ನಾನೇಕೆ
ಇಸ್ಲಾಮನ್ನು ತ್ಯಜಿಸಿದೆ ?
ಇಸ್ಲಾಮ್ ನಲ್ಲಿ ನನ್ನ ನಂಬಿಕೆ
ದೃಢವಾಗಿತ್ತು. ನಾನು ಬಾಲ್ಯದಿಂದಲೇ ಇಸ್ಲಾಮ್ ನ ನಿಯಮಗಳನ್ನು ಪಾಲಿಸುತ್ತಿದ್ದೆ. ವಿಜ್ಞಾನದ ವಿದ್ಯಾರ್ಥಿಯಾದ
ಬಳಿಕ ಅನೇಕ ಪ್ರಶ್ನೆಗಳು ನನ್ನನ್ನು ಇಸ್ಲಾಮ್ ನ ವಿಷಯದಲ್ಲಿ
ಚಿಂತನೆ ನಡೆಸುವಂತೆ ಮಾಡಿದವು. ಇಸ್ಲಾಮ್ ನ ನಿಯಮದಂತೆ
ಪವಿತ್ರ ಕುರಾನ್ ಅಥವಾ ಹಜರತ್ ಮಹಮ್ಮದರ ವಿಷಯದಲ್ಲಿ ಶಂಕಿಸುವುದೆಂದರೆ ( ಯಾವನೊ ಒಬ್ಬನನ್ನು ಯಾವನೋ
ಒಬ್ಬನ ಕೊಲೆಯಲ್ಲಿ ಅಪರಾಧಿಯನ್ನಾಗಿ ಮಾಡಿದಷ್ಟು) ದೊಡ್ಡ ಅಪರಾಧವಾಗುತ್ತದೆ. ನಾನು ಯುವಾವಸ್ಥೆಗೆ ಬಂದ ಬಳಿಕ ನನ್ನ
ಮನಸ್ಸಿನಲ್ಲಿ ಎಲ್ಲಕ್ಕಿಂತ ಮೊದಲು ಒಂದು ಪ್ರಶ್ನೆ ಹುಟ್ಟುತ್ತಿತ್ತು –“ಅಲ್ಲಾಹ ದಯಾಳುವಾಗಿದ್ದಾನೆ,
ನ್ಯಾಯವನ್ನು ದಯಪಾಲಿಸುವವನಾಗಿದ್ದಾನೆ, ಅಂತ ಮುಲ್ಲಾ ಉಪದೇಶ ಮಾಡುತ್ತಾನೆ. ಮತ್ತೆ ಯಾಕೆ ಈ ಜಗತ್ತಿನಲ್ಲಿ
ಒಬ್ಬ ಬಡವ, ಒಬ್ಬ ಶ್ರೀಮಂತ, ಒಬ್ಬ ಮಾನವ ಇನ್ನೊಬ್ಬ
ದಾನವ ಎಂಬುದಾಗಿ ವೈರುಧ್ಯ ಕಾಣುತ್ತಿದೆ ? ಎಲ್ಲರಿಗೂ ಸಮಾನವಾಗಿ ನ್ಯಾಯವನ್ನು ಅಲ್ಲಾಹ ಕೊಡುತ್ತಾನೆ
ಎಂಬುದಾಗಿ ಕುರಾನ್ ನಲ್ಲಿ ವರ್ಣಿಸಿದೆ ಎಂದಾದಲ್ಲಿ ಎಲ್ಲರೂ ಒಂದೇ ರೀತಿಯಾಗಿರಬೇಕಾಗಿತ್ತು. ಒಬ್ಬ
ಹುಟ್ಟಿನಿಂದಲೇ ಕಷ್ಟವನ್ನು ಅನುಭವಿಸುತ್ತಿದ್ದರೆ, ಇನ್ನೊಬ್ಬ ಸಮಸ್ತವೈಭೋಗಗಳ ನಡುವೆಯೇ ಹುಟ್ಟುತ್ತಾನೆ.
ಜಗತ್ತಿನಲ್ಲಿ ಎಲ್ಲಾ ಕಡೆ ಹೀಗೆಯೇ ಕಾಣುತ್ತಿರುವಾಗ
ಅಲ್ಲಾಹ ನ್ಯಾಯ ಒದಗಿಸುವವನು ಹೇಗಾಗಲು ಸಾಧ್ಯ. ಈ ಪ್ರಶ್ನೆಯನ್ನು ನಾನು ಬಹಳ ವರ್ಷಗಳವರೆಗೆ ನನ್ನ ಮಿತ್ರರಲ್ಲಿ,
ಪರಿಚಿತರಲ್ಲಿ, ಮುಲ್ಲಾ ಮೌಲವಿಗಳ ಬಳಿಯಲ್ಲಿ ಕೇಳ್ತಾ ಇದ್ದೆ. ಆದರೆ ಎಲ್ಲರೂ ಒಟ್ಟಾಗಿ ಒಂದೇ ದನಿಯಲ್ಲಿ
ಹೇಳುತ್ತಿದ್ದ ಉತ್ತರವೆಂದರೆ –
“ನೀನು ಅಲ್ಲಾಹನ ವಿಷಯದಲ್ಲಿ
ತರ್ಕ ಯಾಕೆ ಮಾಡುತ್ತಿರುವೆ ? ನವಯುವಕ ನೀನು. ಹುರುಪಿನಿಂದ ಧರ್ಮದ ಕೆಲಸ ಮಾಡುತ್ತಾ ಕಾಲ ಕಳೆಯುತ್ತಿರು”
ಎಂಬುದಾಗಿ. ಇದು ನನ್ನ ಪ್ರಶ್ನೆಗೆ ಉತ್ತರವಾಗಿರಲಿಲ್ಲ. ಈ ವಿಷಯ ನಿರಂತರವಾಗಿ ನನ್ನನ್ನು ಕಾಡುತ್ತಿತ್ತು.
ನಾನೂ ಸಹ ನಿರಂತರವಾಗಿ ತಿಳಿದವರ ಬಳಿಯಲ್ಲಿ ಈ ಪ್ರಶ್ನೆಯನ್ನು ಕೇಳ್ತಾನೇ ಇದ್ದೆ. ಆದರೆ ಅವರಿಂದ ಉತ್ತರ ಯಾವತ್ತೂ ಸಿಗಲಿಲ್ಲ.
ಕೊನೆಗೆ ಉತ್ತರ ಸಿಕ್ಕಿದ್ದು
ಮಹರ್ಷಿ ದಯಾನಂದರ ಪವಿತ್ರ ವೈಜ್ಞಾನಿಕ ಗ್ರಂಥವಾದ ಸತ್ಯಾರ್ಥಪ್ರಕಾಶದಲ್ಲಿ.
ಅದರಲ್ಲಿ ಮಹರ್ಷಿ ದಯಾನಂದರು,
ಈ ಜನ್ಮದಲ್ಲಿ ಮಾಡಿದ ಒಳ್ಳೆಯ ಮತ್ತು ಕೆಟ್ಟ ಕೆಲಸದ ಫಲವನ್ನು ಮುಂದಿನ ಜನ್ಮದಲ್ಲಿ ಜನರು ಅನುಭವಿಸುತ್ತಾರೆ
ಎಂದು ವರ್ಣಿಸಿದ್ದಾರೆ. ಈ ರೀತಿಯ ವ್ಯಾಖ್ಯಾನ ತರ್ಕಬದ್ಧವೂ ಹೌದು. ನಾವು ಬ್ಯಾಂಕಿನಲ್ಲಿ ಖಾತೆ ತೆರೆದರೆ
ನಮಗೆ ಉಳಿತಾಯ ಖಾತೆಯಲ್ಲಿ ನಿಯಮಿತವಾಗಿ ಆರು ತಿಂಗಳಿಗೊಂದು ಬಾರಿ ಬಡ್ಡಿ ದೊರೆಯುತ್ತದೆ. ಮೂಲಧನವೂ
ಹಾಗೆಯೇ ಉಳಿಯುತ್ತದೆ. ಅದರಂತೆ ಜೀವಾತ್ಮ ಸೃಷ್ಟಿಯ ಬಳಿಕ ಬೇರೆ ಬೇರೆ ಶರೀರಗಳಲ್ಲಿ ಪ್ರವೇಶಿಸುತ್ತಾನೆ.
ಹಾಗೆಯೇ ತನ್ನ ಒಳ್ಳೆಯ ಹಾಗೂ ಕೆಟ್ಟ ಕೆಲಸಗಳ ಫಲವನ್ನು ಅನುಭವಿಸುತ್ತಾನೆ. ಪುನರ್ಜನ್ಮವಿಲ್ಲದೆ ಇದೆಲ್ಲ
ಸಾಧ್ಯವಿಲ್ಲ. ಆದ್ದರಿಂದ ಪುನರ್ಜನ್ಮವನ್ನು ಒಪ್ಪುವುದು ಅನಿವಾರ್ಯ. ಆದರೆ ಮುಸಲ್ಮಾನರು ಪುನರ್ಜನ್ಮವನ್ನು
ನಂಬುವುದಿಲ್ಲ, ಒಪ್ಪುವುದಿಲ್ಲ. 14ನೇ ಶತಮಾನದಲ್ಲಿ ಜಗತ್ತು ಇಲ್ಲವಾಗುವುದೆಂಬುದನ್ನು ಮಾತ್ರ ಅವರು
ಒಪ್ಪುತ್ತಾರೆ. ಸೃಷ್ಟಿಯ ಕೊನೆಯ ದಿನ ಬರುತ್ತದೆ. ಆಗ ಅಲ್ಲಾಹನೆದುರು ನ್ಯಾಯನಿರ್ಣಯಮೈದಾನದಲ್ಲಿ ಎಲ್ಲರ ಪಾಪಪುಣ್ಯದ ನಿರ್ಣಯವಾಗುವುದು. ಅದರಂತೆ ಶಿಕ್ಷೆಯಾಗುವುದು.
ಆದರೆ ಆ ಮೈದಾನದಲ್ಲಿ ಯಾರು ಮಹಮ್ಮದ ಪೈಗಂಬರರನ್ನು ತಮ್ಮ ಮಾರ್ಗದರ್ಶಕರೆಂದು ಒಪ್ಪಿ ಅವರ ಧ್ವಜದಡಿಯಲ್ಲಿ ಬರುತ್ತಾರೋ, ಕೇವಲ ಅವರಿಗೆ ಮಾತ್ರ
ಇನಾಮು ಕೊಡಲಾಗುತ್ತದೆ. ಅರ್ಥಾತ್ ಅವರಿಗೆ ಕೆಟ್ಟಕೆಲಸದ ಫಲವನ್ನು ಅನುಭವಿಸಬೇಕಾದ ಅಗತ್ಯವಿರುವುದಿಲ್ಲ.
ಅವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ.
ಇವೆಲ್ಲ ಮೂರ್ಖತನ ಅಂತ ಅನಿಸುತ್ತದೆ.
ಯಾಕೆಂದರೆ ಒಬ್ಬ ವ್ಯಕ್ತಿ (ಪೈಗಂಬರ) ಹೇಳಿದ ಮಾತ್ರಕ್ಕೆ ಈ ಎಲ್ಲಾ ಆಟ ನಡೆಯುತ್ತದೆಂದಾದರೆ ಜಗತ್ತಿನಲ್ಲಿ
ಉಳಿದ ಮತಗಳನ್ನು ಒಪ್ಪಿಕೊಳ್ಳುವ ಅವಶ್ಯಕತೆ ಏನಿದೆ ?
ಸೃಷ್ಟಿಯ ಅಂತ್ಯ 14 ನೇ ಶತಮಾನದಲ್ಲಿ
ಆಗುವುದೆಂದು ಮುಸಲ್ಮಾನರು ನಂಬುತ್ತಾರೆ. ಆದರೆ 14 ನೇ ಶತಮಾನ ಕಳೆದುಹೋಗಿದೆ. ಹಾಗಿದ್ದರೂ ಈ ಜಗತ್ತು
ಯಾಕೆ ನಾಶ ಹೊಂದಲಿಲ್ಲ ? ನ್ಯಾಯನಿರ್ಣಯ (ಪೈಗಂಬರರ ಉಪಸ್ಥಿತಿಯಲ್ಲಿ ಪ್ರಳಯಕಾಲದಲ್ಲಿ ಅಲ್ಲಾಹ ಮಾಡುವ
ನ್ಯಾಯನಿರ್ಣಯ ) ಏಕಾಗಲಿಲ್ಲ. ಮಹಮ್ಮದ ಪೈಗಂಬರರಿಗಿಂತ ಮೊದಲು(ಕ್ರಿ.ಶ 6ನೇ ಶತಮಾನ) ಅಥವಾ ಇಸ್ಲಾಮ್
ಆರಂಭವಾಗುವುದಕ್ಕಿಂತ ಮೊದಲು ಈ ಜಗತ್ತು ಇರಲಿಲ್ಲವೇ ? ಏಕೆಂದರೆ ಇಸ್ಲಾಮ್ ಮತದ ಉದಯವಾಗಿ ಕೇವಲ 1400 ವರ್ಷಗಳು ಕಳೆಯುತ್ತಿವೆ.
ಜಗತ್ತು ಅದಕ್ಕಿಂತ ಮೊದಲೂ ಇತ್ತು. ನಂತರವೂ ಇರುವುದು.
ನನ್ನ 2 ನೇ ಪ್ರಶ್ನೆ ಏನೆಂದರೆ, ಒಬ್ಬ ಮುಸ್ಲಿಂ ಗಂಡಸು ಏಕಕಾಲದಲ್ಲಿ
4 ಪತ್ನಿಯರನ್ನಿಟ್ಟುಕೊಳ್ಳಬಹುದಾದರೆ ಒಬ್ಬಳು ಮುಸ್ಲಿಂ ಹೆಂಗಸು ಏಕಕಾಲದಲ್ಲಿ ನಾಲ್ವರು ಗಂಡಂದಿರನ್ನು
ಏಕೆ ಇಟ್ಟುಕೊಳ್ಳಬಾರದು ?
ಇಸ್ಲಾಮ್ ನಲ್ಲಿ ಹೆಂಗಸಿಗೆ
ಹೆಚ್ಚು ಅಧಿಕಾರವಿಲ್ಲ. ಒಬ್ಬ ಪುರುಷನ ಎದುರಿಗೆ ಇಬ್ಬರು ಸ್ತ್ರೀಯರ ಸಾಕ್ಷಿಯನ್ನು ಪೂರ್ಣ ಎಂದು ತಿಳಿಯಲಾಗುತ್ತದೆ.
ಕಡೇ ಪಕ್ಷ ಹೆಂಗಸು ಮಾನವ ಸಮುದಾಯದ ಒಂದು ಅಂಗವೇ ತಾನೇ ? ಮತ್ತೆ ಅವಳನ್ನು ಅರ್ಧ ಎಂದು ಭಾವಿಸಿ ಅವಳ
ಮೇಲೆ ಶೋಷಣೆ ಮಾಡುವುದು ಎಲ್ಲಿಯ ನ್ಯಾಯ ? ಎಲ್ಲಿಯವರೆಗೆ ಇದನ್ನು ಅಲ್ಲಾಹನ ನ್ಯಾಯ ಎಂದು ತಿಳಿಯಲು ಸಾಧ್ಯ ? 80 ವರ್ಷದ ಒಬ್ಬ ಮುದುಕ
18ವರ್ಷದ ಹುಡುಗಿಯ ಜೊತೆಗೆ ಮದುವೆಯಾಗಿ ಅದನ್ನು ಇಸ್ಲಾಂ ಧರ್ಮಕ್ಕನುಗುಣವಾಗಿದೆ ಎಂದು ಹೇಳುತ್ತಾ
ಧರ್ಮದ ಹೆಸರಿನಲ್ಲಿ ಎಲ್ಲರನ್ನೂ ಮೂರ್ಖರನ್ನಾಗಿ ಮಾಡುವ ಈ ಕೃತ್ಯ ಎಷ್ಟರಮಟ್ಟಿಗೆ ಸರಿ ?
ಈ ಪ್ರಶ್ನೆಗೆ ಕೂಡ ಉತ್ತರ
ನನಗೆ ಸತ್ಯಾರ್ಥಪ್ರಕಾಶದಲ್ಲಿ ಸಿಕ್ಕಿತು. ಸ್ತ್ರೀಪುರುಷರಿಗೆ ಸಮಾನ ಅಧಿಕಾರವಿರುವುದಾಗಿ ಮಹರ್ಷಿ
ದಯಾನಂದ ಸರಸ್ವತಿಯವರು, ಭಗವಾನ್ ಮನು ಮತ್ತು ವೇದವಾಕ್ಯಗಳ
ಆಧಾರದ ಮೇಲೆ ಸಾರಿ ಹೇಳಿದರು. ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಕೇವಲ ವಿಶೇಷಪರಿಸ್ಥಿತಿಯಲ್ಲಿ (ಪತ್ನಿ
ಬಂಜೆಯಾಗಿದ್ದಲ್ಲಿ) ಮಾತ್ರ ಪಡೆಯಬಹುದು. ಹಾಗಿಲ್ಲದಿದ್ದಲ್ಲಿ ಏಕಪತ್ನೀವ್ರತನಾಗಿರುವುದು ಸ್ವಾಭಾವಿಕಗುಣವಾಗಿರಬೇಕು. ಮತ್ತೆ
ಮನು ಮುಂದೆ ಹೇಳುತ್ತಾನೆ –
“ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ”
(ಎಲ್ಲಿ ಸ್ತ್ರೀಯರಿಗೆ ಗೌರವವಿರುವುದೋ
ಅಲ್ಲಿ ದೇವತೆಗಳು ನೆಲೆಸುತ್ತಾರೆ)
ನನ್ನ ಮೂರನೇ ಪ್ರಶ್ನೆ ಸ್ವರ್ಗ
ನರಕಗಳಿಗೆ ಸಂಬಂಧಿಸಿದ್ದು. ಮುಸಲ್ಮಾನಬಂಧುಗಳು ಸೃಷ್ಟಿಯ ಕೊನೆಯ ದಿನದಂದು ಪಾಪಪುಣ್ಯದ ಲೆಕ್ಕಾಚಾರವಾಗುವುದೆಂದು
ತಿಳಿಯುತ್ತಾರೆ. ಅದರಲ್ಲಿ ಒಳ್ಳೆಯ ಕೆಲಸ ಮಾಡಿದವರಿಗೆ ಸ್ವರ್ಗ ಹಾಗೂ ಕೆಟ್ಟ ಕೆಲಸ ಮಾಡಿದವರಿಗೆ ನರಕ
ಪ್ರಾಪ್ತಿಯಾಗುವುದು. (ಕುರಾನ್ ನಲ್ಲಿ ) ಸ್ವರ್ಗದ ವರ್ಣನೆ ಹೀಗಿದೆ – ಅಲ್ಲಿ ಸೇಬು, ಕಿತ್ತಳೆ, ಶರಾಬು ಮತ್ತು ಒಬ್ಬ ವ್ಯಕ್ತಿಗೆ 70 ಅಪ್ಸರೆಯರು ಹಾಗೂ
72 ಕೋಮಲ ಶರೀರದ ದಾಸಿಯರು ಸಿಗುತ್ತಾರೆ.
ನಾನು ಮುಲ್ಲಾ ಮೌಲವಿಗಳಲ್ಲಿ
ಕೇಳ್ತಾ ಇದ್ದೆ – ಹೇಳಿ, ಒಬ್ಬ ಗಂಡಸಿಗೆ ಸ್ವರ್ಗದಲ್ಲಿ 70,72 ಅಪ್ಸರೆಯರು ಹಾಗೂ ದಾಸಿಯರು ಸಿಗುವುದಾದರೆ
ಒಬ್ಬಳು ಹೆಂಗಸಿಗೆ ಅಲ್ಲಿ ಏನು ಸಿಗುತ್ತದೆ ?
ನನ್ನ ಈ ಪ್ರಶ್ನೆಯಿಂದ ಅವರು ಸಿಟ್ಟಾಗುತ್ತಿದ್ದರು. 14 ನೇ ಶತಮಾನ ಕಳೆದುಹೋಗಿದೆ.
ಮತ್ತೆ ಯಾಕೆ ಖಯಾಮತ್ (ನ್ಯಾಯನಿರ್ಣಯದ ದಿನ) ಬರಲಿಲ್ಲ ? ಅದು ಈಗ ಬರುವುದಿಲ್ಲವೇ ? ಅಲ್ಲಾಹ ಕೊಟ್ಟಿರುವ ವಾಯಿದೆ ಏನಾಯಿತು ? ಇದರಿಂದ ಕುರಾನನ್ನು ಒಬ್ಬ ಸಾಮಾನ್ಯ
ಮನುಷ್ಯ ಬರೆದದ್ದು ಎನ್ನುವುದು ಸಾಬೀತಾಗುವುದಿಲ್ಲವೇ ?
(ಮುಂದುವರಿಯುವುದು)