Tuesday, May 2, 2023

ಅಂಡಮಾನಿನ ಸೆಲ್ಯುಲಾರ್ ಜೈಲ್

 ಅಂಡಮಾನಿನ ಸೆಲ್ಯುಲಾರ್ ಜೈಲ್ 







ಇದು ಅಂಡಮಾನಿನ ಸೆಲ್ಯುಲಾರ್ ಜೈಲ್ ನ  ಕೊಣೆ. ಇದರಲ್ಲಿ ನಮ್ಮ ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯಯೋಧ ವೀರ ಸಾವರ್ಕರರು ೫೦ ವರ್ಷಗಳ ಕರಿನೀರಿನ ಶಿಕ್ಷೆಗೆ ಒಳಗಾಗಿ ಶಿಕ್ಷೆ ಅನುಭವಿಸಿದ್ದು.

ಇದು ನಮ್ಮ ದೇಶವನ್ನು ಪ್ರೀತಿಸುವವರಿಗೆ ಪವಿತ್ರ ಜಾಗ. ಎಕೆಂದರೆ ಬ್ರಿಟಿಷರಿಂದ ಎರಡು ಅವಧಿಯ ಆಜೀವನ ಜೈಲುಶಿಕ್ಷೆಗೆ ಒಳಗಾದ ದೇಶದ ಎಕೈಕ ಸ್ವಾತಂತ್ರ್ಯಯೊಧ ವಿನಾಯಕ ದಾಮೊದರ ಸಾವರಕರರ ನೆನಪನ್ನು ಹಸಿರಾಗಿಸುವ ಜಾಗ. ಮದ್ರಾಸ್ ನಿಂದ ಸಮುದ್ರ ಮಾರ್ಗದಲ್ಲಿ ೧೦೦೦ ಕಿ.ಮೀ. ದೂರದಲ್ಲಿ ಅಂಡಮಾನ್ ದ್ವೀಪ ಇದೆ. ಅಲ್ಲಿ ಈ ಸೆಲ್ಯುಲಾರ್ ಜೈಲ್ ಇದೆ. ನಾನು ಆರು ವರ್ಷಗಳ ಹಿಂದೆ ಕುಟುಂಬ ಸಮೇತನಾಗಿ ಅಲ್ಲಿಗೆ ಹೋಗುವ ಅವಕಾಶವನ್ನು ನನ್ನ ಪುಣ್ಯವೆಂದು ಭಾವಿಸಿ ಸದುಪಯೊಗಪಡಿಸಿಕೊಂಡೆ. ನಾವು ನೀವು ಅನುಭವಿಸುವ ಸ್ವಾತಂತ್ರ್ಯವನ್ನು ಗಳಿಸಿಕೊಡಲು ಈ ಪುಣ್ಯಾತ್ಮ ಅದೆಷ್ಟು ಕಷ್ಟಪಟ್ಟಿದ್ದರು ಎಂಬುದನ್ನು ಎಷ್ಟು ಕೃತಜ್ಞತೆಯಿಂದ ಸ್ಮರಿಸಿಕೊಳ್ಳವುದು ನಮ್ಮೆಲ್ಲರ ಕರ್ತವ್ಯವೋ ಹಾಗೆಯೇ ಸ್ವಾತಂತ್ರ್ಯ ಪ್ರಾಪ್ತಿಯಾದ ಬಳಿಕ ಈ ಸೆಲ್ಯುಲರ್ ಜೈಲು ಇದ್ದರೆ ಇದು ಒಂದು ದೊಡ್ಡ ಸ್ಮಾರಕವಾಗಿ ತನ್ನ ಅಸ್ತಿತ್ವಕ್ಕೆ ಸಂಚಕಾರವಾಗಬಹುದು ಎಂದು ಊಹಿಸಿ ಅದನ್ನು ಧ್ವಂಸ ಮಾಡಲು ನೆಹರೂ ಟೀಂ ಮಾಡಿದ ಕೆಲಸವನ್ನೂ ನೆನಪಿಸಿಕೊಳ್ಳಬೇಕು.

ಇಂತಹ ಸಾವರ್ಕರರಂತ ಪುಣ್ಯಾತ್ಮನನ್ನು ಗಾಂಧಿ ಸತ್ತಾಗ ಎಷ್ಟು ನಿರ್ದಯವಾಗಿ ನಡೆಸಿಕೊಂಡಿತು ನೆಹರೂ ಪಟಾಲಂ ಎಂಬುದೂ ದೇಶವಾಸಿಗಳಿಗೆ ಗೊತ್ತು.

ಲಂಡನ್ ನಲ್ಲಿ ಬ್ಯಾರಿಷ್ಟರ್ ಪದವಿ ಪಡೆಯಲು ಹೋದ ಸಾವರ್ಕರ್ ಅಲ್ಲಿದ್ದ ಭಾರತೀಯರನ್ನು ಸಂಘಟಿಸಿ ದೇಶದ ಸ್ವಾತಂತ್ರ್ಯಕ್ಕಾಗಿ ಸಜ್ಜುಗೊಳಿಸುತ್ತಾ ಬರೆದ ಪುಸ್ತಕ “ಭಾರತದ ಪ್ರಥಮ ಸ್ವಾತನ್ತ್ರ್ಯ ಸಂಗ್ರಾಮ” ಇನ್ನೂ ಅಚ್ಚಾಗುವ ಮೊದಲೇ ಮೂರು ದೇಶಗಳಲ್ಲಿ ಬ್ಯಾನ್ ಆಗಿತ್ತು ಅಂದರೆ ಅವರ ವಿದ್ಯಾರ್ಥಿ ಜೀವನದಲ್ಲೇ ಅವರು ಬ್ರಿಟಿಶರಿಗೆ ಅದೆಂತಹ ಪೆಟ್ಟನ್ನು ಕೊಟ್ಟಿರಬೇಕು.

ಮೂರು ದೇಶಗಳಲ್ಲಿ ಬ್ಯಾನ್ ಆಗಿದ್ದರೂ ಅದನ್ನು ಸುರಕ್ಷಿತವಾಗಿ ಸಾಗಿಸಿ ಅಚ್ಚು ಹಾಕಿಸಿ ಮನೆ ಮನೆಗೆ ತಲುಪಿಸಿ, ಆಗಿನ ಯುವಕರು ಅದನ್ನು ಪೂರ್ತಿಯಾಗು ಬಾಯಿ ಪಾಠ ಮಾಡಿ ಮನೆಯ ಗೋಡೆಯಲ್ಲಿ ಹುದುಗಿಸಿಟ್ಟು ಜನರಿಗೆ ತಿಳಿಸುತ್ತಿದ್ದರು ಎಂದರೆ ಅದೆಂತಹ ಪ್ರೇರಣೆಯ ಚಿಲುಮೆ ಸಾವರ್ಕರ್!!!

ಜೈಲಿನ ಕೋಣೆಯಲ್ಲಿ ಬರೆಯಲು ಪೆನ್ನು ಪೇಪರ್ ನ್ನು ಕೊಡದಿದ್ದಾಗ ಪಹರೆಯವರು ಸಮೀಪದಲ್ಲಿಲ್ಲದಾಗ ಜೈಲಿನ ಗೋಡೆಯಲ್ಲೇ ಕ್ರಮಶಃ ೧೦ ಸಾವಿರ ಸಾಲುಗಳನ್ನು ಮೊಳೆಯಲ್ಲೇ ಬರೆದು ಪಹರೆಯವರು ಬರುವ ಮೊದಲು ಬಾಯಿಪಾಠ ಮಾಡಿ ಉಜ್ಜುತ್ತಿದ್ದರು ಸಾವರ್ಕರ್.

ಸ್ವತಃ ಸಸ್ಯಾಹಾರಿಯಾಗಿದ್ದರೂ ಜೈಲರ್ ಉದ್ದೇಶಪೂರ್ವಕವಾಗಿ ಕೊಳೆತ ಹಾವು ಕಪ್ಪೆಗಳಿಂದ ಕೂಡಿದ ಆಹಾರವನ್ನು ಕೊಟ್ಟಾಗಲೂ (ನಮಗಾಗಿ  ನಮ್ಮ ಸ್ವಾತನ್ತ್ರ್ಯಕ್ಕಾಗಿ) ಕೊಳೆತ ಹಾವು ಕಪ್ಪೆಗಳನ್ನು ಸರಿಸಿ ಅನ್ನ ತಿಂದು ಶರೀರ ಉಳಿಸಿಕೊಂಡದ್ದು ಯಾರಿಗಾಗಿ ? ಹಾವು ಕಪ್ಪೆಗಳನ್ನು ಸರಿಸಿ ತಿನ್ನುತ್ತಿದ್ದುದನ್ನು ನೊಡಿ ಜೈಲರ್ ಕಫವನ್ನು ಉಗಿದು ಅನ್ನಕ್ಕೆ ಕಲಸಿ ಕೊಟ್ಟಾಗ ಸಾವರ್ಕರ್ ಅದನ್ನು ಹೇಗೆ ತಿಂದಿರಬೇಕು ?

ಇಂತಹ ಸಾವರ್ಕರರ ಬರೆದ ಸಾಲು (ಜೈಲಿನ ಆವರಣದಲ್ಲಿದ್ದದ್ದು) ಕಾಂಗ್ರೆಸ್ ನ ಮಣಿಶಂಕರ್ ಅಯ್ಯರ್ ಕಣ್ಣಿಗೆ ಬಿದ್ದು ಅದನ್ನು ತೆಗೆಸಿ ಹಾಕಲು ಆದೇಶಿಸಿದಾಗ ಯಾವ ಭಾರತೀಯನಿಗೆ ನೋವಾಗುವುದಿಲ್ಲ ಹೇಳಿ ?  ಆ ಮಣಿಶಂಕರ ಅಯ್ಯರ್ ಹಿಂದೆ ಭಾರತ ಚೀನ ಯುದ್ಧ ಆಗುತ್ತಿದ್ದಾಗ ಇಂಗ್ಲೆಂಡ್ ನಲ್ಲಿ ಓದುತ್ತಿದ್ದ. ಆಗ ಅಲ್ಲಿ ದೇಣಿಗೆ ಸಂಗ್ರಹಿಸುತ್ತಿದ್ದ. ಯಾರಿಗಾಗಿ ಗೊತ್ತೇ ? ಚೀನದ ರೆಡ್ ಆರ್ಮಿಯ ಪರವಾಗಿ !!!  ಆತ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ದಲ್ಲಿ(ಯು.ಪಿ.ಎ. ೧) ಪೆಟ್ರೋಲಿಯಂ ಸಚಿವ !!!

ಅಂತಹ ಸಾವರ್ಕರರನ್ನು ದಿನ ಬೆಳಗಾದರೆ ಮೂದಲಿಸುವ ಪಪ್ಪು ಪಟಾಲಂ ಅದೆಷ್ಟು ಬೆಲೆಯನ್ನು ಭಾರತೀಯರಿಂದ ಪಡೆಯಲು ಸಾಧ್ಯ ?

ಈ ನಮ್ಮ ಕಬ್ಬಿನಾಲೆ ಗ್ರೂಪ್ ನಲ್ಲಿ ಕೆಲವರಿಗೆ ಸತ್ಯ ಹಂಚಿಕೊಂಡಲ್ಲಿ ನೋವಾಗುತ್ತದೆ. ನಮ್ಮ ನಲಿವಿಗಾಗಿ ಬಲಿದಾನಗೈದ ಜನರನ್ನು ಮೂದಲಿಸುವವರನ್ನು ನಾನಂತೂ ಸಿಂಹಾಸನದಲ್ಲಿ ನೋಡಲು ಬಯಸುವುದಿಲ್ಲ.

 ನಿಮಗೆ ಸತ್ಯ ಇಷ್ಟವಾಗದಿದ್ದಲ್ಲಿ ಇಷ್ಟವಾಗಲಿಲ್ಲ ಎಂದು ಹೇಳಲು ಮಾತ್ರ ಹಕ್ಕಿದೆ. ತಿಳಿಸಬೇಡಿ ಎನ್ನಲು ಖಂಡಿತ ಇಲ್ಲ. ಎಕೆಂದರೆ ಈ ವೇದಿಕೆ ಸತ್ಯ ಇಷ್ಟವಾಗದವರಿಗೆ ಮಾತ್ರ ಸೇರಿದ್ದಲ್ಲ. ಎಡ್ಮಿನ್  ಎಲ್ಲೂ ಸಹ ಸತ್ಯ ಹೇಳಬಾರದು ಎಂದು ಮುಂಚಿತವಾಗಿ ಈ ಗ್ರೂಪಿನಲ್ಲಿ ನಿರ್ಬಂಧವನ್ನು ಹೇರಿಲ್ಲ. ಹಾಗಾಗಿ ಇಷ್ಟವಾಗದವರಿಗೆ ಹೊಸ ವೇದಿಕೆಯನ್ನು ಹುಟ್ಟುಹಾಕುವ ಪೂರ್ಣ ಸ್ವಾತಂತ್ರ್ಯ ಇದೆ.  ಆ ಸ್ವಾತಂತ್ರ್ಯವನ್ನು ನಾವಂತೂ ಕಸಿಯುವವರಲ್ಲ.

ಧನ್ಯವಾದ. ಯಾರಿಗಾದರೂ ವಿಷಯ ಅರ್ಥವಾಗದೆ ನೋವಾಗಿದ್ದಲ್ಲಿ ನನಗೆ ಮರುಕವಿದೆ. ಅನ್ಯಥಾ ಅರ್ಥ ಮಾಡಿಕೊಡವರಿದ್ದಲ್ಲಿ ಅವರಿಗಾಗಿ ನಾನು ವಿಷಾದ ವ್ಯಕ್ತ ಪಡಿಸುತ್ತೇನೆ.

No comments:

Post a Comment