಿ ಮತ್ತೆ ವಾಪಾಸ್ ಬರುತ್ತೇನೆ '

ಎಂದು ಅವಡುಗಚ್ಚಿಕೊಂಡು ಹೊರಬಂದರು. ಮುಂದಿನ ಕೆಲವು ತಿಂಗಳುಗಳು ಹಗಲು ರಾತ್ರಿ ಒಂದು ಮಾಡಿ ನೈಸರ್ಗಿಕವಾಗಿ ಏನೆಲ್ಲಾ ಸಾಧ್ಯವೊ ಎಲ್ಲಾ ಮಾಡಿ ಎರಡನೆ ಪ್ರಯತ್ನದಲ್ಲಿ ಅಂತೂ  ಪಾಸಾದರು. ಮುಂದೇನು... ಅವರ ಕನಸನ್ನು ನನಸಾಗಿಸುವ ಸಮಯ. ಅಸಾಧ್ಯ ಎನ್ನುವ ಪದ ಅವರಿಗೆ ಅಪರಿಚಿತ.

ತರಬೇತಿಯ  ಹಂತದಲ್ಲೆ ಸಿಬ್ಬಂದಿಯವರಿಗೆ ಅನಿಸಿತು ಇವರು ಸೈನ್ಯಕ್ಕೆಂದೇ ಹುಟ್ಟಿರುವವರು ಎಂದು. ಬರೊಬ್ಬರಿ ಹತ್ತು ಕೇಜಿ ತೂಕದ ಚೀಲವೊಂದನ್ನು ಬೆನ್ನಿಗೆ ಕಟ್ಟಿಕೊಂಡು ಹತ್ತು ಕಿಮೀಗಳ ಓಟದಲ್ಲಿ ಹೇಗೆ ಓಡುತ್ತಿದ್ದರೆಂದರೆ, ಎಲ್ಲರ ಜೊತೆಗೆ ಓಟ ಪ್ರಾರಂಭಿಸಿ, ಕೆಲವೇ ನಿಮಿಷಗಳಲ್ಲಿ ಯಾರ ಕಣ್ಣಿಗೂ ಕಾಣಿಸದಂತೆ ಓಡಿ, ಕೊನೆಯ ಗೆರೆಯನ್ನು ತಲುಪಿ, ಒಂದು ಸಣ್ಣ ನಿದ್ದೆ ತೆಗೆದ ಎಷ್ಟೋಹೊತ್ತಿನ ಮೇಲೆ ಇತರರು ಉಸ್ಸಪ್ಪಾ..ಎನ್ನುತ್ತಾ ಬರುತ್ತಿದ್ದರಂತೆ! ಹಾಗಾಗಿ ಇವರಿಗೆ ‘ರಾಕೆಟ್ ದಿಪಿಂದರ್’ ಎನ್ನುವ ಅಡ್ಡಹೆಸರು ಅಂಟಿಕೊಂಡುಬಿಟ್ಟಿತು. ಇವರ ಗುಂಡು ಹಾರಿಸುವ ಚಾಕಚಕ್ಯತೆ ತರಬೇತಿ ಕೇಂದ್ರದಲ್ಲಿ ಅಚ್ಚರಿಯ ವಿಷಯವಾಗಿತ್ತು. ಇದೇ  ಕುಶಲತೆಯ ಆಧಾರದ ಮೇಲೆ ಮುಂದೆ  ಸೈನ್ಯದ ಕಮಾಂಡೊ ಆಗಿ ನಂತರ ಪ್ಯಾರಾ ಕಮಾಂಡೊದ ವಿಷೇಶ ಪಡೆಗೆ ಸೇರಿಸಲ್ಪಟ್ಟರು. 

ಯಾರಿವರು ಈ ವಿಶೇಷ ಪಡೆಯವರು, ಏನವರಲ್ಲಿ ಅಂತಹ ವಿಶೇಷತೆ?

ಇವರು ಹಾರುತ್ತಿರುವ ವಿಮಾನದಿಂದ ಜಿಗಿಯುವವರು, ಯಾವ ಶಸ್ತಾಸ್ತ್ರಗಳ ಸಹಾಯವಿಲ್ಲದೇ ವೈರಿಯ ಕತ್ತು ಮುರಿಯುವುವರು, ಅನ್ನ ನೀರಿಲ್ಲದೆ ಹಲವಾರು ದಿನಗಳು ಕಾಡಿನಲ್ಲಿ ಜೀವಿಸಬಲ್ಲರು, ಮೈಲುಗಟ್ಟಲೆ ಈಜುವವರು... ಎಲ್ಲದಕ್ಕೂ ಮೇಲಾಗಿ ಜೀವದ ಹಂಗೇ ಇಲ್ಲದೆ ಎಲ್ಲಾ ತರಹದ ತ್ಯಾಗಕ್ಕಾಗಿ ಸಿಧ್ಧರಾಗಿರುವವರು. ಇಂತಹ ವಿಶೇಷ ಪಡೆಗೆ ಹೇಳಿಮಾಡಿಸಿದಂತಹ ವ್ಯಕ್ತಿ ಮೇಜರ್  ದಿಪಿಂದರ್ ಸೆನೆಗರ್. ಎಲ್ಲೆಲ್ಲಿ ಭಯಾತ್ಪಾದಕರ ಚಟುವಟಿಕೆಗಳು ನಡೆಯುತ್ತಿದ್ದವೋ ಅಲ್ಲಿಗೆ ಮೇಜರ್ ಸೆನೆಗರ್ ತಲುಪಿಬಿಡುತ್ತಿದ್ದರು. ಅವರು ಬಂದರೆಂದರೆ ಸಾಕು, ಭಯೋತ್ಪಾದಕರು ತಪ್ಪಿಸಿಕೊಳ್ಳಲು ಸಾಧ್ಯವೇ ಆಗದಂತೆ, ಕ್ಷಣಾರ್ಧದಲ್ಲಿ ಅವರನ್ನು ಪರಲೋಕಕ್ಕೆ ಪಾರ್ಸಲ್ ಮಾಡುತ್ತಿದ್ದರು. ಹಲವಾರು ಸಲ ಶತ್ರುಗಳ ಬುಲೆಟ್ ಸುಯ್ಯನೆ ಕಿವಿಯ ಹತ್ತಿರವೇ ಶಬ್ದಮಾಡಿಕೊಂಡು ಬಂದಾಗ ಪಾದರಸದಂತೆ ತಮ್ಮ ದೇಹವನ್ನು ತಿರುಗಿಸಿ ತಪ್ಪಿಸಿಕೊಳ್ಳುವುದು ಅವರಿಗೆ ಒಂಥರಾ ಅಭ್ಯಾಸವಾಗಿಬಿಟ್ಟಿತ್ತು. ಆದರೆ ಕೆಲವೊಮ್ಮೆ ಮೋಸದಿಂದ ಬಂದ ಈ ಬುಲೆಟ್ಟುಗಳು ಅವರ ಶರೀರವನ್ನು ಹೊಕ್ಕು ಹೊರಬಂದ ಸನ್ನಿವೇಶಗಳೂ ಇವೆ.

 ಹಾಗಾಗಿದ್ದು ಒಂದು ಸಲ ಅಲ್ಲ…

ಆಗ ಅಸ್ಸಾಮಿನಲ್ಲಿ ಭಯೋತ್ಪಾದಕರ ಹಾವಳಿ ತಾರಕಕ್ಕೇರಿತ್ತು, ಹಾಗಾಗಿ ಇವರಿದ್ದ ವಿಷೇಶ ಪಡೆಯನ್ನು ಗೌಹಾಟಿಗೆ ಸ್ಥಳಾಂತರಸಲಾಗಿತ್ತು. 15 ಫೆಬ್ರವರಿ 1998 ಮೇಜರ್ ದೀಪಿಂದರ್ ಸೆನಗಲ್ ಗೌಹಾಟಿಯ ಏರ್ಪೋರ್ಟಿಗೆ ಬಂದಿಳಿದರು. ಇವರನ್ನು ಬರಮಾಡಿಕೊಳ್ಳಲು ಶಸಸ್ತ್ರಸಜ್ಜಿತ ವಾಹನವೊಂದನ್ನು ಕಳುಹಿಸಲಾಗಿತ್ತು.  ಇನ್ನೂ ಐದು ನಿಮಿಷವಾಗಿತ್ತು ಏರ್ಪೋರ್ಟಿನಿಂದ ಹೊರಟು, ದಾರಿಯಲ್ಲಿ ಒಂದು ವೈರ್ಲೆಸ್ ಸಂದೇಶವನ್ನು ಇವರು ಕೇಳಿಸಿಕೊಂಡರು, ಅದೇನೆಂದರೆ, ಐದು ಜನ ಭಯೋತ್ಪಾದಕರ ಮುಖಂಡರು ಒಂದು ದಾಳಿಯ ಬಗ್ಗೆ ಮೀಟಿಂಗ್ ಮುಗಿಸಿ ಇನ್ನೇನು ಅರ್ಧ ಗಂಟೆಯಲ್ಲಿ ಅಲ್ಲಿಂದ ಹೊರಡುತ್ತಿದ್ದಾರೆ, ಆದರೆ ನಮ್ಮ ಟೀಮು ಇರುವುದು ಸುಮಾರು ನಲವತ್ತು ಕಿಮೀ ದೂರ, ಬೇಟೆ ಕೈ ತಪ್ಪಿ ಹೋಗುತ್ತಿದೆ...ತಕ್ಷಣ  ಮೇಜರ್ ಸೆನೆಗರ್ ಕಾರ್ಯಗತರಾಗಿ ಸಿಬ್ಬಂದಿಯಿಂದ ವಿವರಗಳನ್ನು ತಿಳಿದುಕೊಂಡರು, ಇಪ್ಪತ್ತೇ ನಿಮಿಷಗಳಲ್ಲಿ ಗುಪ್ತವಾಗಿ ನಡೆಯುತ್ತಿದ್ದ ಭಯೋತ್ಪಾದಕರ ಸಭೆಯಲ್ಲಿ
ಪ್ರತ್ಯಕ್ಷರಾಗಿಬಿಟ್ಟರು, ಕ್ಷಣಾರ್ಧದಲ್ಲಿ ಇಬ್ಬರು ಭಯೋತ್ಪಾದಕರನ್ನು ಮುಗಿಸೇಬಿಟ್ಟರು. ಇವರೆಡೆಗೆ ಗುಂಡುಹಾರಿಸುತ್ತಲೇ ಇನ್ನು ಮೂವರು ಅಲ್ಲಿಂದ ಓಡಿಹೋದರು...ಆದರೆ ಆ ಭಯೋತ್ಪಾದಕರು ಹಾರಿಸಿದ ಎರಡು ಗುಂಡುಗಳು ಇವರ ಹೊಟ್ಟೆಯನ್ನು ಭೇಧಿಸಿಕೊಂಡು ಹೊರಬಂದವು. ಅತೀವ ರಕ್ತಸ್ರಾವದಿಂದ ಬಸವಳಿದ ಇವರನ್ನು ಕೆಲವೇ ಗಂಟೆಗಳಲ್ಲಿ  ನಾರಂಗಿಯ ಮಿಲಿಟರಿ ಆಸ್ಪತ್ರೆಗೆ ಸೇರಿಸಲಾಯಿತು. ಛಿದ್ರ ಛಿದ್ರವಾಗಿದ್ದ ಇವರ ಮೂತ್ರಕೋಶ ಮತ್ತು ಕರುಳುಗಳನ್ನು ಕತ್ತರಿಸಿ ಹೊಲೆದು ಅಂತೂ ಇವರ ಪ್ರಾಣ ಉಳಿಸಿದರು ಡಾಕ್ಟರುಗಳು. 

ಎರಡು ದಿನಗಳ ನಂತರ ಪ್ರಜ್ಞೆ ಬಂದಾಗ, ಏನಾಗಿತ್ತು ನನಗೆ ಎಂದು ಕೇಳಿದಾಗ,

 'you had lot of guts, we had to cut some of it ' 

ಎಂದು ಹಾಸ್ಯ ಮಾಡಿದರು ಡಾಕ್ಟರುಗಳು, ಹಾಗೆಯೇ, ಇನ್ನು ಕನಿಷ್ಟ ಮೂರು ತಿಂಗಳು ಹಾಸಿಗೆಯಿಂದ ಏಳುವ ಹಾಗೇ ಇಲ್ಲ ಎಂಬ ಕಟ್ಟುನಿಟ್ಟಿನ  ಆದೇಶವನ್ನೂ ಕೊಟ್ಟರು. ಆಸ್ಪತ್ರೆಯ ವರಾಂಡದಲ್ಲಿ ನಿಧಾನವಾಗಿ ಓಡಾಡಲು ಒಂದು ತಿಂಗಳೇ ಹಿಡಿಯಿತು. ಕಮಾಂಡೋಗಳ ಕಠಿಣ ಮಾನಸಿಕ ತರಬೇತಿ ಇಂತಹ ಸಮಯಗಳಲ್ಲಿ ಕೆಲಸಕ್ಕೆ ಬರುತ್ತದೆ, ಇವರು ಏನನ್ನೂ ಸೀರಿಯಸ್ಸಾಗೇ ತೆಗೆದು ಕೊಳ್ಳುವುದೇ ಇಲ್ಲ. ಈ ಸ್ಥಿತಿಯಲ್ಲೇ ರಾತ್ರಿಯಾದ ಕೂಡಲೇ ಸಿನೇಮಾ ನೋಡಲು ಆಸ್ಪತ್ರೆಯ ಸಿಬ್ಬಂದಿಯ ಕಣ್ತಪ್ಪಿಸಿ  ನುಸುಳಿಕೊಂಡು ಹೋಗುತ್ತಿದ್ದರು. ಮಧ್ಯ ಎರಡು ದಿನಗಳು ಆಸ್ಪತ್ರೆಯಲ್ಲಿ ಕಾಣಿಸಲೇ ಇಲ್ಲ, ಸ್ನೇಹಿತನ ಮದುವೆ ಮಿಸ್ ಮಾಡಿಕೊಳ್ಳುವುದುಂಟೇ! 

ಆಸ್ಪತ್ರೆಯ ಸಿಬ್ಬಂದಿ ಇವರ ಕಮ್ಯಾಂಡಿಗ್ ಆಫೀಸರಿಗೆ ದೂರಿಟ್ಟರು. ಇವರ ಕರುಳು, ಮೂತ್ರಕೋಶಗಳಿನ್ನೂ ರಿಪೇರಿಯೇ ಆಗಿಲ್ಲ,ಇವರು ಮನಸಿಗೆ ಬಂದಂತೆ ಮಾಡ್ತಾ ಇರ್ತಾರೆ..ಎಂದು. ಇವರ ಕಮ್ಯಾಂಡಿಂಗ್ ಆಫೀಸರ್ ಹೆಸರು ಕರ್ನಲ್  ಇವಾನ್ ಕ್ರಾಸ್ಟೊ. ಒಬ್ಬ ಕಮಾಂಡೋಗೆ ಇನ್ನೊಬ್ಬ ಕಮಾಂಡೊನ ಮನಸ್ಥಿತಿ ಅರ್ಥವಾಗುತ್ತದೆ. ಇವರುಗಳು, ಪುಂಡ, ಅಧಿಕಪ್ರಸಂಗಿ, ಉಧ್ಧಟ ಆಂತೆಲ್ಲಾ ಅನಿಸಿಕೊಳ್ಳಲು ರೆಡಿ ಇರುತ್ತಾರೆ, ಆದರೆ ಯಾರಾದರೂ ಕನಿಕರ, ಸಂತಾಪ ಸೂಚಿಸಲು ಬಂದರೆ....ಉಹುಂ ಆಗುವುದೇ ಇಲ್ಲ.
ಕರ್ನಲ್ ಇವಾನ್ ಕ್ರಾಸ್ಟೊ ರವರು ಸಹಾ ಹಿಂದೊಮ್ಮೆ ದೇಶಕ್ಕೆ ದೇಶವೇ ನಿಬ್ಬೆರಗಾಗುವಂತಹ ಸಾಹಸಿ ಕಾರ್ಯ ಮಾಡಿದವರು. ಅದು ಶತ್ರುಗಳ ಸಂಹಾರವೇ ಕಮಾಂಡೋಗಳ ಕೆಲಸವಲ್ಲಾ, ದೇಶದ ನಾಗರೀಕರ ಜೀವ ಉಳಿಸಃವ ಕಾರ್ಯಗಳಲ್ಲೂ ಅಷ್ಟೇ ನಿಸ್ಸೀಮರು. ಆ ಘಟನೆ ಏನು ಅಂದರೆ...

14 ಅಕ್ಟೊಬರ್ 1992, ಚಂಡೀಗಢದ ಸಮೀಪದಲ್ಲಿ ಟಿಂಬರ್ ಟ್ರೈಲ್ ಎನ್ನುವ ಪ್ರವಾಸಿತಾಣವೊಂದರಲ್ಲಿ ಕೇಬಲ್ ಕಾರಿನ ತಂತಿ ಹರಿದು ಅಪಘಾತಕ್ಕೀಡಾಯೀತು.  ತಂತಿಗೆ ಸಿಕ್ಕಿಹಾಕಿಕೊಂಡಿದ್ದ ಕೇಬಲ್ ಕಾರು ಈಗಲೋ ಆಗಲೋ ಕಳಚಿಕೊಂಡು ಪ್ರಪಾತದಲ್ಲಿ ಬೀಳುವುದರಲ್ಲಿತ್ತು. ಅದರಲ್ಲಿದ್ದ ಹತ್ತು ಜನ ಪ್ರವಾಸಿಗರು ಸಾವಿನ ದವಡೆಯಲ್ಲೇ ಇಪ್ಪತ್ತೆರಡು ಗಂಟೆಗಳ ಕಾಲ ಯಮಯಾತನೆ ಅನುಭವಿಸುವಂತಾಗಿತ್ತು. ಏರ್ಫೋರ್ಸಿನ ಹೆಲಿಕಾಪ್ಟರುಗಳ ಸಹಾಯದಿಂದ ಕಮಾಂಡೊ ಇವಾನ್, ಹಗ್ಗ ಕಟ್ಟಿಕೊಂಡು ಸುಮಾರು ನೂರು ಅಡಿ ಕೆಳಗಿಳಿದು ಕೇಬಲ್ ಕಾರನ್ನು ತಲುಪಿದರು. ಬದುಕುಳಿಯುವ ಆಸೆಯನ್ನೇ ಕಳೆದುಕೊಂಡಿದ್ದ ಅಲ್ಲಿದ್ದವರಂತೂ ದೇವಲೋಕದಿಂದ ದೇವರೇ ಬಂದರೇನೊ ಎನ್ನುವಷ್ಟು ಸಂತೋಷಿಸಿದರು. ಒಬ್ಬೊಬ್ಬೊರನ್ನೇ ಹಗ್ಗಕ್ಕೆ ಕಟ್ಟಿದ ಕುರ್ಚಿಗೆ ಕಟ್ಟಿ ಹೆಲಿಕಾಪ್ಟರಿಗೆ  ರವಾನಿಸಲಾಯಿತು. ಆದರೆ ಇನ್ನೂ ನಾಲ್ಕು ಜನ ಇರುವಾಗಲೇ ಕತ್ತಲಾಯಿತು, ಹೆಲಿಕಾಪ್ಟರುಗಳ ಹಾರಾಟವನ್ನು ನಿಲ್ಲಿಸಬೇಕಾಯಿತು.
ಪುನಃ ಅಧೀರರಾದ ಪ್ರವಾಸಿಗರಿಗೆ ಧೈರ್ಯ ತುಂಬಲು ಕಮಾಂಡೊ ಇವಾನ್ ಆ ರಾತ್ರಿಯನ್ನು ಅವರ ಜೊತೆ ಕೇಬಲ್ ಕಾರಿನಲ್ಲೇ ಕಳೆದರು!  ಮರುದಿನ ಬೆಳಗ್ಗೆ ಉಳಿದವರನ್ನು ರಕ್ಷಿಸಲಾಯಿತು.
ಇಂತಹ ಸಾಹಸಿಗಳ ತವರು ಮನೆ  1 para special force.

ಇತ್ತ ಸೇನಾವೈದ್ಯರುಗಳು ನಿಬ್ಬೆರಗಾಗುವಂತೆ ಮೇಜರ್ ದೀಪಿಂದರ್ ಗುಣಮುಖರಾದರು ಆದರೆ ಅವರ ಫಟಕದ ಅಧಿಕಾರಿಗಳು ಕೂಡಲೇ ಮಿಲಿಟರಿ ಕಾರ್ಯಾಚರಣೆಗೆ ನೀವು ರೆಡಿ ಇಲ್ಲ ಎಂದು ಕೆಲವು ಆಫೀಸಿನ ಜವಾಬ್ದಾರಿಯನ್ನು ವಹಿಸಿಕೊಟ್ಟರು. ಮೇಜರ್ ಸೆನಗರ್  ಹಾಗೆ ಕೂತು ಕೆಲಸ ಮಾಡಿದ ಅಭ್ಯಾಸವೇ ಇಲ್ಲದವರು. ಏನೇನೊ ನಾಟಕ ಮಾಡಿದರು, ಜಗಳಾಡಿದರು, ಬೇಡಿಕೊಂಡರು, ನಾನು 'ಫೀಲ್ಡಿಗೆ' ಹೋಗಬೇಕು ಎಂದು. ಇವರ ಬೇಡಿಕೆ ಈಡೇರಿಸಲೆಂದೇ ಕಾರ್ಗಿಲ್ ಸಂಘರ್ಷವಾಯಿತೇನೋ,
ಬಂತು ಮತ್ತೊಮ್ಮೆ ಯುಧ್ಧದ ಕರೆ.

ಕಾರ್ಗಿಲ್ಲಿನಲ್ಲಿ ಕಸರತ್ತು

1998 ರ ಮೇ ತಿಂಗಳಿಗೆ ಮೇಜರ್ ದೀಪಿಂದರ್ ಸೇನಗರ್ ತಮ್ಮ ತಂಡದೊಂದಿಗೆ ಗೌಹಾಟಿಯಿಂದ ಕಾರ್ಗಿಲ್ಲಿಗೆ ಬಂದಿಳಿದರು. ಆಗಾಗಲೇ ನೀಲಮ್ ಪೋಸ್ಟ್ ಎನ್ನುವ ಮಂಚೂಣಿಯನ್ನು ಪಾಕಿಸ್ತಾನಿಗಳಿಂದ ಮುಕ್ತಮಾಡಿ ತಿರಂಗ ಝಂಡಾವನ್ನು ಮರು ಸ್ಥಾಪಿಸಿದರು. ಆಗಸ್ಟ್ ತಿಂಗಳಿನಷ್ಟೊತ್ತು ಹೊತ್ತಿಗೆ ಕಾರ್ಗಿಲ್ ಯುದ್ಧ ಇನ್ನೇನು ಮುಗಿದಹಾಗೇ ಎನ್ನುವ ಮಟ್ಟಕ್ಕೆ ಬಂದಿತ್ತು. ಈ ಯುದ್ಧದಲ್ಲಿ ಹೀನಾಯ ಸೋಲನ್ನು ಅನುಭವಿಸಿದ ಪಾಕೀಸ್ತಾನ ಗಾಯಗೊಂಡ ಹಾವಿನಂತೆ ಬಿಲದಲ್ಲೇ ಬುಸುಗುಡುತ್ತಿತ್ತು. ಭಯೋತ್ಪಾದಕರ ಆತ್ಮಾಹುತಿ ತಂಡಗಳನ್ನು ಬಳಸಿಕೊಂಡು ಅಲ್ಲಲ್ಲಿ ಸಣ್ಣಪುಟ್ಟ ದಾಳಿಗಳನ್ನು ಭಾರತೀಯ ಸೈನ್ಯದ ಮೇಲೆ ನಡೆಸುತ್ತಲೇ ಇದ್ದರು ಪಾಪಿ ಪಾಕಿಸ್ತಾನೀಯರು.

1 ಸೆಪ್ಟಂಬರ್ 1998 ರಂದು ಆಚಾನಕ್ಕಾಗಿ ನೀಲಂ ಪೋಸ್ಟ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಮೇಜರ್ ಸೇನಗರ್ ಇಬ್ಬರು ಉಗ್ರರನ್ನು ಕ್ಷಣಾರ್ಧದಲ್ಲೇ ಮುಗಿಸಿದರು. ಆದರೆ ಉಗ್ರರು AK 47   ರೈಫಲ್ಲಿನಿಂದ ಇವರೆಡೆಗೆ ಹಾರಿಸಿದ ಗುಂಡಿನ ದಾಳಿಯಲ್ಲಿ ಇವರ ತೊಡೆ ಮತ್ತು ಸೊಂಟಕ್ಕೆ ತಗುಲಿದ ಗುಂಡೇಟಿನಿಂದ ಗಂಭೀರ ಗಾಯಗಳಾದವು. ವೈರ್ಲೆಸ್ ಸಂದೇಶಗಳ ನಡುವೆ ಹರಿದಾಡುತ್ತಿದ್ದ ಈ ಸುದ್ದಿಯನ್ನು ಕೇಳಿದ ಹೆಲಿಕಾಪ್ಟರ್ ಪೈಲಟ್ಟೊಬ್ಬರು ಕೂಡಲೇ ಇವರಿದ್ದ ಸ್ಥಳಕ್ಕೆ ತಲುಪಿದರು. ಆದರೆ ಅಲ್ಲಿ ಹೆಲಿಪ್ಯಾಡೇ ಇರಲಿಲ್ಲ. ಹೇಗೋ ಹತ್ತಿರದ ಒಂದು ಬಯಲಿನಲ್ಲಿ ಹೆಲಿಕಾಪ್ಟರನ್ನು ಇಳಿಸಿ ಇವರನ್ನು ಹೊತ್ತು ತಂದು ಕೆಲವೇ ನಿಮೀಷಗಳಲ್ಲಿ ಇವರನ್ನು ಮಿಲಿಟರಿ ಆಸ್ಪತ್ರೆಗೆ ತಲುಪಿಸಿದರು. ಏನಾದರಾಗಲಿ ಇಂತಹ ಯೋಧರು ಬದುಕುಳಿಯಲೇ ಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ವಾಪಾಸ್ ಹೆಲಿಕಾಪ್ಟರನ್ನು ತಮ್ಮ ನೆಲೆಗೆ ತಿರುಗಿಸಿದರು. ಇಡೀ ವೈದ್ಯಕೀಯ ತಂಡ ತಕ್ಷಣ ಕಾರ್ಯನಿರತವಾಯಿತು. ತೊಡೆಯಲ್ಲಿದ್ದ ಗುಂಡನ್ನು ಹೊರ ತೆಗೆದರು, ರಕ್ತಸ್ರಾವವನ್ನು ನಿಲ್ಲಿಸಿದರು, ಕ್ಷೀಣಿಸುತ್ತಿದ್ದ ಹೃದಯ ಬಡಿತ ಒಂದು ಹದಕ್ಕೆ ಬಂತು. ಇನ್ನು ಜೀವಕ್ಕೆ ಭಯವಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳುವಷ್ಟರಲ್ಲಿ ಇವರಿಗೆ ಪ್ರಜ್ಞೆ ಬಂತು. ಎದ್ದವರೇ…

'ನಾನು ಕೆಲವೇ ದಿನಗಳಲ್ಲಿ ವಾಪಾಸಾಗಿ ಆ ಪಾಕೀಸ್ತಾನಿಯರನ್ನು ಮುಗಿಸುತ್ತೇನೆ, ನನ್ನ ಜಾಗಕ್ಕೆ ಬೇರೆ ಯಾರನ್ನೂ ನಿಯಮಿಸ ಬೇಡಿ’ ಎನ್ನಬೇಕೆ!

 ಇದು ಅಧಿಕ ಪ್ರಸಂಗಿತನವಲ್ಲದೆ ಮತ್ತೇನು...ಎಂದುಕೊಂಡರು ಅಲ್ಲಿದ್ದ ವೈದ್ಯರು.

ಅಲ್ಲಿಂದ ಅವರನ್ನು ದೆಹಲಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಎರಡು ತಿಂಗಳಲ್ಲಿ ಏನು ವೈದ್ಯಕೀಯದ ಪರಿಮಿತಿಯಲ್ಲಿ ಮಾಡಲು ಸಾಧ್ಯವೋ ಅದೆಲ್ಲದನ್ನೂ ಮಾಡಿದ ನಂತರವೇ ಆ ವೈದ್ಯಕೀಯ ತಂಡ  ವಸ್ತುನಿಷ್ಟ ಭಾವದಿಂದ ಅವರಿಗೆ ಹೇಳಿದ್ದಿದು…

'ಇನ್ನು ಮುಂದೆಂದೂ ನೀವು ನಡೆದಾಡಲು ಸಾಧ್ಯವಿಲ್ಲ' 

ಆ ರಾತ್ರಿ ಮೇಜರ್ ದೀಪಿಂದರ್ ಸೆನೆಗರ್  ಒಂದು ಕ್ಷಣವೂ ನಿದ್ರೆ ಮಾಡಲಿಲ್ಲ. ದೈಹಿಕ ನೋವನ್ನು ನುಂಗಿ ಬದುಕುವುದು ಅವರಿಗೆ ಉಸಿರಾಟದಷ್ಟೇ ಸಹಜ ಕ್ರಿಯೆ. ಆದರೆ ಸೇನೆಯ ವೈದ್ಯಾಧಿಕಾರಿಗಳ ತಂಡ, ಬಹಳ ಶಾಂತವಾಗಿ, ನಿರ್ಭಾವುಕತೆಯಿಂದ, ಹೇಳಿದ್ದು ಅವರ ನಿದ್ದೆಗೆಡಿಸಿದ ವಿಷಯ...

You can NEVER EVER walk in your life.

ವೈದ್ಯಾಧಿಕಾರಿಗಳ ಈ ನಿರ್ಣಯ ಅವರು ಓದಿದ ವೈದ್ಯಕೀಯ ಪುಸ್ತಕಗಳ, ಅವರ ಅನುಭವದ ಆಧಾರದ ಮೇಲೆ ಹೇಳಿದ್ದು, ಸರಿಯಾಗಿಯೇ ಇತ್ತು. ಎರಡು ತಿಂಗಳುಗಳ ಕಾಲ ಈ ವೈದ್ಯಕೀಯ ತಂಡ ಇವರನ್ನು ಉಳಿಸಿಕೊಳ್ಳಲು ನಿರಂತರವಾಗಿ ಶ್ರಮಿಸಿತ್ತು. ಪೀಸು ಪೀಸಾಗಿದ್ದ ಸೊಂಟದ ಮೂಳೆಗಳನ್ನು ಜೋಡಿಸಲು ವರ್ಕಷಾಪಿನ ಮೆಕ್ಯಾನಿಕ್ಕುಗಳಂತೆ ತಂತಿ, ಮೊಳೆಗಳಿಂದ ಜೋಡಿಸಿದ್ದರು, ಹಲವಾರು ಸಲ ಸರಣಿ 'ಕತ್ತರಿಸು- ಹೊಲಿ' ಆಪರೇಷನ್ನುಗಳನ್ನು ಮಾಡಿ ಇನ್ನು ನಮ್ಮ ಕೈಲಾದುದ್ದನ್ನು ಮಾಡಿದ್ದೇವೆ ಎಂದು ನಿಟ್ಟುಸಿರು ಬಿಡುತ್ತಾ ಹೇಳಿದ ನಿರ್ಣಯವದು.

ಬೆಳಗಾಗುವಷ್ಟು ಹೊತ್ತಿಗೆ ಸೇನಗರ್ ಒಂದು ನಿರ್ಧಾರಕ್ಕೆ ಬಂದರು. ಅಸಲಿಗೆ, ಒಂದಲ್ಲ, ಎರಡು ನಿರ್ಧಾರಗಳನ್ನು ತೆಗೆದುಕೊಂಡರು. ಮೊದಲನೆಯದು, ಈ ಸ್ಥಿತಿಯಲ್ಲಿ ಸೈನ್ಯದಲ್ಲಿ ತಾನು ಮಾಡುವುದಾದರೂ ಏನಿದೆ? ಆದ್ದರಿಂದ ಸೈನ್ಯದಿಂದ ಹೊರಬರುವುದೇ ಒಳ್ಳೆಯದು. ಇದು ಅವರ ಒಮ್ಮತದ ನಿರ್ಧಾರ ಆದರೆ ಎರಡನೇ ನಿರ್ಧಾರಕ್ಕೆ ಇನ್ನೊಬ್ಬ ವ್ಯಕ್ತಿಯ ಸಮ್ಮತಿ ಬೇಕಿತ್ತು. ಇತ್ತೀಚೆಗಷ್ಟೆ  ಜಯಾ ಅವರೊಂದಿಗೆ ಅವರ ವಿವಾಹ ನಿಶ್ಚಿತಾರ್ಥ ನಡೆದಿತ್ತು. ಈ ನಿಶ್ಚಿತಾರ್ಥದಿಂದ ಹೇಗಾದರೂ ಮಾಡಿ ಬಿಡುಗಡೆ ಪಡೆಯುವುದು. ಇನ್ನು ಮುಂದೆ ನಡೆದಾಡುವುದೇ ಆಸಾಧ್ಯ ಎಂದು ಗೊತ್ತಾದ ಮೇಲೂ ಇನ್ನು ಯಾವ ಪುರುಷಾರ್ತಕ್ಕೆ ಮದುವೆಯಾಗಲಿ? ಆದರೆ ಇವರ ಎರಡನೇ ನಿರ್ಧಾರ ಅತಂತ್ರಕ್ಕೆ ಸಿಕ್ಕಿಹಾಕಿ ಕೊಂಡಿತು, ಏಕೆಂದರೆ ಜಯಾ ಅವರು ಕಡ್ಡಿ ತುಂಡರಿಸಿದಂತೆ ಹೇಳೇ ಬಿಟ್ಟರು…

' ನೀವು ಯಾವ ಸ್ಥಿತಿಯಲ್ಲಿದ್ದರೂ ನಮ್ಮಿಬ್ಬರ ಮದುವೇ ನಡೆದೇ ತೀರುತ್ತೆ…

ಛಲಗಾರನೊಬ್ಬನಿಗೆ ಛಲಗಾತಿ ಜೊತೆಯಾದಳು!
 'ಏನಾದರಾಗಲೀ ಮುಂದೆ ನಾವು ಮದುವೆಯಾಗುತ್ತೇವೆ' ಎನ್ನುವ ಧೃಢ ನಿರ್ಧಾರ ತೆಗೆದುಕೊಂಡ ಇವರ ಭಾವಿ ಪತ್ನಿ ಜಯಾ ಮತ್ತು ಅವರ ಜೊತೆ ಕೆಲವು ಜೀವಕ್ಕೆ ಜೀವ ಕೊಡುವ ಮಿತ್ರರೂ ಸೇರಿ ಮುಂದಿನ ಕೆಲವು ತಿಂಗಳುಗಳ ರಣನೀತಿಯನ್ನು ರಚಿಸಿಯೇ ಬಿಟ್ಟರು.  ಆಗಿನ್ನು ಸೈನ್ಯದಲ್ಲಿದ್ದವರಿಗೆ ಕಂಪ್ಯೂಟರಿನ ಬಳಕೆ ಅಷ್ಟು ಪ್ರಚಲಿತವಾಗಿರಲಿಲ್ಲ. ಇನ್ನು ಪಿಸ್ತೋಲನ್ನು ಮರೆತು PC ಯ ಕಡೆ ಗಮನ ಹರಿಸುವುದು ಒಳ್ಳೆಯದು ಎಂದು ತೀರ್ಮಾನಿಸಿದರು ದೀಪೆಂದರ್. ಅದರಂತೆ ಒಂದು task force ನಿಯಮಿತಗೊಂಡಿತು. 'A'   ಟೀಮು ಇವರನ್ನು ಆಸ್ಪತ್ರೆಯ ಬೆಡ್ಡಿನಿಂದ ಕಾರಿಗೆ ಸಾಗಿಸಿ ಅಲ್ಲಿಂದ ಇವರನ್ನು ಕಂಪ್ಯೂಟರ್ ಕೇಂದ್ರಕ್ಕೆ ಕೊಂಡೊಯ್ದ ಕ್ಲಾಸಿನ ಒಂದು ಮೂಲೆಯ ಬೆಂಚಿನ ಮೇಲೆ ಇವರನ್ನು ಮಲಗಿಸುವುದು. ಮೂರು ಗಂಟೆಯ ಕ್ಲಾಸ್ ಮುಗಿದ ನಂತರ, ವಾಪಾಸು ಇವರನ್ನು ಆಸ್ಪತ್ರೆಯ ಬೆಡ್ಡಿಗೆ ಸೇರಿಸುವುದು. ಮೂರು ನಾಲ್ಕು ತಿಂಗಳುಗಳಲ್ಲಿ ಸ್ಟ್ರೆಚರಿನಿಂದ ಗಾಲಿಖುರ್ಚಿಯ ಹಂತಕ್ಕೆ ಸುಧಾರಣೆಯಾಯಿತು.
ಇನ್ನೊಂದು ಟೀಮ್ 'B' ಯ ಕೆಲಸವೇನೆಂದರೆ ಇವರನ್ನು CAT ಪರೀಕ್ಷೆಗೆ ತಯಾರಿಸುವುದು. ಈ ಟೀಮಿನಲ್ಲಿ  ಸೈನಿಕನೊಬ್ಬನ ಮಗನೂ ಸೇರಿದ್ದ ಇವರಿಗೆ ಆರನೇ ಕ್ಲಾಸಿನಿಂದ ಹಿಡಿದು ಗಣಿತದ ಪಾಠ ಹೇಳಿಕೊಡಲು!. ಈ ತಯಾರಿ ನಡೆಯುತ್ತಿರುವಾಗಲೇ ಗಾಲಿಖುರ್ಚಿಯಿಂದ ಎಬ್ಬಿಸಿ, ಅಕ್ಕ ಪಕ್ಕ ಇಬ್ಬರು ಹೆಗಲು ಕೊಟ್ಟು ಮೆಲ್ಲಗೆ ನಡೆಸಲು ಸಹಾಯ ಮಾಡಿದರು. ಕೆಲತಿಂಗಳ ನಂತರ ಎರಡೂ ಪಕ್ಕೆಗಳಿಗೆ ಊರುಗೋಲುಗಳು ಅಂಟಿಕೊಂಡವು. ಆಗ ದೇಶದಲ್ಲಿ  IIM(A),IIM( B)IIM( C),IIM( L) ಸೇರಿದಂತೆ ಒಟ್ಟು ಹದಿನಾರು ಪ್ರತಿಷ್ಠಿಟಿತ ಮ್ಯಾನೇಜ್ಮೆಂಟಿನ ವಿದ್ಯಾಸಂಸ್ಥೆಗಳಿದ್ದವು. 2000 ರ CAT ಫಲಿತಾಂಶ ಹೊರಬಂದಾಗ ಹದಿನಾರರಲ್ಲಿ ಹದಿನೈದು IIM ಗಳು ದೀಪಿಂದರಿಗೆ ಪ್ರವೇಶದ ಆಹ್ವಾನ ಕೊಟ್ಟವು!
Combat ನಿಂದ ನಿರ್ಗಮಿಸಿದ ಈ ಅಧಿಕ ಪ್ರಸಂಗಿ Corporate ಪ್ರಪಂಚಕ್ಕೆ ಆಗಮಿಸಿದರು.
ಅಲ್ಲಿವರೆಗೂ ಇವರಿಗೆ ಅಕ್ಷರಶಹಃ ಹೆಗಲುಕೊಟ್ಟು ನಡೆಸಿದ ಮಿತ್ರರು, ದೀಪಿಂದರರು ಆರಿಸಿಕೊಂಡ IIM ಅಹಮದಾಬಾದಿಗೆ ತೆರಳುವ ಮುನ್ನ ಇನ್ನೊಂದು ಜವಾಬ್ದಾರಿಯನ್ನೂ ನಿಭಾಯಿಸಿ ಬಿಡೋಣವೆಂದು ತೀರ್ಮಾನಿಸಿದರು. ಗ್ವಾಲಿಯರಿನಲ್ಲಿ ದೀಪೀಂದರ್ ಮತ್ತು ಜಯಾರವರ ಸರಳ ಮದುವೆಯ ಸಮಾರಂಭವೂ ನಡೆಯಿತು.

IIM ಇವರನ್ನು ಅಪರಿಚಿತ ಪ್ರಪಂಚಕ್ಕೆ ಕೊಂಡೊಯ್ಯಿತು. ಹೊಸ ಆಟಿಕೆಗಳನ್ನು ಕಂಡ ಮಗುವಿನಂತೆ ಎಲ್ಲವೂ ಕೌತುಕ..ಹೀಗೂ ಉಂಟೆ ಎನ್ನುವ ಆಶ್ಚರ್ಯ ಆದರೆ ಹೃದಯದಲ್ಲಿ ಸೈನಿಕ ಮಾತ್ರ ಭಧ್ರವಾಗಿ ನೆಲೆಸಿದ್ದ. ಎರಡು ಊರುಗೋಲುಗಳ ಬದಲು ಒಂದು ಊರುಗೋಲಿಗೆ ಬಂದರು. ಕೆಲವು ತಿಂಗಳಲ್ಲಿ ಅದನ್ನೂ ಬದಿಗಿಟ್ಟು ಜಯಾರವರ ಹೆಗಲುಗಳ ಸಹಾಯದಿಂದ ನಡೆಯಲಾರಂಬಿಸಿದರು. ಸ್ವಲ್ಪ ನಾಚಿಕೆಕೊಂಡಿರಬೇಕು, ನಂತರ ಅವರೇ ಸ್ವತಂತ್ರವಾಗಿ ಓಡಾಡಲು ಶುರುಮಾಡಿಕೊಂಡರು. ಹಾಗಾದರೆ ಅಷ್ಟೊಂದು ಜನ ಡಾಕ್ಟರುಗಳ ಅಭಿಪ್ರಾಯ ಸುಳ್ಳೇ?

ಹಾಗೇನಿಲ್ಲ , ಡಾಕ್ಟರುಗಳು ಓದಿದ ಪುಸ್ತಕವನ್ನು ದೀಪೆಂದ್ರ ಸಿಂಗ್ ಸೆನಗರ್ ಓದಿರಲಿಲ್ಲ ಮತ್ತು ಇವರಿಗೆ ಜೀವನ ಕಲಿಸಿದ ಪಾಠಗಳು ಡಾಕ್ಟರುಗಳ ಪಠ್ಯ ಪುಸ್ತಕದಲ್ಲಿರಲಿಲ್ಲ...ಅಷ್ಟೆ.

ಡಾಕ್ಟರ್ ರೆಡ್ಡೀಸ್ ಲ್ಯಾಬರೋಟರೀಸ್ ಎನ್ನುವ ಪ್ರಸಿಧ್ಧ ಔಷದದ ಸಂಸ್ಥೆಯಿಂದ ಇವರ ಎರಡನೇ ಇನ್ನಿಂಗ್ಸ್ ಶುರುವಾಯಿತು. ಎಲೆಕ್ಟ್ರಾನುಗಳು ವರ್ತುಲದಿಂದ ವರ್ತುಲಕ್ಕೆ ಜಿಗಿಯುವಂತೆ ಇವರೂ ಛಲ್ಲಾಂಗ ಹಾಕುತ್ತಾ ಹೋದರು. ಫಿಲಿಪೀನ್ಸ್, ಸಿಂಗಾಪೂರ್ ಮತ್ತು ಜಪಾನಿನ ಸುತ್ತಾಟವೆಲ್ಲಾ ಆದ ಮೇಲೆ ಈಗ ಚೆನೈನಲ್ಲಿ ಮೈಕ್ರೊಸಾಫ್ಟ್ ಕಂಪನಿಯಲ್ಲಿದ್ದಾರೆ. ಇಬ್ಬರು ಮಕ್ಕಳಿದ್ದಾರೆ. ಮೊನ್ನೆ ಹೀಗೆ ಕನ್ನಡದಲ್ಲಿ ಬರೆಯುವ ಪ್ರಯತ್ನ ಮಾಡುತ್ತೇನೆ ಎಂದು ಹೆೇಳಿದ್ದಕ್ಕೆ ವಿನಯದಿಂದ thank you sir ಎಂದರು.
ದೇವರು ಇಂತಹ ಅಧಿಕ ಪ್ರಸಂಗಿಗಳನ್ನು ಇನ್ನೂ ಅಧಿಕವಾಗಿ ಸೃಷ್ಟಿಸಲಿ ಎಂಬ ಪ್ರಾರ್ಥನೆಯೊಂದಿಗೆ.....

✍️..…ವಿಂಗ್ ಕಮಾಂಡರ್ ಸುದರ್ಶನ

Thursday, June 4, 2026

EXTENSION OF SANSKRIT PROPAGATION ABROAD

To,

VC/Registrar

NSU Tirupati 

Sir,

I had raised a point in the 2nd court meeting held in NSU on 9th April 2026 regarding the extension of sanskrit propagation abroad, especially in Vietnam. Yesterday Mr.Vinay P.A.to Registrar, telephoned me and asked to send the point in writing. So I am hereby sending the same to you for your kind perusal.
Please go through the attachment.

EXTENSION OF SANSKRIT PROPAGATION ABROAD

Prof. Hariprasad K

Recently my friend Dr. Sudarshan HS (Software Engineer) visited Vietnam. He stayed there about 2-3 weeks. Most of the people of Vietnam are Buddhists. So, naturally there are so many Bauddha Mathas built across the nation.  But due to long term ruling of Communist party, people are gradually becoming atheists.  Due to atheist mentality of the government Buddhism of the land is not only unaided but also tremendously disregarded. Consequently, people of the land started to abandon their own religion. Government is remarkably ignoring native language too.  By the result of this people are gradually disconnecting from their roots. Actually, texts available regarding Buddhism are in Sanskrit. Though the lord Buddha opposed idle worship, still in all of the Bauddha Mathas are having statues/idles. And Sudarshan ji analyses these idles based on his sense of Agama and says that all the idles resemble to Indian deities. Off course they have their own religious deity names for the idles.  But it is true that long back the people of Vietnam converted to Buddhism from Sanatana.

 But now what is happening there? More than 50% of the population is abandoned Buddhism. This situation is being utilised by Cristian Machineries to convert them into Christianity.  Once up on a time the land was influenced by Indian culture and flourished by Sanatana Dharma and later by Buddhism. But now it is taking a very speed track to converting itself with unknown western abrahamic religion with the bridge of atheism.

But the story of Vietnam is not a new one. Because of our ignorance we lost Cambodia, Indonesia, Malaysia, Butan, Barma and so on long back.

Now it is an opportunity to us that we can protect our neighbours from becoming them enemies of their own. It can be done through Sanskrit.

In a true sense India never conquered any nation with inhuman brutality. India influenced all the neighbourhood nations with its rich culture of “Vasudhaiva Kutumbakam” “Krinvanto Vishwamaryam” to breath and lead the tranquil and prosperous  life.  This kind of right path shown by lord Sriramachandra long ago by putting Vibheeshana in the throne of Lanka in spite of having victory over that.  Now also India if wants to step out, does only to the upliftment of the people only culturally educationally instead of ruling them as slaves. That’s why rightly lord Manu said – “Etaddesha prasootasya Sakashadagrajanmanah swam swam charitram shiksheran prithivyam sarvamanavah”  

So in this sense our university (NSU) can revive the age old indigenous tradition of wisdom and culture among the people of Vietnam by teaching Sanskrit there, so that the people of the land can lead the life peacefully.

Dr. Sudarshan ji started this campaign through his own Institution by teaching Sanskrit to the Buddhist monks of Vietnam already. He spent the time of two/three weeks for this purpose and for conduct of his own research project of south eastern Asian study there.

Now it can be continued with proper plan of action in large scale by the university(NSU) by establishing Sanskrit Chair in the native university for cultural exchange, research and propagation of Sanskrit. I am  sure, the Indian Government  through its Culture Ministry, Education Ministry and External affairs ministry will help this campaign as if it is its own business.


Thursday, May 28, 2026

ಗೋವಿನ ಮಾರಾಟ ದ ಬಗ್ಗೆ ಅನೂಪ್ ಗಂಗೊಳ್ಳಿ ಯವರು FB ನಲ್ಲಿ ಹಾಕಿದ ವೀಡಿಯೊಗೆ ಪ್ರತಿಕ್ರಿಯೆ 29-5-26

ನಿಮ್ಮ ಗೋವಿನ ಬಗ್ಗೆ ಇರುವ ಸಂವೇದನೆ ನಿಜವಾಗ್ಲೂ ಒಪ್ಪುವಂತದ್ದೆ.
ಆದ್ರೆ ಹಿಂದುಗಳು ಮಾರಿದ್ರೆ ಮಾತ್ರ ಮುಸ್ಲಿಂ ರು ತಿಂತಾರೆಯೇ?
ಪ್ರತಿನಿತ್ಯ ರಸ್ತೆ ಬದೀಲಿ ಮಲ್ನಾಡು ಮುಂತಾದೆಡೆ ಮಲಗಿದ್ದ ಹಸುಗಳನ್ನು ಯಾರಿಗೆ ದುಡ್ಡು ಕೊಟ್ಟು ರಾತ್ರಿ ಎಲ್ಲ ಮಲಗಿದ್ದಾಗ ಖರೀದಿಸುತ್ತಾರೆ?
ಗೋಶಾಲೆಗೆ ನುಗ್ಗಿ ಹಾಡು ಹಗಲೇ ಗೋವುಗಳನ್ನು ಕದಿಯುವ ಪ್ರಕರಣಗಳು ಯಾಕಾಗ್ತಾವೆ?
ಖರೀದಿಸಿಯೇ ಸಾಗಿಸುವುದಾದರೆ ಕದ್ದು ಮುಚ್ಕೊಂಡು ಯಾಕೆ ಸಾಗಿಸಬೇಕು? ಅದಕ್ಕೆ ಕಾಗದಪತ್ರಗಳನ್ನು ಮಾಡಿ ನಿಯಮಅನುಗುಣವಾಗಿಯೇ ಸಾಗಿಸಲು ವ್ಯವಸ್ಥೆ ಇದೆಯಲ್ಲ.
ಇನ್ನು ಕೃಷಿಕರು ಯಾಕೆ ಮಾರುತ್ತಾರೆ? ಇದು ತುಂಬಾ ಚರ್ಚಾರ್ಹ ವಿಷಯ. ಇದಕ್ಕೆ ಬಹಳ ಆಯಾಮಗಳಿವೆ.
 ಗೋವನ್ನು ಸಾಕುವ ಕೃಷಿಕರು ಇಂದು ಗಣನೀಯವಾಗಿ ಕಡಿಮೆಯಾಗುತ್ತಿದ್ದಾರೆ.
50 ರೂಪಾಯಿಗೆ ಹಾಲು ಸಿಗುವಾಗ 600 ರೂ ಸಂಬಳ ಕೊಟ್ಟು ಯಾವನೆ ಕೃಷಿಕ ಯಾಕೆ ಬೆವರಿಳಿಸಬಲ್ಲ?
ಅವನ ಬೆನ್ನಿಗೆ ಸರಕಾರ ಮತ್ತು ಸಮಾಜ ನಿಂತರೆ ಮಾತ್ರ ಅವನು ತನಗಾಗುವ ನಷ್ಟವನ್ನೂ  ಸಹಿಸಿಕೊಳ್ಳಬಲ್ಲ.
ಇದನ್ನು ಬೆವರಿಳಿಸದೇ, ಹಾಲಿಗೆ 2 ರೂ ಜಾಸ್ತಿಯದಾಗ ಬೇರೆಯವರನ್ನು  ಬಯ್ಯುತ್ತಾ ಕಾಲ ಕಳೆಯುವವರು ಸ್ವಲ್ಪ ಯೋಚಿಸಬೇಕು.

Sunday, March 8, 2026

श्रीशङ्कराचार्यविरचितप्रश्नोत्तरमालिका शिक्षा च (5/3/2026 तमे दिनाङ्के प्रवृत्तायां अध्यापकवाक्यार्थसभायां प्रस्तुतः विषयः)

 

श्रीशङ्कराचार्यविरचितप्रश्नोत्तरमालिका शिक्षा च

उपोद्घातः

शिक्षा मानवस्य निर्मात्री अस्ति । कथम् ? सर्वाङ्गिकविकाससम्पादनमुखेन । स एव शिक्षित इत्युच्यते यः न केवलं पाठ्यपुस्तकस्थं विषयं जानाति, अपि तु अवगतानि तत्त्वानि अनुतिष्ठति अत एव आचार्यलक्षणम् इत्थम् उक्तम् –

आचिनोति च शास्त्रार्थान् आचारे स्थापयत्यपि ।

स्वयमाचरते च यस्तु आचार्य इति कथ्यते ॥ इति ।

 बौद्धिकविकासमात्रं शिक्षायाः लक्ष्यं नास्ति ।  निर्दिष्टशास्त्रस्य अध्ययनमात्रं जनं शिक्षितं न करोति । अधीतनानाशास्त्राः बहवः अशिक्षिता इव व्यहरन्तः लोके दृश्यन्ते । मानवव्यवहारे समुचितपरिवर्तनमेव शिक्षायाः लक्ष्यमिति आधुनिकाः व्यवहारवादिनः ब्रुवन्ति ।

अस्मन्मनीषिणः ब्रुवन्ति यत्साक्षरा विपरीताश्चेत् राक्षसा एव केवलम् इति  अत्र उपलक्षणम् । कस्य उपलक्षणम् ?  हृदयविहीन-चारित्र्यहीनवैदुष्यस्य ।  अत एव भर्तृहरिर्वदति –

वृत्तं यत्नेन संरक्षेत् - - - -  वृत्ततस्तु हतो हतः

इत्थं बौद्धिकविकासेन सह चारित्र्यादिविकासः शिक्षया साधनीयः इति तात्पर्यतः आयाति । तदर्थं अस्माकं शिक्षाव्यवस्थायां तादृशाः विषयाः अपि चर्चनीयाः, चिन्तनीयाः येषाम् माध्यमेन व्यक्तित्वस्य अन्यविधविकासः जायेत । अतः तद्दिशि व्यक्तित्वविकासापेक्षितगुणानां विवेचनाय अत्र प्रश्नोत्तररत्नमालिका इति ग्रन्थः उपायुञ्जि ।

प्रश्नोत्तररत्नमालिका

भगवत्पादाः आदिशङ्कराचार्याः नित्यानित्यवस्तुविवेकादिगुणैः ब्रह्म जिज्ञासितुम् अधिकृतानां निमित्तं प्रस्थानत्रयभाष्यं विलिख्य पुनः तदितरान् लोकान् उद्धर्तुं स्तोत्रादिग्रन्थान् प्रणिन्युः येषां मध्ये प्रश्नोत्तररत्नमालिका अन्यतमः ग्रन्थः वर्तते ।  प्रश्नोत्तररत्नमालिकायाम् आचार्यशङ्करभगवत्पादाः मानवस्य पूर्णतः मानवत्वं साधयितुम् अपेक्षितानां गुणानां विचारं प्रश्नोत्तरमाध्यमेन प्रतिपादयामासुः । तदीयवचनानुगुणं  दृष्टादृष्टार्थसाधनपटीयान् प्रश्नोत्तररत्नमालिकां हृदि कुर्यात् । दृष्टादृष्टार्थसाधनपटीयान् इत्युक्ते कः ? यः आत्मनः इहपरयोः श्रेयः सिसाधयिषति सः दृष्टादृष्टार्थसाधनपटीयान् ।

प्रश्नोत्तररत्नमालिका केवलं शिक्षार्थिनं न परिवर्तयति, अपि तु शिक्षकमपि । बहवो हि शिक्षकाः मन्यन्ते यत् – वयं छात्रान् उपदेशेन परिवर्तयिष्यामः इति । वस्तुतः परिवर्तनीयाः सन्ति न केवलं छात्राः, अपि तु शिक्षकाः अपि ।

प्रश्नोत्तररत्नमालिका  शिक्षा च

इत्थं शिक्षछात्रयोः उभयोरपि व्यक्तित्वं परिष्कर्तुं प्रश्नोत्तररत्नमालिका विचारणीया । अत्र  आचार्याः शङ्करभगवत्पादाः आदावेव गुरोः लक्षणं प्रतिपादयमासुः ।

को गुरुः अधिगततत्त्वः शिष्यहितायोद्यतः सततम् ॥२॥

इदं पद्यं गुरोः स्वरूपं वर्णयति गुरुः शिष्यहिताय तदीयविकासाय वा अध्याप्यग्रन्थसम्बद्धतया  बहून् विषयान् जानीयात् इति विद्मः । तदर्थं आचार्यभगवत्पादाः अधिगतत्वः इति पदं प्रायुञ्जत । तावता गुरोः गुरुत्वं न सेत्स्यति इति मन्वानां अन्यदेकं विशेषणं न्यवेशयन् शिष्यहिताय उद्यतः सततम् इति । गुरुः शिष्यम् अध्याप्य स्वीयं कर्तव्यजातं सम्म्पन्नमिति विरन्तुम् नार्हति । सः शिष्यहिताय सततं प्रवृत्तः स्यात् इति ते ब्रुवन्ति । “आचार्यात् पादमादत्ते” इति वचनानुगुणम् आचार्यः शिष्याय पादमात्रम् अनुग्रहीष्यति चेदलम् इति न मन्तव्यम् । अतः भगवत्पादाः कथयन्ति -स एव गुरुः यः बोध्यान् सर्वान् विषयान् सुष्ठु जनानः शिष्यस्य हितार्थं सततं परिश्राम्यति इति ।

कः शुचिरिह ? यस्य मानसं शुद्धम्

वयं लोके बहुत्र अशुचिविषये अनुभूतवन्तः स्मः । खेदस्य विषयो नाम यावन्तः अशुचिविषये प्रबलं प्रतिपादयन्ति तेषु अधिकाधिकाः स्वयमशुचयः एव । वस्त्रेण वपुषा वा अशुचयः न स्युः कदाचित् । किन्तु वाचा मनसा वा अशुचयः भवन्ति । यतो हि वाचा मनसा च शुचयः अतिविरलतया भवन्ति लोके । तत्रापि केचन वाचा कापट्येन शुचित्वं प्रदर्शयन्ति । किन्तु  पुरतः शुचयः इव प्रतीयमानाः अन्तरङ्गे विपरीता भवन्ति । अत एव अत्र भगवत्पादाः प्रत्यपीपदन् यत् - कः शुचिरिह ? यस्य मानसं शुद्धम् इति ।शुचिर्वाक्कायमानसैः कायेन वाचा मनसा च शुचिः भवेत् । मनसा शुचिः भवति चेत् अवश्यं वाचा वपुषा वस्त्रेण च शुचिः भवत्येव ।

कः पण्डितो ? विवेकी…. ॥४॥ ।

भगवत्पादाः कथयन्ति – विवेकी एव पण्डितः इति । पण्डा अस्य अस्ति इति पण्डितः । पण्डा इत्युक्ते आत्मविषयकं ज्ञानम् । नित्यानित्ययोः सत्यानृतयोः ज्ञानाज्ञानयोः भेदज्ञानं यस्य अस्ति स एव पण्डितः । वैदुष्येन पण्डितः न भवति । वैदुष्येन विद्वान् भवति । सर्वोऽपि विद्वान् विवेकी भवति इति नास्ति । नित्यानित्ययोः भेदज्ञानं, सत्यानृतयोः वा भेदज्ञानं नाम किम् ? येन भेदज्ञानेन विवेकी इति प्रकीर्त्या पण्डितः इति व्यवह्रियते ।

ब्रह्म सत्यं जगन्मिथ्या जीवो ब्रह्मैव नापरः इति वेदान्तदिण्डिमः । ब्रह्म तु स्यान्नाम सत्यम् । किन्तु अयं पुरतः परिदृश्यमानः सत्यत्वेन अनुभूयमानः प्रपञ्चः मिथ्या इत्युच्यते कथम् ? इति बहूनां सन्देहः । आचार्यभगवत्पादाः कथयन्ति असत्यम् इत्युक्ते सर्वथा अविद्यमानं तत्वं नास्ति । असत्यं मिथ्या इत्युच्यते । मिथ्या नाम सदसद्भिन्नं तत्त्वम् इति प्राथमिकं मिथ्यात्वलक्षणम् वर्तते । सत् इत्युक्ते त्रिकालाबाध्यं तत्त्वम् । भूतभविष्यद्वर्तमानेषु कालेषु यत् तत्त्वं स्वस्वरूपेणैव तिष्ठति तत् सत् इत्युच्यते । ब्रह्म सत्पदार्थः अस्ति । तत् ब्रह्म त्रिषु अपि कालेषु न व्यभिचरति । प्रपञ्चः सत्यत्वेन वर्तमानकाले प्रतीयते चेदपि भूतकाले सदा आसीद् इति वक्तुं न शक्यते । यतो ह अयं प्रपञ्चः सृष्टः अस्ति । सृष्टेः प्राक् अयं प्रपञ्चः अनेन रूपेण नासीत् । भविष्यत्काले अनेनैवरूपेण स्थास्यति इति निश्चयो नास्ति ।यतो हि नित्यं परिवर्तनशीलोऽयं प्रपञ्चः । अपि च कदाचित् अस्य प्रपञ्चस्य प्रलयः भविष्यति । अतः अयं प्रपञ्चः सत्पदार्थो न ।  यत् तत्वं त्रिषु अपि कालेषु अविद्यमानं भवति तत् असत् इत्युच्यते, यथा शशविषाणम्, अथवा खपुष्पम् । किन्तु अयं प्रपञ्चः वर्तनामे सत्यत्वेन अनुभूयते । अतः खपुष्पवत् असत् अपि नास्ति ब्रह्म इव त्रिकालाबाध्यं सत् अपि नास्ति । इत्युक्ते सदस्द्भिन्नम् अस्ति । लोकाः तावत् मिथ्या इत्युक्ते असत् इति मन्यन्ते । वस्तुतः मिथ्या इत्यस्य अभिप्रायः असत् इति नास्ति, प्रत्युत सदसद्भिन्नम् इत्यभिप्रायः ।

इत्थं विद्यमानं सत्यानृतयोः भेदं यः जानाति सः विवेकी इत्युच्यते । तच्च भेदज्ञानं वाचा ज्ञातं चेत् विवेकः इति नोच्यते शास्त्रज्ञैः । अनुभवेन सदसद्विवेकः यः भवति स एव विवेकः इत्युच्यते । यतो हि वाक् ब्रह्मस्वरूपं ज्ञापयितुम् असमर्था अस्ति, “यतो वाचो निवर्तन्ते अप्राप्य मनसा सह” इति श्रुतेः ।  तथापि लोके सत्यानृतयोः भेदज्ञानमिव युक्तायुक्त-उचतानुचतादिभेदज्ञानमपि विवेक इति व्यवह्रियते । अनया दृष्ट्या पण्डितः इत्युक्ते उचितानुचितादिभेदज्ञानवान् विवेकी इति मन्तव्यम् ।

को वैरी ? यस्त्वनुद्योगः ॥६॥

अलसः सन् यः अकर्मण्यस्तिष्ठति सः समाजस्य शत्रुः भवति । यतः बाह्यः शत्रुः कस्मिन्नपि कालविशेषे एव हानिं जनयति । किन्तु अनुद्योगी नित्यम् हानिं जनयति ।  अतः “कुर्वन्नेवेह कर्माणि जिजीविषेच्छतं समाः” इत्युपनिषद्वाक्यवत् कार्यं कुर्वन्नेव जीवितुम् इच्छेत् मानवः । लोके अधीतविद्याः सर्वेऽपि स्वयमुद्योगिनः न भवन्ति । कश्चन उद्योगं दद्यात् तदैव प्रवृत्तिः जयते । अत एव सर्वकारः व्यावसायिकीं शिक्षां पर्यकल्पयत् येन अध्ययनानुक्षणं लोकाः उद्योगिनः सञ्जायेरन् ।

किं जाड्यम् ? पाठतोऽप्यनभ्यासः ॥१०॥

पठनात्परं अभ्यासः कर्तव्यः, अधीतस्य ज्ञानस्य व्यवहारे उपयोगः इत्यपि अभ्यास इत्यस्य अभिप्रायः अस्ति । तत्र आलस्यं न स्यात् । अत एव वेदाः उपदिशन्ति – “स्वाध्यायान्मा प्रमदः” इति, आचार्यभगवत्पादाः च “वेदो नित्यमधीयताम्, तदुदितं कर्म स्वनुष्ठीयताम्” इत्युपदिदिशुः । अद्यत्वे स्वाध्यायः तदुदितकर्मानुष्ठानं अस्तां तावत्, नित्यकर्म सन्ध्यावन्दनमपि कष्टाय कल्पते । युवानस्तु “सन्ध्यावन्दनमाचरन्ति विभुधाः .....” इत्युक्त्वा उत्तरार्धे एव निलीनमानसाः भवन्ति ।  “आलस्यं हि मनुष्याणां शरीरस्थो महान् रिपुः” इति सुभाषितकाराः वदन्ति ।

कोऽनर्थफलो ? मानः,

अत्र मानः इत्युक्ते दुरभिमान इत्यर्थः । अहङ्कार इत्यर्थः । दम्भदर्पादयः दुरभिमानस्य परिणामाः सन्ति ।  दुरभिमानः अनर्थम्  दुष्परिणामं जनयति । आत्मनः विषये अयथार्थप्रत्ययः अथवा यथार्थादधिकः प्रत्ययः दुरभिमानः इत्युच्यते ।  दुरभिमानी स्वसामर्थ्यादधिकं मानं वाञ्छति । तदलाभे क्रुध्यति । क्रोधात् किं भवतीति भगवद्गीतायां इत्थम् उक्तम् - क्रोधाद्भवति सम्मोहः.... इति । “कामः क्रोधः  लोभः च नरकस्य द्वारम् इत्युक्त्वा  “तस्मादेतत्त्रयं त्यजेत्” इति भगवद्गीता अस्मान् उपदिशति । अपि च

“अहङ्कारं बलं दर्पं कामं क्रोधं  च संश्रिताः ।

मामात्मपरदेहेषु प्रद्विषन्तोऽभ्यसूयकाः ॥

तानहं द्विषतः क्रूरान् संसारेषु नराधमान् ।

क्षिपाम्यजस्रमशुभान् आसुरीष्वेव योनिषु ॥ इत्येवं रूपेण गीता मानादीनां अनर्थफलं विवृणोति ।

का सुखदा ? साधुजनमैत्री

का सुखदा ? इति पृच्छामः चेत् एते युवानः सर्वे लोकान्तरं प्रविशन्ति । भगवत्पादाः कथयन्ति – साधुजनमैत्री एव सुखदा इति ।सतां सद्भिः सङ्गः कथमपि हि पुण्येन भवति” “सतां हि दर्शनं पुण्यं तीर्थभूताश्च सज्जनाः।
कालेन फलते तीर्थम् सद्यः सज्जनसङ्गतिः॥इति सुभाषितकारैः प्रोक्तं भगवत्पादैः सुष्ठु अनूदितम्

का प्रेयसी विधेया ? करुणा दीनेषु सज्जने मैत्री ॥ १६ ॥

का प्रेयसी विधेया ? वदन्तु …… । शङ्करभगवत्पादाः ब्रुवन्ति – दीनेषु करुणा, सज्जनमैत्री च प्रेयसी विधेया । भगवान् अस्मभ्यं किं वा प्रयच्छति ? धनिकानां समीपे एव पुनः पुनः धनं गच्छति । वयं दरिद्राः दरिद्रा एव वर्तामहे इति केषाञ्चित् रोदनं लोके वयं श्रुणुमः । ते निर्धनाः दीनाः भवन्ति अथवा विपदि विद्यमानाः, अन्येषां साहाय्यं अपेक्षमाणाः दीनाः भवन्ति । एतेषां दीनानां विषये सबलाः करुणां प्रदर्शयेयुः । इत्युक्ते तेषां साहाय्यं कुर्युः । तच्च साहाय्यं इष्ट्वा/प्रेम्णा कर्तव्यम् ।  एषा दीनानां साहाय्यार्थं अपेक्षिता करुणा अस्माकं प्रेयसी इव स्यात् दत्तचित्ता ।

एवमेव सज्जने मैत्री अस्माकं प्रेयसी भवेत् इति भगवत्पादा  कथयन्ति । यतो हि सङ्गदोषः मानवान् दानवान् करोति । सज्जनमैत्री नरं नारायणं करोति । अतः सज्जनमैत्री प्रेयसी विधेया, यथा काव्यानि कान्तासंहिततया मानवेन रामादिवत्प्रवर्तितव्यमिति उपदिशन्ति तथा सज्जनसङ्गः मानवं सत्पथे नयति ।

क्व स्थातव्यं ? न्याय्ये पथि दृष्टादृष्टलाभाढ्ये ॥२०॥

न्यायमार्गे स्थातव्यम् इति तु सर्वैरपि ज्ञायते । किन्तु दृष्टादृष्टलाभाढ्ये इति अत्र विशेषः । इहलोके वयं  वनितावित्तादि दृष्टं फलं प्राप्तुं  न्यायमार्गे वर्तेमहि एव । परलोके अपि अदृष्टफलं प्राप्तुं न्यायमार्गः अनुसर्तव्यः । यतो हि इहलोके परेषाम् अहितकारकं चेदपि स्वानुकूलं चेत् तन्मार्गं अनुसरामः । किन्तु अदृष्टफलप्राप्तिः तु स्वकार्यसाधनवेलायां परेषा अहितं यत् जातं भवति तत्फलेन सहैव भवति । अतः अस्माकं दॄष्ट्या न्यायमार्गे वयं स्मः चेदपि परेषां यत्र हानिर्न भवति तादृशमार्गे स्थातव्यम् ।

“न्यय्यात् पथः प्रविचलन्ति पदं न धीराः ॥“

कोऽलङ्कारः ? शीलम्, किं वाचां मण्डनम् ? सत्यम् ॥२२॥

शीलम् इत्युक्ते चरित्रम् । चरित्रम् एव वृत्तम् । एतच्चरित्रं मनुष्यम् अलङ्कारयुक्तं करोति ।  तद्विहीनः अनलङ्कृतः इव इत्येव न मन्तव्यम् । सः चरित्रहीनः अस्ति ।  -

पापोऽयं कृष्णरामेत्यभिलपति निजं गूहितुं दुश्चरित्रम् 4नारायणीयं दशक 92 - कर्ममिश्रभक्तिः

ऐश्वर्यस्य विभूषणं सुजनता शौर्यस्य वाक्संयमो, ज्ञानस्योपशम: श्रुतस्य विनयो वित्तस्य पात्रे व्यय: । अक्रोधस्तपस: क्षमा प्रभवितुर्धर्मस्य निर्व्याजता, सर्वेषामपि सर्वकारणमिदं शीलं परं भूषणम्  

कः पूज्यो विद्वद्भिः ? स्वभावतः सर्वदा विनीतो यः ॥२६॥

अत्र शङ्कराचार्याः इत्थं नावदन् यत् विद्वान् सर्वत्र पूज्यते इति, प्रत्युत विद्वद्भिः कः पूज्यते इति स्वभावतः यः विनीतः स एव विद्वद्भिः पूज्यते इति । किञ्च यः विनीत इव कालानुगुणं अभिनीते/परिवर्तते सः न अभिप्रेतार्थः । बहवो हि तादृशाः एव लोके दृश्यन्ते । येषाः स्वभाव एव विनीतत्वम् अस्ति स एव विद्वद्भिः पूज्यते इत्यर्थः ।

कः कुलकमलदिनेशः ? सति गुणविभवेऽपि यो नम्रः ।

कः समग्रस्य वंशस्य प्रकाशने कारणीभूतः भवति  कमलस्य सूर्य इव ? बहवो हि स्वजीवने बहु किमपि साधयन्ति येन तदीयः वंशः कीर्तिमान् भवति इति वयं कदाचित् चिन्तयेम । किन्तु तथा नास्ति । गुणनिधिः चेदपि यः नम्रः विनयी भवति स एव वस्तुतः वंशस्य यशः वर्धयति । एतद्विरुद्धगुणाः भगवद्गीतायाम् उक्ताः दम्भो दर्पोऽभिमानश्च...इति पद्ये । एते दम्भादयः नम्रतायाः विरुद्धगुणाः । एते आसुरीगुणाः इति गीतायाम् उक्तम् । दम्भादीनां आश्रयस्थानम् वैदुष्यादिकम् अस्ति । दम्भादयः दुर्गुणाः न सन्ति इति मन्यामहे , केवलं सद्गुणाः एव सन्ति चेति । तथापि नम्रता नास्ति चेत् तदीयः वंशः न प्रकाशते । अतः सत्यपि सद्गुणविभवे य नम्रः भवति सः वंशस्य कीर्तिं वर्धयति इति शङ्करभगवत्पादाः न्यरूपयन् । 

कं न स्पृशति विपत्तिः ? प्रवृद्धवचनानुवर्तिनं दान्तम् ॥२८॥

विपत्तिं को वा इच्छति ? किन्तु बहवः वृद्धवचनं तिरस्कुर्वन्ति । वृद्धाः वस्तुतः शरीरेण दुर्बलाः स्युः नाम । किन्तु तेषाम् अनुभवाः नूनं यूनाम् अननुभविनां कार्ये जनिष्यमाणां विपत्तिं निवारयन्ति । ये अत्यन्तम् अनुभविनः ते प्रवृद्धाः । तेषां वचनम् अनुसरामः चेत् निश्चयेन विपत्तयः न स्पृशन्ति इति भगवत्पादाः कथयन्ति ।

कस्मै स्पृहयति कमला ? त्वनलसचित्ताय नीतिवृत्ताय॥२९॥

कमला इत्युक्ते लक्ष्मीः इत्यर्थः । सा कमिच्छति ? यः आलस्यविहीनः अस्ति, इत्युक्ते यः सक्रियः यश्च नीतिमार्गे चलति तमिच्छति इत्यर्थः । अत एव सुभाषितकारः वदति –

लक्ष्मीः समाविशतु गच्छतु वा यथेष्टम्

अद्यैव वा मरणमस्तु युगान्तरे वा

न्याय्यात् पथः प्रविचलन्ति पदं न धीराः ॥ इति ।

कः परिहार्यो देशः ? पिशुनयुतो लुब्धभूपश्च ॥ ३०॥

परेषां क्लेशदं कुर्यान्न पैशुन्यं प्रभोः प्रियम् ।
पैशुन्येन गतौ राहोश्चन्द्रार्कौ भक्षणीयताम् ॥ ३० ॥ काव्यमालाम् उक्तम् ।

महाभारते –

आक्रोशं परिवादं च पैशुन्यं च विवर्जयेत् ॥ इत्युक्तम् ।

को हि न वाच्यः सुधिया ? परदोषश्चानृतं तद्वत् ॥३५॥

मनुष्यस्य प्रायः अयं सामान्यः गुणः यत् आत्मप्रशंशा, परदोषस्य व्यक्तीकरणं चेति । वस्तुतः एतद्विपरीतं कर्तव्यम् । अतः तस्य अनुवर्तिकार्यत्वेन केचन आत्मनि दोषेषु सत्स्वपि परोपदेशम् कुर्वाणाः दृश्यन्ते लोके । सुभाषितकारः वदति -

परोपदेशवेलायां शिष्टाः सर्वे भवन्ति वै ।

विस्मरन्तीह शिष्टत्वं स्वकार्ये समुपस्थिते ॥

किं नु बलम् ? यद्धैर्यं, को मृत्युः ? यदवधानरहितत्त्वम् ॥४०॥

लोङ्गेवालायुद्धे अस्माकं पक्षे मेजर कुलदीपसिंह चान्दपुरी इत्यस्य निकटे केवलं ११८ संख्याकाः सैनिकाः आसन् । किन्तु पाकिस्तानस्य द्विसहस्रं सैनिकानां संहतिं पराजेतुम् प्राभवत् किमर्थम् ?

१९७१ तमे वर्षे भारतपाकिस्थानयोः युद्धे जगतः सर्वेऽपि देशाः पाकिस्थानस्य पक्षे आसन् रशियादेशं विहाय । अमेरिकादेशस्य रणभयङ्करी युद्धनौका गङ्गासागरम् उपसृता आसीत् । पाकिस्तानस्य निकटे अमेरिकादेशेन प्रदत्तानि अत्याधुनिकानि अशीतिसङ्ख्याकानि एफ़्.१६  युद्धविमानानि आसन् । तथापि भारतस्य सैन्येन ९३००० पाकिस्तानीयाः सैनिकाः शरणीकृताः ।

शिवाजिमहाराजस्य, गुरुगोविन्दसिंहस्य, राणाप्रतापसिंहस्य, राणासांगस्य, हरिसिंहनलवा इत्यस्य रणजीतसिंहस्य, ललितादित्यस्य, राजराजचोळस्य, बालाजीबाजीरावस्य, वासुदेवबलवन्तफडके वीरसावर्करस्य, चन्द्रशेखराजादस्य, भगतसिंहस्य, रामप्रसादबिस्मिलस्य, परमवीरस्य रामरघोबाराणे इत्यस्य, सोमनाथशर्मणः, सैतानसिंहस्य, बात्रविक्रमस्य, योगेन्द्रसिंहयादवस्य, देशस्य सुरक्षायै प्रवृत्तानां अगणितवीरपुरुषाणां च असीमपराक्रमः तदीयधैर्यस्य  परिणामतः एव प्रादर्शि इति पार्थक्येन वक्तव्यं नास्ति ।

उपसंहारः

 

सन्दर्भग्रन्थाः

1.     ब्रह्मसूत्रशाङकरभाष्यम्

2.     भगवद्गीता

3.     नीतिशतकम्

4.     सुभाषितरत्नभाण्डागारः

5.     ईशावास्योपनिषद्

6.     छान्दोग्योपनिषत्

Thursday, February 26, 2026

ಒಂದು ರೋಚಕ ಕಥೆ

 

ಹುಟ್ಟು ಗುಣ ಘಟ್ಟ ಹತ್ತಿದ್ರೂ ಬಿಡೋದಿಲ್ಲ, ನಾಯಿ ಬಾಲ ಡೊಂಕು, ನಾಯೀನ ಪಲ್ಲಕೀಲಿ ಕೂರ್ಸಿದ್ರೆ ಹೇಲ್ ಕಂಡ್ರೆ ಹಾರದೆ ಇರುತ್ತದೆಯೇ ?  ಅಂತ ಕೆಲವು ಗಾದೆ ಗಳು ಇವೆ.

೨೦೨೧ ನೆ ಇಸವಿಯ ಎಪ್ರಿಲ್ ತಿಂಗಳಿನಲ್ಲಿ ನಮ್ಮ ಪರಿಸರದ ವಿದ್ಯಾರ್ಥಿಗಳೆಲ್ಲ ಒಟ್ಟಾಗಿ  ನಮ್ಮ ಪರಿಸರದ ಆಗಿನ ನಿರ್ದೇಶಕರಾದ ಸುಬ್ರಾಯಭಟ್ಟರ ವಿರುದ್ಧವಾಗಿ ಸ್ಟ್ರೈಕ್ ಮಾಡುವಾಗ ಕೊನೆ ಘಳಿಗೆಯಲ್ಲಿ ಸುಬ್ರಾಯಭಟ್ಟರಿಂದ ಪ್ರೆರಿತರಾದ ಪೋಲೀಸಿನವರ ಆಘಾತಕಾರಿ ಮಾತುಗಳಿಂದ ಉದ್ರಿಕ್ತಗೊಂಡು ಎರಡು ವರ್ಷಗಳ ಹಿಂದೆ  ಲೈಂಗಿಕ ಕಿರುಕುಳ ಕೊಟ್ಟಿದ್ದಕ್ಕಾಗಿ  ಭಾಗ್ಯಶ್ರೀ ಜಾನಾ ಎಂಬ ಉತ್ತರ ಕರ್ನಾಟಕದ ಹುಡುಗಿ ಲಿಖಿತವಾಗಿ ವಿ,ಸಿ.ಯವರಿಗೆ ಕಂಪ್ಲೆಂಟ್ ಕೊಟ್ಟು ಫೋನ್ ನಲ್ಲಿ ಮಾತಾಡಿದ್ಮೇಲೆ ನಿರ್ದೇಶಕ ಸ್ಥಾನದಿಂದ ಉಚ್ಛಾಟಿಸಲ್ಪಟ್ಟ ಬಳಿಕ -

ಈಗ ಮೂರ್ನಾಲ್ಕು ತಿಂಗಳಿನಿಂದ ಪುನಃ ವಾಮಮಾರ್ಗದಿಂದ ನಿರ್ದೆಶಕಸ್ಥಾನವನ್ನು ಗಿಟ್ಟಿಸಿಕೊಂಡ ಸುಬ್ರಾಯ ಭಟ್ಟರು ಏನೂ ಬದಲಾಗಿಲ್ಲ ಎನ್ನುವುದಕ್ಕೆ ಹಲವಾರು ಪುರಾವೆಗಳು ದೊರೆಯುತ್ತಿವೆ.

ಅದರಲ್ಲಿ ಒಂದು ನಿನ್ನೆ ನಾನು ರವೀಶರ ಹತ್ರ ಫೋನ್ ಮಾಡುವಾಗ ಸಿಕ್ಕ ಮಾಹಿತಿ.

ಸ್ವತಃ ಸುಬ್ರಾಯಭಟ್ಟರೇ ಅವರ ಮನೆಯವರ ಮುಖಾಂತರ Outlook ನಲ್ಲಿ ಒಂದು ಫೇಕ್ ಐ.ಡಿ. ಕ್ರಿಯೇಟ್ ಮಾಡಿದ್ರು. ಅದೂ ಅವ್ರ ಹೆಸರಲ್ಲಿ ಅಲ್ಲ. ಶಾಸ್ತ್ರಿ ತೃತೀಯವರ್ಷದಲ್ಲಿ ಓದುತ್ತಿರುವ ಶಾರದಾ ಎನ್ ರಾವ್ ಎಂಬ ವಿದ್ಯಾರ್ಥಿನಿಯ ಹೆಸರಲ್ಲಿ. ನಂತರ ಆ ಫೇಕ್ ಐ.ಡಿ. ಇಂದ ಒಂದು ಮೇಲ್ ಈ ಕ್ಯಾಂಪಸ್ ನ ಡೈರೆಕ್ಟರ್ ಐ.ಡಿ ಗೆ ಶಾರದಾ ಎನ್. ರಾವ್ ಹೆಸರಲ್ಲಿ ಒಂದು ಕಂಪ್ಲೆಂಟ್ ಕಳಿಸಿದರು. ಅದು  ಯಾರ ವಿರುದ್ಧವಾಗಿ ? ನಮ್ಮ ಕ್ಯಾಂಪಸ್ ನಲ್ಲಿ ಅತ್ಯಂತ ಸಕ್ರಿಯರಾಗಿ ಅತಿ ಹೆಚ್ಚು ಕೆಲಸ ಮಾಡುವ ರವೀಶರ ವಿರುದ್ಧವಾಗಿ. ಅದೂ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಅಂತ.

ಈ ವಿಷಯವನ್ನು ರವೀಶರನ್ನು ಕರೆಸಿ ಅವರಿಗೆ ಹೇಳಲಾಯಿತು. ಆ ಬಳಿಕ ಸಮಾಧಾನ ಹೇಳಲಾಯಿತು “ಎನೂ ಚಿಂತೆ ಮಾಡ್ಬೇಕಾದದ್ದಿಲ್ಲ. ನಾನು ಅವಳನ್ನು ಕರೆದು ವಿಚಾರಿಸ್ತೇನೆ, ಅವಳ ತಂದೆಯವರ ಹತ್ರನೂ ಮಾತಾಡ್ತೇನೆ”

ನಂತರ ಹೀಗೆ ಹೇಳಲಾಯಿತು – “ನಾನು ಅವರನ್ನು ಕರೆದು ವಿಚಾರಿಸಿದೆ. ಆ ಮೇಲ್ ಅವಳು ಕಳಹಸಿದ್ದಲ್ಲವಂತೆ. ಅದು ಯಾರೊ ಫೇಕ್ ಐ.ಡಿ. ಕ್ರಿಯೇಟ್ ಮಾಡಿ ಹೀಗೆ ಮೇಲ್ ಮಾಡಿದ್ದಿರಬಹುದಂತೆ. ಅವರೇ (ಡಾ. ನರಸಿಂಹ ರಾವ್) ಲಿಖಿತವಾಗಿ ಒಂದು ಪತ್ರ ಕೊಟ್ಟಿದ್ದಾರೆ. ಹಾಗಾಗಿ ನೀವೇನೂ ಚಿಂತೆ ಮಾಡ್ಬೇಕಾದದ್ದಿಲ್ಲ.”

ರವೀಶರು ಆ ಮೇಲ್ ಮತ್ತು ನಂತರ ಡಾ. ನರಸಿಂಹ ರಾವ್ ಕೊಟ್ಟರು ಎಂದು ಹೇಳಿದ ಪತ್ರದ ಪ್ರತಿಯನ್ನು ಕೇಳಿ ತೆಗೆದುಕೊಂಡರು. ಬಳಿಕ ರವೀಶರು ಒಂದು ಮಾತು ಹೆಳಿದ್ರು – “ನನಗೆ ಸೈಬರ್ ಸ್ಪೆಶಲಿಷ್ಟಗಳ ಪರಿಚಯ ಇದೆ. ಯಾತಕ್ಕೂ ನಾನು ಒಂದು ಬಾರಿ ಅವರ ಹತ್ರ ವಿಚಾರಿಸ್ತೇನೆ”

“ಯಾ.. ಯಾ.. ಯಾಕೆ ? ಹಾಗೇನೂ ಮಾಡಬೇಕಾಗಿಲ್ಲ. ನಾನು ಎಲ್ಲ ವಿಚಾರಿಸಿ ಆಗಿದೆ. ಇನ್ನೇನೂ ಸಮಸ್ಯೆ ಇಲ್ಲ. ನೀವೇನೂ ಹಾಗೆ ಮಾಡ್ಬೇಡಿ. ಆ ಫೇಕ್ ಮೇಲ್ ಐ.ಡಿ. ಒಂದು ವಾರದ ನಂತರ ಸ್ವತಃ ಡಿಲೀಟ್ ಆಗಿ ಹೋಗುತ್ತದೆ.” ಇತಿ ಸುಬ್ರಾಯ(ಯಾಃ) ಉವಾಚ(ಊಚುಃ).

ಹಾಗಾದ್ರೆ ಡಾಕ್ಟ್ರು ಕೊಟ್ಟ ಆ ಪತ್ರದಲ್ಲಿ ಎನಿದೆ ?

ಮೊದಲಿನ ಪ್ಯಾರಾದಲ್ಲಿ ಸಹಜವಾಗಿಯೇ ಆ ಫೇಕ್ ಐ.ಡಿ ನಮ್ಮದಲ್ಲ. ನಾವು/ನನ್ನ ಮಗಳು ಆ ಮೇಲ್ ಕಳುಹಿಸಿದ್ದಲ್ಲ .ಇತ್ಯಾದಿ ಇತ್ಯಾದಿ.

ಎರಡನೇ ಪ್ಯಾರಾದಲ್ಲಿ –

ಈ ಸುಬ್ರಾಯ ಭಟ್ಟರು ಬಹಳ ಒಳ್ಳೆಯವರು. ತುಂಬ ಚೆನ್ನಾಗಿ ಪರಿಸರವನ್ನು ನಡೆಸಬಲ್ಲರು ಇತ್ಯಾದಿ ಇತ್ಯಾದಿ.

ಈಗ ಸಂದೇಹ ಎನಂದ್ರೆ –

ಸುಬ್ರಾಯ ಭಟ್ಟರು ಶಾರದಾಳನ್ನು ಅಥವಾ ಅವಳ ತಂದೆಯನ್ನು ವಿಚಾರಿಸಿದ್ದು ಯಾವಾಗ. ?

ಲೈಂಗಿಕ ಕಿರುಕುಳದ ವಿಷಯವಾಗಿದ್ದರಿಂದ ಸಂಬಂಧಿಸಿದ ಸಮಿತಿಯ(Woman’s Welfare Committee…) ಮೂಲಕ ಲಿಖಿತ ಪತ್ರದ ಮೂಲಕ ಡಾಕ್ಟ್ರನ್ನು ಯಾಕೆ ಕರೆಸಲಿಲ್ಲ ?

ಶಾರದಾಳನ್ನು ಒಬ್ಬಳನ್ನೇ ಕರೆದು ವಿಚಾರಿಸಿದರೇ ?

ತಂದೆ ಮಗಳಿಂದ ಸ್ಪಷ್ಟನೆ ಸಿಕ್ಕಿದ ಬಳಿಕ ಡಾಕ್ತ್ರು ಕೊಟ್ರು ಅಂತ ಹೇಳಿದ ಪತ್ರ ಬರೆದದ್ದು ಯಾರು ?

ಸುಬ್ರಾಯಭಟ್ಟರ ಕುರಿತಾದ ಹೊಗಳಿಕೆಯ ಅಪ್ರಾಸಂಗಿಕ ಮಾತುಗಳು ಪತ್ರದಲ್ಲಿ  ಯಾಕೆ ಇವೆ ?

ಅದನ್ನು ಸುಬ್ರಾಯರೇ ಯಾಕೆ ಬರೆದಿರಬಾರದು ?

ಫೇಕ್ ಐ.ಡಿ ಯನ್ನು ಕ್ರಿಯೇಟ್ ಮಾಡಿ ಅದರಿಂದ ಒಬ್ಬ ಪ್ರಾಮಾಣಿಕ ಪರಿಶ್ರಮಿ ಸಮರ್ಪಿತ ಅಧ್ಯಾಪಕನ ವಿರುದ್ಧವಾಗಿ ಲೈಂಗಿಕ ಕಿರುಕುಳದ ಪತ್ರವನ್ನು ಬರೆದು, ವಿಚಾರಣೆಯ ನಾಟಕವಾಡಿ, ಡಾಕ್ತ್ರು ಸ್ಪಷ್ಟೀಕರಣ ಕೊಟ್ಟಿದ್ದಾರೆ ಅಂತ ಫೇಕ್ ಲೆಟರನ್ನು ಆತ್ಮಪ್ರಶಂಶೆಗಾಗಿ ಬರೆಸಿ ಅದರ ಪ್ರತಿಯನ್ನು ವಿ.ಸಿ.ಗೆ ಕಳುಹಿದ್ದು ಯಾವ ಉದ್ದೇಶಕ್ಕಾಗಿ ?

ಈ ರೀತಿಯಾಗಿಯೇ ಹಿಂದೆ ಯೋಗ ಅಧ್ಯಾಪಕ ರವಿ ಶಾಸ್ತ್ರಿಯ ವಿರುದ್ಧವಾಗಿ ಕೂಡ ಇದೇ ಸುಬ್ರಾಯರು ಫೇಕ್ ಐ.ಡಿ. ಕ್ರಿಯೇಟ್ ಮಾಡಿ ಹೆಣ್ಣು ಮಕ್ಕಳ ಹೆಸರಲ್ಲಿ ಕಂಪ್ಲೆಂಟ್ ನ್ನು ದೈರೆಕ್ಟರ್(ತನಗೇ) ಗೆ ಬರೆಸಿಕೊಂಡಿದ್ದೂ ಇದೆ.

ಈ ಮನುಷ್ಯ ತನ್ನ ಸೀಟ್ನಲ್ಲಿ ಭದ್ರವಾಗಿ ಉಳಿಯುವುದಕ್ಕೆ, ತನಗಾಗದಿರುವವರನ್ನು ಮಟ್ಟ ಹಾಕುವುದಕ್ಕೆ ಎಂತಹ ನೀಚ ಕೆಲಸ ಮಾಡಲೂ ಹೇಸುವುದಿಲ್ಲ ಎಂಬುವುದಕ್ಕೆ ಬೇರೆ ಸಾಕ್ಷಿ ಬೇಕೇ ?

ಇದೇ ರೀತಿ ಮುಂದಿನ ದಿನಗಳಲ್ಲಿ ಫೇಕ್ ಈಮೇಲ್ ಐ.ಡಿ.ಗಳ ಪ್ರಯೋಗ ಎಷ್ಟು ಅಧ್ಯಾಪಕರ ಮೇಲೆ ಆಗುವುದಿದೆಯೋ ದೇವರೆ ಬಲ್ಲ.

ವೀ.ಸಿ ಯವರಿಗೂ ಅದೇನು ಅನಿವಾರ್ಯತೆಯೋ ಗೊತ್ತಾಗುವುದಿಲ್ಲ. ಇಂತಹ ಅಧಮಾಧಮರನ್ನು ಸೀಟಿನಲ್ಲಿ ಕೂರಿಸಿದರೆ  ಸಂಸ್ಥೆಯ ಗತಿ ಏನಾಗಬೇಕು ? ದೇವರೇ ಗತಿ.

Thursday, November 27, 2025

ಅಜ್ಞಾನ ಮತ್ತು ಕಾಪಟ್ಯ ಗಳ ಮದುವೆ.

ಇಂದು ಪ್ರಯಾಗರಾಜ್ ನಲ್ಲಿರೋ ಆನಂದಭವನಕ್ಕೆ ಭೇಟಿ ನೀಡಿದೆ. ಅಲ್ಲಿನ ಚಿತ್ರಶಾಲೆ ನೋಡಿದೆ. ಭಾರತ ಸಂಕಷ್ಟದಲ್ಲಿದ್ದರೂ ಭಾರತೀಯನ ನೆಮ್ಮದಿಗೆ ಕೊರತೆಯಿಲ್ಲ ಎಂದು ಬ್ರಿಟಿಷರಿಗೆ ಸಾರುತ್ತಿರುವಂತಿರುವ ನೆಹರುರವರ ಯಶೋಗಾಥೆಯ‌ ಚಿತ್ರಗಳ  ನೋಡಿ ಬೆರಗಾದೆ!! ದೇಶವನ್ನು ತಮ್ಮ ಮನೆಯೆಂದು ಭಾವಿಸಿ ಬದುಕಿದ ಪಂಡಿತರ ಧೀಮಂತಿಕೆಗೆ ಮಾರು ಹೋದೆ!!!

ಇದು 20 ನವಂಬರ್ 2025 ರಂದು ರಾಘವೇಂದ್ರ ಭಟ್ ಫೇಸ್ಬುಕ್ ನಲ್ಲಿ ಬರೆದದ್ದು. ಅಡ್ಡಗ್ಗದ್ದೆ ನಾಗರಾಜ "ನೆಹರೂ ನನ್ನು ಹೊಗಳುವ ಇವರು ಶಿಕ್ಷಿತರ ಅಂತ ಅನುಮಾನ. ಛಿ" ಅಂತ ಕಾಮೆಂಟ್ ನ ಜೊತೆಗೆ ನನಗೆ ಕಳಿಸಿದ್ದು.

ಹೌದು. ಇದು ಅಜ್ಞಾನ ಮಾತ್ರ ಅಲ್ಲ. ರಾಹುಲನಂತೆ ಅಜ್ಞಾನದ ಮುಖವಾಡವಿರುವ ಕಾಪಟ್ಯದ ಕಂಟಕ.
ಯಾಕೆಂದರೆ -
1962 ನೇ ಇಸವಿಯಲ್ಲಿ   ಥಗ್ಲಾ ಪರ್ವತದ ಹಿಂದೆ ಅತ್ಯಾಧುನಿಕ ಶಸ್ತ್ರಗಳೊಂದಿಗೆ ಕುಳಿತಿದ್ದ ಚೀನಾ ದೇಶದ 20 ಸಾವಿರ ಸೈನಿಕರೊಂದಿಗೆ ಹೊಡೆದಾಡಲು ನೆಹರು ಬರೀಗೈಲಿ ಕಾಲ್ನಡಿಗೆಯಲ್ಲಿ ಕಳಿಸಿದ್ದು ಅರ್ಧ ಬ್ರಿಗೇಡ್ ಸೈನ್ಯ. ಅಂದರೆ ಕೇವಲ 2 ಸಾವಿರ ಸೈನಿಕರು. ಸೈನಿಕರಿಗಂತೂ ಹೋಗಲು ವಿಮಾನವಿಲ್ಲ. ಬ್ರಿಗೇಡ್ ನ ನಾಯಕನಾದ ಬ್ರಿಗೇಡಿಯರ್ ಗೂ ಅದೇ ಗತಿ. 

ಆದರೆ ಅದೇ ವರ್ಷ ಕಾಂಗೋ ಗಣರಾಜ್ಯಕ್ಕೆ ಅಲ್ಲಿ ಯಾರೋ 114 ಮಂದಿ ಸ್ಥಳೀಯ ಪುಂಡರು ಅಲ್ಲಿನ ಎರ್ಪೋರ್ಟ್ ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುವುದನ್ನು ತಡೆಯಲು ಶಾಂತಿಪಾಲನಪಡೆಯ ಹೆಸರಲ್ಲಿ ವಿಮಾನದಲ್ಲಿ ಕಳುಹಿಸಿದ್ದು ಬರೋಬ್ಬರಿ 4 ಸಾವಿರ ಶಸ್ತ್ರ  ಸಜ್ಜಿತ ಸೈನಿಕರನ್ನು.

ಈ ರೀತಿಯಾಗಿ  ಜಾಗತಿಕವಾಗಿ ಪ್ರಶಂಸೆಯ ಕಿರೀಟವನ್ನು ತೊಟ್ಟುಕೊಳ್ಳುವ ಸಲುವಾಗಿ  ತನ್ನ ದೇಶವನ್ನು  ತಾನೇ ಸೋಲಿಸುವ ನೆಹರೂನ ನಡೆಯಿಂದ ಬುದ್ಧಿ ಕಲಿಯದ ಕೆಲವು ಪ್ರೊಫೆಸರ್ ಗಳು ಆತನನ್ನೇ ಆರಾಧಿಸುವ ಪರಿ ಬರಿ ಬಾಲಿಷ ಮಾತ್ರ ಅಲ್ಲ, ಕಪಟವೂ ಕೂಡ ಅಲ್ಲವೇ?.

ಇಂತಹ ಮನುಷ್ಯ ಪ್ರಧಾನಿಯಾಗಿದ್ದೇ ಅಪ್ರಜಾತಾಂತ್ರಿಕವಾದ ಕಾಪಟ್ಯದ ವಿಧಾನದಿಂದ.

 ಮೊದಲ ಪ್ರಧಾನಿಯಾಗಿ  ಸುದೀರ್ಘ ದಾಸ್ಯಕ್ಕೆ ಒಳಗಾಗಿದ್ದ ದೇಶದ ಪ್ರಜೆಗಳನ್ನು ಸಮುಚಿತ ಶಿಕ್ಷಣದ ಮೂಲಕ ಸ್ವತಂತ್ರ ಚಿಂತನಾಶಕ್ತಿಯೊಂದಿಗೆ ಸಮೃದ್ಧ ಜೀವನ ನಡೆಸುವಂತೆ ಮಾಡಬೇಕಾದವ ಒಬ್ಬರ ಮೇಲೊಬ್ಬರಂತೆ 5 ಮುಸಲ್ಮಾನ್ ಶಿಕ್ಷಣ ಮಂತ್ರಿಗಳನ್ನು ಸಂಪುಟದಲ್ಲಿ ಸೇರಿಸಿದ ಉದ್ದೇಶ ಏನು ಅಂತ ನಮಗೆ ತಿಳಿಯುವುದಿಲ್ಲವೇ?
ಪಾಕ್ ಆಕ್ರಮಿತ ಕಾಶ್ಮೀರದ ಸಮಸ್ಯೆ ಶಾಶ್ವತವಾಗಿ ಉಳಿಯಲು ಯಾರು ಕಾರಣ? 370ನೇ ವಿಧಿಯನ್ನು ರೂಪಿಸಿ 70 ವರ್ಷ ಅದು ಜೀವಂತವಾಗಿ ಉಳಿದು, ದೇಶದ ಖಜಾನೆಯಿಂದ ಪ್ರತಿವರ್ಷ ಸಾವಿರಾರು ಕೋಟಿ ರೂಪಾಯಿಗಳನ್ನು  ಭಾರತದ ರಕ್ತ ಹೀರುವವರಿಗೆ ಕೊಡುವಂತೆ ಸಂಕಲ್ಪಿಸಿ ಕಾರ್ಯಗತಗೊಳಿಸಿದ್ದು ಯಾರು? ದೇಶ ವಿಭಜನೆಯ ಸಂದರ್ಭದಲ್ಲಿ ಸಿಂಧ್ ನ ಜನತೆ ಭಾರತಡೊಡನೆ ವಿಲೀನವಾಗಲು ಬಯಸಿದಾಗ ನಿರಾಕರಿಸಿದ್ದು ಯಾರು?
ಹೈದರಾಬಾದ್ ನ ನಿಜಾಮ ಪಾಕಿಸ್ತಾನ ದಿಂದ ವಿಮಾನ ಗಳ ಮೂಲಕ ರಾತೋ ರಾತ್ರಿ ಶಸ್ತ್ರಾಸ್ತ್ರ  ತರಿಸಿಕೊಳ್ಳುತ್ತ ಹಿಂದೂಗಳ ನರಮೇಧ ಮಾಡುತ್ತಿದ್ದಾಗ ಭಾರತೀಯ ಸೇನೆಯನ್ನು ತಡೆದು ನಿಲ್ಲಿಸಿದ್ದು ಯಾರು?

ಜುನಾಗಡ್  ನ ವಿಮೋಚನೆಯಲ್ಲಿ , ಭೋಪಾಲ್ ನ ವಿಮೋಚನೆಯಲ್ಲಿ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದು ಕೊಂಡವರು ಯಾರು?
ಸೋಮನಾಥ ಮಂದಿರದ ಪುನರ್ನಿರ್ಮಾಣ ಸಾವಿರ ವರ್ಷಗಳ ಬಳಿಕ  ದೇಶಕ್ಕೆ ಒದಗಿದ ಗುಲಾಮಿತನದ ವಿರುದ್ಧದ ದೇಶದ ಸ್ವಾಭಿಮಾನದ ಪರಮ ವೈಭವದ ಕ್ಷಣವನ್ನು ಸಾಕ್ಷಾತ್ಕರಿಸಿಕೊಳ್ಳುವ ಅವಕಾಶ. ಇದು ಸ್ವತಂತ್ರ ಭಾರತದಲ್ಲಿ ಸರ್ಕಾರಿ ಖರ್ಚುನಲ್ಲೇ ಆಗಬೇಕಾಗಿದ್ದ ಕೆಲಸ. 
ಆದರೆ ಆ ನೀಚ ಬುದ್ಧಿಯ ವ್ಯಕ್ತಿ ಖಜಾನೆಯಿಂದ ಖರ್ಚು ಮಾಡಲು ನಿರಾಕರಿಸಿದ್ದಲ್ಲದೆ,  ದೇಶದ ಅಗಿನ ರಾಷ್ಟ್ರಪತಿಯೂ ಮಂದಿರದ ಉದ್ಘಾಟನೆಯಲ್ಲಿ ಭಾಗವಹಿಸದಂತೆ ತಡೆಯಲು ಯತ್ನಿಸಿದ್ದು ಒಬ್ಬ ದೇಶದ ಸ್ವಾಭಿಮಾನಿ ಪ್ರಜೆಯಾಗಿ ಹೇಗೆ ನಾನು ಸಹಿಸಿಕೊಳ್ಳಲಿ?

ನೇಪಾಳದ ರಾಜ ತ್ರಿಭುವನ್ ಭಾರತದೊಂದಿಗೆ ಒಂದು ರಾಜ್ಯವಾಗಿ ನೇಪಾಲವನ್ನು ವಿಲೀನಗೊಳಿಸಲು ಪ್ರಸ್ತಾಪಿಸಿದಾಗ ತಿರಸ್ಕರಿದ ನೆಹರೂ, ಭಾರತದ 10 ಸಾವಿರ ಸೈನಿಕಬಲದೊಂದಿಗೆ ರಕ್ಷಿಸಲ್ಪಡುತ್ತಿದ್ದ ಟಿಬೇಟ್ ನ್ನು ಚೀನಾಕ್ಕೆ ಬೆಳ್ಳಿತಟ್ಟೆಯಲ್ಲಿಟ್ಟು ಕೊಟ್ಟ ನೆಹರೂ, ಬಾಂಗ್ಲಾದೇಶದ ಹಿಂದೂ ಬಾಹುಲ್ಯದ ಒಂದು ಜಿಲ್ಲೆಯವರು ಭಾರತದ ಒಕ್ಕೂಟ ದೊಂದಿಗೆ ವಿಲೀನವಾಗಲು ಬಯಸಿದಾಗ ನಿರಾಕರಿಸಿದ ನೆಹರೂ, ಡೈರೆಕ್ಟ್ ಆಕ್ಷನ್ ಮಾಡಲು ಹೊರಟ ಜಿನ್ನಾನ ತುರುಕರನ್ನು  ಮಟ್ಟ ಹಾಕದೆ, ಅದನ್ನೆದುರಿಸಲು ನೌಖಾಲಿಯಲ್ಲಿ ಎದ್ದು ನಿಂತ ಹಿಂದೂಗಳ ಮೇಲೆ ಬಾಂಬ್ ಹಾಕುವ ಬೆದರಿಕೆಯನ್ನೊಡ್ಡಿದ ನೆಹರೂ,...... ಅದ್ಹೇಗೆ ಧೀಮಂತ ನಾಯಕನಾಗಬಲ್ಲ?
ಅವನಿದ್ದಾಗ ಅದ್ಹೇಗೆ ಒಬ್ಬ ನಿಜವಾದ ಭಾರತೀಯ ಅಪ್ಪನಿಗೆ ಹುಟ್ಟಿದ ಹಿಂದು ನೆಮ್ಮದಿಯ ದಿನವನ್ನು ಕಳೆಯಬಲ್ಲ?
ಇದು ( ನೆಹರು ಧೀಮಂತ ವ್ಯಕ್ತಿ ಎನ್ನುವ ಮಾತು ) ಕಾಪಟ್ಯವಲ್ಲದೆ ಮತ್ತೇನು?